• Home
  • »
  • News
  • »
  • national-international
  • »
  • Akhilesh and Shivpal: ಒಂದಾಗ್ತಾರಾ ಅಖಿಲೇಶ್, ಶಿವಪಾಲ್‌ ಯಾದವ್? ಭಿನ್ನಾಭಿಪ್ರಾಯ ಮುಂದುವರೆದರೆ ಬಿಜೆಪಿಗೆ ಲಾಭ

Akhilesh and Shivpal: ಒಂದಾಗ್ತಾರಾ ಅಖಿಲೇಶ್, ಶಿವಪಾಲ್‌ ಯಾದವ್? ಭಿನ್ನಾಭಿಪ್ರಾಯ ಮುಂದುವರೆದರೆ ಬಿಜೆಪಿಗೆ ಲಾಭ

ಅಖಿಲೇಶ್ ಮತ್ತು ಶಿವಪಾಲ್‌ ಯಾದವ್

ಅಖಿಲೇಶ್ ಮತ್ತು ಶಿವಪಾಲ್‌ ಯಾದವ್

ಸಮಾಜವಾದಿ ಪಕ್ಷವನ್ನು ಹುಟ್ಟುಹಾಕುವ ಮೂಲಕ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಮುಲಾಯಂ ಸಿಂಗ್ ನಿಧನದ ನಂತರ, ಸಮಾಜವಾದಿ ಪಕ್ಷದ (ಎಸ್‌ಪಿ) ವಲಯಗಳಲ್ಲಿ ದೊಡ್ಡ ಪ್ರಶ್ನೆಯೊಂದು ಎದ್ದಿದೆ. ಮುಲಾಯಂ ಸಿಂಗ್ ನಿಧನದ ನಂತರ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಅವರ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ನಡುವೆ ಸೌಹಾರ್ದತೆ ಇರುತ್ತದೆಯೇ ಅಥವಾ ಅವರ ವೈಷಮ್ಯ ಇನ್ನೂ ಉಲ್ಬಣಗೊಳ್ಳಬಹುದೇ ಎಂಬುದು ರಾಜಕೀಯ ವಲಯದಲ್ಲಿ ಸುಳಿದಾಡುತ್ತಿರುವ ಪ್ರಶ್ನೆ.

ಮುಂದೆ ಓದಿ ...
  • News18 Kannada
  • Last Updated :
  • Uttar Pradesh, India
  • Share this:

ಉತ್ತರ ಪ್ರದೇಶದಲ್ಲಿ (Uttar Pradesh) ಅಗ್ರಮಾನ್ಯ ನಾಯಕರಾಗಿ ಮಿಂಚಿದ ಮುಲಾಯಂ ಸಿಂಗ್ ಯಾದವ್ ಇತ್ತೀಚಿಗೆ  ವಿಧಿವಶರಾಗಿದ್ದಾರೆ. ಕೆಲವು ವಾರಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮುಲಾಯಂ ಸಿಂಗ್ ಯಾದವ್ (82) ಉತ್ತರ ಪ್ರದೇಶ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ವಿಧಿವಶರಾದರು. ಸಮಾಜವಾದಿ ಪಕ್ಷವನ್ನು (Samajwadi Party) ಹುಟ್ಟುಹಾಕುವ ಮೂಲಕ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಮುಲಾಯಂ ಸಿಂಗ್ ನಿಧನದ ನಂತರ, ಸಮಾಜವಾದಿ ಪಕ್ಷದ (ಎಸ್‌ಪಿ) ವಲಯಗಳಲ್ಲಿ ದೊಡ್ಡ ಪ್ರಶ್ನೆಯೊಂದು ಎದ್ದಿದೆ. ಮುಲಾಯಂ ಸಿಂಗ್ (Mulayam Singh) ನಿಧನದ ನಂತರ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಅವರ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ನಡುವೆ ಸೌಹಾರ್ದತೆ ಇರುತ್ತದೆಯೇ ಅಥವಾ ಅವರ ವೈಷಮ್ಯ ಇನ್ನೂ ಉಲ್ಬಣಗೊಳ್ಳಬಹುದೇ ಎಂಬುದು ರಾಜಕೀಯ ವಲಯದಲ್ಲಿ ಸುಳಿದಾಡುತ್ತಿರುವ ಪ್ರಶ್ನೆ.


ಮುಲಾಯಂ ಸಿಂಗ್‌ ನಿಧನದ ಸಂದರ್ಭದಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಈ ವೇಳೆ  ಇಬ್ಬರೂ ಪರಸ್ಪರ ಹೆಗಲಾಗಿದ್ದರು. ಹೀಗಾಗೇ ಈ ಪ್ರಶ್ನೆ ಉದ್ಭವಿಸಲು ಕಾರಣವಾಗಿದೆ.


ಯಾದವ ಸಮುದಾಯದಲ್ಲಿ ಒಡಕಿಗೆ ಕಾರಣವಾಗಿತ್ತು ಇಬ್ಬರ ಪೈಪೋಟಿ
ಪಕ್ಷದ ಮೇಲಿನ ಹಿಡಿತಕ್ಕಾಗಿ ಅಖಿಲೇಶ್ ಮತ್ತು ಮುಲಾಯಂ ಸಹೋದರ ಶಿವಪಾಲ್ ಯಾದವ್ ನಡುವೆ ಈ ಹಿಂದೆ ನಡೆದಿರುವ ಕೌಟುಂಬಿಕ ಕಲಹ ಎಲ್ಲರಿಗೂ ತಿಳಿದೇ ಇರುವ ವಿಚಾರ. ಜನವರಿ 1, 2017 ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಖಿಲೇಶ್ ಅವರಿಗೆ ಅಧಿಕಾರವನ್ನು ಸಂಪೂರ್ಣವಾಗಿ ವರ್ಗಾಯಿಸುವ ಮೂಲಕ ಚಿಕ್ಕಪ್ಪ ಮತ್ತು ಮಗನ ನಡುವೆ ಮನಸ್ತಾಪಗಳು ಹೆಚ್ಚಾದವು. ಇದಕ್ಕೆ ರಾಜಕೀಯದಲ್ಲಿ ನಡೆದ ಹಲವು ಘಟನೆಗಳು ಇಬ್ಬರ ಸಂಬಂಧದ ಬಿರುಕಿಗೆ ಸಾಕ್ಷಿಯಾದವು. ಚಿಕ್ಕಪ್ಪ- ಮಗನ ಕಿತ್ತಾಟವು ಯಾದವ ಸಮುದಾಯದಲ್ಲಿಯೇ ಒಡಕು ಉಂಟಾಗಲು ಕಾರಣವಾಯಿತು.


ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡ ಅಖಿಲೇಶ್ ಮತ್ತು ಶಿವಪಾಲ್‌
ಮುಲಾಯಂ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದಂತೆ, ಅಖಿಲೇಶ್ ಮತ್ತು ಶಿವಪಾಲ್ ಇಬ್ಬರೂ ಹಲವಾರು ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು.


ಮುಲಾಯಂ ಅವರನ್ನು ಐಸಿಯುಗೆ ಸ್ಥಳಾಂತರಿಸಿದಾಗ ಮತ್ತು ಅವರ ಆರೋಗ್ಯ ವಿಚಾರಿಸಲು ವಿವಿಧ ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಆಸ್ಪತ್ರೆಗೆ ಭೇಟಿ ನೀಡಿದಾಗ, ಅಖಿಲೇಶ್, ಶಿವಪಾಲ್ ಮತ್ತು ರಾಮ್ ಗೋಪಾಲ್ ಯಾದವ್ ಆಸ್ಪತ್ರೆಯಲ್ಲಿಯೇ ಇದ್ದರು. ಟ್ವಿಟರ್‌ನಲ್ಲೂ ಈ ಮೂವರು ಒಟ್ಟಿಗೆ ಇದ್ದ ಫೋಟೋಗಳು ಹರಿದಾಡಿದ್ದವು.


ಅಪ್ಪನ ಸಾವಿನ ಸಂದರ್ಭದಲ್ಲಿ ಅಖಿಲೇಶ್‌ಗೆ ಸಂತೈಸಿದ ಶಿವಪಾಲ್‌
ಸೋಮವಾರ ನಿಧನ ಹೊಂದಿದ್ದ ಮುಲಾಯಂ ಸಿಂಗ್‌ ಅವರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಾದ ಸೈಫಾಯಿಗೆ ಕರೆದೊಯ್ಯಲಾಯಿತು. ಮರುದಿನ, ಅಂತಿಮ ದರ್ಶನಕ್ಕಾಗಿ ಸೈಫಾಯಿ ಮೇಳದ ಮೈದಾನಕ್ಕೆ ಕೊಂಡೊಯ್ಯುತ್ತಿದ್ದಾಗ, ಪಾರ್ಥಿವ ಶರೀರವನ್ನು ಹೊತ್ತುಯ್ಯುತ್ತಿದ್ದ ವಾಹನದಲ್ಲಿ ಅಖಿಲೇಶ್, ಶಿವಪಾಲ್ ಮತ್ತು ಹಿರಿಯ ನಾಯಕನ ಮಗ ಆದಿತ್ಯ ಉಪಸ್ಥಿತರಿದ್ದರು.\


Mulayam Singh Yadav profile wrestler become Uttar Pradesh CM
ಮುಲಾಯಂ ಸಿಂಗ್ ಯಾದವ್


ಮುಲಾಯಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬೇರೆ ಬೇರೆ ಪಕ್ಷದ ಮುಖಂಡರು ಸ್ಥಳಕ್ಕೆ ಬಂದಾಗ ಇಡೀ ಯಾದವ್ ಕುಟುಂಬ ವೇದಿಕೆಯಲ್ಲಿ ಒಟ್ಟಿಗೆ ನಿಂತಿತ್ತು. ಅಲ್ಲದೇ ತಂದೆಯ ಅಗಲುವಿಕೆಯಿಂದ ನೊಂದಿದ್ದ ಅಖಿಲೇಶ್ ಅವರ ಭುಜದ ಮೇಲೆ ಕೈಯಿಟ್ಟು ಸಮಾಧಾನ ಹೇಳುತ್ತಿದ್ದ ದೃಶ್ಯಗಳೂ ಸಹ ಕಂಡುಬಂದವು.


ಇದನ್ನೂ ಓದಿ:  Indian Economy: ಪ್ರಧಾನಿ ಮೋದಿಯವರು ಆರ್ಥಿಕತೆಯನ್ನು ಸರಿಯಾಗಿ ನಿಭಾಯಿಸುತ್ತಿದ್ದಾರೆ: ಶ್ಲಾಘಿಸಿದ ಬ್ರಿಟನ್ ನಾಯಕ


ವೇದಿಕೆಯಲ್ಲಿ, ಎಸ್‌ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರು ರಾಮ್ ಗೋಪಾಲ್ ಯಾದವ್ ಅವರಿಗೆ ಹೂವಿನ ಹಾರವನ್ನು ಮುಲಾಯಂ ಅವರ ದೇಹಕ್ಕೆ ಇಡಲು ನೀಡಿದಾಗ, ರಾಮ್ ಗೋಪಾಲ್ ಅದನ್ನು ಪಕ್ಕದಲ್ಲಿ ನಿಂತಿದ್ದ ಶಿವಪಾಲ್‌ಗೆ ಹಸ್ತಾಂತರಿಸುವಂತೆ ಮೌರ್ಯ ಅವರನ್ನು ಕೇಳಿದರು. ನಂತರ ರಾಮಗೋಪಾಲ್ ಮತ್ತು ಶಿವಪಾಲ್ ಜೊತೆಯಾಗಿ ಪಾರ್ಥಿವ ಶರೀರಕ್ಕೆ ಮಾಲಾರ್ಪಣೆ ಮಾಡಿದರು. ಈ ಮೇಲಿನ ಎಲ್ಲಾ ದೃಶ್ಯಗಳನ್ನು ನೋಡಿದರೆ ಅಖಿಲೇಶ್‌ ಮತ್ತು ಚಿಕ್ಕಪ್ಪ ಶಿವಪಾಲ್‌ ನಡುವಿನ ಬಿರುಕುಗಳು ಒಂದು ರೀತಿ ಬಗೆಹರಿದಂತೆ ಕಂಡು ಬಂದವು.


"ಏನೂ ಹೇಳಲು ಇದು ಸೂಕ್ತ ಸಮಯವಲ್ಲ"
ಈ ಬಗ್ಗೆ ಸುದ್ದಿಗಾರರು ಸೈಫಾಯಿ ಗ್ರಾಮದಲ್ಲಿ ಶಿವಪಾಲ್ ಅವರನ್ನು ಪ್ರಶ್ನಿಸಿದ್ದರು. ಆ ಸಂದರ್ಭದಲ್ಲಿ  ಪ್ರಶ್ನೆಗೆ ಉತ್ತರಿಸಲು ಸೂಕ್ತ ಸಮಯವಲ್ಲ, ಹಾಗೆಯೇ ನಿರ್ಣಯಗಳನ್ನು ತೆಗೆದುಕೊಳ್ಳುವುದಕ್ಕೂ­­ ಸಮಯವಲ್ಲ" ಎಂದು ಪುನರುಚ್ಛರಿಸಿದರು.


ಚಿಕ್ಕಪ್ಪ-ಮಗನ ನಡುವಿನ ಬಿರುಕು
2012ರಲ್ಲಿ ಮುಲಾಯಂ ಮುಖ್ಯಮಂತ್ರಿಯಾಗಿದ್ದಾಗ ಶಿವಪಾಲ್‌ ಮತ್ತು ಅಖಿಲೇಶ್‌ ನಡುವೆ 2016ರಲ್ಲಿ ಎಸ್‌ಪಿ ಪಕ್ಷದ ಹಿಡಿತಕ್ಕಾಗಿ ಸಂಘರ್ಷಗಳು ಎದ್ದಿದ್ದವು. ಸೆಪ್ಟೆಂಬರ್ 13, 2016 ರಂದು, ಮುಲಾಯಂ ಅವರು ಶಿವಪಾಲ್ ಅವರನ್ನು ರಾಜ್ಯ ಪಕ್ಷದ ಅಧ್ಯಕ್ಷರಾಗಿ ನೇಮಿಸಿದ ನಂತರ ಅಖಿಲೇಶ್ ಅವರು ಶಿವಪಾಲ್ ಅವರನ್ನು ಎಲ್ಲಾ ಸಚಿವ ಸಂಪುಟಗಳಿಂದ ಕೈಬಿಟ್ಟಿದ್ದರು. ಈ ಘಟನೆ ಕುಟುಂಬದಲ್ಲಿ ಕೋಲಾಹಲವನ್ನೇ ಎಬ್ಬಿಸಿತ್ತು. 2017ರ ಜನವರಿಯಲ್ಲಿ ಅಖಿಲೇಶ್ ಎಸ್ಪಿಯ ಅಧಿಕಾರ ಪಡೆದುಕೊಳ್ಳುತ್ತಿದ್ದಂತೆ, ಆಗಿನ ಸಿಎಂಗೆ ಬೆಂಬಲ ನೀಡಿದ ಕುಟುಂಬ ಸದಸ್ಯರಲ್ಲಿ ರಾಮ್ ಗೋಪಾಲ್ ಕೂಡ ಇದ್ದರು.


ಇದನ್ನೂ ಓದಿ:  Explained: PMO ಕಚೇರಿಯಲ್ಲಿ ನರೇಂದ್ರ ಮೋದಿ ಯೋಜನೆಗಳಿಗೆ ರೂವಾರಿಗಳಾಗಿರುವ ಅಧಿಕಾರಿಗಳು ಯಾರ‍್ಯಾರು? ಇಲ್ಲಿದೆ ಕಿರು ಪರಿಚಯ


2017 ರ ಚುನಾವಣೆಯ ನಂತರ ಶಿವಪಾಲ್ ಎಸ್‌ಪಿಯಿಂದ ಬೇರ್ಪಟ್ಟು ಪ್ರಗತಿಶೀಲ ಸಮಾಜವಾದಿ ಪಕ್ಷವನ್ನು (ಲೋಹಿಯಾ) ಸ್ಥಾಪಿಸಿದರು. ಶಿವಪಾಲ್ ಈ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆಗೆ ತನ್ನ ಸೋದರಳಿಯನೊಂದಿಗೆ ಕೈಜೋಡಿಸಿದರು ಮತ್ತು ಜಸ್ವಂತನಗರ ಕ್ಷೇತ್ರದಿಂದ ಗೆದ್ದರು. ಆದರೆ ವಿರೋಧ ಪಕ್ಷವು ಚುನಾವಣೆಯಲ್ಲಿ ಗೆಲ್ಲಲು ವಿಫಲವಾದ ಕಾರಣ ಅಖಿಲೇಶ್ ಮತ್ತು ಅವರ ಚಿಕ್ಕಪ್ಪನ ನಡುವಿನ ಹಳೆಯ ಬಿರುಕು ಮತ್ತಷ್ಟು ಜಟಿಲವಾಯಿತು.


ಈ ಸಂದರ್ಭದಲ್ಲಿ ಎಸ್‌ಪಿ ಪಕ್ಷ ತನ್ನನ್ನು ಮೈತ್ರಿಕೂಟ ಮತ್ತು ಶಾಸಕಾಂಗ ಪಕ್ಷದ ಸಭೆಗಳಿಂದ ಹೊರಗಿಟ್ಟಿದೆ ಎಂದು ಆರೋಪಿಸಿದರು. ಶಿವಪಾಲ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ ಮುಖ್ಯಸ್ಥ ಅಖಿಲೇಶ್‌, ಅವರು ನಮ್ಮ ಪಕ್ಷದ ಸದಸ್ಯರಲ್ಲ, ಈ ಬಗ್ಗೆ ಗಮನ ಕೊಡದೇ ಅವರ ಸಂಘಟನೆಯನ್ನು ಬಲಪಡಿಸುವತ್ತ ಗಮನ ಹರಿಸುವಂತೆ ಸಲಹೆ ನೀಡುವ ಮೂಲಕ ತಿರುಗೇಟು ನೀಡಿದ್ದರು.


ಇಬ್ಬರ ಒಂದಾಗುವಿಕೆಯ ನೀರೀಕ್ಷೆಯಲ್ಲಿ ಪಕ್ಷ
ಒಟ್ಟಾರೆ ಕಷ್ಟದ ಪರಿಸ್ಥಿತಿಯಲ್ಲಿ ಜೊತೆಯಾದ ಚಿಕ್ಕಪ್ಪ-ಮಗ ಹೀಗೆ ಮುಂದೆಯೂ ಒಂದಾಗಿದ್ದರೆ ಮುಲಾಯಂ ಕಟ್ಟಿ ಬೆಳೆಸಿದ ಪಕ್ಷಕ್ಕೆ ಪ್ಲಸ್‌ ಪಾಯಿಂಟ್‌ ಆಗುತ್ತದೆ.


ಇದನ್ನೂ ಓದಿ: ಹಿಂದೂಗಳು ಒಬ್ಬರನ್ನು ಮದುವೆಯಾಗಿ ಮೂವರನ್ನು ಇಟ್ಟುಕೊಳ್ಳುತ್ತಾರೆ; AIMIM ಮುಖಂಡ


ಇಲ್ಲವಾದಲ್ಲಿ ಬಿಜೆಪಿ ಮತ್ತು ಇತರ ಪಕ್ಷಗಳು ಇಬ್ಬರ ಭಿನ್ನಾಭಿಪ್ರಾಯದ ಲಾಭವನ್ನು ಪಡೆದುಕೊಳ್ಳಬಹುದು, ಪಕ್ಷದ ಭವಿಷ್ಯವು ಅಖಿಲೇಶ್ ಮತ್ತು ಶಿವಪಾಲ್ ಇಬ್ಬರ ಮೇಲೆ ಅವಲಂಬಿತವಾಗಿದೆ ಎನ್ನುತ್ತಿದ್ದಾರೆ ಪಕ್ಷದ ಕೆಲ ನಾಯಕರು.

Published by:Ashwini Prabhu
First published: