ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ 25 ಕೋಟಿ ಬಡವರಿಗೆ ವರ್ಷಕ್ಕೆ 72 ಸಾವಿರ ರೂ ನೀಡುತ್ತೇವೆ; ರಾಹುಲ್​ ಗಾಂಧಿ

Rahul Poll Promise: ಮೋದಿ ಶ್ರೀಮಂತರಿಗಷ್ಟೇ ಹಣ ನೀಡುತ್ತಿದ್ದಾರೆ. ಆದರೆ, ನಾವು ಬಡವರಿಗೂ ಹಣ ನೀಡುತ್ತೇವೆ. ತಿಂಗಳಿಗೆ 6 ಸಾವಿರ ರೂ ನಂತೆ ಬಡವರಿಗೆ ಹಣ ನೀಡಲು ಕಾಂಗ್ರೆಸ್​ ಬದ್ಧವಾಗಿದೆ. ದೇಶದಲ್ಲಿನ ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದೇ ನಮ್ಮ ಧ್ಯೇಯ. ಬಡತನವನ್ನು ನಾವು ನಿರ್ಮೂಲನೆ ಮಾಡಿಯೇ ತಿರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

Seema.R | news18
Updated:March 28, 2019, 6:24 PM IST
ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ 25 ಕೋಟಿ ಬಡವರಿಗೆ ವರ್ಷಕ್ಕೆ 72 ಸಾವಿರ ರೂ ನೀಡುತ್ತೇವೆ; ರಾಹುಲ್​ ಗಾಂಧಿ
ರಾಹುಲ್​ ಗಾಂಧಿ
  • News18
  • Last Updated: March 28, 2019, 6:24 PM IST
  • Share this:
ನವದೆಹಲಿ (ಮಾ.25): ನಾವು ಅಧಿಕಾರಕ್ಕೆ ಬಂದರೆ, ಬಡವರಿಗೆ ಕನಿಷ್ಠ ಆದಾಯ ಖಾತ್ರಿ ಯೋಜನೆಯನ್ನು ಜಾರಿಗೆ ತರುವ ಮೂಲಕ ದೇಶದ ಬಡತನವನ್ನು ನಿರ್ಮೂಲನೆ ಮಾಡುತ್ತೇವೆ. ಬಡವರ ಕಲ್ಯಾಣಕ್ಕಾಗಿ ನಾವು ಶ್ರಮಿಸುತ್ತೇವೆ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಚುನಾವಣಾ ಭರವಸೆಯನ್ನು ನೀಡಿದ್ದಾರೆ. ಈ ಯೋಜನೆಯಲ್ಲಿ ದೇಶದ 25 ಕೋಟಿಯಷ್ಟು ಜನ ಫಲಾನುಭವಿಗಳಾಗಲಿದ್ದಾರೆ, ಜತೆಗೆ ಕಾಂಗ್ರೆಸ್​ ಈ ನಿರ್ಧಾರಕ್ಕೆ ಬದ್ಧವಾಗಿರುತ್ತದೆ ಎಂದು ರಾಹುಲ್​ ಹೇಳಿದ್ದಾರೆ.

ಈ ರೀತಿಯ ಯೋಜನೆ ಪ್ರಪಂಚದಲ್ಲಿಯೇ ಇಲ್ಲ 12 ಸಾವಿರಕ್ಕಿಂತ ಕಡಿಮೆ ಆದಾಯವಿರುವವರಿಗೆ ಈ  ಯೋಜನೆ ಜಾರಿಗೆ ತರಲಾಗುವುದು. ಪ್ರತಿ ವರ್ಷ 72 ಸಾವಿರ ರೂ. 5 ಕೋಟಿ ಬಡ ಕುಟುಂಬಗಳಿಗೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಈ ಯೋಜನೆಯಿಂದ 25 ಕೋಟಿ ಜನರಿಗೆ ಅಂದರೆ ಶೇ. 20ರಷ್ಟು ಬಡ ಕುಟುಂಬಗಳಿಗಾಗಿ ಯೋಜನೆ ರೂಪಿಸಲಾಗಿದೆ ಎಂದರು.

 
ಕಾಂಗ್ರೆಸ್​ ಕಾರ್ಯಕಾರಿಸಣಿ ಸಭೆ ಬಳಿಕ ಕಾಂಗ್ರೆಸ್​ ವಕ್ತಾರ ರಂದೀಪ್​ ಸುರ್ಜೇವಾಲಾರೊಂದಿಗೆ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಶ್ರೀಮಂತರಿಗಷ್ಟೇ ಹಣ ನೀಡುತ್ತಿದ್ದಾರೆ. ಆದರೆ, ನಾವು ಬಡವರಿಗೂ ಹಣ ನೀಡುತ್ತೇವೆ. ತಿಂಗಳಿಗೆ 6 ಸಾವಿರ ರೂ ನಂತೆ ಬಡವರಿಗೆ ಹಣ ನೀಡಲು ಕಾಂಗ್ರೆಸ್​ ಬದ್ಧವಾಗಿದೆ. ದೇಶದಲ್ಲಿನ ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದೇ ನಮ್ಮ ಧ್ಯೇಯ. ಬಡತನವನ್ನು ನಾವು ನಿರ್ಮೂಲನೆ ಮಾಡಿಯೇ ತಿರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ನಮ್ಮ ಮನೆ ಸುತ್ತ ಮುತ್ತ ಕುಮಾರಸ್ವಾಮಿ ಗೂಢಚರ್ಯೆ: ಸುಮಲತಾ ಅಂಬರೀಶ್​

ಈ ಯೋಜನೆ ರೂಪಿಸುವ ಸಲುವಾಗಿ ನಾಲ್ಕು-ಐದು ತಿಂಗಳಿನಿಂದ ನಾವು ಅಧ್ಯಯನ ನಡೆಸಿದ್ದೇವೆ. ನಾವು ನರೇಗಾ ಯೋಜನೆ ಮೂಲಕ ಬಡವರಿಗೆ ಉದ್ಯೋಗವನ್ನು ಒದಗಿಸಿ ಆದಾಯಕ್ಕೆ ದಾರಿ ಮಾಡಿಕೊಟ್ಟಿದ್ದೇವೆ. ಈಗ ನಾವು ಬಡವರಿಗೆ ನ್ಯಾಯ ಒದಗಿಸಲು ಮುಂದಾಗಿದ್ದೇವೆ. ಈ ಯೋಜನೆ ಶಕ್ತಿಯುತ, ಬಹು ಯೋಚಿತ ಯೋಜನೆಯಾಗಿದೆ ಎಂದರು.

First published:March 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading