Weight Loss: ಅನ್ನ ತಿನ್ನೋದು ಬಿಟ್ರೆ ಸಣ್ಣಗಾಗ್ತಾರಾ? ಅನ್ನಕ್ಕೂ ದೇಹತೂಕಕ್ಕೂ ಇರೋ ನಂಟೇನು?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

Weight Loss: ನಿಜವಾಗ್ಲೂ ಅನ್ನ ತಿನ್ನೋದನ್ನ ಬಿಟ್ಟರೆ ತೂಕ ಕಡಿಮೆ ಆಗುತ್ತಾ? ಅನ್ನ ತಿನ್ನದೇ ಇದ್ರೆ ಸಣ್ಣಗಾಗೋದು ಸತ್ಯವಾ? ಇಲ್ಲಿದೆ ಉತ್ತರ

  • Share this:

Weight Loss Tips: ಯಾರಾದ್ರೂ ದಪ್ಪ ಇದಾರೆ, ಸಣ್ಣಗಾಗೋಕೆ ಪ್ರಯತ್ನ ಪಡ್ತಾ ಇದಾರೆ ಅಂದ್ರೆ ಮೊದಲು ಹೇಳೋದು ‘ಅನ್ನ ತಿನ್ನೋದು ಬಿಡ್ತೀನಿ’ ಅಂತ. ಅನ್ನ ತಿನ್ನೋದನ್ನ ಕಮ್ಮಿ ಮಾಡೋದು, ರಾತ್ರಿ ಊಟಕ್ಕೆ ಚಪಾತಿ ತಿನ್ನೋದು, ಮಧ್ಯಾಹ್ನ ಊಟಕ್ಕೆ ಅನ್ನ ಕ್ಯಾನ್ಸಲ್ ಮಾಡಿ ಮುದ್ದೆ ತಿನ್ನೋದು…ಹೀಗೆ ಏನಾದ್ರೂ ಮಾಡಿ ಇಡೀ ದಿನ ಆಹಾರದಲ್ಲಿ ಅನ್ನವನ್ನ ದೂರ ಇಡೋಕೆ ಏನೇನು ಮಾಡಬಹುದೋ ಅದೆಲ್ಲವನ್ನೂ ಮಾಡೋಕೆ ಜನ ಸಜ್ಜಾಗಿಬಿಡ್ತಾರೆ. ಆದ್ರೆ ನಿಜವಾಗ್ಲೂ ಅನ್ನ ತಿನ್ನೋದನ್ನ ಬಿಟ್ಟರೆ ತೂಕ ಕಡಿಮೆ ಆಗುತ್ತಾ? ಅನ್ನ ತಿನ್ನದೇ ಇದ್ರೆ ಸಣ್ಣಗಾಗೋದು ಸತ್ಯವಾ? ಇಲ್ಲಿದೆ ಉತ್ತರ.


ಬೇರೆಯವರಗಿಂತ ಹೆಚ್ಚಾಗಿ ಮಧುಮೇಹಿಗಳನ್ನು ಈ ಪ್ರಶ್ನೆ ಕಾಡೋದು ಸಹಜ. ಅನ್ನದಲ್ಲಿ ಹೆಚ್ಚು ವಿಧಗಳಿವೆ. ಆದ್ರೆ ಬಿಳಿ ಅನ್ನವನ್ನು ಜನ ಹೆಚ್ಚಾಗಿ ಬಳಸುತ್ತಾರೆ. ಅದರಲ್ಲೂ ಭಾರತದಲ್ಲಂತೂ ಅಕ್ಕಿ ಮತ್ತು ಗೋಧಿ ಎಲ್ಲರ ದಿನಚರಿಯಲ್ಲೂ ಕಡ್ಡಾಯ ಎನ್ನುವಂತೆ ಇದೆ. ನೇರವಾಗಿ ಅನ್ನವನ್ನೇ ಸಾಂಬಾರ್, ದಾಲ್, ಚಿತ್ರಾನ್ನ, ಫ್ರೈಡ್ ರೈಸ್, ಬಿರಿಯಾನಿ, ರಾಜ್ಮಾ ಚಾವಲ್ ರೀತಿ ತಿನ್ನುವುದು ಒಂದು ಬಗೆಯಾದ್ರೆ ಅಕ್ಕಿಯ ವಿವಿಧ ಬಗೆಯ ತಿಂಡಿಗಳನ್ನು ಮಾಡಿ ತಿನ್ನುವುದು ಮತ್ತೊಂದು ಬಗೆ. ಇಡ್ಲಿ, ದೋಸೆ, ಕಡುಬು, ರೊಟ್ಟಿ, ಪಾಯಸ, ಫಿರ್ನಿ ಮುಂತಾದವೆಲ್ಲಾ ಈ ಗುಂಪಿಗೆ ಸೇರುತ್ತವೆ. ಅಕ್ಕಿ ಅಥವಾ ಅನ್ನ ಎರಡೂ ನಮ್ಮ ದೇಹದೊಳಗೆ ಹೋದಾಗ ಬಹುತೇಕ ಒಂದೇ ರೀತಿ ನಡೆದುಕೊಳ್ಳುತ್ತವೆ.


ಇದನ್ನೂ ಓದಿ: Viral News: ರಸ್ತೆಯಲ್ಲಿ ನರಳುತ್ತಿದ್ದ ಜಿರಳೆಯನ್ನು ಆಸ್ಪತ್ರೆ ಸೇರಿಸಿದ ವ್ಯಕ್ತಿ, ಬದುಕುವ ಚಾನ್ಸ್ 50/50 ಎಂದ ಡಾಕ್ಟರ್ !


ಅನ್ನದಲ್ಲಿ ಅತೀ ಹೆಚ್ಚು ಇರುವುದು ಕಾರ್ಬೊಹೈಡ್ರೇಟ್ಸ್. ದೇಹ ಇದನ್ನು ಅರಗಿಸಿಕೊಂಡ ನಂತರ ಆಪತ್ಕಾಲಕ್ಕೆ ಎಂದು ಕೆಲವನ್ನು ಶೇಖರಿಸಿ ಇಟ್ಟುಕೊಳ್ಳುತ್ತೆ. ಅಂದಿನ ಬಳಕೆಗೆ ಆಗಿ ಇನ್ನೂ ಹೆಚ್ಚಾಗಿ ಉಳಿದ ಕಾರ್ಬೊಹೈಡ್ರೇಟ್​ಗಳು ಕೊಬ್ಬಿನ ರೂಪದಲ್ಲಿ ಶೇಖರಣೆಯಾಗುತ್ತವೆ. ಅಲ್ಲದೇ ಕಾರ್ಬೊಹೈಡ್ರೇಟ್​​ಗಳನ್ನು ಅತೀ ಹೆಚ್ಚಾಗಿ ಬಳಸುವುದು ದೇಹದ ಮಾಂಸಖಂಡಗಳು. ಅದಕ್ಕೇ ದೇಹ ತೂಕ ಜಾಸ್ತಿ ಎಂದಾಗ ಅನ್ನ ತಿನ್ನೋದು ಕಡಿಮೆ ಮಾಡಿ ಎಂದು ವೈದ್ಯರು ಹೇಳುತ್ತಾರೆ. ಮಾಂಸ ಖಂಡಳಿಗೆ ಕಾರ್ಬೊಹೈಡ್ರೇಟ್ ಹೋಗೋದು ಕಡಿಮೆ ಆದಾಗ ಸಹಜವಾಗೇ ಅವು ತೂಕ ಕಳೆದುಕೊಳ್ಳುತ್ತವೆ ಎನ್ನುತ್ತಾರೆ ಖ್ಯಾತ ಮಧುಮೇಹ ತಜ್ಞ ಡಾ ಯು ವೆಂಕಟಕೃಷ್ಣ ರಾವ್.


Will cutting rice from diet help in weight loss, experts say otherwise
ಪ್ರಾತಿನಿಧಿಕ ಚಿತ್ರ


ಇನ್ನು ನಮ್ಮ ಆಹಾರ ಪದ್ಧತಿ ಹೇಗಿದೆ ಎನ್ನುವುದರ ಮೇಲೂ ನಾವು ಗಮನ ಹರಿಸಬೇಕು. ಉದಾಹರಣೆಗೆ ದಕ್ಷಿಣ ಭಾರತೀಯರು ಚಿಕ್ಕಂದಿನಿಂದ ಹೆಚ್ಚಾಗಿ ಅನ್ನ ಸೇವಿಸಿರುತ್ತೇವೆ, ನಮ್ಮ ದೇಹವೂ ಅದಕ್ಕೇ ಒಗ್ಗಿ ಹೋಗಿರುತ್ತದೆ. ಕೆಲ ಭಾಗಗಳಲ್ಲಂತೂ ಮೂರೂ ಹೊತ್ತು ಅಕ್ಕಿಯ ಪದಾರ್ಥ ಅಥವಾ ಅನ್ನವನ್ನೇ ಇರುತ್ತಾರೆ. ಇಂಥವರಿಗೆ ಅನ್ನ ತಿನ್ನಬೇಡಿ ಎಂದರೆ ಅವರಿಗೆ ಬೇರೆನು ತಿಂದರೂ ಅನ್ನ ತಿಂದಂತೆ ಸಾಮಾಧಾನ ಆಗೋಲ್ಲ ಎನ್ನುತ್ತಾರೆ ಅಷ್ಟೇ.


ಆದರೆ ನಮ್ಮ ದೇಹಕ್ಕೆ ಕಾರ್ಬೊಹೈಡ್ರೇಟ್ಸ್ ಅತ್ಯವಶ್ಯಕ ವಸ್ತು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ದೇಹದ ಒಟ್ಟಾರೆ ಶಕ್ತಿಯ ಉತ್ಪಾದನೆಯಲ್ಲಿ ಕಾರ್ಬ್​ಗಳದ್ದು ಸಿಂಹಪಾಲು. 60% ನಷ್ಟು ಕಾರ್ಬೊಹೈಡ್ರೇಟ್​ಗಳು ದೇಹ ಉತ್ತಮವಾಗಿ ಕೆಲಸ ಮಾಡೋಕೆ ಅಂತಲೇ ಬೇಕಾಗುತ್ತದೆ. ಇನ್ನುಳಿದ ಶೇಕಡಾ 25 ಪ್ರೋಟೀನ್ ಮತ್ತು ಶೇಕಡಾ 15 ಕೊಬ್ಬಿನಂಶ ಅಗತ್ಯವಿದೆ. ದೈನಂದಿನ ಕೆಲಸಗಳಿಗೆ ಬೇಕಾಗೋದೇ ಕಾರ್ಬ್. ಪ್ರೋಟೀನ್​ಗಳು ಹೊಸಾ ಕಣಗಳ ಉತ್ಪಾದನೆ ಮಾಡುವಲ್ಲಿ ಸಹಾಯ ಮಾಡುತ್ತವೆ. ಇನ್ನು ಹಾರ್ಮೋನ್ ಉತ್ಪಾದನೆ, ಚರ್ಮದ ಜೀವಕೋಶಗಳು, ಕೊಲ್ಯಾಜನ್ ಇವಕ್ಕೆಲ್ಲಾ ಕೊಲೆಸ್ಟರಾಲ್ ಅಥವಾ ಕೊಬ್ಬು ಬೇಕು.


ತೂಕ ಕಡಿಮೆ ಮಾಡೋದು ಅಂದರೆ ಒಟ್ಟಾರೆ ಎಷ್ಟು ಕ್ಯಾಲೊರಿ ಆಹಾರ ಸೇವನೆ ಮಾಡ್ತೀವಿ ಅನ್ನೋದರ ಬಗ್ಗೆ ಗಮನ ಇರಬೇಕು. ಅಂದರೆ ಸರಿಯಾಗಿ ಲೆಕ್ಕ ಹಾಕಿದ್ರೆ ನೀವು ಅನ್ನ ತಿನ್ನುವುದನ್ನು ಬಿಡದೆಯೂ ತೂಕ ಇಳಿಸಿಕೊಳ್ಳಬಹುದು. ಪಾಲಿಶ್ ಆಗದ ಅಕ್ಕಿ ಬಳಸುವುದು, ಅನ್ನಕ್ಕಿಂತ ತರಕಾರಿ, ಮೊಳಕೆ ಕಾಳು, ಹಣ್ಣುಗಳನ್ನು ಹೆಚ್ಚು ತಿನ್ನುವುದು ಈ ರೀತಿಯ ಬದಲಾವಣೆ ಮಾಡಿಕೊಂಡ್ರೆ ತೂಕವೂ ಇಳಿಯುತ್ತೆ, ಅನ್ನವನ್ನು ತ್ಯಜಿಸಬೇಕಾಗಿಲ್ಲ ಎನ್ನುತ್ತಾರೆ ವೈದ್ಯರು.

Published by:Soumya KN
First published: