• Home
 • »
 • News
 • »
 • national-international
 • »
 • ಪುಲ್ವಾಮಾ ಹುತಾತ್ಮ ಮೇಜರ್ ಪತ್ನಿ ಸೇನೆಗೆ: ಮದುವೆಯಾದ 9 ತಿಂಗಳಿಗೆ ಗಂಡನನ್ನು ಕಳೆದುಕೊಂಡಾಕೆಯ ಶಪಥ

ಪುಲ್ವಾಮಾ ಹುತಾತ್ಮ ಮೇಜರ್ ಪತ್ನಿ ಸೇನೆಗೆ: ಮದುವೆಯಾದ 9 ತಿಂಗಳಿಗೆ ಗಂಡನನ್ನು ಕಳೆದುಕೊಂಡಾಕೆಯ ಶಪಥ

ನಿತಿಕಾ ಕೌಲ್

ನಿತಿಕಾ ಕೌಲ್

ಮೇಜರ್ ಧೌಂಡಿಯಾಲ್ ಅವರು ಮದುವೆಯಾದ ಕೇವಲ 9 ತಿಂಗಳಿಗೆ ನಿಧನರಾದರು. 27 ವರ್ಷದ ಪತ್ನಿ ನಿತಿಕಾ ಕೌಲ್‌ ಅವರನ್ನು ಅಗಲಿದ್ದರು.

 • Share this:

  ನವದೆಹಲಿ: 2019ರ ಫೆ.14ರಂದು ಮಧ್ಯಾಹ್ನ ಜೆಇಎಂ ಉಗ್ರರು ಜಮ್ಮು-ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಆತ್ಮಾಹುತಿ ಬಾಂಬ್​​ ದಾಳಿ ಮೂಲಕ 40 ಯೋಧರನ್ನು ಬಲಿ ಪಡೆದಿದ್ದರು. 12 ದಿನಗಳ ನಂತರ ಭಾರತ ಸೇನೆ ಬಾಲಕೋಟ್​​ ಮೇಲೆ ದಾಳಿ ನಡೆಸಿ ಪ್ರತೀಕಾರ ತೆಗೆದುಕೊಂಡಿತ್ತು. ಈಗ ಪುಲ್ವಾಮಾ ಹುತಾತ್ಮ ಯೋಧನ ಪತ್ನಿ ರಾಷ್ಟ್ರ ಸೇವೆಗಾಗಿ ಭಾರತೀಯ ಸೇನೆಗೆ ಸೇರಿಕೊಂಡಿದ್ದು, ಈ ಮೂಲಕ ಪತಿಗೆ ಗೌರವ ನಮನ ಸಲ್ಲಿಸಿದ್ದಾರೆ. ಮೇಜರ್ ವಿಭೂತಿ ಶಂಕರ್ ಧೌಂಡಿಯಾಲ್ ಅವರು 2018 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಹುತಾತ್ಮರಾಗಿದ್ದರು. ರಾಷ್ಟ್ರಕ್ಕಾಗಿ ಅವರು ಮಾಡಿದ ತ್ಯಾಗಕ್ಕಾಗಿ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರವನ್ನು ನೀಡಲಾಗಿದೆ.


  ಇಂದು, ಅವರ ಪತ್ನಿ ನಿತಿಕಾ ಕೌಲ್ ಅವರು ಭಾರತೀಯ ಸೇನೆಗೆ ಸೇರುವ ಮೂಲಕ ಅವರಿಗೆ ತಕ್ಕ ಗೌರವ ಸಲ್ಲಿಸಿದರು. ಮೊದಲ ಬಾರಿಗೆ ಸೈನ್ಯದ ಸಮವಸ್ತ್ರವನ್ನು ಧರಿಸಿದಾಗ ಅವರಿಗೆ ಹೆಮ್ಮೆಯ ಕ್ಷಣವಾಗಿದೆ. ಆರ್ಮಿ ಕಮಾಂಡರ್ ನಾರ್ದರ್ನ್ ಕಮಾಂಡ್ ಲೆಫ್ಟಿನೆಂಟ್ ಜನರಲ್ ವೈ.ಕೆ.ಜೋಶಿ ಅವರಿಂದ ಸ್ಟಾರ್‌ಗಳನ್ನು ಪಡೆದುಕೊಂಡು ಹೆಗಲ ಮೇಲೆ ಹೊತ್ತುಕೊಂಡಿದ್ದರಿಂದ ಇದು ನಿಜಕ್ಕೂ ಹೆಮ್ಮೆಯ ಕ್ಷಣವಾಗಿದೆ.


  ಈ ಸಂಬಂಧ ರಕ್ಷಣಾ ಸಚಿವಾಲಯದ ಪಿ.ಆರ್.ಒ ಉಧಂಪುರ್, ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ, ''2019 ರಲ್ಲಿ #Pulwamaದಲ್ಲಿ ಸರ್ವೋಚ್ಚ ತ್ಯಾಗ ಮಾಡಿದ #MajVibhutiShankarDhoundiyal ಅವರಿಗೆ ಎಸ್‌ಸಿ (ಪಿ) ನೀಡಲಾಯಿತು. ಇಂದು ಅವರ ಪತ್ನಿ ನಿತಿಕಾ ಕೌಲ್ #IndianArmy ಸಮವಸ್ತ್ರವನ್ನು ಧರಿಸಿ ಗೌರವ ಸಲ್ಲಿಸಿದ್ದಾರೆ. ಲೆಫ್ಟಿನೆಂಟ್ ಜನರಲ್ ವೈ.ಕೆ.ಜೋಶಿ ಅವರು ಸ್ವತ: ಸ್ಟಾರ್‌ಗಳನ್ನು ತನ್ನ ಹೆಗಲ ಮೇಲೆ ಹಾಕುತ್ತಿರುವುದರಿಂದ ಇದು ಆಕೆಗೆ ಹೆಮ್ಮೆಯ ಕ್ಷಣ..!'' ಎಂದು ಟ್ವೀಟ್‌ ಮಾಡಿದ್ದಾರೆ.


  ಮೇಜರ್ ಧೌಂಡಿಯಾಲ್ ಅವರು ಮದುವೆಯಾದ ಕೇವಲ 9 ತಿಂಗಳಿಗೆ ನಿಧನರಾದರು. 27 ವರ್ಷದ ಪತ್ನಿ ನಿತಿಕಾ ಕೌಲ್‌ ಅವರನ್ನು ಅಗಲಿದ್ದರು. ಆದರೆ, ಮೇಜರ್ ಧೌಂಡಿಯಾಲ್ ಅವರ ಪ್ರಾಣ ತ್ಯಾಗವು ವ್ಯರ್ಥವಾಗಲಿಲ್ಲ . ಅವರ ಪತ್ನಿ ತನ್ನ ಗಂಡನ ನಷ್ಟವನ್ನು ನಿಭಾಯಿಸಲು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಭಾರತೀಯ ಸೇನೆಗೆ ಸೇರಲು ಮತ್ತು ತನ್ನ ಪತಿಗೆ ಹೆಮ್ಮೆ ಪಡುವಂತೆ ಸ್ಪೂರ್ತಿದಾಯಕ ನಿರ್ಧಾರವನ್ನು ಕೈಗೊಂಡರು.  ತನ್ನ ಗಂಡನ ಹುತಾತ್ಮತೆಯ ಕೇವಲ ಆರು ತಿಂಗಳ ನಂತರ, ನಿತಿಕಾ ಶಾರ್ಟ್‌ ಸರ್ವೀಸ್‌ ಕಮಿಷನ್‌ (ಎಸ್‌ಎಸ್‌ಸಿ) ಫಾರ್ಮ್ ಅನ್ನು ಭರ್ತಿ ಮಾಡಿದರು. ನಂತರ ಅವರು ಪರೀಕ್ಷೆ ಮತ್ತು ಸೇವೆಗಳ ಆಯ್ಕೆ ಮಂಡಳಿ (ಎಸ್‌ಎಸ್‌ಬಿ) ಸಂದರ್ಶನವನ್ನು ಪಾಸ್‌ ಮಾಡಿಕೊಂಡಿದ್ದರು.


  ನಂತರ ಅವರು ಶೀಘ್ರದಲ್ಲೇ ತಮ್ಮ ತರಬೇತಿಗಾಗಿ ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ (OTA) ನಿಯೋಜನೆಗೊಂಡರು. 2021ರ ಮೇ 29 ರಂದು ಅಧಿಕೃತವಾಗಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ನಿತಿಕಾ ಕೌಲ್ ಧೌಂಡಿಯಾಲ್ ಆಗಿ ಸೇರಿಕೊಂಡರು.


  ಇದನ್ನೂ ಓದಿ: ವಿದ್ಯಾ-ಇರ್ಷಾದ್ ಮದುವೆಗೆ ‘ಧರ್ಮ’ಸಂಕಟ; ಮಧ್ಯರಾತ್ರಿ ಕಾಣೆಯಾದ ಪ್ರೇಮಿಗಳ ದುರಂತ ಅಂತ್ಯ!


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾನು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

  First published: