• Home
 • »
 • News
 • »
 • national-international
 • »
 • Wildlife Photography: ಹಿಮ ಚಿರತೆಯ ಫೋಟೋ ಸೆರೆಹಿಡಿಯಲು ಆಕೆ ನಡೆದದ್ದು 165 ಕಿ.ಮೀ!

Wildlife Photography: ಹಿಮ ಚಿರತೆಯ ಫೋಟೋ ಸೆರೆಹಿಡಿಯಲು ಆಕೆ ನಡೆದದ್ದು 165 ಕಿ.ಮೀ!

ಹಿಮ ಚಿರತೆಯ ಫೋಟೋ ಸೆರೆಹಿಡಿಯಲು ಆಕೆ ನಡೆದದ್ದು 165 ಕಿ.ಮೀ

ಹಿಮ ಚಿರತೆಯ ಫೋಟೋ ಸೆರೆಹಿಡಿಯಲು ಆಕೆ ನಡೆದದ್ದು 165 ಕಿ.ಮೀ

ವಿಶ್ವದ ಅತ್ಯಂತ ವಿಶಿಷ್ಟ ಪ್ರಾಣಿಗಳಲ್ಲೊಂದು ಹಿಮ ಚಿರತೆ. ಈ ಹಿಮಚಿರತೆ ವಾಸಿಸೋದು ಮಧ್ಯ ಮತ್ತು ದಕ್ಷಿಣ ಏಷ್ಯಾದ ಪರ್ವತ ಶ್ರೇಣಿಗಳಲ್ಲಿ ಮಾತ್ರ. ಇದು ಆದಷ್ಟು ಮರೆಯಲ್ಲಿದ್ದು ರಹಸ್ಯವಾಗಿಯೇ ಜೀವನ ನಡೆಸುತ್ತವೆ ಅನ್ನೋದು ವಿಶೇಷ. IUCN ರೆಡ್ ಲಿಸ್ಟ್‌ನಲ್ಲಿ ಈ ಪ್ರಾಣಿಯನ್ನು ದುರ್ಬಲ ಎಂದು ಪಟ್ಟಿ ಮಾಡಲಾಗಿದೆ.

ಮುಂದೆ ಓದಿ ...
 • Share this:

  ವೈಲ್ಡ್‌ ಲೈಫ್‌ ಫೋಟೋಗ್ರಫಿ (Wildlife Photography) ತುಂಬಾನೇ ಕಷ್ಟದ ಕೆಲಸ. ಅದರಲ್ಲೂ ಪ್ರಾಣಿಗಳಿಗಾಗಿ ದಿನಗಟ್ಟಲೇ, ವಾರಗಟ್ಟಲೇ ಕಾಯೋದು, ಇನ್ನೂ ಕಷ್ಟ. ಆದರೂ ಕೆಲವೊಬ್ಬ ಛಾಯಾಗ್ರಾಹಕರು (Photographer) ತುಂಬಾನೇ ಸಾಹಸ ಮಾಡಿ ಅಪರೂಪದ ಪ್ರಾಣಿಗಳ ಫೋಟೋ ಸೆರೆಹಿಡಿಯೋದನ್ನು ನೋಡುತ್ತೇವೆ. ಇಲ್ಲೊಬ್ಬರು ಇಂಥದ್ದೇ ಸಾಹಸ ಮಾಡಿ ಅಪರೂಪದ ಹಿಮಚಿರತೆಯ ಚಿತ್ರ ತೆಗೆದು ಜಗತ್ತನ್ನೇ ಬೆರಗುಗೊಳಿಸಿದ್ದಾರೆ. ವಿಶ್ವದ ಅತ್ಯಂತ ವಿಶಿಷ್ಟ ಪ್ರಾಣಿಗಳಲ್ಲೊಂದು ಹಿಮ ಚಿರತೆ. ಈ ಹಿಮಚಿರತೆ ವಾಸಿಸೋದು ಮಧ್ಯ ಮತ್ತು ದಕ್ಷಿಣ ಏಷ್ಯಾದ (South Asia) ಪರ್ವತ ಶ್ರೇಣಿಗಳಲ್ಲಿ ಮಾತ್ರ. ಇದು ಆದಷ್ಟು ಮರೆಯಲ್ಲಿದ್ದು ರಹಸ್ಯವಾಗಿಯೇ ಜೀವನ ನಡೆಸುತ್ತವೆ ಅನ್ನೋದು ವಿಶೇಷ.


  IUCN ರೆಡ್ ಲಿಸ್ಟ್‌ನಲ್ಲಿ ಈ ಪ್ರಾಣಿಯನ್ನು ದುರ್ಬಲ ಎಂದು ಪಟ್ಟಿ ಮಾಡಲಾಗಿದೆ. ಏಕೆಂದರೆ ಹಿಮಕರಡಿಯ ಜಾಗತಿಕ ಸಂಖ್ಯೆಯು 10,000 ಕ್ಕಿಂತ ಕಡಿಮೆ ಇದೆ ಎಂದು ಅಂದಾಜಿಸಲಾಗಿದೆ. ದುರದೃಷ್ಟವಶಾತ್‌ 2040 ರ ವೇಳೆಗೆ ಈ ಸಂಖ್ಯೆ ಸುಮಾರು 10% ರಷ್ಟು ಕುಸಿಯುವ ನಿರೀಕ್ಷೆಯಿದೆ.


  ಇದನ್ನೂ ಓದಿ: Career in Photography: ನಿಮ್ಮ ಫೋಟೋಗ್ರಫಿ ಹುಚ್ಚನ್ನೇ ವೃತ್ತಿಯಾಗಿಸಿಕೊಂಡು ಹಣ ಗಳಿಸುವುದು ಹೇಗೆಂದು ತಿಳಿಯಿರಿ


  "ಮೌಂಟೆನ್ ಘೋಸ್ಟ್‌" ಗಳನ್ನು ಕಂಡುಹಿಡಿಯೋದೇ ಕಷ್ಟ


  ದೊಡ್ಡ ಬೆಕ್ಕುಗಳನ್ನು ಕಂಡುಹಿಡಿಯುವುದು ಕಷ್ಟ. ಅವು ಯಾರ ಕಣ್ಣಿಗೂ ಸುಲಭವಾಗಿ ಬೀಳೋದೇ ಇಲ್ಲ. ಹೀಗಾಗಿಯೇ ಅವುಗಳನ್ನು ಹೆಚ್ಚಾಗಿ 'ಮೌಂಟೆನ್ ಘೋಸ್ಟ್ಸ್' ಅಂತ ಕರೀತಾರೆ. ಅವು ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ ಮತ್ತು ಭಾರತ, ನೇಪಾಳ ಮತ್ತು ಭೂತಾನ್‌ನಲ್ಲಿ ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ವಾಸವಿದ್ದರೂ ಸಹ ಒಂದೇ ಒಂದು ಹಿಮ ಚಿರತೆಯನ್ನು ನೋಡುವುದು ಕಷ್ಟ. ಇತ್ತೀಚಿನ ದಿನಗಳಲ್ಲಿ ಬೆರಳೆಣಿಕೆಯಷ್ಟು ಚಾರಣಿಗರು ಮತ್ತು ವನ್ಯಜೀವಿ ಛಾಯಾಗ್ರಾಹಕರು ಮಾತ್ರ ದೂರದಿಂದ ಪ್ರಾಣಿಗಳ ಚಿತ್ರಗಳನ್ನು ತೆಗೆದುಕೊಳ್ಳಲು ಸಮರ್ಥರಾಗಿದ್ದಾರೆ.


  ಯುಎಸ್ ಮೂಲದ ಛಾಯಾಗ್ರಾಹಕರಾದ ಕಿಟ್ಟಿಯಾ ಪಾವ್ಲೋವ್ಸ್ಕಿ ಇಂಥ ಅಪರೂಪದ ಪ್ರಾಣಿಯ ಫೋಟೋವನ್ನು ಅದ್ಭುತವಾಗಿ ಸೆರೆಹಿಡಿದಿದ್ದು ಅದನ್ನು ಇನ್‌ ಸ್ಟಾಗ್ರಾಂ ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಒಟ್ಟು 5 ಪೋಟೋಗಳನ್ನು ಹೊಂದಿರುವ ಅವರ ಪೋಸ್ಟ್‌ ಗೆ ನೆಟ್ಟಿಗರು ಬೆರಗಾಗಿದ್ದಾರೆ.


  ಹಿಮ ಚಿರತೆ ಪತ್ತೆ ಹಚ್ಚಲು 165 ಕಿ.ಮೀ ಚಾರಣ


  ತನ್ನ ಮೊದಲ ಪೋಸ್ಟ್‌ನಲ್ಲಿ, ಬಿಳಿ ಚಿರತೆಯನ್ನು ಪತ್ತೆಹಚ್ಚಲು ಕಾಲ್ನಡಿಗೆಯಲ್ಲಿ 103 ಮೈಲುಗಳಷ್ಟು (165 ಕಿಮೀ) ಚಾರಣ ಮಾಡಬೇಕಾಗಿತ್ತು ಎಂದು ಅವರು ವಿವರಿಸಿದ್ದಾರೆ. ಉತ್ತರ-ಮಧ್ಯ ನೇಪಾಳದ ಅನ್ನಪೂರ್ಣ ಸಂರಕ್ಷಣಾ ಪ್ರದೇಶದ ಒರಟಾದ ಹಿಮಾಲಯದ ಭೂದೃಶ್ಯದಲ್ಲಿ ಪ್ರಾಣಿಗಾಗಿ ಆಕೆಯ ಹುಡುಕಾಟ ಪ್ರಾರಂಭವಾಯಿತು.ಅವರು ಸಾಗರಮಾತಾ ರಾಷ್ಟ್ರೀಯ ಉದ್ಯಾನವನ, ಹಲವಾರು ಹಳ್ಳಿಗಳು, ಕಾಳಿ ಗಂಡಕಿ ನದಿ, ತಮಕೋಶಿ ನದಿ ಕಣಿವೆಯ ಮೂಲಕ ತನ್ನ ಸಂಪೂರ್ಣ ಪ್ರಯಾಣವನ್ನು ತಮ್ಮ ಸುದೀರ್ಘ ಪೋಸ್ಟ್‌ ನಲ್ಲಿ ವಿವರಿಸಿದ್ದಾರೆ.


  ಇದನ್ನೂ ಓದಿ:  Snake Village: ಹಾವಿನಿಂದಲೇ ಹೊಟ್ಟೆ ತುಂಬಿಸಿಕೊಳ್ಳೋ ಹಳ್ಳಿ! ಇವರಿಗೆ ಹಾವಿನ ಭಯವೇ ಇಲ್ಲ


  "ಗೋರಕ್ ಶೆಪ್‌ನ ಹೊರಗೆ ಒಂದು ಕಟುವಾದ ಚಳಿಯ ಮುಂಜಾನೆ, ನಾನು ನನ್ನ ನಿಕ್ಕೋರ್ 500mm f/4 ಲೆನ್ಸ್‌ನೊಂದಿಗೆ ಖುಂಬು ಕಣಿವೆಯನ್ನು ಹೊರತೆಗೆಯುತ್ತಾ ಅಂತರದ ಕಂದರದ ಅಂಚನ್ನು ಹಿಂಬಾಲಿಸಿದೆ. ನನ್ನ ಕ್ಯಾಮೆರಾದ ಟೆಲಿಫೋಟೋ ಲೆನ್ಸ್ ಮೂಲಕ ಕಣ್ಣು ಹಾಯಿಸುತ್ತಾ, ಮೌಂಟ್ ಪೂಮೋರಿ ನೆರಳಿನಲ್ಲಿ ಏನೋ ಕಂಡಂತಾಯಿತು. ಮೊದಲಿಗೆ, ಇದು ಬಂಡೆ ಎಂದು ನಾನು ಭಾವಿಸಿದೆ, ಆದರೆ ಕೊನೆಗೆ ನಾನು ಹುಡುಕುತ್ತಿರುವುದು ಅದನ್ನೇ ಎಂಬುದು ನನಗೆ ಗೊತ್ತಾಯಿತು" ಎಂದು ಪೋಸ್ಟ್‌ ನಲ್ಲಿ ಬರೆದುಕೊಂಡಿದ್ದಾರೆ.


  ಪಾವ್ಲೋವ್ಸ್ಕಿಯವರ ಎರಡನೇ ಪೋಸ್ಟ್


  ಮೊದಲ ಫೋಟೋದಲ್ಲಿ ದೊಡ್ಡ ಬೆಕ್ಕು ಬಹಳ ದೂರದಲ್ಲಿರುವುದನ್ನು ನೋಡಬಹುದು. ಹಿಮ ಪರ್ವತದಿಂದ ಆವೃತವಾದ ಪರ್ವತಗಳ ನಡುವೆ ನಡೆದುಕೊಂಡು ಹೋಗುತ್ತಿದೆ. ಪಾವ್ಲೋವ್ಸ್ಕಿಯವರ ಎರಡನೇ ಪೋಸ್ಟ್, ಹಿಮಕರಡಿ ಕಂದಕದ ಮೇಲೆ ಕುಳಿತಿರುವುದನ್ನು ತೋರಿಸುತ್ತದೆ.


  25 ಪೌಂಡ್‌ಗಳ ಕ್ಯಾಮೆರಾ


  "ಹಿಮ ಚಿರತೆಗಳು ಮುಂಜಾನೆ ಮತ್ತು ಮುಸ್ಸಂಜೆಯ ಸಮಯದಲ್ಲಿ ಹೆಚ್ಚು ಸಕ್ರಿಯವಾಗಿರುತ್ತವೆ. ಮುಂಜಾನೆ 4 ಗಂಟೆಯ ಹೊತ್ತಿಗೆ ನನ್ನ ಬೂಟುಗಳನ್ನು ಹಾಕಿಕೊಂಡು ಹೊರಟೆ. ರಾತ್ರಿಯು ತಂಪಾದ, ಫ್ಯಾಂಟಸ್ಮಲ್ ಸೌಂದರ್ಯವನ್ನು ಹೊಂದಿತ್ತು. 25 ಪೌಂಡ್‌ಗಳ ಕ್ಯಾಮೆರಾ ಗೇರ್‌ನೊಂದಿಗೆ, ನಾನು ಗೋರಕ್ ಶೆಪ್‌ನ ಈಶಾನ್ಯಕ್ಕೆ ಹೊರಟೆ ಮತ್ತು ಹೆಪ್ಪುಗಟ್ಟಿದ ಸರೋವರವನ್ನು ದಾಟಿದೆ. ಹಿಮಾಚ್ಛಾದಿತ ಪರ್ವತದ ಇಳಿಜಾರುಗಳು ವಜ್ರಗಳನ್ನು ಬಿತ್ತಿದಂತೆ ಹೊಳೆಯುತ್ತಿದ್ದವು” ಎಂದು ಅವರು ಪೋಸ್ಟ್ ನಲ್ಲಿ ಬರೆದಿದ್ದಾರೆ.


  ಆದರೂ ಹಿಮಚಿರತೆಯ ಫೋಟೋ ಸೆರೆಹಿಡಿಯುವಾಗಿ ಈಕೆಯ ಸಾಹಸವನ್ನು ಎಂಥವರೂ ಮೆಚ್ಚಲೇಬೇಕು.

  Published by:Precilla Olivia Dias
  First published: