ಮಧ್ಯಪ್ರದೇಶ: ಗಂಡ ಹೆಂಡತಿ (Husband and Wife) ಜಗಳ ಉಂಡು ಮಲಗೋ ತನಕ ಎಂಬ ಗಾದೆ ಮಾತಿದೆ. ಇದೆಲ್ಲಾ ಸಾಧ್ಯವಾಗಬೇಕೆಂದರೆ ಇಬ್ಬರ ನಡುವೆ ಸಾಮರಸ್ಯ ಇದ್ದಾಗ ಮಾತ್ರ. ಇಲ್ಲೊಬ್ಬ ವ್ಯಕ್ತಿ ಐವರನ್ನು ಮದುವೆಯಾದರೂ (Marriage) ಒಬ್ಬರೊಂದಿಗೂ ಸರಿಯಾಗಿ ಬಾಳ್ವೆ ಮಾಡಿಲ್ಲ. ಕುಡುಕನಾಗಿದ್ದ ಆತನ ಕಾಟ ತಾಳಲಾರದೆ ನಾಲ್ವರು ಪತ್ನಿಯರು (Wives) ಅವನನ್ನು ಬಿಟ್ಟು ಹೋಗಿದ್ದರು. ಆದರೆ ಐದನೇ ಪತ್ನಿ ಮಾತ್ರ ಗಂಡನ ಕಿರುಗಳದಿಂದ (Harassment) ಬೇಸತ್ತು, ತಾನೂ ಮನೆ ಬಟ್ಟು ಹೋಗುವ ಬದಲು ಪತಿಯನ್ನೇ ಪರಲೋಕಕ್ಕೆ ಕಳುಹಿಸಿದ್ದಾಳೆ. ಮಲಗಿದ್ದ ವೇಳೆ ಪತಿಯನ್ನು ಕೊಡಲಿಯಿಂದ ಕೊಚ್ಚಿಕೊಂದಿದ್ದಾಳೆ. ಈ ಘಟನೆ ಮಧ್ಯಪ್ರದೇಶ ಸಿಂಗ್ರೋಲಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಬಿರೇಂದರ್ ಗುರ್ಜರ್ ಎಂದು ಗುರುತಿಸಲಾಗಿದೆ. ಈತ ಐವರನ್ನು ವಿವಾಹವಾಗಿದ್ದ. ಈತನ 5ನೇ ಪತ್ನಿ ಕಾಂಚನಾ ಗುರ್ಜರ್ ಈತನ ಕಿರುಕುಳ ತಾಳಲಾರದೆ ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ್ದಲ್ಲದೆ, ಆತನ ಮರ್ಮಾಂಗವನ್ನು ಕತ್ತರಿಸಿ ಶವವನ್ನು ದೂರಕ್ಕೆ ಎತ್ತೊಯ್ದು ಬಟ್ಟೆಯಿಂದ ಸುತ್ತಿ ಎಸೆದು ಬಂದಿದ್ದಾಳೆ.
ಫೆಬ್ರವರಿ 21ರಂದು ಮೃತ ದೇಹ ಪತ್ತೆ
ಫೆಬ್ರವರಿ 21ರಂದು ಬಿರೇಂದ್ರ ಗುರ್ಜರ್ ಶವ ಪತ್ತೆಯಾಗಿದೆ. ಈ ವೇಳೆ ಆತನ ಕುತ್ತಿಗೆ ಮತ್ತು ಜನನಾಂಗದ ಬಳಿ ಗಾಯವಾಗಿತ್ತು. ಶವ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಡೆಸಲು ಆರಂಭಿಸಿದ್ದರು. ಆದರೆ ಇತ್ತ ಬಿರೇಂದ್ರನ ಪತ್ನಿ ಕಾಂಚನಾ ತನ್ನ ಗಂಡನ ಹತ್ಯೆಗೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಳು ಎಂದು ಕೊತ್ವಾಲಿ ಪೊಲೀಸ್ ಸ್ಟೇಷನ್ ಇನ್ಚಾರ್ಜ್ ಅರುಣ್ ಪಾಂಡೆ ತಿಳಿಸಿದ್ದಾರೆ.
ಇದನ್ನು ಓದಿ: Husband and Wife: ಪ್ರೀತಿಸಿ ಮದುವೆಯಾಗಿ, ಮೊದಲ ರಾತ್ರಿಗೂ ಮುನ್ನವೇ ವಧುವನ್ನು ಭೀಕರವಾಗಿ ಕೊಂದ ವರ, ಕಾರಣ?
ವಿಚಾರಣೆ ವೇಳೆ ಸಿಕ್ಕಿಬಿದ್ದ ಪತ್ನಿ
ಬಿರೇಂದ್ರ ಗುರ್ಜರ್ ಹತ್ಯೆ ಬಳಿಕ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಮೃತ ವ್ಯಕ್ತಿಯ ಸಂಬಂಧಿಕರು, ಸ್ನೇಹಿತರು ಸೇರಿದಂತೆ ಅನುಮಾನ ಬಂದಂತಹ ಪ್ರತಿಯೊಬ್ಬರನ್ನು ವಿಚಾರಣೆ ನಡೆಸಿದ್ದರು. ಕೊನೆಗೆ ಹತ್ಯೆಯಾದ ಪತ್ನಿಯ ಮೇಲೆ ಅನುಮಾನಗೊಂಡು ಆಕೆಯನ್ನು ವಶಕ್ಕೆ ಪಡೆದು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ನಂತರ ಕಾಂಚನಾ ತನ್ನ ಪತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಕಿರುಕುಳಕ್ಕೆ ಬೇಸತ್ತು ಕೊಲೆ
ವಿಚಾರಣೆ ವೇಳೆ ತನ್ನ ಗಂಡ ನಿತ್ಯ ಕೊಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ಕೊಲೆ ಮಾಡಿದ್ದಾಗಿ ಕಾಂಚನಾ ಒಪ್ಪಿಕೊಂಡಿದ್ದಾಳೆ. ತನ್ನ ಪತಿ ಮಾದಕ ವ್ಯಸನಿಯಾಗಿದ್ದು, ದಿನವೂ ಕುಡಿದು ಬಂದು ಹೊಡೆಯುತ್ತಿದ್ದ. ಇದರಿಂದ ಬೇಸತ್ತು ಕೊಲೆ ಮಾಡಿದೆ ಎಂದು ಕಾಂಚನಾ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾಳೆ.
ಊಟದಲ್ಲಿ 20 ನಿದ್ರೆ ಬೆರೆಸಿ ಕೊಲೆ
ಫೆಬ್ರವರಿ 21ರ ರಾತ್ರಿ ಕೊಲೆಗೂ ಮೊದಲು ಕಾಂಚನಾ ಊಟದಲ್ಲಿ ಗಂಡನಿಗೆ 20 ನಿದ್ರೆ ಮಾತ್ರೆಗಳನ್ನು ನೀಡಿದ್ದಾಳೆ. ನಿದ್ರೆಗೆ ಜಾರಿದ ನಂತರ ಕೊಡಲಿfಯಿಂದ ಗಂಡನ ಮೇಲೆ ದಾಳಿ ಮಾಡಿದ್ದಾಳೆ, ಕೊನೆಗೆ ಆತನ ಮರ್ಮಾಂಗವನ್ನು ಹರಿತವಾದ ಆಯುಧದಿಂದ ಕತ್ತರಿಸಿ ಹತ್ಯೆ ಮಾಡಿದ್ದಾಳೆ.
ಶವವನ್ನು ಬಟ್ಟೆಯಲ್ಲಿ ಸುತ್ತಿ ಎಸೆದು ಬಂದಿದ್ದ ಪತ್ನಿ
ಗಂಡನನ್ನು ಬರ್ಬರವಾಗಿ ಕೊಂದ ಬಳಿಕ ಕಾಂಚನಾ ಮೃತದೇಹವನ್ನು ಬಟ್ಟೆಗಳಿಂದ ಸುತ್ತಿ ರಸ್ತೆ ಬದಿ ಎಸೆದು ಬಂದಿದ್ದಳು. ಇಷ್ಟೇ ಅಲ್ಲದೆ ನಾಶ ಮಾಡುವ ಉದ್ದೇಶದಿಂದ ಕೊಲೆಯಾದ ತನ್ನ ಗಂಡನ ಬಟ್ಟೆ ಮತ್ತು ಚಪ್ಪಲಿಗಳನ್ನು ಸುಟ್ಟು ಹಾಕಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರ ಮಾಹಿತಿಯ ಪ್ರಕಾರ ಕೊಲೆಯಾದ ಬಿರೇಂದ್ರ ಗುರ್ಜರ್ಗೆ ಕಾಂಚನಾ 5ನೇ ಪತ್ನಿಯಾಗಿದ್ದಳು. ಕುಡಿತದ ದಾಸನಾಗಿದ್ದ ಈತನ ಕಾಟ ತಾಳಲಾರದೆ ನಾಲ್ವರು ಪತ್ನಿಯರು ಮನೆ ಬಿಟ್ಟು ಹೋಗಿದ್ದರು. ಆದರೆ 5ನೇ ಪತ್ನಿ ಮಾತ್ರ ಕಿರುಕುಳವನ್ನು ಸಹಿಸದೇ ಹತ್ಯೆ ಮಾಡಿದ್ದಾಳೆ. ಇದೀಗ ಪೊಲೀಸರು ಕಾಂಚನಾಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ