• Home
 • »
 • News
 • »
 • national-international
 • »
 • Bageshwar Dham: ಧೀರೇಂದ್ರ ಕೃಷ್ಣ ಶಾಸ್ತ್ರಿ ಯಾರು? ಅಷ್ಟಕ್ಕೂ ಇವರ ಅಸಲಿ ಕಥೆಯೇನು?

Bageshwar Dham: ಧೀರೇಂದ್ರ ಕೃಷ್ಣ ಶಾಸ್ತ್ರಿ ಯಾರು? ಅಷ್ಟಕ್ಕೂ ಇವರ ಅಸಲಿ ಕಥೆಯೇನು?

ಧೀರೇಂದ್ರ ಕೃಷ್ಣ ಶಾಸ್ತ್ರಿಯವರು

ಧೀರೇಂದ್ರ ಕೃಷ್ಣ ಶಾಸ್ತ್ರಿಯವರು

ಮಧ್ಯಪ್ರದೇಶ ಮೂಲದ 26ರ ಹರೆಯದ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಒಬ್ಬ ಸ್ವಯಂಘೋಷಿತ ದೇವಮಾನವರಾಗಿದ್ದು ಜನಪ್ರೀಯವಾಗಿ ಬಾಗೇಶ್ವರ್ ಧಾಮ್ ಸರ್ಕಾರ್ ಎಂದೇ ಗುರುತಿಸಿಕೊಳ್ಳುತ್ತಾರೆ. ಹೀಗಿರುವಾಗ ಧೀರೇಂದ್ರ ಕೃಷ್ಣ ಶಾಸ್ತ್ರಿ ಯಾರು, ಅಷ್ಟಕ್ಕೂ ಇವರ ಅಸಲಿ ಕಥೆಯೇನು ಅಂತ ತಿಳಿದುಕೊಳ್ಳೋಣ ಬನ್ನಿ.

ಮುಂದೆ ಓದಿ ...
 • Share this:

  ಮಧ್ಯಪ್ರದೇಶ (Madya Pradesh) ಮೂಲದ 26ರ ಹರೆಯದ ಧೀರೇಂದ್ರ ಕೃಷ್ಣ (Dhirendra Krishna) ಶಾಸ್ತ್ರಿ ಅವರು ಒಬ್ಬ ಸ್ವಯಂಘೋಷಿತ ದೇವಮಾನವರಾಗಿದ್ದು ಜನಪ್ರೀಯವಾಗಿ ಬಾಗೇಶ್ವರ್ ಧಾಮ್ ಸರ್ಕಾರ್ (Bageshwar Dham Sarkar) ಎಂದೇ ಗುರುತಿಸಿಕೊಳ್ಳುತ್ತಾರೆ. ನಮ್ಮ ದೇಶದಲ್ಲಿ ಆಧ್ಯಾತ್ಮಿಕತೆ (Spirituality), ಧರ್ಮ (Religion), ನಂಬಿಕೆ (Faith), ಶೃದ್ಧೆಗಳಿಗೆ (Devotion) ಸಂಬಂಧಿಸಿದಂತೆ ವಸ್ತು ವಿಷಯಗಳಿಗೇನೂ ಕಮ್ಮಿ ಇಲ್ಲ. ಹಿಂದಿನಿಂದಲೂ ಧಾರ್ಮಿಕತೆಯನ್ನು ಹೆಚ್ಚಾಗಿ ನಂಬುವ ಜನರಿರುವ, ಸಾಧು-ಸಂತರಿಗೆ ನೆಲೆಯಾಗಿದ್ದ ಈ ಭೂಮಿಯಲ್ಲಿ ಅನೇಕ ಜನರು ತಮ್ಮ ಮಾತುಗಳು, ಆಚರಣೆ ಮೂಲಕ ಜನರ ವಿಶ್ವಾಸವನ್ನು ಗೆದ್ದುಕೊಂಡಿದ್ದಾರೆ. ಕೆಲವರು ತಾವು ದೇವಮಾನವರೆಂತಲೂ ಹೇಳಿಕೊಂಡು ಜನರ ನಂಬಿಕೆಯನ್ನು ಗಳಿಸಿದ ಉದಾಹರಣೆಗಳಿಗೂ ಕಮ್ಮಿ ಇಲ್ಲ.


  ಸದ್ಯ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಧೀರೇಂದ್ರ ಕೃಷ್ಣ ಶಾಸ್ತ್ರಿ ಅಕಾ ಬಾಗೇಶ್ವರ್ ಧಾಮ್ ಸರ್ಕಾರ್ ಅವರು ಇದೀಗ ಸಾಕಷ್ಟು ಚರ್ಚೆಯಲ್ಲಿದ್ದಾರೆನ್ನಬಹುದು. ಅಷ್ಟಕ್ಕೂ ಇವರ ಬಗ್ಗೆ ಏನು ಚರ್ಚೆ ಎಂಬುದನ್ನು ತಿಳಿಯಲು ಈ ಲೇಖನವನ್ನೊಮ್ಮೆ ಓದಿ.


  ಇತ್ತೀಚೆಗೆ ಮಧ್ಯಪ್ರದೇಶದ ಬಾಗೇಶ್ವರ್ ಧಾಮ್ ದೇವಾಲಯದ ಮುಖ್ಯಸ್ಥರಾಗಿರುವ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರನ್ನು ಅವರ ಪವಾಡಗಳ ಅನಾವರಣಗೊಳಿಸುವಂತಹ ಉದ್ದೇಶದಿಂದ ಮಹಾರಾಷ್ಟ್ರದ ಕಾರ್ಯಕ್ರಮವೊಂದರಲ್ಲಿ ಆಮಂತ್ರಿಸಲಾಗಿದ್ದು ಇದೀಗ ಅವರ ಅತೀಂದ್ರಿಯ ಶಕ್ತಿಗೆ ಸಂಬಂಧಿಸಿದಂತೆ, ಅವರು ಸಾಕಷ್ಟು ಚರ್ಚೆಯಲ್ಲಿದ್ದಾರೆನ್ನಬಹುದು.


  ಧೀರೇಂದ್ರ ಕೃಷ್ಣ ಶಾಸ್ತ್ರಿಯವರು


  ವರದಿಗಳ ಪ್ರಕಾರ ಬಾಗೇಶ್ವರ್ ಸರ್ಕಾರ್ ಅವರನ್ನು ಮಹಾರಷ್ಟ್ರದ ಕರ್ಯಕ್ರಮವೊಂದಕ್ಕೆ ಅವರಲ್ಲಿರುವಂತಹ ಪವಾಡಶಕ್ತಿಯನ್ನು ತೋರಿಸುವ ಉದ್ದೇಶದಿಂದ ಆಮಂತ್ರಿಸಿದ್ದಾಗ, ಆ ಕಾರ್ಯಕ್ರಮಕ್ಕೆ ಹಾಜರಾಗುವ ಬದಲು ಅವರು ಅಲ್ಲಿಂದ ತಪ್ಪಿಸಿಕೊಂಡು ಮಧ್ಯಪ್ರದೇಶಕ್ಕೆ ತೆರಳಿದರೆನ್ನಲಾಗಿದ್ದು ಈಗ ಅವರ ಪ್ರವಚನಗಳ/ಕಾರ್ಯಕ್ರಮಗಳ ವಿಡಿಯೋ ಕ್ಲಿಪ್ಪುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.


  ಯಾರು ಈ ಬಾಗೇಶ್ವರ್ ಧಾಮ್ ಸರ್ಕಾರ್?


  26ರ ಹರೆಯದ ಇವರ ಮೂಲ ಹೆಸರು ಧೀರೇಂದ್ರ ಕೃಷ್ಣ ಶಾಸ್ತ್ರಿ ಎಂದಾಗಿದೆ. ಇವರು ಮಧ್ಯಪ್ರದೇಶದ ಛತ್ತರ್ಪುರದ ಬಾಗೇಶ್ವರ್ ಧಾಮ ದೇವಾಲಯದ ಮುಖ್ಯಸ್ಥರಾಗಿದ್ದಾರೆ. ಇವರ ತಮ್ಮ ಅನುಯಾಯಿಗಳಲ್ಲಿ ಜನಪ್ರೀಯವಾಗಿ ಬಾಗೇಶ್ವರ್ ಧಾಮ್ ಸರ್ಕಾರ್ ಎಂದೇ ಗುರುತಿಸಲ್ಪಟ್ಟಿದ್ದಾರೆ.


  ಇವರು ಸಾಕಷ್ಟು ಪವಾಡಶಕ್ತಿಯುಳ್ಳ ದೇವಮಾನವ ಎಂದು ನಂಬಲಾಗಿದ್ದು ಅಪಾರ ಸಂಖ್ಯೆಯ ಭಕ್ತರ ಬಳಗವನ್ನು ಹೊಂದಿದ್ದಾರೆ. 1996 ರಲ್ಲಿ ಜನಿಸಿರುವ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ದೈವಿಶಕ್ತಿಯನ್ನು ಹೊಂದಿದ್ದು ಮತ್ತೊಬ್ಬರ ಮನಸ್ಸನ್ನು ನಿರಾಯಾಸವಾಗಿ ಓದಬಲ್ಲರು ಎಂದು ಅವರ ಅನುಯಾಯಿಗಳು ನಂಬುತ್ತಾರೆ. ಅಲ್ಲದೆ, ಅವರು ಬಹಳಷ್ಟು ಜನರ 'ಘರ್ ವಾಪಸಿ' ನಡೆಸಿದ್ದರೆನ್ನಲಾಗಿದೆ.


  ಧೀರೇಂದ್ರ ಕೃಷ್ಣ ಶಾಸ್ತ್ರಿಯವರು


  ಮೌಢ್ಯದ ಕುರಿತು ಸವಾಲಿನಿಂದುಂಟಾದ ವಿವಾದ


  ಬಾಗೇಶ್ವರ್ ಧಾಮ್ ಸರ್ಕಾರ್ ಅವರ ಪವಡಶಕ್ತಿಯ ಬಗ್ಗೆ ಸಾಕಷ್ಟು ಚರ್ಚೆಗಳಾದಾಗ ಅದು ಕೇವಲ ವಂಚನೆ ಎಂದು ಸಾರ್ವಜನಿಕರೆದುರು ಬಿಚ್ಚಿಡಬೇಕೆಂದು ನಿರ್ಧರಿಸಿ ಮಹಾರಾಷ್ಟ್ರದ ಸಂಘವೊಂದು ಸತ್ಸಂಗವನ್ನು ಏರ್ಪಡಿಸಿ ಬಾಗೇಶ್ವರ್ ಧಾಮ್ ಸರ್ಕಾರ್ ಅವರನ್ನು ಆಮಂತ್ರಿಸಿತ್ತು.


  ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಘಟನೆಯು, ಮಹಾರಾಷ್ಟ್ರದ ನಾಗಪುರದಲ್ಲಿ ರಾಮಕಥಾ ಕಾರ್ಯಕ್ರವನ್ನು ಆಯೋಜಿಸಿ ಅಲ್ಲಿ ಬಾಗೇಶ್ವರ್ ಧಾಮ್ ಸರ್ಕಾರ್ ಅವರು ತಮ್ಮ ಪವಾಡಶಕ್ತಿಯನ್ನು ತೋರಿಸುವಂತೆ ಸವಾಲು ಹಾಕಿ ಆಮಂತ್ರಿಸಿತ್ತು. ಆದರೆ, ಸರ್ಕಾರ್ ಅವರು ಈ ಕಾರ್ಯಕ್ರಮಕ್ಕೆ ಉಪಸ್ಥಿತರಾಗದೆ ತಪ್ಪಿಸಿಕೊಂಡಿದ್ದರಿಂದ ಅವರ ಮೇಲೆ ಆರೋಪ ಕೇಳಿಬಂದಿದೆ.


  ಸಂಘಟನೆಯು ಈಗ ಅವರ ಮೇಲೆ ಎಫ್‍ಐ‍ಆರ್ ದಾಖಲಿಸುವಂತೆ ಬೇಡಿಕೆಯನ್ನೂ ಇಟ್ಟಿದೆ. ಈ ಹಿಂದೆ ಬಿಜೆಪಿಯ ಕಪಿಲ್ ಮಿಶ್ರಾ ಅವರು ತಮ್ಮ ಟ್ವಿಟ್ ಮೂಲಕ ಬಾಗೇಶ್ವರ್ ಧಾಮ್ ಸರ್ಕಾರ್ ಅವರನ್ನು ಬೆಂಬಲಿಸಿದ್ದರು.


  ಇದನ್ನೂ ಓದಿ:Nithyanada: ನಿತ್ಯಾನಂದನ ದೇಶದಲ್ಲಿ ಉದ್ಯೋಗಾವಕಾಶ! ಕಾಸಿಲ್ಲದಿದ್ದರೂ ಕೈಲಾಸಕ್ಕೆ ಹೋಗಿ, ಕೈ ತುಂಬಾ ಸಂಬಳ ಪಡೆಯಿರಿ!


  ಅವರು ತಮ್ಮ ಟ್ವಿಟ್ ನಲ್ಲಿ, "ಬಾಗೇಶ್ವರ್ ಅಂತಹವರ ಮೇಲೆ ದಾಳಿ ಆಗಿರುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಅವರು ಧರ್ಮಪರಿವರ್ತನೆ ಮಾಡುವುದರ ವಿರುದ್ಧ ಹೋರಾಡಿದ್ದಾರೆ, ತಮ್ಮ ವ್ಯಾಸ ಪೀಠದ ಮುಖಾಂತರ ಧರ್ಮಕ್ಕೆ ಎದುರಾಗಿರುವ ಸವಾಲುಗಳನ್ನು ಎದುರಿಸಿದ್ದಾರೆ ಹಾಗೂ ಅದರ ವಿರುದ್ಧ ಹೋರಾಡಲಿ ಆಹ್ವಾನಿಸುತ್ತಿದ್ದಾರೆ.


  ಇದರಿಂದಾಗಿ ದೇಶ ವಿರೋಧಿ ಹಾಗೂ ಧರ್ಮ ವಿರೋಧಿ ಜನರ ಹೊಟ್ಟೆಯಲ್ಲಿ ನೋವಾಗುತ್ತಿರುವುದು ಸಹಜವಾಗಿದೆ. ಯಾರಿಗೆ ಶೃದ್ಧೆ ಇಲ್ಲವೋ ಅವರು ಇವರ ಮಾತುಗಳನ್ನು ಆಲಿಸಬೇಡಿ" ಎಂದು ಬರೆದುಕೊಂಡಿದ್ದರು.
  ಪ್ರಸ್ತುತ, ಈ ಘಟನೆಯಾದ ನಂತರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಅವರು ಪ್ರವಚನ ನೀಡುತ್ತಿರುವ, ಕಾರ್ಯಕ್ರಮ ನಡೆಸುತ್ತಿರುವ ಕ್ಲಿಪ್ಪುಗಳು ಸಾಕಷ್ಟು ಮುನ್ನೆಲೆಗೆ ಬರುತ್ತಿವೆ. ಹಲವಾರು ಜನರು ಅವರ ಪ್ರವಚನಗಳ ಕುರಿತು ತಮ್ಮದೆ ಆದ ಟೀಕೆ-ಟಿಪ್ಪಣಿಗಳನ್ನು ಮಾಡುತ್ತಿದ್ದಾರೆ ಎನ್ನಬಹುದು.

  Published by:Gowtham K
  First published: