ಪಿಎಂಸಿ ಗ್ರಾಹಕರು ಹಣ ಹಿಂಪಡೆಯುವಂತೆ ಆರ್​ಬಿಐ ಗವರ್ನರ್ ಜತೆ ಮಾತನಾಡುತ್ತೇನೆ; ನಿರ್ಮಲಾ ಸೀತಾರಾಮನ್ ಭರವಸೆ

ಬಹುಕೋಟಿ ಪಿಎಂಸಿ ಬ್ಯಾಂಕ್ ವಂಚನೆ​​​ ಪ್ರಕರಣ ಸಂಬಂಧ ಮುಂಬೈ ಪೊಲೀಸರು, ಕಳೆದ ವಾರ ಎಚ್​​ಡಿಐಎಲ್​​ ನಿರ್ದೇಶಕರಾದ ಸರಾಂಗ್​​ ಮತ್ತು ರಾಕೇಶ್ ವಾಧವನ್ ಎಂಬುವರನ್ನು ಬಂಧಿಸಿದ್ದರು.

HR Ramesh | news18-kannada
Updated:October 10, 2019, 3:54 PM IST
ಪಿಎಂಸಿ ಗ್ರಾಹಕರು ಹಣ ಹಿಂಪಡೆಯುವಂತೆ ಆರ್​ಬಿಐ ಗವರ್ನರ್ ಜತೆ ಮಾತನಾಡುತ್ತೇನೆ; ನಿರ್ಮಲಾ ಸೀತಾರಾಮನ್ ಭರವಸೆ
ಪಿಎಂಸಿ ಬ್ಯಾಂಕ್ ಗ್ರಾಹಕರೊಂದಿಗೆ ಮಾತನಾಡುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
  • Share this:
ಮುಂಬೈ: ಪಂಜಾಬ್ ಮಹಾರಾಷ್ಟ್ರ ಸಹಕಾರ ಬ್ಯಾಂಕ್​ (ಪಿಎಂಸಿ)ನಿಂದ ನೊಂದಿರುವ ಗ್ರಾಹಕರ ವಿಚಾರವಾಗಿ ಇಂದು ಸಂಜೆ ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರೊಂದಿಗೆ ಮಾತನಾಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭರವಸೆ ನೀಡಿದರು. 

ಇಂದು ಮುಂಬೈ ಬಿಜೆಪಿ ಕಚೇರಿ ಮುಂದೆ ಪಿಎಂಸಿ ಬ್ಯಾಂಕ್​ ಗ್ರಾಹಕರು ಪ್ರತಿಭಟನೆ ನಡೆಸಿದರು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದ್ದಿಗೋಷ್ಠಿಗೂ ಪ್ರತಿಭಟನಾನಿರತ ಗ್ರಾಹಕರಲ್ಲಿ ಕೆಲವರನ್ನು ಭೇಟಿಯಾಗಿ ಈ ಭರವಸೆ ನೀಡಿದರು.

ಗ್ರಾಹಕರು ಬ್ಯಾಂಕ್​ನಲ್ಲಿ ಹೂಡಿಕೆ ಮಾಡಿರುವ ಹಣವನ್ನು ಹಿಂಪಡೆದುಕೊಳ್ಳುವಂತೆ  ನಾನು ಮತ್ತೊಮ್ಮೆ ಗ್ರಾಹಕರ ಪರವಾಗಿ ಆರ್​ಬಿಐ ಗವರ್ನರ್ ಅವರೊಂದಿಗೆ ಮಾತನಾಡುತ್ತೇನೆ. ಗ್ರಾಹಕರ ಹಣವನ್ನು ವಾಪಸ್​ ಕೊಡಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನವನ್ನೂ ಮಾಡುತ್ತೇನೆ ಎಂದು ಭರವಸೆ ನೀಡಿದರು. ಜೊತೆಗೆ, ವಾಸ್ತವದಲ್ಲಿ ಏನು ನಡೆದಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಅಧ್ಯಯನ ನಡೆಸುವಂತೆ ಸಚಿವಲಾಯದ ಕಾರ್ಯದರ್ಶಿಗೆ ಹೇಳುತ್ತೇನೆ. ಗೌರವಾನ್ವಿತ ಆರ್​ಬಿಐ ಕೂಡ ವಾಸ್ತವವನ್ನು ಅರಿತುಕೊಳ್ಳಲಿದೆ ಮತ್ತು ಗ್ರಾಹಕರ ಪರವಾಗಿ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಈ ವಿಚಾರವಾಗಿ ಹಣಕಾಸು ಸಚಿವಾಲಯ ನೇರವಾಗಿ ಏನನ್ನು ಮಾಡಲು ಸಾಧ್ಯವಿಲ್ಲ. ಏಕೆಂದರೆ ಅದು ಆರ್​ಬಿಐ ನಿಯಂತ್ರಣದಲ್ಲಿದೆ. ಆದರೆ, ನಮ್ಮ ಕಡೆಯಿಂದ ನಮ್ಮ ಸಚಿವಾಲಯ ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಚಿವಾಲಯದ ಜೊತೆಗೆ ಕೆಲಸ ಮಾಡುವಂತೆ ನಮ್ಮ ಕಾರ್ಯದರ್ಶಿಗೆ ಹೇಳುತ್ತೇನೆ ಎಂದು ತಿಳಿಸಿದರು.

ಪಿಎಂಸಿ ಗ್ರಾಹಕರಿಗೆ ಬ್ಯಾಂಕ್​ನಿಂದ ಹಣ ಹಿಂಪಡೆದುಕೊಳ್ಳುವ ಮಿತಿಯನ್ನು 25 ಸಾವಿರಕ್ಕೆ ಆರ್​ಬಿಐ ಪರಿಷ್ಕರಿಸಿ, ಬುಧವಾರ ಅನುಷ್ಠಾನಕ್ಕೆ ತಂದಿತ್ತು. ಬ್ಯಾಂಕ್​ ಗ್ರಾಹಕರು ಮತ್ತಷ್ಟು ಬುಧವಾರ ಕೂಡ ಪ್ರತಿಭಟನೆ ನಡೆಸಿದರು. ನೋ ಬೇಲ್, ಓನ್ಲಿ ಜೈಲ್​ (ಜಾಮೀನು ಬೇಡ, ಜೈಲು ಶಿಕ್ಷೆಯಾಗಲಿ) ಎಂಬ ಫಲಕ ಹಿಡಿದು ಮುಂಬೈನಲ್ಲಿ ಪ್ರತಿಭಟನೆ ನಡೆಸಿದರು. ತಪ್ಪು ಎಸಗಿರುವ ಅಧಿಕಾರಿಗಳ ವಿರುದ್ಧ ಆರ್​ಬಿಐ ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದ್ದರು. ಈ ವಿಚಾರವಾಗಿ ಪ್ರಧಾನಿ ಮೋದಿ ಅವರು ಮಧ್ಯಪ್ರವೇಶಿಸುವಂತೆ ಒತ್ತಾಯಪೂರ್ವಕ ಮನವಿಯನ್ನು ಮಾಡಿದರು.

ಇದನ್ನು ಓದಿ: ಪಿಎಂಸಿ ಬ್ಯಾಂಕ್​ ಹಗರಣ; ಮುಂಬೈನಲ್ಲಿ ಮಾಜಿ ಮ್ಯಾನೇಜಿಂಗ್ ಡೈರೆಕ್ಟರ್ ಜಾಯ್​ ಥಾಮಸ್ ಬಂಧನ

ಬಹುಕೋಟಿ ಪಿಎಂಸಿ ಬ್ಯಾಂಕ್ ವಂಚನೆ​​​ ಪ್ರಕರಣ ಸಂಬಂಧ ಮುಂಬೈ ಪೊಲೀಸರು, ಕಳೆದ ವಾರ ಎಚ್​​ಡಿಐಎಲ್​​ ನಿರ್ದೇಶಕರಾದ ಸರಾಂಗ್​​ ಮತ್ತು ರಾಕೇಶ್ ವಾಧವನ್ ಎಂಬುವರನ್ನು ಬಂಧಿಸಿದ್ದರು.
First published: October 10, 2019, 3:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading