ಹೈದರಾಬಾದ್: ಗಂಡ ಹೆಂಡತಿ (Husband and Wife) ಜಗಳ ಉಂಡು ಮಲಗೋ ತನಕ ಎಂಬ ಗಾದೆ ಮಾತಿದೆ. ಪ್ರತಿ ಮನೆಯಲ್ಲೂ ದಂಪತಿ ನಡುವೆ ಯಾವುದಾದರೂ ವಿಚಾರಕ್ಕೆ ಜಗಳಗಳು ನಡೆಯುತ್ತಿರುತ್ತವೆ. ಇಂತಹ ಸಣ್ಣ ಪುಟ್ಟ ಜಗಳನ್ನು ಕುಳಿತು ಬಗೆಹರಿಸಿಕೊಂಡರೆ ಸಂಸಾರ ನೌಕೆ ತುಂಬಾ ದೂರ ಸಾಗುತ್ತದೆ. ಆದರೆ ಹೆಂಡತಿ ಅಥವಾ ಗಂಡ ತಾವು ಹೇಳಿದ್ದೇ ನಡೆಯಬೇಕು ಎಂದು ಸಾಗಿದರೆ ಅದು ಸಂಸಾರವನ್ನಷ್ಟೇ ಅಲ್ಲ, ಜೀವ-ಜೀವನ ಎರಡನ್ನೂ ಹಾಳು ಮಾಡುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಎರಡು ಪ್ರತ್ಯೇಕ ಘಟನೆಗಳು ತೆಲಂಗಾಣದಲ್ಲಿ (Telangana) ನಡೆದಿದ್ದು, ಜಗಳ ಮಾಡಿಕೊಂಡು ತವರಿಗೆ ಹೋದ ಪತ್ನಿ ಮತ್ತೆ ವಾಪಸ್ ಬರಲಿಲ್ಲ ಎಂಬ ಕಾರಣಕ್ಕೆ ಮನನೊಂದ ಇಬ್ಬರು ಗಂಡಂದಿರುವ ಜೀವವನ್ನೇ ಕಳೆದುಕೊಂಡಿದ್ದಾರೆ.
ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಪುರಸಭೆ ವ್ಯಾಪ್ತಿಯ ತೆಕ್ರಿಯಾಲ್ ಗ್ರಾಮದ ನಿವಾಸಿ ಪ್ರವೀಣ್ ಐದು ವರ್ಷಗಳ ಹಿಂದೆ ಗೊಡುಪಲ್ಲಿಯ ಲಾಸ್ಯ ಎಂಬಾಕೆಯನ್ನು ವಿವಾಹವಾದರು. ಅವರಿಗೆ ಮೂರು ವರ್ಷದ ಮಗ ಕೂಡ ಇದ್ದಾನೆ. ಆದರೆ ಇತ್ತೀಚೆಗೆ ಗಂಡ ಹೆಂಡತಿ ನಡುವೆ ಜಗಳ ಶುರುವಾಗಿದೆ. ಇದರಿಂದ ಗಂಡನನ್ನು ಬಿಟ್ಟು ಕಳೆದ ವರ್ಷದಿಂದ ಲಾಸ್ಯ ತನ್ನ ತಾಯಿ ಮನೆಗೆ ಹೋಗಿದ್ದಾಳೆ.
ವಾಪಸ್ ಬರಲ್ಲ ಅಂದಿದ್ದಕ್ಕೆ ಆತ್ಮಹತ್ಯೆ
ಆದರೆ ಪ್ರವೀಣ್ ಪತ್ನಿಯನ್ನು ವಾಪಸ್ ಬರುವಂತೆ ಎಷ್ಟೇ ಗೋಗರೆದರೂ ಆಕೆ ಮಾತ್ರ ಬರಲು ಒಪ್ಪಿಲ್ಲ, ಪತ್ನಿ ಮನೆಗೆ ಬರಲಿಲ್ಲ ಎಂದು ನೊಂದ ಪ್ರವೀಣ್ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೇವಾನಿಪಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Kannur Accident: ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಏಕಾಏಕಿ ಕಾರಿಗೆ ಬೆಂಕಿ, ದಂಪತಿ ಸಜೀವ ದಹನ
ಸಂಸಾರ ಹೊಡೆದ ಕುಡಿತದ ಚಟ
ಇಂತಹದ್ದೇ ಮತ್ತೊಂದು ಘಟನೆ ನಿಜಾಮಾಬಾದ್ ಜಿಲ್ಲೆಯಲ್ಲೂ ನಡೆದಿದೆ. ನವಿಪೇಟ್ ತಾಲೂಕಿನ ಜನ್ನೆಪಲ್ಲಿ ಗ್ರಾಮದ ನಿವಾಸಿಯಾಗಿರುವ ನರೇಂದರ್ ಕುಡಿತದ ಚಟಕ್ಕೆ ದಾಸನಾಗಿದ್ದು, ಪತ್ನಿ ಲಕ್ಷ್ಮಿ ಜೊತೆಗೆ ಆಗಾಗ್ಗೆ ಜಗಳವಾಡುತ್ತಿದ್ದ. 15 ದಿನಗಳ ಹಿಂದೆಯೇ ಪತ್ನಿ ಜೊತೆ ಜಗಳವಾಡಿದ್ದಾನೆ. ಇದರಿಂದ ಕೋಪಗೊಂಡ ಲಕ್ಷ್ಮಿ ತವರು ಮನೆ ಹಾದಿ ಹಿಡಿದಿದ್ದಾಳೆ.
ಕುಡಿತದ ಚಟ ಹಾಗೂ ಪತ್ನಿಯಿಂದ ದೂರವಾದ ನರೇಂದ್ರ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಪತ್ನಿ ಲಕ್ಷ್ಮಿ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾತಿನಲ್ಲಿ ಬಗೆಹರಿಸಿಕೊಳ್ಳುವ ಅಗತ್ಯ
ಗಂಡ ಹೆಂಡತಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಹೋದರೆ ಸಂಸಾರ ನೌಕೆ ಉತ್ತಮವಾಗಿ ಸಾಗುತ್ತದೆ. ಆದರೆ ನಾನು ಹೆಚ್ಚು, ತಾ ಹೆಚ್ಚು ಎನ್ನುವ ಅಹಂಗೆ ಒಳಗಾದರೆ ತಮ್ಮ ಜೀವನಕ್ಕೆ ತಾವೇ ಬೆಂಕಿಯಿಟ್ಟುಕೊಳ್ಳಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಕುಳಿತು ಬಗೆಹರಿಯುವ ಸಮಸ್ಯೆಯನ್ನು ಸಮಾಧಿಗೆ ಒಯ್ಯಲಾಗುತ್ತಿದೆ. ಮರಳಿ ಸಿಗದ ಜೀವನವನ್ನು ಕ್ಷಣಾರ್ಧದಲ್ಲಿ ಕಳೆದುಕೊಳ್ಳುವ ಸಂಖ್ಯೆ ಏರಿಕೆಯಾಗುತ್ತಿದೆ.
ಪೋಷಕರು ದೂರು ನೀಡಿದ್ದ ಹಿನ್ನಲೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ಶವವನ್ನು ಚಾರ್ಮಾಡಿ ಘಾಟ್ನಲ್ಲಿ ಎಸೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಶವವನ್ನು ಹುಡುಕಿ ತಂದಿದ್ದಾರೆ. ಪ್ರೀತಿಯ ವಿಚಾರದಲ್ಲಿ ಮಾತುಕತೆಯಲ್ಲಿ ಮುಗಿಯಬೇಕಿತ್ತು. ಆದರೆ ಯುವಕರ ಕೋಪ ಒಂದ ಜೀವವನ್ನು ಬಲಿತೆಗೆದುಕೊಂಡಿದೆ. ಅವರನ್ನು ಜೈಲು ಪಾಲಾಗುವಂತೆ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ