HOME » NEWS » National-international » WILDLIFE MANAGER FINDS COCAINE WORTH OVER 1 MILLION DOLLAR WHILE SURVEYING TURTLE NESTING AT FLORIDA BEACH STG SKTV

Viral News: ಆಮೆಗಳನ್ನು ಹುಡುಕಿಕೊಂಡು ಹೋದವ್ರಿಗೆ ಕೋಟಿಗಟ್ಟಲೆ ಬೆಲೆಬಾಳೋ ವಸ್ತು ಸಿಕ್ಕಿದೆ ! ಪ್ಲಾಸ್ಟಿಕ್ ಪೊಟ್ಟಣದಲ್ಲಿ ಇದ್ದ ವಸ್ತು ನೋಡಿ...

Viral News: ನೌಕಾಪಡೆ ಸಿಬ್ಬಂದಿ ಬರುವವರೆಗೆ ನಾನು ಅದರ ಕಾವಲು ಕಾಯುತ್ತಿದ್ದೆ. ಈ ವೇಳೆ ಇನ್ನಷ್ಟು ಅದರ ಬಳಿ ಹೋಗುತ್ತಿದ್ದಂತೆ ಮತ್ತೊಂದು ಪ್ಯಾಕೇಜ್ ಇರುವುದು ಗಮನಕ್ಕೆ ಬಂದಿತು. ಹೀಗೆ ನನಗೆ 3-4 ಪ್ಯಾಕೇಜ್‌ಗಳು ಕಂಡಬಂದವು.

Trending Desk
Updated:June 23, 2021, 11:41 AM IST
Viral News: ಆಮೆಗಳನ್ನು ಹುಡುಕಿಕೊಂಡು ಹೋದವ್ರಿಗೆ ಕೋಟಿಗಟ್ಟಲೆ ಬೆಲೆಬಾಳೋ ವಸ್ತು ಸಿಕ್ಕಿದೆ ! ಪ್ಲಾಸ್ಟಿಕ್ ಪೊಟ್ಟಣದಲ್ಲಿ ಇದ್ದ ವಸ್ತು ನೋಡಿ...
ಪ್ರಾತಿನಿಧಿಕ ಚಿತ್ರ
  • Share this:

Drug Issue: ಫ್ಲೋರಿಡಾದ ಕೇಪ್ ಕೆನವೆರಲ್ ಬಾಹ್ಯಾಕಾಶ ಕೇಂದ್ರದ ಪ್ರದೇಶವಾದ ಸಮುದ್ರ ತೀರದಲ್ಲಿ ಸುಮಾರು 1 ಮಿಲಿಯನ್ ಮೌಲ್ಯದ 30 ಕಿ.ಗ್ರಾಂ ಗೂ ಅಧಿಕ ಪ್ರಮಾಣದ ಕೊಕೇನ್ ದೊರೆತಿದೆ. ಮೇ 19ರಂದು ಆಮೆ ಸಮೀಕ್ಷೆ ಮಾಡಲು ಹೋಗಿದ್ದ ಸಿವಿಲ್ ಎಂಜಿನಿಯರ್ ಮತ್ತು ವನ್ಯಜೀವಿ ನಿರ್ವಾಹಕರಿಗೆ ಸಮುದ್ರ ತೀರದಲ್ಲಿ ಭಾರಿ ಪ್ರಮಾಣದ ಕೊಕೇನ್ ದೊರೆತಿದೆ ಎಂದು ಅಮೆರಿಕ ಬಾಹ್ಯಾಕಾಶ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. 24 ಪ್ಯಾಕೆಟ್‌ಗಳ ಈ ಮಾದಕ ವಸ್ತುವಿನ ಮೌಲ್ಯ 1.2 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಆಮೆಯ ಗೂಡುಕಟ್ಟುವಿಕೆ ಸಮೀಕ್ಷೆ ನಡೆಸುತ್ತಾ ಆಂಗಿ ಚೇಂಬರ್ಸ್ ಸಮದ್ರ ತೀರದಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಬಿಗಿಯಾಗಿ ಸುತ್ತಿದ ಸಣ್ಣ ಪ್ಲಾಸ್ಟಿಕ್ ಕಂಡಿದ್ದು, ಇದು ಮಾದಕವಸ್ತ ಇರಬಹುದೆಂದು ಆಕೆ ಶಂಕಿಸಿದ್ದಾರೆ. ತಕ್ಷಣವೇ 45ನೇ ನೌಕಾತ೦ಡ (ಎಸ್‌ಎಫ್‌ಎಸ್) ಮಾಹಿತಿ ನೀಡಿ ಎಚ್ಚರಿಸಿದ್ದಾರೆ ಎಂದು ಪ್ಯಾಟ್ರಿಕ್ ಬಾಹ್ಯಾಕಾಶ ಪಡೆಯು ಹೇಳಿಕೆಯಲ್ಲಿ ತಿಳಿಸಿದೆ.


'ನೌಕಾಪಡೆ ಸಿಬ್ಬಂದಿ ಬರುವವರೆಗೆ ನಾನು ಅದರ ಕಾವಲು ಕಾಯುತ್ತಿದ್ದೆ. ಈ ವೇಳೆ ಇನ್ನಷ್ಟು ಅದರ ಬಳಿ ಹೋಗುತ್ತಿದ್ದಂತೆ ಮತ್ತೊಂದು ಪ್ಯಾಕೇಜ್ ಇರುವುದು ಗಮನಕ್ಕೆ ಬಂದಿತು. ಹೀಗೆ ನನಗೆ 3-4 ಪ್ಯಾಕೇಜ್‌ಗಳು ಕಂಡಬಂದವು. ಹೀಗಾಗಿ ಮತ್ತೊಮ್ಮೆ ನೌಕಾ ಪಡೆಗೆ ಕರೆ ಮಾಡಿ ಯುಟಿವಿ (ಯುಟಿಲಿಟಿ ಟೆರೈನ್ ವೆಹಿಕಲ್) ತರುವುದಕ್ಕೆ ಸಲಹೆ ನೀಡಿದೆ. ನಾನು ಎಣಿಸಿದಂತೆ ಒಟ್ಟು 18 ಪ್ಯಾಕೇಜ್‌ಗಳಿದ್ದವು' ಎಂದು ಚೇಂಬರ್ಸ್ ತಿಳಿಸಿದ್ದಾರೆ. 'ತೀರದ ಎಲ್ಲಾ ಕಡೆ ಶೋಧನೆ ನಡೆಸಿದ ನಂತರ ಒಟ್ಟು 24 ಪ್ಯಾಕೇಜ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಮಾದಕವಸ್ತುಗಳು ನಮ್ಮ ಸಮುದಾಯ ಸೇರಲು ಬಿಡಲಿಲ್ಲ ಎಂದು ತಿಳಿದ ನಂತರ ನನ್ನ ಕೆಲಸದ ಬಗ್ಗೆ ತೃಪ್ತಿಯ ಭಾವ ಮೂಡಿತು' ಎಂದು ಪಾರ್ಕರ್ ಹೇಳಿದ್ದಾರೆ.ಇದನ್ನೂ ಓದಿ: Viral Video: ಮೀನಿನ ಹೊಟ್ಟೆಯಲ್ಲಿತ್ತು ಓಪನ್ ಮಾಡದ ವಿಸ್ಕಿ ಬಾಟಲ್; ಶಾಕ್ ಆದ ಮೀನುಗಾರ!

ವಶಪಡಿಸಿಕೊಂಡಿರುವ ಕೊಕೇನ್ ಅನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ ಮತ್ತು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಎಲ್ಲಿಂದ ಈ ಕೊಕೇನ್‌ಗಳು ಬಂದಿದ್ದವು ಎನ್ನುವುದರ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ವಿಶೇಷ ತನಿಕಾಧಿಕಾರಿ ಡೇವಿಡ್ ಪ್ರಕಾರ, 'ಕಡಲ ಮಾರ್ಗದಲ್ಲಿ ಬರುವ ಹಗ್ಗಗಳಿಂದ ಕಟ್ಟಿದ ಭಾರಿ ವಸ್ತುಗಳ (ಮೂಟೆ) ಸಾಗಾಣೆ ವೇಳೆ ಮಾದಕವಸ್ತುಗಳನ್ನು ಇಟ್ಟು ಸಾಗಿಸುತ್ತಾರೆ. ಕೆಲವು ಬಾರಿ ಮೂಟೆಗಳು ನೀರುಪಾಲಾದಾಗ ಈ ರೀತಿಯ ಚಿಕ್ಕ ಚಿಕ್ಕ ಪ್ಯಾಕೇಜ್‌ಗಳು ತೇಲಿ ಸಮುದ್ರ ತೀರಕ್ಕೆ ಬರುತ್ತವೆ' ಎಂದರು.


'ಈ ಬಾಹ್ಯಾಕಾಶ ಕೇಂದ್ರದ ತೀರದಲ್ಲಿ ಇದುವರೆಗೂ ಇಷ್ಟು ಪ್ರಮಾಣದ ಕೊಕೇನ್ ದೊರೆತಿರಲಿಲ್ಲ. ನಾವು ನೋಡಿದಂತೆ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ಮಾದಕವಸ್ತು ದೊರೆತಿರುವುದು. ಫ್ಲೋರಿಡಾದ ಸಂಪೂರ್ಣ ವಿಸ್ತಾರದಲ್ಲಿಯೇ ಇಷ್ಟು ಪ್ರಮಾಣದ ಮಾದಕವಸ್ತು ದೊರೆತಿರಲಿಲ್ಲ ಮತ್ತು ಇದು ಕೆಟ್ಟ ಜನರ ಸಿಗಲಿಲ್ಲ ಎಂಬುದು ಬಹಳ ಸಂತೋಷವಾಗಿದೆ. ಚೇಂಬರ್ಸ್ ಉತ್ತಮ ರೀತಿಯಲ್ಲಿ ತೀರದ ಉಸ್ತುವರಿ ನೋಡಿಕೊಂಡಿದ್ದರಿಂದ ಹಾಗೂ ಸರಿಯಾದ ಸಮಯದಲ್ಲಿ ಭದ್ರತಾ ಪಡೆಗೆ ಮಾಹಿತಿ ನೀಡಿ ಎಚ್ಚರಿಸಿರುವುದು ಶ್ಲಾಘನೀಯ' ಎಂದರು ಕರ್ನಲ್ ತಿಮೋಥಿ ಮೆಕ್‌ಕಾರ್ಟಿ.Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by: Soumya KN
First published: June 23, 2021, 11:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories