ನಾನೇನಾದರೂ ಸಂಪುಟ ಸೇರಿದರೆ 3ನೇ ಮಹಾಯುದ್ಧವೇ ಆದೀತು..! ಹಾಗೆಂದು ಹೇಳುತ್ತಾರೆ ವಿಶ್ವದ ಪ್ರಭಾವಿ ಮಹಿಳೆ

ಕೆಲಸ ಬಿಟ್ಟಿರುವ ಹಿನ್ನೆಲೆಯಲ್ಲಿ ಟ್ರಂಪ್ ಸರಕಾರದಲ್ಲಿ ತಾವೇನಾದರೂ ಸೇರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ನೂಯಿ, ತಾನೇನಾದರೂ ಟ್ರಂಪ್ ಸರಕಾರ ಸೇರಿದರೆ ಮೂರನೇ ವಿಶ್ವ ಯುದ್ಧವೇ ಆದೀತು ಎಂದು ಹಾಸ್ಯ ಮಾಡಿದ್ದಾರೆ.

ಇಂದ್ರಾ ನೂಯಿ

ಇಂದ್ರಾ ನೂಯಿ

  • News18
  • Last Updated :
  • Share this:
- ನ್ಯೂಸ್18 ಕನ್ನಡ

ನ್ಯೂ ಯಾರ್ಕ್(ಅ. 10): ವಿಶ್ವದ ಅತ್ಯಂತ ಪ್ರಭಾವೀ ಮಹಿಳೆಯರ ಪೈಕಿ ಒಬ್ಬರೆನಿಸಿರುವ ಭಾರತ ಮೂಲದ ಇಂದ್ರಾ ನೂಯಿ ಅವರಿಗೆ ‘ಗೇಮ್ ಚೇಂಜರ್’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಔದ್ಯಮಿಕ ಯಶಸ್ಸು, ಮಾನವೀಯ ನೆಲೆ, ಮಹಿಳಾ ಹಕ್ಕಿಗೆ ಹೋರಾಟ ಇತ್ಯಾದಿ ಕಾರ್ಯಗಳಲ್ಲಿ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಏಷ್ಯಾ ಸೊಸೈಟಿ ಎಂಬ ಎನ್​ಜಿಓ ಸಂಸ್ಥೆಯು 62 ವರ್ಷದ ಇಂದ್ರಾ ನೂಯಿ ಅವರಿಗೆ ಈ ಗೌರವ ನೀಡಿದೆ.

ವಿಶ್ವದ ಕೋಲಾ ದೈತ್ಯ ಪೆಪ್ಸಿಕೋ ಕಂಪನಿಯಲ್ಲಿ 12 ವರ್ಷಗಳ ಕಾಲ ಸಿಇಓ ಸ್ಥಾನದಲ್ಲಿದ್ದ ತಮಿಳುನಾಡು ಮೂಲದ ಇಂದ್ರಾ ನೂಯಿ ಅವರು ವಾರದ ಹಿಂದಷ್ಟೇ ಆ ಸ್ಥಾನದಿಂದ ಕೆಳಗಿಳಿದಿದ್ದರು. ಅಪರಿಮಿತ ಕೆಲಸದ ಒತ್ತಡಗಳನ್ನು ಯಶಸ್ವಿಯಾಗಿ ನಿಭಾಯಿಸಿ ವಿಶ್ವದ ಅತ್ಯಂತ ಯಶಸ್ವಿ ಮಹಿಳೆಯರಲ್ಲೊಬ್ಬರೆನಿಸಿದ್ದ ಇಂದ್ರಾ ನೂಯಿ ಇದೀಗ ಒತ್ತಡಮುಕ್ತರಾಗಿ ನಿರಾಳರಾಗಿದ್ದಾರೆ. ಏಷ್ಯಾ ಸೊಸೈಟಿಯ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಇಂದ್ರಾ ನೂಯಿ ಅವರಿಗೆ ಮಾಧ್ಯಮದವರು ಜಾಣತನದ ಪ್ರಶ್ನೆ ಎಸೆದು, ಅಷ್ಟೇ ಜಾಣತನದ ಉತ್ತರ ಪಡೆದಿದ್ದಾರೆ.

ಕೆಲಸ ಬಿಟ್ಟಿರುವ ಹಿನ್ನೆಲೆಯಲ್ಲಿ ಟ್ರಂಪ್ ಸರಕಾರದಲ್ಲಿ ತಾವೇನಾದರೂ ಸೇರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ನೂಯಿ, ತಾನೇನಾದರೂ ಟ್ರಂಪ್ ಸರಕಾರ ಸೇರಿದರೆ ಮೂರನೇ ವಿಶ್ವ ಯುದ್ಧವೇ ಆದೀತು ಎಂದು ಹಾಸ್ಯ ಮಾಡಿದ್ದಾರೆ.

“ನನಗೂ ರಾಜಕಾರಣಕ್ಕೂ ಹೊಂದಾಣಿಕೆಯೇ ಆಗೊಲ್ಲ. ನಾನು ಅತಿಯಾಗಿ ಮಾತನಾಡುತ್ತೇನೆ. ರಾಜತಾಂತ್ರಿಕವಾಗಿರುವುದು ಹೇಗೆಂದು ಗೊತ್ತಿಲ್ಲ. ಡಿಪ್ಲೊಮೆಸಿ ಎಂದರೆ ಏನೆಂದೇ ತಿಳಿದಿಲ್ಲ. ನನ್ನಿಂದ ಮೂರನೇ ವಿಶ್ವ ಯುದ್ಧ ಸಂಭವಿಸಬಹುದೇನೋ ಗೊತ್ತಿಲ್ಲ..!” ಎಂದು ಇಂದ್ರಾ ನೂಯಿ ಪ್ರತಿಕ್ರಿಯಿಸಿದ್ಧಾರೆ.

ಚೆನ್ನೈ ಸಂಜಾತೆ ಇಂದ್ರಾ ನೂಯಿ ಅವರು ಪೆಪ್ಸಿಕೋದ ಸಿಇಓ ಸ್ಥಾನದಿಂದ ಕೆಳಗಿಳಿದ ಬಳಿಕ ಇದೀಗ ನಿರ್ದೇಶಕರಾಗಿ ಕೆಲ ತಿಂಗಳು ಮುಂದುವರಿಯಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಲ್ಲೂ ಅವರು ಮೊದಲ ಮಹಿಳಾ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಮೆರಿಕದ ಕನೆಕ್ಟಿಕಟ್ ರಾಜ್ಯದಲ್ಲಿ ತಮ್ಮ ಕುಟುಂಬದೊಂದಿಗೆ ನೆಲಸಿರುವ ಇಂದ್ರಾ ನೂಯಿ ಅವರು ಪೆಪ್ಸಿಕೋ ಸಂಸ್ಥೆಯ ಮೊದಲ ಮಹಿಳಾ ಸಿಇಓ ಆಗಿ 12 ವರ್ಷಗಳ ಕಾಲ ಅಪಾಯ ಯಶಸ್ಸು ಗಳಿಸಿದ್ದರು. ಫೋರ್ಬ್ಸ್​ನ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಅವರು 13ನೇ ಸ್ಥಾನ ಪಡೆದಿದ್ದರು.
First published: