• Home
 • »
 • News
 • »
 • national-international
 • »
 • Ukriane Crisis: ರಷ್ಯಾ-ಉಕ್ರೇನ್ ಯುದ್ಧದಲ್ಲಿ ದುರ್ಘಟನೆ ಸಂಭವಿಸಿದರೆ ಮಧ್ಯ ಪ್ರವೇಶಿಸುತ್ತಾ ಅಮೆರಿಕಾ?

Ukriane Crisis: ರಷ್ಯಾ-ಉಕ್ರೇನ್ ಯುದ್ಧದಲ್ಲಿ ದುರ್ಘಟನೆ ಸಂಭವಿಸಿದರೆ ಮಧ್ಯ ಪ್ರವೇಶಿಸುತ್ತಾ ಅಮೆರಿಕಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪರಮಾಣು ಶಸ್ತ್ರಾಸ್ತ್ರಗಳ (Nuclear Weapons)ಬಳಕೆಯನ್ನು ಆಶ್ರಯಿಸದೆಯೇ ರಷ್ಯಾವು ಉಕ್ರೇನ್ ಅನ್ನು ಸುಲಭವಾಗಿ ದುರ್ಬಲಗೊಳಿಸಬಹುದು ಮತ್ತು ಅಂತಹ ಪರಿಸ್ಥಿತಿಯಲ್ಲಿ ಶಸ್ತ್ರಾಸ್ತ್ರಗಳು, ಹಣ ಮತ್ತು ಇತರ ಸಂಪನ್ಮೂಲಗಳನ್ನು ಪೂರೈಸುವ ಮೂಲಕ ಕೈವ್ ಅನ್ನು ಹೊರಗಿನಿಂದ ಬೆಂಬಲಿಸುವ ತನ್ನ ಪ್ರಸ್ತುತ ನೀತಿಯನ್ನು ಯುಎಸ್ ಮುಂದುವರಿಸುತ್ತದೆಯೇ ಎಂಬುದನ್ನು ಅವಲೋಕಿಸಬೇಕು ಎಂದು ತಜ್ಞರು ಹೇಳಿದ್ದಾರೆ.

ಮುಂದೆ ಓದಿ ...
 • Share this:

  ರಷ್ಯಾದ ಕ್ಷಿಪಣಿಗಳು (Russian Missile) ಮತ್ತು ವಾಯು ಶಕ್ತಿಯು ಉಕ್ರೇನ್‌ನಲ್ಲಿ (Ukraine) ದೊಡ್ಡ ಪ್ರಮಾಣದ ವಿನಾಶ ಮತ್ತು ಸಾವುಗಳಿಗೆ ಕಾರಣವಾದಲ್ಲಿ ಯುನೈಟೆಡ್ ಸ್ಟೇಟ್ಸ್ (USA) ಉಕ್ರೇನ್ ಯುದ್ಧದಲ್ಲಿ ನೇರವಾಗಿ ತೊಡಗಿಸಿಕೊಳ್ಳದಿರುವುದು ಕಷ್ಟಕರವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಪರಮಾಣು ಶಸ್ತ್ರಾಸ್ತ್ರಗಳ (Nuclear Weapons)ಬಳಕೆಯನ್ನು ಆಶ್ರಯಿಸದೆಯೇ ರಷ್ಯಾವು ಉಕ್ರೇನ್ ಅನ್ನು ಸುಲಭವಾಗಿ ದುರ್ಬಲಗೊಳಿಸಬಹುದು ಮತ್ತು ಅಂತಹ ಪರಿಸ್ಥಿತಿಯಲ್ಲಿ ಶಸ್ತ್ರಾಸ್ತ್ರಗಳು, ಹಣ ಮತ್ತು ಇತರ ಸಂಪನ್ಮೂಲಗಳನ್ನು ಪೂರೈಸುವ ಮೂಲಕ ಕೈವ್ ಅನ್ನು ಹೊರಗಿನಿಂದ ಬೆಂಬಲಿಸುವ ತನ್ನ ಪ್ರಸ್ತುತ ನೀತಿಯನ್ನು ಯುಎಸ್ ಮುಂದುವರಿಸುತ್ತದೆಯೇ ಎಂಬುದನ್ನು ಅವಲೋಕಿಸಬೇಕು ಎಂದು ತಜ್ಞರು ಹೇಳಿದ್ದಾರೆ.


  ರಷ್ಯಾದ ವೈಮಾನಿಕ ಬಾಂಬ್ ದಾಳಿ


  ಪ್ರಮುಖ ನಗರ ಕೇಂದ್ರಗಳ (ಉಕ್ರೇನ್‌ನಲ್ಲಿ) ವಿರುದ್ಧ ರಷ್ಯಾ ಬೃಹತ್ ವೈಮಾನಿಕ ಬಾಂಬ್ ದಾಳಿಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದರೆ ಮತ್ತು ಅದು ಹೆಚ್ಚುತ್ತಿರುವ ಸಾವು ಮತ್ತು ವಿನಾಶದ ಚಿತ್ರಗಳೊಂದಿಗೆ ಹೆಚ್ಚುತ್ತಿರುವ ನಾಗರಿಕ ಸಾವುನೋವುಗಳಿಗೆ ಕಾರಣವಾಗಬಹುದು ಮತ್ತು ದೂರದರ್ಶನ ಮತ್ತು ಅಂತರ್ಜಾಲದಲ್ಲಿ ಈ ದೃಶ್ಯ ಪ್ರತಿದಿನ ಪ್ರಸಾರವಾದಾಗ ಅಮೆರಿಕದ ಪ್ರತಿಕ್ರಿಯೆ ಏನಾಗಿರುತ್ತದೆ? ಎಂದು ವಿದೇಶಿ ಮತ್ತು ಮಿಲಿಟರಿ ವ್ಯವಹಾರಗಳಲ್ಲಿನ ಬೆಳವಣಿಗೆಗಳೊಂದಿಗೆ ವ್ಯವಹರಿಸುವ ಹೆಚ್ಚು ಗೌರವಾನ್ವಿತ ವಾಷಿಂಗ್ಟನ್ ಮೂಲದ ನ್ಯಾಷನಲ್ ಇಂಟರೆಸ್ಟ್ ಮ್ಯಾಗಜೀನ್‌ನಲ್ಲಿ ಪತ್ರಕರ್ತರಾದ ಲಿಯಾನ್ ಹದರ್ ಪ್ರಶ್ನಿಸಿದ್ದಾರೆ.


  ಇದನ್ನೂ ಓದಿ: Explained: ನಿಜಕ್ಕೂ ಪರಮಾಣು ಪ್ರಯೋಗಿಸುತ್ತಾರಾ ಪುಟಿನ್? ರಷ್ಯಾದ ಎಚ್ಚರಿಕೆಯ ಪರಿಣಾಮಗಳೇನು?


  'ಡರ್ಟಿ ಬಾಂಬ್' ಅನ್ನು ಉಕ್ರೇನ್ ಬಳಸುವ ಸಾಧ್ಯತೆ


  ಇತ್ತೀಚಿನ ವಾರಗಳಲ್ಲಿ ಯುಎಸ್ ಹಾಗೂ ಯುರೋಪ್‌ನಲ್ಲಿ, ಅಣ್ವಸ್ತ್ರಗಳನ್ನು ಬಳಸುವ ಕುರಿತು ಮಾಸ್ಕೋ ನೀಡಿರುವ ಬೆದರಿಕೆ ಹಾಗೂ ಉಕ್ರೇನ್ ಸಂಘರ್ಷದ ತೀವ್ರತೆಯು ಸಾಕಷ್ಟು ಕಳವಳನ್ನುಂಟು ಮಾಡಿದೆ ಅಂತಾನೇ ಹೇಳಬಹುದು. ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ತಮ್ಮ ಭಾರತೀಯ ಮತ್ತು ಚೀನಾದ ಸಹವರ್ತಿಗಳಿಗೆ ಕರೆ ಮಾಡಿ ಸೀಮಿತ ಪ್ರದೇಶದಲ್ಲಿ ವಿಕಿರಣಶೀಲ ವಿಕಿರಣವನ್ನು ಸೃಷ್ಟಿಸುವ ಸ್ಫೋಟಕವಾದ 'ಡರ್ಟಿ ಬಾಂಬ್' ಅನ್ನು ಉಕ್ರೇನ್ ಬಳಸುವ ಸಾಧ್ಯತೆಯ ಬಗ್ಗೆ ತಿಳಿಸಿದ್ದರು.


  ಪರಮಾಣು ಶಸ್ತ್ರಾಸ್ತ್ರಗಳ ಬಳಕೆಗೆ ನೆಪ


  ಆದಾಗ್ಯೂ, ಪಾಶ್ಚಿಮಾತ್ಯ ನಾಯಕರ ಪ್ರಕಾರ ಉಕ್ರೇನ್ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಗೆ ನೆಪವೆಂಬಂತೆ ರಷ್ಯಾ ಈ ಆರೋಪವನ್ನು ಮಾಡುತ್ತಿದೆ ಎಂದಿದ್ದಾರೆ. ಹದರ್ ತಮ್ಮ ವಿಶ್ಲೇಷಣೆಯಲ್ಲಿ ವ್ಲಾದಿಮಿರ್ ಪುತಿನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಬೆದರಿಕೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗ ಜಾಗತಿಕ ಮಹಾಶಕ್ತಿಯು ಅಣ್ವಸ್ತ್ರಗಳ ಬಳಕೆಯನ್ನು ಆಶ್ರಯಿಸದೆ ಸಣ್ಣ ಅಥವಾ ಮಧ್ಯಮ ಗಾತ್ರದ ಶಕ್ತಿಯನ್ನು ದುರ್ಬಲಗೊಳಿಸಬಹುದು ಎಂದು ತಿಳಿಸಿದ್ದಾರೆ. ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಸಂಪೂರ್ಣ ಬಲವನ್ನು ಬಳಸುವುದರ ಮೂಲಕ ರಷ್ಯಾವು ಉಕ್ರೇನ್ ಮೇಲೆ ಅಧಿಪತ್ಯ ಸ್ಥಾಪಿಸಬಹುದು ಎಂದು ತಿಳಿಸಿದ್ದಾರೆ.


  ತೀವ್ರಗೊಳ್ಳಲಿರುವ ಯುದ್ಧ


  ಅಕ್ಟೋಬರ್ 29 ರಂದು, ಕ್ರೈಮಿಯಾದ ಸೆವಾಸ್ಟೊಪೋಲ್ ಬಂದರಿನ ಬಳಿ ತನ್ನ ನೌಕಾಪಡೆಯ ಮೇಲೆ ಪ್ರಮುಖ ಉಕ್ರೇನಿಯನ್ ಡ್ರೋನ್ ದಾಳಿಗೆ ಪ್ರತಿಕ್ರಿಯೆಯಾಗಿ ಕಪ್ಪು ಸಮುದ್ರದ ಒಪ್ಪಂದದಲ್ಲಿ ತನ್ನ ಭಾಗವಹಿಸುವಿಕೆಯನ್ನು ಅಂತ್ಯಗೊಳಿಸಲು ಮಾಸ್ಕೋ ನಿರ್ಧರಿಸಿತು. ಈ ಮೂಲಕ ರಷ್ಯಾ ವಿಶ್ವದ ಅಗ್ರ ಧಾನ್ಯ ರಫ್ತುದಾರರಲ್ಲಿ ಒಂದಾದ ಉಕ್ರೇನ್‌ನಿಂದ ಸಾಗಣೆಯನ್ನು ಪರಿಣಾಮಕಾರಿಯಾಗಿ ಕಡಿತಗೊಳಿಸುತ್ತದೆ ಹಾಗೂ ಇದು ಜಾಗತಿಕ ಆಹಾರ ಪರಿಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.


  ರಷ್ಯಾದ ಕ್ಷಿಪಣಿ ಎದುರಿಸಲು ಅಮೆರಿಕಾ ಸಹಾಯ


  ಈ ವಾರಾಂತ್ಯದಲ್ಲಿ ಯುಎಸ್, ಉಕ್ರೇನ್‌ಗೆ ಮತ್ತೊಂದು $275 ಮಿಲಿಯನ್ ಮಿಲಿಟರಿ ನೆರವು ಘೋಷಿಸಿದ್ದು, ಇದರಲ್ಲಿ ಶಸ್ತ್ರಾಸ್ತ್ರಗಳು, ಯುದ್ಧಸಾಮಗ್ರಿಗಳು ಮತ್ತು ಉಪಕರಣಗಳು ಸೇರಿವೆ ಎಂದು US ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕೆನ್ ತಿಳಿಸಿದ್ದಾರೆ. ರಷ್ಯಾದ ಕ್ಷಿಪಣಿಗಳನ್ನು ಎದುರಿಸಲು ಯುಎಸ್ ಉಕ್ರೇನ್‌ಗೆ NASAMS ವಾಯು ರಕ್ಷಣಾ ವ್ಯವಸ್ಥೆಯನ್ನು ಸಹ ನೀಡುತ್ತದೆ ಎಂದು ಹೇಳಿದ್ದಾರೆ.


  ಇದನ್ನೂ ಓದಿ:  Indian Army: ಚೀನಾಕ್ಕೆ ಸೆಡ್ಡು ಹೊಡಿಯಲು ಹೊಸ ಬಗೆಯ ಶಸ್ತ್ರಾಸ್ತ್ರದೊಂದಿಗೆ ಭಾರತ ರೆಡಿ!


  ಸಾಮಾನ್ಯ ಆಯುಧಗಳು ಅಷ್ಟೇ ಮಾರಕವಾಗಿವೆ


  ಶಕ್ತಿಶಾಲಿ ದೇಶವು ಸಣ್ಣ ದೇಶವನ್ನು ಸದೆಬಡಿಯಲು ಪರಮಾಣು ಶಸ್ತ್ರಾಸ್ತ್ರಗಳನ್ನು ಆಶ್ರಯಿಸಬೇಕಾಗಿಲ್ಲ ಎಂದು ತಜ್ಞರು ಹೇಳಿದ್ದಾರೆ. ವಿಶ್ವ ಸಮರ II ರ ಸಮಯದಲ್ಲಿ ಮತ್ತು ನಂತರದ ಯುದ್ಧಗಳಲ್ಲಿ ವಾಯು ಬಾಂಬ್ ದಾಳಿಯಿಂದ ಉಂಟಾದ ಸಾವು ಮತ್ತು ವಿನಾಶ, ಹಿರೋಷಿಮಾ ಮತ್ತು ನಾಗಸಾಕಿಯಲ್ಲಿ 1945 ರಲ್ಲಿ ಅಮೇರಿಕಾ ಜಪಾನಿನ ನಗರಗಳ ಮೇಲೆ ಪರಮಾಣು ಬಾಂಬುಗಳನ್ನು ಬೀಳಿಸಿದಾಗ ಉಂಟಾದ ವಿನಾಶಕ್ಕಿಂತ ಅತ್ಯಂತ ಭೀಕರ ಹಾಗೂ ಭಯನಾಕವಾಗಿದ್ದವು ಎಂದು ತಜ್ಞರು ಹೇಳಿದ್ದಾರೆ.


  ಪರಮಾಣು ದಾಳಿಯನ್ನೇ ಏಕೆ ಮಾಡಬೇಕು?


  ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಒಪ್ಪಂದಕ್ಕೆ ಒಪ್ಪುವಂತೆ ಮಾಡಲು ಪುಟಿನ್ ತನ್ನ ವಾಯು ಶಕ್ತಿ ಮತ್ತು ಇತರ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ನಿಯೋಜಿಸುವ ಬದಲಿಗೆ ಪರಮಾಣು ದಾಳಿಯನ್ನೇ ಏಕೆ ಮಾಡಬೇಕು ಎಂದು ತಜ್ಞರು ವಾದಿಸುತ್ತಿದ್ದಾರೆ. ಪರಿಸ್ಥಿತಿಯು ಇನ್ನಷ್ಟು ಹದಗೆಡುವುದನ್ನು ತಪ್ಪಿಸಲು, ಯುರೋಪಿನ ಆಚೆಗಿನ ದೇಶಗಳಲ್ಲಿ ಅಮೆರಿಕವು ಉಕ್ರೇನ್‌ಗೆ ಸಂಘರ್ಷವನ್ನು ಕೊನೆಗೊಳಿಸಲು ರಷ್ಯಾಗೆ ಮನವರಿಕೆ ಮಾಡಬೇಕು ಎಂಬ ಅಭಿಪ್ರಾಯವು ಬೆಳೆಯುತ್ತಿದೆ.


  ಮುಂದಿನ ತಿಂಗಳು ಇಂಡೋನೇಷ್ಯಾದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ವಿಶ್ವದ ಪ್ರಮುಖ ಆರ್ಥಿಕತೆಗಳ ನಾಯಕರು ಭೇಟಿಯಾಗಲಿದ್ದಾರೆ. ಯುದ್ಧಕ್ಕೆ ಅಂತ್ಯ ಹಾಡಲು ಈ ಶೃಂಗಸಭೆ ಸಹಕಾರಿಯಾಗಬಹುದು ಎಂಬ ಆಶಾಭಾವನೆಯನ್ನೇ ತಜ್ಞರು ಹೊಂದಿದ್ದಾರೆ.

  First published: