ಬೇಕಾದರೆ ಸಾಯುತ್ತೇನೆ; ಯಾವುದೇ ಕಾರಣಕ್ಕೂ ಮೋದಿ ತಂದೆ-ತಾಯಿ ಬಗ್ಗೆ ಮಾತಾಡೋಲ್ಲ; ರಾಹುಲ್​​

ಮಾಜಿ ಹಣಕಾಸು ಮಂತ್ರಿ ಪಿ.ಚಿದಂಬರಂ, ಕಾಂಗ್ರೆಸ್ ವಕ್ತಾರ ಸ್ಯಾಮ್ ಪಿತ್ರೋಡಾ, ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಮೋದಿಯವರ ರಾಜೀವ್ ಗಾಂಧಿ ಬಗೆಗಿನ ಹೇಳಿಕೆಯನ್ನು ಖಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಬಗ್ಗೆ ಮತ್ತೆ ಚರ್ಚೆ ನಡೆಯುತ್ತಿದೆ. ಈಗಲೂ ಕಾಂಗ್ರೆಸ್​​ ಮತ್ತು ಪ್ರಾದೇಶಿಕ ಪಕ್ಷಗಳ ನಾಯಕರೂ ಪ್ರಧಾನಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.

ರಾಹುಲ್​​ ಗಾಂಧಿ

ರಾಹುಲ್​​ ಗಾಂಧಿ

  • Share this:
ನವದೆಹಲಿ(ಮೇ.15): ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಕುಟುಂಬವನ್ನು ಟೀಕಿಸುತ್ತಿದ್ದಾರೆ​. ಹಾಗೆಂದ ಮಾತ್ರಕ್ಕೆ ನಾವು ಅವರ ಕುಟುಂಬವನ್ನು ಟಾರ್ಗೇಟ್​​ ಮಾಡಬೇಕಿಲ್ಲ. ಯಾರನ್ನೇ ಆಗಲೀ ಪ್ರೀತಿಯಿಂದ ಗೆಲ್ಲಬೇಕೆ ಹೊರತು ದ್ವೇಷದಿಂದಲ್ಲ. ಹಾಗಾಗಿ ನಾನು ಬೇಕಾದರೇ ಸಾಯುತ್ತೇನೆ. ಆದರೆ, ಯಾವುದೇ ಕಾರಣಕ್ಕೂ ಪ್ರಧಾನಿ ಕುಟುಂಬವನ್ನ ಟೀಕಿಸುವುದಿಲ್ಲ ಎನ್ನುವ ಮೂಲಕ ಕಾಂಗ್ರೆಸ್​​ ಅಧ್ಯಕ್ಷ ರಾಹುಲ್​​ ಗಾಂಧಿಯವರು ನರೇಂದ್ರ ಮೋದಿಯವರಿಗೆ ತಪರಾಕಿ ಬಾರಿಸಿದ್ದಾರೆ.

ನನ್ನ ತಂದೆ ರಾಜೀವ್​​ ಗಾಂಧಿ ಸೇರಿದಂತೆ ಇಡೀ ಕುಟುಂಬದ ಮೇಲೆ ಪ್ರಧಾನಿ ನರೇಂದ್ರ ಮೋದಿ ಹೋದಲೆಲ್ಲಾ ನೇರ ವಾಗ್ದಾಳಿ ನಡೆಸುತ್ತಿದ್ದಾರೆ. ಆದರೂ ಪರ್ವಾಗಿಲ್ಲ, ನಾನು ಮಾತ್ರ ಈ ರೀತಿ ತುಚ್ಛವಾಗಿ ಮಾತಾಡುವುದಿಲ್ಲ. ಯಾವುದೇ ಕಾರಣಕ್ಕೂ ಮೋದಿಯವರ ತಂದೆ-ತಾಯಿಯನ್ನು ಅವಮಾನಕ್ಕೀಡು ಮಾಡುವುದಿಲ್ಲ. ಕುಟುಂಬದ ಮೇಲೆ ವಾಗ್ದಾಳಿ ನಡೆಸುವುದು ಆರ್​ಎಸ್​ಎಸ್​ ಮತ್ತು ಬಿಜೆಪಿ ಸಂಸ್ಕೃತಿ. ನಾನು ಕಾಂಗ್ರೆಸ್​​ ಪಕ್ಷದವನು, ಹಾಗಾಗಿ ಎಲ್ಲರನ್ನು ಪ್ರೀತಿಯಿಂದ ಗೆಲ್ಲುತ್ತೇನೆ ಎಂದು ರಾಹುಲ್​​ ಗಾಂಧಿಯವರು ಸ್ಪಷ್ಟನೆ ನೀಡಿದರು.

ಇತ್ತೀಚೆಗೆ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು, ರಾಜೀವ್​​ ಗಾಂಧಿ ಬದುಕು ಭ್ರಷ್ಟಾಚಾರಿ ನಂಬರ್​​ 1 ಹಣೆಪಟ್ಟಿಯೊಂದಿಗೆ ಅಂತ್ಯವಾಯಿತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬಳಿಕ ಮೋದಿಯವರ ಹೇಳಿಕೆಗೆ ಟ್ವೀಟ್ ಮೂಲಕ ಉತ್ತರಿಸಿದ್ದ ರಾಹುಲ್ ಗಾಂಧಿ ಕೂಡ, ಚುನಾವಣೆ ಯುದ್ಧ ಮುಗಿದಿದೆ. ನಿಮ್ಮ ಕರ್ಮ ನಿಮಗಾಗಿ ಕಾಯುತ್ತಿದೆ. ಗೆಲ್ಲುವ ನಂಬಿಕೆ ಕಳೆದುಕೊಂಡು ಹತಾಶೆಯಲ್ಲಿ ನೀವು ನಮ್ಮ ತಂದೆ ಬಗ್ಗೆ ಏನೇ ಹೇಳಿಕೆ ನೀಡಿದರೂ ನಿಮಗೆ ಸಹಾಯವಾಗುವುದಿಲ್ಲ. ಅದೇನೆ ಇರಲಿ, ನಾನು ಮಾತ್ರ ನಿಮಗೆ ಪ್ರೀತಿ ತುಂಬಿದ ದೊಡ್ಡ ಅಪ್ಪುಗೆ' ನೀಡುತ್ತೇನೆ ಎಂದು ತಿರುಗೇಟು ನೀಡಿದ್ದರು.

ಇದನ್ನೂ ಓದಿ: ಪೆಟ್ರೋಲ್​​-ಡೀಸೆಲ್​​ ಬೆಲೆಯಲ್ಲಿ ತುಸು ಇಳಿಕೆ; ಇಲ್ಲಿದೆ ದರ ವಿವರ

ಈ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿಯವರು ಕೂಡ ಪ್ರತಿಕ್ರಿಯಿಸಿದ್ದು, ಹುತಾತ್ಮರ ಹೆಸರಲ್ಲಿ ಮತ ಕೇಳುವ ಮೋದಿ ಮತ್ತೊಬ್ಬ ಹುತಾತ್ಮ ವ್ಯಕ್ತಿಗೆ ಅವಮಾನ ಮಾಡಿದ್ದಾರೆ. ಇದಕ್ಕೆ ಅಮೇಥಿಯ ಜನ ತಕ್ಕ ಉತ್ತರ ನೀಡಲಿದ್ದಾರೆ. ನನ್ನ ತಂದೆ ಅಮೇಥಿಯ ಜನರಿಗಾಗಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಕಿಡಿಕಾರಿದ್ದರು.

ಇದನ್ನೂ ಓದಿ: ರಾತ್ರೋರಾತ್ರಿ ಫೇಮಸ್ ಆದ ಮತಗಟ್ಟೆ ಅಧಿಕಾರಿ: ಹಳದಿ ಸೀರೆಯಲ್ಲಿ ಮಿಂಚಿದ ಈ ಸುಂದರಿ ಯಾರು?

ಮಾಜಿ ಹಣಕಾಸು ಮಂತ್ರಿ ಪಿ.ಚಿದಂಬರಂ, ಕಾಂಗ್ರೆಸ್ ವಕ್ತಾರ ಸ್ಯಾಮ್ ಪಿತ್ರೋಡಾ, ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಮೋದಿಯವರ ರಾಜೀವ್ ಗಾಂಧಿ ಬಗೆಗಿನ ಹೇಳಿಕೆಯನ್ನು ಖಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಬಗ್ಗೆ ಮತ್ತೆ ಚರ್ಚೆ ನಡೆಯುತ್ತಿದೆ. ಈಗಲೂ ಕಾಂಗ್ರೆಸ್​​ ಮತ್ತು ಪ್ರಾದೇಶಿಕ ಪಕ್ಷಗಳ ನಾಯಕರೂ ಪ್ರಧಾನಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.
First published: