ತಾರಕಕ್ಕೇರಿದ ಟ್ರಂಪ್​​ ಮತ್ತು ಯುಎಸ್​​​​ ರಕ್ಷಣಾ ಕಾರ್ಯದರ್ಶಿ ನಡುವಿನ ಸಂಘರ್ಷ: ಇರಾನ್​​​ ವಿಚಾರದಲ್ಲಿ ಬಹಿರಂಗ

ಈ ಹಿಂದೆ ಅಮೆರಿಕ ನಡೆಸಿದ ದಾಳಿಯಲ್ಲಿ ಇರಾನ್ ದೇಶದ​ ಸೇನಾ ಜನರಲ್​ ಖಾಸಿಂ ಸೊಲೈಮನಿ ಹತ್ಯೆಯಾಗಿದ್ದರು. ಈ ಉದ್ವಿಗ್ನತೆಗಳ ಮಧ್ಯೆಯೇ ಟ್ರಂಪ್​​ ಮತ್ತು ಪೆಂಟಗಾನ್​ ಮುಖ್ಯಸ್ಥರ ನಡುವೆ ಒಡಕು ಮೂಡಿದೆ ಎನ್ನುತ್ತಿವೆ ಮೂಲಗಳು.

Latha CG | news18-kannada
Updated:January 7, 2020, 10:43 AM IST
ತಾರಕಕ್ಕೇರಿದ ಟ್ರಂಪ್​​ ಮತ್ತು ಯುಎಸ್​​​​ ರಕ್ಷಣಾ ಕಾರ್ಯದರ್ಶಿ ನಡುವಿನ ಸಂಘರ್ಷ: ಇರಾನ್​​​ ವಿಚಾರದಲ್ಲಿ ಬಹಿರಂಗ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​
  • Share this:
ವಾಷಿಂಗ್ಟನ್​(ಜ.07): ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿರುತ್ತಲೇ ಇದೆ. ಈ ಮಧ್ಯೆಯೇ ಇರಾನ್​ನ ಸಾಂಸ್ಕೃತಿಕ ತಾಣಗಳ ಮೇಲೆ ಅತೀ ಶೀಘ್ರದಲ್ಲಿ ದಾಳಿ ನಡೆಸುವ ಮಾತುಗಳನ್ನು ಡೊನಾಲ್ಡ್​ ಟ್ರಂಪ್​ ಆಡಿದ್ದಾರೆ. ಆದರೀಗ, ಯುಎಸ್​ ರಕ್ಷಣಾ ಇಲಾಖೆ ಹೇಳಿಕೆ ಟ್ರಂಪ್​ ಹೇಳಿಕೆಗಿಂತಲೂ ಭಿನ್ನವಾಗಿದೆ. ಯುಎಸ್​​ ರಕ್ಷಣಾ ಕಾರ್ಯದರ್ಶಿ ಮಾರ್ಕ್​​ ಎಸ್ಪರ್​​​ "ಅಮೆರಿಕಾ ಸೇನೆಯು ಇರಾನ್​ನ ಸಾಂಸ್ಕೃತಿಕ ತಾಣಗಳ ಮೇಲೆ ದಾಳಿ ನಡೆಸುವುದಿಲ್ಲ," ಎಂದು ಹೇಳಿದ್ದಾರೆ. "ಇದೊಂದು ಶಸ್ತ್ರಾಸ್ತ್ರ ಸಂಘರ್ಷ. ನಾವು ಈ ಸಂಘರ್ಷದ  ಕಾನೂನು ಉಲ್ಲಂಘನೆ ಮಾಡುವುದಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ತನ್ನ ಮತ್ತು ಟ್ರಂಪ್​​ ನಡುವಿನ ಅಸಮಾಧಾನ ಬಹಿರಂಗಗೊಳಿಸಿದ್ದಾರೆ.

ಪೆಂಟಾಗನ್​​​ ಪ್ರದೇಶದಲ್ಲಿರುವ ಯುಎಸ್​​​​ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಎಸ್ಪರ್​​, ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ಇರಾನ್​​​ನ ಸಾಂಸ್ಕೃತಿಕ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದೀರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಎಸ್ಪರ್​​ ಉತ್ತರ ಹೀಗಿತ್ತು. "ನಾವು ಶಸ್ತ್ರಾಸ್ತ್ರ ಸಂಘರ್ಷ ಕಾನೂನು ಪಾಲನೆ ಮಾಡಲಿದ್ದೇವೆ. ಯಾವುದೇ ಕಾರಣಕ್ಕೂ ದಾಳಿ ನಡೆಸುವುದಿಲ್ಲ," ಎಂದು ಪುನರುಚ್ಚರಿಸಿದರು.

ನಮ್ಮ ಮೇಲೆ ಪ್ರತಿ ದಾಳಿ ನಡೆದರೆ ಇರಾನ್​ನ 52 ಸ್ಥಳಗಳು ಕ್ಷಣಮಾತ್ರದಲ್ಲಿ ಧ್ವಂಸ; ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ಈ ಹಿಂದೆ ಅಮೆರಿಕ ನಡೆಸಿದ ದಾಳಿಯಲ್ಲಿ ಇರಾನ್ ದೇಶದ​ ಸೇನಾ ಜನರಲ್​ ಖಾಸಿಂ ಸೊಲೈಮನಿ ಹತ್ಯೆಯಾಗಿದ್ದರು. ಈ ಉದ್ವಿಗ್ನತೆಗಳ ಮಧ್ಯೆಯೇ ಟ್ರಂಪ್​​ ಮತ್ತು ಪೆಂಟಗಾನ್​ ಮುಖ್ಯಸ್ಥರ ನಡುವೆ ಒಡಕು ಮೂಡಿದೆ ಎನ್ನುತ್ತಿವೆ ಮೂಲಗಳು.

ಒಮ್ಮೆ ನಮ್ಮ ಮೇಲೆ ದಾಳಿ ನಡೆಸಿದರೆ, ಇರಾನ್​ನ ಪ್ರಮುಖ ಪ್ರದೇಶಗಳ ಮೇಲೆ ನಾವು ಪ್ರತಿದಾಳಿ ನಡೆಸಲಿದ್ದೇವೆ. ಸಾಂಸ್ಕೃತಿಕ ಶ್ರೀಮಂತ ನಗರಗಳು ಸೇರಿದಂತೆ 52 ಸ್ಥಳಗಳ ಮೇಲೆ ದೊಡ್ಡ ಪ್ರಮಾಣದಲ್ಲೇ ದಾಳಿ ನಡೆಸಲಿದ್ದೇವೆ. ನಂತರ ಅಮೆರಿಕಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಡೊನಾಲ್ಡ್​​ ಟ್ರಂಪ್​ ಇರಾನ್​ಗೆ ಎಚ್ಚರಿಕೆ ನೀಡಿದ್ದರು.

ಪ್ರಸ್ತುತ ಅಮೆರಿಕಾ ಮತ್ತು ಇರಾನ್​ ನಡುವೆ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ತನ್ನ ದೇಶದ ಜನರಲ್​ ಕಮಾಂಡರ್​​​ ಖಾಸಿಂ ಸೊಲೈಮನಿ ಹತ್ಯೆಗೆ ಕಾರಣವಾದ ಅಮೆರಿಕ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಇರಾನ್​ ಸಂಚು ಹೂಡುತ್ತಿದೆ. ಅದಕ್ಕಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತಲೆ ತೆಗೆಯುವವರಿಗೆ 575 ಕೋಟಿ ರೂ. ಬಹುಮಾನ ನೀಡಲಿದ್ದೇವೆ ಎಂದು ಇರಾನ್​ ಸರ್ಕಾರ ಘೋಷಿಸಿದೆ.

ಅಮೆರಿಕ ಅಧ್ಯಕ್ಷರ ಹತ್ಯೆಗೆ 575 ಕೋಟಿ ರೂ ಬಹುಮಾನ: ಇರಾನ್ ಘೋಷಣೆ 
First published:January 7, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ