ಆರೋಪಗಳಿಗೆ ಸ್ವಾಗತ; ಬಿಜೆಪಿಯವರ ಒಳ್ಳೆಯ ಸಲಹೆಗಳನ್ನು ಪರಿಗಣಿಸುತ್ತೇವೆ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ನಿಂದಕರನ್ನು ಹತ್ತಿರದಲ್ಲೇ ಇಟ್ಟುಕೊಳ್ಳಿ ಎಂದು ಕವಿ ಕಬೀರ್ ದಾಸ್ ಹೇಳಿದ್ದರು. ಅದರಂತೆ, ತಮ್ಮ ಸರ್ಕಾರದ ಟೀಕಾಕಾರರಿಗೆ ತಾವು ವಿಶೇಷ ಮಾನ್ಯತೆ ಕೊಡುತ್ತೇವೆ ಎಂದು ಕೇಜ್ರಿವಾಲ್ ಹೇಳಿದ್ಧಾರೆ.

ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

 • News18
 • Last Updated :
 • Share this:
  ನವದೆಹಲಿ(ಡಿ. 28): ಇನ್ನೆರಡು ತಿಂಗಳಲ್ಲಿ ಬರುವ ದೆಹಲಿ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಸಜ್ಜಾಗಿ ನಿಂತಿದೆ. ತನ್ನ ಐದು ವರ್ಷದ ಆಡಳಿತಾವಧಿಯಲ್ಲಿನ ಸಾಧನೆಗಳನ್ನ ಮುಂದಿಟ್ಟುಕೊಂಡು ಮತದಾರರನ್ನು ತಲುಪುವ ಕೆಲಸ ಆಗುತ್ತಿದೆ. ಈ ವೇಳೆ, ವಿಪಕ್ಷ ಬಿಜೆಪಿಯಿಂದಲೂ ಆರೋಪಗಳ ಸುರಿಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಟೀಕಾಕಾರರು ತಮಗೆ ಬೇಕಿದೆ. ಅವರ ಒಳ್ಳೆಯ ಸಲಹೆಗಳನ್ನು ಸ್ವೀಕರಿಸುತ್ತೇವೆ ಎಂದಿದ್ದಾರೆ.

  ನಮ್ಮ ಸರ್ಕಾರದ ವಿರುದ್ಧ ಬಿಜೆಪಿ ಬಿಡುಗಡೆ ಮಾಡಿರುವ ಆರೋಪ ಪಟ್ಟಿಯನ್ನು ನಮ್ಮ ಪಕ್ಷ ಅವಲೋಕಿಸುತ್ತದೆ. ಅದರ ಒಳ್ಳೆಯ ಸಲಹೆಗಳನ್ನು ಮುಂದಿನ 5 ವರ್ಷದಲ್ಲಿ ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಕೇಜ್ರಿವಾಲ್ ಭರವಸೆ ನೀಡಿದ್ಧಾರೆ.

  ಇದನ್ನೂ ಓದಿ: ‘ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ’ – ಭಾರತೀಯ ಸೇನಾ ಮುಖ್ಯಸ್ಥರಿಗೆ ಪಿ. ಚಿದಂಬರಮ್ ಕಿವಿಮಾತು

  “ನಮ್ಮ ಕೆಲಸವನ್ನು ಪ್ರತಿಯೊಬ್ಬರೂ ವಿಮರ್ಶಿಬೇಕು. ನಮ್ಮ ಲೋಪದೋಷಗಳನ್ನು ಎತ್ತಿ ತೋರಿಸಬೇಕು. ಇನ್ನೂ ಒಳ್ಳೆಯ ಕೆಲಸ ಮಾಡಲು ಅನುವಾಗುವಂತೆ ಸಲಹೆಗಳನ್ನು ನೀಡಬೇಕು” ಎಂದು ದೆಹಲಿ ಮುಖ್ಯಮಂತ್ರಿಗಳು ಮನವಿ ಮಾಡಿದ್ಧಾರೆ.

  ನಿಂದಕರನ್ನು ಹತ್ತಿರದಲ್ಲೇ ಇಟ್ಟುಕೊಳ್ಳಿ ಎಂದು ಕವಿ ಕಬೀರ್ ದಾಸ್ ಹೇಳಿದ್ದರು. ಅದರಂತೆ, ತಮ್ಮ ಸರ್ಕಾರದ ಟೀಕಾಕಾರರಿಗೆ ತಾವು ವಿಶೇಷ ಮಾನ್ಯತೆ ಕೊಡುತ್ತೇವೆ ಎಂದೂ ಅವರು ಹೇಳಿದ್ಧಾರೆ.

  ಇದನ್ನೂ ಓದಿ: ನೋಟ್​ಬ್ಯಾನ್​ಗಿಂತಲೂ ಭೀಕರವಾಗಿರುತ್ತದೆ ಎನ್ಆರ್​ಸಿ: ರಾಹುಲ್ ಗಾಂಧಿ

  70 ಸದಸ್ಯ ಬಲ ಇರುವ ದೆಹಲಿ ವಿಧಾನಸಭೆಗೆ ಫೆಬ್ರವರಿ ತಿಂಗಳಲ್ಲಿ ಚುನಾವಣೆಗಳು ನಡೆಯಲಿವೆ. 2015ರಲ್ಲಿ ನಡೆದ ಕಳೆದ ಬಾರಿಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಬರೋಬ್ಬರಿ 67 ಸ್ಥಾನಗಳನ್ನು ಗೆದ್ದು ಸತತ ಎರಡನೇ ಬಾರಿ ಅಧಿಕಾರ ಹಿಡಿದಿತ್ತು. 2013ರಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಮೊದಲ ಬಾರಿ ಅಧಿಕಾರದ ಗದ್ದುಗೆ ಏರಿದ್ದ ಕೇಜ್ರಿವಾಲ್, 2015ರಲ್ಲಿ ಪರಿಪೂರ್ಣ ಬಹುಮತದೊಂದಿಗೆ ನಿರಾತಂಕವಾಗಿ ಅಧಿಕಾರ ನಡೆಸಿದ್ದಾರೆ.

  1993ರಿಂದ ದೆಹಲಿಯಲ್ಲಿ ಈವರೆಗೆ 6 ಚುನಾವಣೆಗಳು ನಡೆದಿವೆ. ಮೊದಲ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿತು. ಮುಂದಿನ 3 ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯಿತು. ಈಗ ಆಮ್ ಆದ್ಮಿ ಪಕ್ಷ ಕೂಡ ಹ್ಯಾಟ್ರಿಕ್ ಗೆಲುವಿಗೆ ಕಣ್ಣಿಟ್ಟಿದೆ.

  ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

  Published by:Vijayasarthy SN
  First published: