HOME » NEWS » National-international » WILL MAKE BENGAL POLICE LICK BOOTS SAYS BJP LEADER RAJU BANERJEE SNVS

ಬಂಗಾಳ ಪೊಲೀಸರು ಬೂಟು ನೆಕ್ಕುವಂತೆ ಮಾಡುತ್ತೇವೆ: ಬಿಜೆಪಿ ನಾಯಕ ರಾಜು ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆ

ಪಶ್ಚಿಮ ಬಂಗಾಳದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟು ಗೂಂಡಾಗಿರಿ ಆಡಳಿತ ನಡೆಯುತ್ತಿದೆ. ಪೊಲೀಸರು ಕೈಲಾಗದಂತೆ ಕೈಕಟ್ಟಿ ಕೂತಿದ್ದಾರೆ. ಇಂಥವರಿಗೆ ನಾವು ಅಧಿಕಾರಕ್ಕೆ ಬಂದರೆ ಬೂಟು ನೆಕ್ಕಿಸುತ್ತೇವೆ ಎಂದು ಅಲ್ಲಿಯ ಬಿಜೆಪಿ ಮುಖಂಡ ರಾಜು ಬ್ಯಾನರ್ಜಿ ಹೇಳಿದ್ದಾರೆ.

news18
Updated:November 25, 2020, 2:16 PM IST
ಬಂಗಾಳ ಪೊಲೀಸರು ಬೂಟು ನೆಕ್ಕುವಂತೆ ಮಾಡುತ್ತೇವೆ: ಬಿಜೆಪಿ ನಾಯಕ ರಾಜು ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆ
ರಾಜು ಬ್ಯಾನರ್ಜಿ
  • News18
  • Last Updated: November 25, 2020, 2:16 PM IST
  • Share this:
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಗೂಂಡಾಗಿರಿ ಆಡಳಿತ ಇದ್ದರೂ ಏನೂ ಮಾಡದೆ ಕೈಕಟ್ಟಿ ಇರುವ ಪೊಲೀಸರಿಗೆ ನಾವು ಅಧಿಕಾರಕ್ಕೆ ಬಂದ ಬಳಿಕ ಬೂಟು ನೆಕ್ಕಿಸುತ್ತೇವೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ರಾಜು ಬ್ಯಾನರ್ಜಿ ಕುಹಕ ಆಡಿದ್ದಾರೆ. “ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಏನಾಗುತ್ತಿದೆ ನೋಡಿ. ಇಲ್ಲಿ ಗೂಂಡಾ ಆಡಳಿತ ನಡೆಯುತ್ತಿದೆ. ಪೊಲೀಸರು ಏನೂ ಮಾಡದೆ ಸುಮ್ಮನಿದ್ದಾರೆ. ಇಂಥ ಸಿಬ್ಬಂದಿಯನ್ನ ಏನು ಮಾಡಬೇಕು ಹೇಳಿ? ನಾವು ಅವರಿಗೆ ಬೂಟು ನೆಕ್ಕುವ ಕೆಲಸ ಕೊಡುತ್ತೇವೆ” ಎಂದು ಪಶ್ಚಿಮ ಬಂಗಾಳದ ಬಿಜೆಪಿ ಉಪಾಧ್ಯಕ್ಷರೂ ಆದ ಅವರು ನಿನ್ನೆ ಮಂಗಳವಾರ ದುರ್ಗಾಪುರದ ಸಮಾವೇಶದಲ್ಲಿ ಮಾತನಾಡುತ್ತಾ ಹೇಳಿರುವುದು ವರದಿಯಾಗಿದೆ.

ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಇರುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಈಗಿನಿಂದಲೇ ಸಂಘಟನೆ ಮತ್ತು ಪ್ರಚಾರ ಕಾರ್ಯಗಳಲ್ಲಿ ತೊಡಗಿದೆ. ಪಶ್ಚಿಮ ಬಂಗಾಳ ಕಾನೂನು ವ್ಯವಸ್ಥೆಯೇ ಇಲ್ಲ ರಾಜ್ಯವಾಗಿದೆ. ಇಲ್ಲಿ ಗೂಂಡಾಗಿರಿ ಸಾಮ್ರಾಜ್ಯವಿದೆ ಎಂದು ಹಲವು ಬಿಜೆಪಿ ನಾಯಕರು ಪದೇ ಪದೇ ಆರೋಪಿಸುತ್ತಲೇ ಬಂದಿದ್ದಾರೆ. ನಿನ್ನೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀವಾ ಅವರೂ ಕೂಡ ಬಂಗಾಳದಲ್ಲಿ ಕಾನೂನು ವ್ಯವಸ್ಥೆ ದುರ್ಬಲವಾಗಿದೆ. ಮಹಿಳೆಯರಿಗೆ ಭದ್ರತೆಯೇ ಇಲ್ಲ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಸರ್ಕಾರ ಏನೇ ಹರಸಾಹಸ ಮಾಡಿದರೂ ಡಿ. 5ರ ಕರ್ನಾಟಕ ಬಂದ್ ನಿಲ್ಲಲ್ಲ: ವಾಟಾಳ್ ನಾಗರಾಜ್

ಇಡೀ ದೇಶಕ್ಕೆ ಒಂದು ಕಾನೂನಾದರೆ ಬಂಗಾಳದಲ್ಲಿ ಟಿಎಂಸಿಯ ನಿಯಮಗಳೇ ಜಾರಿಯಲ್ಲಿರುತ್ತವೆ ಎಂದು ಕೈಲಾಶ್ ವಿಜಯವರ್ಗೀವಾ ಆರೋಪಿಸಿದ್ದಾರೆ. “ಬಂಗಾಳದಲ್ಲಿ ಮಹಿಳಾ ಮುಖ್ಯಮಂತ್ರಿ ಇದ್ದರೂ ಇಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಬಂಗಾಳದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆ ಕಡಿಮೆ ಇದೆ. ಇಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹಾಳಾಗಿಹೋಗಿದೆ” ಎಂದು ಆರ್ಭಟಿಸಿದ ಅವರು, 2021ರ ಚುನಾವಣೆ ಬಳಿಕ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಮಹಿಳೆಯರ ವಿರುದ್ಧ ಅಪರಾಧ ಎಸಗಿದವರನ್ನ ಜೈಲಿಗೆ ಕಳುಹಿಸಲಾಗುತ್ತದೆ. ಕಾನೂನು ವ್ಯವಸ್ಥೆಯನ್ನ ಈ ರಾಜ್ಯದಲ್ಲಿ ನೆಲಸುತ್ತದೆ ಎಂದಿದ್ದಾರೆ.

ಮಹಿಳೆಯರ ವಿರುದ್ಧ ಅಪರಾಧ ಎಸಗುವವರಿಗೆ ಟಿಎಂಸಿ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಅವರಿಗೆ ತಕ್ಕ ಶಾಸ್ತಿ ಆಗುತ್ತದೆ. ಕಾನೂನು ಭಂಜಕರು ಮತ್ತವರ ಚೇಲಾಗಳನ್ನ ಕಾರಾಗೃಹಕ್ಕೆ ಹಾಕುತ್ತೇವೆ ಎಂದು ದಕ್ಷಿಣ 24 ಪರಗಣ ಜಿಲ್ಲೆಯ ಬರೂಲ್​ಪುರ್​ನ ಸಮಾವೇಶದಲ್ಲಿ ಕೈಲಾಸ ವಿಜಯವರ್ಗೀವಾ ಅವರು ಹೇಳಿದ್ದಾರೆ.

ಇದನ್ನೂ ಓದಿ: ಸ್ವಾಮಿನಿಷ್ಠೆ ಜೊತೆಗೆ ಕಾಂಗ್ರೆಸ್​ನ ಪವರ್ ಸೆಂಟರ್, ಟ್ರಬಲ್ ಶೂಟರ್ ಎಲ್ಲವೂ ಆಗಿದ್ದ ಅಹಮದ್ ಪಟೇಲ್

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಸರ್ಕಾರ ಪ್ರಜಾಪ್ರಭುತ್ವದ ತಳಹದಿಯನ್ನೇ ನಶಿಸುವಂತೆ ಮಾಡಿರುವುದು ಜನರಿಗೆ ಗೊತ್ತಿದೆ. ಹೀಗಾಗಿ, ಈ ಬಾರಿ ಬಿಜೆಪಿಗೆ ಅಧಿಕಾರ ಕೊಡುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Published by: Vijayasarthy SN
First published: November 25, 2020, 2:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories