ತಿರುವನಂತಪುರ (ಜ. 10): ಕೇರಳದ ಕೊಟ್ಟಾಯಂ ಜಿಲ್ಲೆಯ ಕರುಕಾಚಲನಲ್ಲಿ ಲೈಂಗಿಕ ಚಟುವಟಿಗಳಿಗಾಗಿ ಹೆಂಡತಿಯನ್ನು ಇತರರೊಂದಿಗೆ ಹಂಚಿಕೊಳ್ಳುವ (ಪತ್ನಿ ವಿನಿಮಯ -Wife Swapping)ದ ದಂಧೆ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದು, ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಸುಮಾರು 5000 ಸದಸ್ಯರ ಗುಂಪು ಫೇಸ್ಬುಕ್ (Facebook) ಮತ್ತು ಟೆಲಿಗ್ರಾಮ್ನಂತಹ (Telegram) ಸಾಮಾಜಿಕ ಮಾಧ್ಯಮದಲ್ಲಿ ಗ್ರೂಪ್ ಸೃಷ್ಟಿಸಿ, ಇಲ್ಲಿ ಪತ್ನಿ ವಿನಿಮಯ ನಡೆಸುತ್ತಿದ್ದರು ಎಂಬ ಆಘಾತಕಾರಿ ಮಾಹಿತಿಯನ್ನು ಪೊಲೀಸರು ಹೊರ ಹಾಕಿದ್ದಾರೆ.
ಮಹಿಳೆ ನೀಡಿದ ದೂರಿನ ಬಳಿಕ ಈ ದಂಧೆ ಬಯಲಿಗೆ
ಮಹಿಳೆಯೊಬ್ಬರು ತನ್ನ ಗಂಡನ ವಿರುದ್ಧ ಪತ್ನಿ ವಿನಿಮಯ ನಡೆಸಲು ಮುಂದಾಗಿದ್ದ ಸಂಬಂಧ ದೂರು ದಾಖಲಿಸಿದ್ದಾರೆ. ಬೇರೆಯೊಬ್ಬರ ಜೊತೆ ಹೆಂಡತಿ ವಿನಿಮಯ ಚಟುವಟಿಕೆಗಾಗಿ ನನ್ನ ಗಂಡ ತನ್ನನ್ನು ತನ್ನ ಆನ್ಲೈನ್ ಸ್ನೇಹಿತರಿಗೆ ಪ್ರಸ್ತುತಪಡಿಸುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ. ಈ ಸಂಬಂಧ ದೂರನ್ನು ಸ್ವೀಕರಿಸಿದ ಪೊಲೀಸರು ಕಾರ್ಯಾಚರಣೆಗಿಳಿದಾಗ ಈ ಪತ್ನಿ ವಿನಿಯಮ ದಂಧೆ ಕುರಿತು ಮಾಹಿತಿ ಹೊರ ಬಿದ್ದಿದೆ. ಸದ್ಯ ದೂರಿನ ಆಧಾರದ ಮೇಲೆ ಗಲ್ಫ್ ನಿಂದ ಮರಳಿ ಬಂದಿದ್ದ ದೂರದಾರರ ಗಂಡನನ್ನು ಪೊಲೀಸರು ಬಂಧಿಸಿದ್ದು, ಲೈಂಗಿಕ ಚಟುವಟಿಕೆಗಾಗಿ ಪಾಲುದಾರರ ವಿನಿಮಯ ನಡೆಸುತ್ತಿದ್ದ ಜಾಲ ಕುರಿತು ಮಾಹಿತಿ ಬಹಿರಂಗ ಪಡಿಸಿದ್ದಾರೆ.
ಸುಮಾರು 5000 ಸದಸ್ಯರಿರುವ ಗುಂಪು
ಸಾಮಾಜಿಕ ಮಾಧ್ಯಮದ ಈ ಗುಂಪುಗಳಲ್ಲಿ ಸದಸ್ಯರಿಗೆ ಪತ್ನಿ ವಿನಿಮಯ ಮತ್ತು ಅಸ್ವಾಭಾವಿಕ ಲೈಂಗಿಕತೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶಗಳನ್ನು ನೀಡುತ್ತಿದ್ದರು. ಕೆಲವು ಗುಂಪುಗಳು 5,000 ಸದಸ್ಯರನ್ನು ಹೊಂದಿದ್ದವು. ಮಹಿಳೆಯರು ಸೇರಿದಂತೆ ಅನೇಕ ಜನರು ಸ್ವಯಂಪ್ರೇರಣೆಯಿಂದ ಇಂತಹ ಲೈಂಗಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಈ ಮಧ್ಯೆ ಕೆಲವು ಮಹಿಳೆಯರು ಬಲವಂತವಾಗಿ ತಮ್ಮ ಗಂಡನಿಂದ ಇಂತಹ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ತನಿಖಾ ಸಮಿತಿ ರಚಿಸಿದ ಸುಪ್ರೀಂ
ಒತ್ತಾಯಪೂರ್ವಕವಾಗಿ ಮಹಿಳೆಯರು ಭಾಗಿ
ಇನ್ನು ತಮ್ಮ ಇಚ್ಛೆಗೆ ವಿರುದ್ಧವಾಗಿ ಇದನ್ನು ಬಲವಂತಪಡಿಸಿದ ಅನೇಕ ಹೆಂಡತಿಯರು ಆತ್ಮಹತ್ಯೆಯ ಮಾರ್ಗ ಅನುಸರಿಸುತ್ತಿದ್ದಾರೆ ಈ ಹಿನ್ನಲೆ ಈ ಕುರಿತು ಬಹಳ ಜಾಗ್ರತೆಯಿಂದ ನಾವು ತನಿಖೆ ಮಾಡಬೇಕಿದೆ. ಇನ್ನು ಈ ಗುಂಪಿನಲ್ಲಿ ಶೇ 90 ರಷ್ಟು ಮಹಿಳೆಯರಿಗೆ ಬ್ರೈನ್ ವಾಶ್ ಮಾಡಿ ಈ ರೀತಿ ಕಾರ್ಯಕ್ಕೆ ಮುಂದಾಗುವಂತೆ ಪ್ರೇರೆಪಿಸಲಾಗಿದೆ.
ಯುವಕರು ಕೂಡ ಈ ದಂಧೆಯಲ್ಲಿ
ಈ ದಂಧೆಯ ಸದಸ್ಯರು ಹಲವಾರು ವೃತ್ತಿಪರರು ಮತ್ತು ಸಮಾಜದ ಉನ್ನತ ಸ್ತರದಲ್ಲಿರುವವರೂ ಇದ್ದಾರೆ. ಸದಸ್ಯ ದಂಪತಿಗಳು, ನಿಯತಕಾಲಿಕವಾಗಿ ಭೇಟಿಯಾಗುತ್ತಾರೆ, ಬಳಿಯ ಮಹಿಳೆಯರನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಏಕಕಾಲದಲ್ಲಿ ಮೂರು ಪುರುಷರು ಓರ್ವ ಮಹಿಳೆಯನ್ನು ಹಂಚಿಕೊಂಡ ಉದಾಹರಣೆಗಳಿವೆ. ಪಾಲುದಾರರಿಲ್ಲದೆ ಬರುವವರನ್ನು ಸ್ಟಡ್ ಎಂದು ಇಲ್ಲಿ ಗುರುತಿಸಲಾಗುತ್ತಿತ್ತು. ಇವರು 14,000 ಪಾವತಿಸಬೇಕು ಎಂಬ ಅಂಶ ಬೆಳಕಿಗೆ ಬಂದಿದೆ. ಅಂತಹ ಹಲವಾರು ಯುವಕರು ಗುಂಪಿನ ಸದಸ್ಯರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ಕೊರೊನಾ ಸೋಂಕಿತರಿಗೆ ಲಭ್ಯವಿರುವ ಔಷಧಗಳ ಪಟ್ಟಿ ಇಲ್ಲಿದೆ..
ಗುಜರಾತ್ನಲ್ಲೂ ಇದೇ ರೀತಿ ಪ್ರಕರಣ
ಕಳೆದ ವರ್ಷ ಗುಜರಾತ್ನ ಅಹಮದಾಬಾದ್ನಲ್ಲೂ ಇದೇ ರೀತಿ ಪ್ರಕರಣ ದಾಖಲಾಗಿತ್ತು. 34 ವರ್ಷದ ಮಹಿಳೆಯೊಬ್ಬರು, ತನ್ನ ಗಂಡ ಆತನ ಹಿರಿಯ ಸಹೋದರನೊಂದಿಗೆ ಪತ್ನಿ ವಿನಿಮಯ ಮಾಡಿಕೊಳ್ಳಲು ಒತ್ತಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಆತನ ಮಾತಿಗೆ ಒಪ್ಪದ ಹಿನ್ನಲೆ ತನ್ನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದರು.
ತನ್ನ ಗಂಡನ ಸಹೋದರ ಹೇಗೆ ಆಕೆಗೆ ಲೈಂಗಿಕ ಕಿರುಕುಳ ನೀಡಿದರು ಎಂಬ ಕುರಿತು ಸಂತ್ರಸ್ತ ಮಹಿಳೆ ತನ್ನ ಸ್ನೇಹಿತರ ಬಳಿಕ ವಿವರಿಸಿದ್ದರು. ಬಳಿಕ ಸ್ನೇಹಿತರು ಆಕೆಯ ಗಂಡ ಮತ್ತು ಆತನ ಅಣ್ಣನ ಜೊತೆಗೆ ಮಾತನಾಡಲು ಮುಂದಾದರು. ಆದರೆ, ಅವರು ಬೆದರಿಸಿದರು, ಬಳಿಕ ದಿಕ್ಕು ತೋಚದೇ ಮಹಿಳೆ ಪೊಲೀಸರಿಗೆ ಸಂಪರ್ಕಿಸಿದ್ದಾಗಿ ದೂರಿನಲ್ಲಿ ದಾಖಲಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ