Husband and Wife: ಪತಿಯ ಉಪಜಾತಿ ಬೇರೆ ಎಂದು ವಿಚ್ಚೇಧನಕ್ಕೆ ನಿರ್ಧರಿಸಿದ ಪತ್ನಿ! 10 ಸಾವಿರ ರೂ ಪಾವತಿಸುವಂತೆ ಗುಜರಾತ್ ಹೈಕೋರ್ಟ್ ಆದೇಶ!

ಮದುವೆಯಾಗಿ ನಾಲ್ಕು ವರ್ಷ ಕಳೆದ ಜೋಡಿ ಕೇವಲ ಉಪಜಾತಿಯ ಕಾರಣಕ್ಕೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಉಪಜಾತಿ ವಿಚಾರವಾಗಿ ಹೆಂಡತಿ ನನ್ನನ್ನು ತೊರೆದು ಹೋಗಿದ್ದಾಳೆ ಎಂದು ಪತಿ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ಗುಜರಾತ್ ಹೈಕೋರ್ಟ್ ಕೂಲಂಕುಷವಾಗಿ ವಿಚಾರಣೆ ನಡೆಸಿದೆ.

ಗುಜರಾತ್ ಹೈಕೋರ್ಟ್‌

ಗುಜರಾತ್ ಹೈಕೋರ್ಟ್‌

 • Share this:
  ಮದುವೆಯಾಗಿ (Marriage) ನಾಲ್ಕು ವರ್ಷ ಕಳೆದ ಜೋಡಿ ಕೇವಲ ಉಪಜಾತಿಯ (Sub-caste) ಕಾರಣಕ್ಕೆ ಕೋರ್ಟ್ (Court) ಮೆಟ್ಟಿಲೇರಿದ್ದಾರೆ. ಉಪಜಾತಿ ವಿಚಾರವಾಗಿ ಹೆಂಡತಿ ನನ್ನನ್ನು ತೊರೆದು ಹೋಗಿದ್ದಾಳೆ ಎಂದು ಪತಿ (Husband) ಹೈಕೋರ್ಟ್ (High Court) ಮೊರೆ ಹೋಗಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ಗುಜರಾತ್ ಹೈಕೋರ್ಟ್ (Gujarath High Court) ಕೂಲಂಕುಷವಾಗಿ ವಿಚಾರಣೆ ನಡೆಸಿ ಪತಿಯನ್ನು ತೊರೆದ ಮಹಿಳೆ (Women), ಪತಿ ಬೇರೆ ಉಪ ಜಾತಿಗೆ ಸೇರಿದವನೆಂಬ ನೆಲೆಯಲ್ಲಿ ಅವಳ ಕುಟುಂಬದ (Family) ಮಾತಿನಿಂದ ಪ್ರಭಾವಿತಳಾಗಿದ್ದಾಳೆ. ಮಹಿಳೆ 10 ಸಾವಿರ ರೂಗಳನ್ನು ದಂಡವಾಗಿ (Penalty) ಪತಿಗೆ ನೀಡಬೇಕು. ವಿದ್ಯಾವಂತ ದಂಪತಿಗಳು (Educated couple) ಜಾತಿಯ ವಿಚಾರವಾಗಿ ತಮ್ಮ ಸಂಬಂಧವನ್ನು ಕೊನೆಗೊಳಿಸುತ್ತಿದ್ದಾರೆ. ಇದು ಅತ್ಯಂತ ದುರದೃಷ್ಟಕರವಾಗಿ ಕಾಣುತ್ತದೆ ಎಂದು ಕೋರ್ಟ್ ಹೇಳಿದೆ.

  ಪತಿಯ ಉಪಜಾತಿ ಬೇರೆ ಎಂಬ ಕಾರಣಕ್ಕೆ ವಿಚ್ಚೇಧನಕ್ಕೆ ನಿರ್ಧರಿಸಿದ ಪತ್ನಿ
  ನ್ಯಾಯಪೀಠದ ಬೆಂಚಿನಲ್ಲಿ ನ್ಯಾ. ಸೋನಿಯಾ ಗೋಕಣಿ ಮತ್ತು ನ್ಯಾ. ಮೌನಾ ಭಟ್, ದಂಪತಿಗಳ ಸಮಸ್ಯೆಯನ್ನು ಆಲಿಸಿ ಈ ರೀತಿ ತೀರ್ಪು ನೀಡಿದರು. ಪ್ರಕರಣದಲ್ಲಿ ಮಹಿಳೆ ತನ್ನ ಪತಿ ವಿರುದ್ಧ ಯಾವುದೇ ರೀತಿಯ ಇಲ್ಲಸಲ್ಲದ ಆರೋಪಗಳನ್ನು ಮಾಡಿಲ್ಲ ಎಂದು ಕೋರ್ಟ್ ಹೇಳಿದೆ. ಮಹಿಳೆ ಕೇವಲ ಮದುವೆಯಾಗಿರುವ ಪತಿ ನಮ್ಮ ಜಾತಿಗೆ ಸೇರಿದವನಲ್ಲ, ಅವನ ಉಪಜಾತಿ ಬೇರೆ ಎಂಬ ಕಾರಣಕ್ಕೆ ವಿಚ್ಚೇಧನ ಪಡೆದುಕೊಳ್ಳಲು ಮುಂದಾಗಿ ಕಟಕಟೆಯಲ್ಲಿ ನಿಂತಿದ್ದಳು.

  ಮೂಲಭೂತವಾಗಿ, ಪತಿ ತನ್ನ ಹೇಬಿಯಸ್ ಕಾರ್ಪಸ್ ಅರ್ಜಿಯೊಂದಿಗೆ ಹೈಕೋರ್ಟ್‌ಗೆ ತೆರಳಿದ್ದರು. ತನ್ನ ಹೆಂಡತಿಯನ್ನು ಆಕೆಯ ಹೆತ್ತವರು ಅಕ್ರಮ ಬಂಧನದಲ್ಲಿ ಇರಿಸಿದ್ದಾರೆ ಎಂದು ಆರೋಪಿಸಿ ಪತಿ ತನ್ನ ಹೆಂಡತಿಯನ್ನು ಹುಡುಕುತ್ತಿದ್ದನು ನಂತರ ಪತ್ನಿಯ ಕಸ್ಟಡಿಗಾಗಿ ಪತಿ ಹೈಕೋರ್ಟ್ ಮೊರೆ ಹೋಗಿದ್ದರು. ನಂತರ ನ್ಯಾಯಾಲಯದ ವಕೀಲರ ಮೂಲಕ ಮಹಿಳೆಯನ್ನು ಕೋರ್ಟಿಗೆ ಕರೆಸಿಕೊಳ್ಳಲಾಯಿತು.

  ಮದುವೆಯಾದ ನಂತರ 4 ದಿನ ಮಾತ್ರ ಪತಿ ಜೊತೆ ಇದ್ದ ಪತ್ನಿ
  ನ್ಯಾಯಾಲಯದ ಮೆಟ್ಟಿಲೇರುವ ಮೊದಲು ಇಬ್ಬರು ಗಂಡ ಹೆಂಡತಿಯಾಗಿ 4 ವರ್ಷಗಳನ್ನು ಕಳೆದಿದ್ದಾರೆ. ಮದುವೆಯಾದ ನಂತರ 4 ದಿನ ಮಾತ್ರ ಪತಿ ಜೊತೆ ಇದ್ದ ಪತ್ನಿ ನಂತರ ತವರು ಮನೆ ಸೇರಿದ್ದಳು. ತದನಂತರ ಹಿಂದಿರುಗಿ ಬರಲೇ ಇಲ್ಲ. ಹೀಗಾಗಿ ಕೋರ್ಟ್ ಮೂಲಕ ನ್ಯಾಯಕ್ಕಾಗಿ ಪತಿ ಅರ್ಜಿ ಸಲ್ಲಿಸಿದ್ದರು.

  ಇದನ್ನೂ ಓದಿ: Pregnant Women: ಭೋರ್ಗೆರೆವ ಅಲೆಗಳ ನಡುವೆ ಸಮುದ್ರದ ಮಧ್ಯದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

  ನ್ಯಾಯಾಲಯದ ಆದೇಶದ ಪ್ರಕಾರ, ಅವರು ಏಪ್ರಿಲ್ 27 ರಂದು ನ್ಯಾಯಾಲಯದ ಮುಂದೆ ಹಾಜರಾಗಿದ್ದರು ಮತ್ತು ಇಬ್ಬರು ತಮ್ಮ ಮದುವೆಯನ್ನು ಒಪ್ಪಿಕೊಂಡರು. ಆದಾಗ್ಯೂ, ಪತ್ನಿ ನಾವಿಬ್ಬರೂ ಪಟೇಲ್ ಸಮುದಾಯಕ್ಕೆ ಸೇರಿದವರಾಗಿದ್ದು, ತನ್ನ ಪತಿಯ ಉಪಜಾತಿ ಭಿನ್ನವಾಗಿದೆ ಆದ್ದರಿಂದ, ಈ ಮದುವೆ ಸಂಬಂಧವನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ ಎಂದು ಕೋರ್ಟಿನಲ್ಲಿ ಹೇಳಿದಳು.

  ಜಾತಿ ವಿಚಾರವಾಗಿ ಯುವಕರ ಬದುಕು ಹಾಳಾಗಿರುವುದು ದುರದೃಷ್ಟಕರ
  ಮಹಿಳೆಗೆ ಸ್ವಲ್ಪ ಸಮಯವನ್ನು ಕೋರ್ಟ್ ನೀಡಿತಾದರೂ ಮಹಿಳೆ ತನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಅಚಲವಾಗಿದ್ದಳು. ಯುವಕರ ಬದುಕು ಜಾತಿ ವಿಚಾರವಾಗಿ ಹಾಳಾಗಿರುವುದು ದುರದೃಷ್ಟಕರ ಎಂದು ಕೋರ್ಟ್ ಹೇಳಿದೆ. ಪ್ರಕರಣದಲ್ಲಿ ಜಾತಿ ಮತ್ತು ಉಪಜಾತಿಗಳ ಸಿದ್ಧಾಂತದ ವರ್ತನೆ ಮತ್ತು ಸಂಕುಚಿತ ದೃಷ್ಟಿ ಬಿಟ್ಟರೆ ಪತಿಯ ಮೇಲೆ ಹೆಂಡತಿ ಯಾವ ಆರೋಪಗಳನ್ನು ಎಸಗಲಿಲ್ಲ. ಹೀಗಾಗಿ ಬೇರೆ ಏನು ಉತ್ತರ ಸಿಗದ ನ್ಯಾಯಾಲಯ ಹೆಂಡತಿಯ ಅಸಮಂಜಸವಾದ ಪ್ರಮೇಯ ಮತ್ತು ಆಧಾರರಹಿತ ಕಾರಣವನ್ನು ಪರೀಶಿಲಿಸಿ ಅರ್ಜಿದಾರರಿಗೆ ರೂ.10,000/ ವೆಚ್ಚವನ್ನು ನಾಲ್ಕು ವಾರಗಳಲ್ಲಿ ಪಾವತಿಸಬೇಕು ಮತ್ತು ಸಂಬಂಧವನ್ನು ಕೊನೆಗೊಳಿಸಲು ಮುಂದಿನ ಕಾನೂನು ಕ್ರಮಗಳಿಗೆ ಆದೇಶ ನೀಡಿತು.

  ಇದನ್ನೂ ಓದಿ: Lok Sabha Election: ಒಂದು ಕುಟುಂಬ, ಒಂದು ಟಿಕೆಟ್; ಮುಂಬರುವ ಚುನಾವಣೆ ಗೆಲ್ಲಲು ಭರ್ಜರಿ ಕಾರ್ಯತಂತ್ರ ಹೆಣೆದ ಕಾಂಗ್ರೆಸ್

  ನ್ಯಾಯಾಧೀಶರು ಫಿರ್ಯಾದಿ ಮತ್ತು ಅವರ ಪತಿಗೆ ಕಾನೂನು ಪ್ರಕ್ರಿಯೆಗಳಿಗೆ ಸೂಕ್ತ ವೇದಿಕೆಗೆ ಹೋಗಲು ಸೂಚಿಸಿದರು. ಇದು ವಿರೋಧಾತ್ಮಕ ತರ್ಕ ಮತ್ತು ಆಧಾರರಹಿತ ವಾದುದಾಗಿದೆ ಎಂದು ನಾವು ಸರ್ವಾನುಮತದಿಂದ ಅಭಿಪ್ರಾಯಪಟ್ಟಿದ್ದೇವೆ. ಖಾಸಗಿ ದಾವೆದಾರರಿಗೆ ಬದಲಾಗಿ ಅರ್ಜಿದಾರರಿಗೆ ಒಂದು ವಾರದೊಳಗೆ 10,000 ರೂ.ಗಳನ್ನು ವಿಧಿಸಲು ನಾವು ಮಹಿಳೆ ಮತ್ತು ಆಕೆಯ ತಂದೆಗೆ ಒತ್ತಾಯಿಸಿದ್ದೇವೆ ಎಂದರು.

  ಅಕ್ಷರಸ್ಥರಾಗಿದ್ದರು ಜಾತಿ ಬಿಕ್ಕಟ್ಟಿಗೆ ಸಿಲುಕಿದ ದಂಪತಿಗಳು
  ನ್ಯಾಯಮೂರ್ತಿಗಳ ಪೀಠ ಮಹಿಳೆ "ಸಂಪೂರ್ಣವಾಗಿ ಕುಟುಂಬದಿಂದ ಮಾರ್ಗದರ್ಶಿಸಲ್ಪಟ್ಟಿದ್ದಾಳೆ ಹೆತ್ತವರು ಅವಳ ನಿರ್ಧಾರದಲ್ಲಿದ್ದಾರೆ” ಎಂದು ಹೇಳಿತು. ನ್ಯಾಯಾಧೀಶರು ಜಾತಿ ವ್ಯವಸ್ಥೆಯ ಪ್ರಭಾವವನ್ನು ಖಂಡಿಸಿದರು. ದಂಪತಿಗಳು ಅಕ್ಷರಸ್ಥರಾಗಿದ್ದರು ಜಾತಿ ಬಿಕ್ಕಟ್ಟಿಗೆ ಸಿಲುಕಿದ್ದಾರೆ. ಈ ಧೋರಣೆಯಿಂದ ಯುವಕರ ಜೀವನ ಹಾಳಾಗಿದೆ. ನಮ್ಮ ಹಿರಿಯರು ನಮಗೆ ಮಾರ್ಗದರ್ಶನ ನೀಡಬೇಕು. ಆದರೆ ಇಲ್ಲಿ ಇದಕ್ಕೆ ವಿರುದ್ಧವಾಗಿ ಕುಟುಂಬದವರು ಪಾತ್ರವಹಿಸಿದ್ದಾರೆ ಎಂದು ಕೋರ್ಟ್ ಹೇಳಿದೆ.
  Published by:Ashwini Prabhu
  First published: