ಗಂಡ - ಹೆಂಡತಿ ಸೇರಿ ಮಾಡಿದರು ಮಹಿಳೆಯ ಅತ್ಯಾಚಾರ: ನಂತರ ಕೊಲೆಮಾಡಿ ಕಳ್ಳತನ

Rape and Murder News: ನರಸಮ್ಮ ಸಂತ್ರಸ್ತೆಯನ್ನು ನೆಲಕ್ಕೆ ಜೋರಾಗಿ ತಳ್ಳಿ ಕೈಗಳನ್ನು ಬಂಧಿಸಿದ್ದಾಳೆ. ಗಂಡ ಸ್ವಾಮಿ ಈ ವೇಳೆ ಸಂತ್ರಸ್ತೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅದಾದ ನಂತರ ಕತ್ತು ಹಿಸುಕಿ, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಆಕೆಯನ್ನು ಸ್ವಾಮಿ ಮತ್ತು ನರಸಮ್ಮ ಕೊಂದು ಹಾಕಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹೈದರಾಬಾದ್​: ಹೈದಾರಾಬದ್​ನಲ್ಲಿ ಇತ್ತೀಚೆಗಷ್ಟೇ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದ್ದು. ಒಂದು ಹೆಣ್ಣಾಗಿ ಇನ್ನೊಂದು ಹೆಣ್ಣಿನ ಮೇಲೆ ಸ್ವಂತ ಗಂಡನೇ ಅತ್ಯಾಚಾರ ಮಾಡಲು ಹೆಂಡತಿ ಸಹಕರಿಸಿದ ಆರೋಪ ಕೇಳಿಬಂದಿದೆ. ಗಂಡ - ಹೆಂಡತಿ ಇಬ್ಬರೂ ಮಹಿಳೆಯೊಬ್ಬಳನ್ನು ಕೊಲೆ ಮಾಡಿ ಕಳ್ಳತನ ಮಾಡಲು ಮುಂದಾಗಿದ್ದರು. ಆದರೂ ಅದಕ್ಕೂ ಮುನ್ನ ಅತ್ಯಾಚಾರ ಮಾಡಲು ಗಂಡ ಮುಂದಾದಾಗ ಹೆಂಡತಿಯೇ ಮುಂದೆ ನಿಂತು ಸಹಾಯ ಮಾಡಿದ್ದಾಳೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಅತ್ಯಾಚಾರ ನಡೆಸಿದ ನಂತರ, ಮಹಿಳೆಯನ್ನು ಕೊಲೆ ಮಾಡಿ ಬಂಗಾರ ಮತ್ತು ಬೆಳ್ಳಿ ಒಡವೆಗಳನ್ನು ಆರೋಪಿಗಳು ದೋಚಿದ್ದಾರೆ.

  ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟ ಮಹಿಳೆ ದಿನಗೂಲಿ ನೌಕರಳಾಗಿದ್ದು, ಆಕೆಯ ಬಳಿ ಅಷ್ಟು ಹಣವೇನೂ ಇರಲಿಲ್ಲ. ಮೈಮೇಲಿದ್ದ ಒಡವೆಗಳು ಮಾತ್ರ ಆಕೆ ಬಳಿಯಿದ್ದ ಆಸ್ತಿ ಎಂದರೆ ತಪ್ಪಾಗಲಾರದು. ಆಕೆ ಘಟನೆಯ ಹಿಂದಿನ ದಿನ ಕೆಲಸಕ್ಕೆಂದು ಮಲ್ಲಂಪೇಟೆಯಿಂದ ಹೊರಟಿದ್ದಳು. ಆದರೆ ಮನೆಗೆ ಹಿಂತಿರುಗಿರಲಿಲ್ಲ. ಇದರಿಂದ ಭಯಗೊಂಡ ಕುಟುಂಬ ಕಾಣೆಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ವಿಚಾರಣೆ ಆರಂಭಿಸಿದ ಪೊಲೀಸರಿಗೆ, ಮಹಿಳೆಯ ರಕ್ತಸಿಕ್ತ ಮೃತದೇಹ ಪತ್ತೆಯಾಗಿದೆ. ಜತೆಗೆ ಅತ್ಯಾಚಾರವಾದ ಕುರುಹುಗಳೂ ಕಾಣಿಸಿವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

  ಪೊಲೀಸರ ಮಾಹಿತಿ ಪ್ರಕಾರ, ಮಲ್ಲಂಪೇಟೆ ಮನೆಯಿಂದ ಮಲ್ಲಂಪೇಟೆಯಲ್ಲೇ ಇರುವ ದಿನಗೂಲಿ ನೌಕರರ ಅಡ್ಡೆಗೆ ಬೆಳಗ್ಗೆ ಎದ್ದು ಕೂಲಿಗೆಂದು ಮಹಿಳೆ ಹೋಗಿದ್ದಾರೆ. ಕೆಲಸದ ಹುಡುಕಾಡದಲ್ಲಿದ್ದ ಮಹಿಳೆಯನ್ನು ಸ್ವಾಮಿ ಮತ್ತು ನರಸಮ್ಮ ದಂಪತಿ ಭೇಟಿ ಮಾಡಿದ್ದಾರೆ. ಭೇಟಿಯ ನಂತರ, ದೇವಸ್ಥಾನದ ಗೋಡೆಗಳಿಗೆ ಬಣ್ಣ ಬಳಿಯುವ ಕೆಲಸ ಕೊಡುತ್ತೀನಿ ಎಂದು ಆಕೆಯನ್ನು ಕರೆದೊಯ್ದಿದ್ದಾರೆ. ಮಲ್ಲಂಪೇಟೆಯಿಂದ ಜಿನ್ನಾರಮ್​ ಎಂಬ ಏರಿಯಾಗಿದೆ ಆಕೆಯನ್ನು ಕರೆದೊಯ್ದಿದ್ದಾರೆ.

  ಇದನ್ನೂ ಓದಿ: Crime News: ಅಂಗಡಿ ಮಾಲೀಕನ ಹೆಂಡತಿ ಜೊತೆ ಮಲಗಲು 10 ಸಾವಿರ ಆಫರ್​ ಕೊಟ್ಟ 80 ವರ್ಷದ ಮುದುಕ: ಆಮೇಲೇನಾಯ್ತು?

  ಅದಾದ ನಂತರ ಜಿನ್ನಾರಮ್​ನ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದೊಯ್ಯಲಾಗಿದೆ. ಅಲ್ಲಿ ನರಸಮ್ಮ ಸಂತ್ರಸ್ತೆಯನ್ನು ನೆಲಕ್ಕೆ ಜೋರಾಗಿ ತಳ್ಳಿ ಕೈಗಳನ್ನು ಬಂಧಿಸಿದ್ದಾಳೆ. ಗಂಡ ಸ್ವಾಮಿ ಈ ವೇಳೆ ಸಂತ್ರಸ್ತೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅದಾದ ನಂತರ ಕತ್ತು ಹಿಸುಕಿ, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಆಕೆಯನ್ನು ಸ್ವಾಮಿ ಮತ್ತು ನರಸಮ್ಮ ಕೊಂದು ಹಾಕಿದ್ದಾರೆ. ಬೆಳ್ಳಿ ಬಳೆ ಮತ್ತು ಚಿನ್ನದ ಕಿವಿಯೋಲೆಗಳನ್ನು ಕಿತ್ತುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

  ಇದನ್ನೂ ಓದಿ: ಲೈಂಗಿಕ ಕ್ರಿಯೆಯಲ್ಲಿ ಹುಡುಗಿಯ ಕಿವಿಗಾಯ್ತು ಪೆಟ್ಟು, ಮಾಡಿದ ವಿಚಿತ್ರ ಕೆಲಸ ಕೇಳಿದ್ರೆ ಏನಿದು ಕರ್ಮ ಅಂತೀರ

  ಕೊಳೆತ ಸ್ಥಿತಿಯಲ್ಲಿ ಸಂತ್ರಸ್ತೆಯ ಮೃತದೇಹ ಸಿಕ್ಕ ಬಳಿಕ, ಪೊಲೀಸರು ವಿಚಾರಣೆ ನಡೆಸಿದಾಗ, ಸ್ವಾಮಿ ಮತ್ತು ನರಸಮ್ಮ ಇಬ್ಬರೂ ಆಕೆಗೆ ಕೆಲಸ ಕೊಡುವುದಾಗಿ ಕೃತ್ಯ ನಡೆದ ದಿನ ಬೆಳಗ್ಗೆ ಕರೆದುಕೊಂಡು ಹೋಗಿರುವುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ನಂತರ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರವಾಗಿರುವುದು ಧೃಡಪಟ್ಟಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  ಚಪಲದಿಂದ ಪ್ರಾಣಬಿಟ್ಟ ಮುದುಕ: 

  ನವೀ ಮುಂಬೈನಲ್ಲಿ (Navi Mumbai Crime) ಅಂಗಡಿಯೊಂದನ್ನು ನಡೆಸಿಕೊಂಡಿದ್ದ 33 ವರ್ಷದ ವ್ಯಕ್ತಿಯ ಹೆಂಡತಿ ಜೊತೆ ಮಲಗಲು 80 ವರ್ಷದ ಮುದುಕನೊಬ್ಬ ರೂ. 10,000 ಆಫರ್​ ಮಾಡಿದ್ದನಂತೆ. ಅಂಗಡಿಯವನು ಮತ್ತು ಮುದುಕ ಇಬ್ಬರಿಗೂ ಹಲವು ವರ್ಷಗಳಿಂದ ಪರಿಚಯವಿತ್ತು. ದಿನನಿತ್ಯ ಮುದುಕ ಅಂಗಡಿಗೆ ಬರುತ್ತಿದ್ದ. ಮರ ಮುಪ್ಪಾದರೂ ಹುಣಸೆ ಮುಪ್ಪೇ ಎಂಬ ಗಾದೆಯಂತೆ, ಮುದುಕನಿಗೆ 80 ದಾಟಿದರೂ ಲೈಂಗಿಕ ಚಪಲ (Sexual Desires of 80 year old) ನೀಗಿರಲಿಲ್ಲ. ಮೊದಲ ಸಲ ರೂ 5000 ಕೊಡುತ್ತೀನಿ ಹೆಂಡತಿಯನ್ನು ಮಂಚಕ್ಕೆ ಹತ್ತಿಸು ಎಂದು ಮುದುಕ ಕೇಳಿದ್ದನಂತೆ. ಮೊದಲ ಬಾರಿ ಬೈದು ಕಳಿಸಿದ್ದನಂತೆ.

  ಆದರೆ ಎರಡನೇ ಬಾರಿ ಮತ್ತೆ ಬಂದು, ತನ್ನ ಗೊಡೌನ್​ಗೆ ನಿನ್ನ ಹೆಂಡತಿ ಕಳಿಸು ಹತ್ತು ಸಾವಿರ ಕೊಡ್ತೀನಿ ಎಂದು ಮುದುಕ ಹೇಳಿದಾಗ, ಅಂಗಡಿ ಮಾಲಿಕನಿಗೆ ಪಿತ್ತ ನೆತ್ತಿಗೇರಿದೆ. ಸಿಟ್ಟಿಗೆದ್ದ ಅಂಗಡಿ ಮಾಲಿಕ, ಶಮಾಕಾಂತ್​​ ತುಕಾರಾಮ್​ ನಾಯ್ಕ್​ (ಮುದುಕ) ನನ್ನು ತಳ್ಳಿದ್ದಾನೆ. ಕೆಳಗೆ ಬಿದ್ದ ತುಕಾರಾಮ್​ನಿಗೆ ಪೆಟ್ಟಾಗಿದೆ. ನಂತರ ಅಂಗಡಿಯ ಶಟರ್​ ಕೆಳಗಿಳಿಸಿ, ಒಳಗಡೆ ಎಳೆದೊಯ್ದಿದ್ದಾನೆ. ನಂತರ ಬಾತ್​ರೂಮ್​ನಲ್ಲಿ ಉಸಿರುಗಟ್ಟಿಸಿ ಸಾಯಿಸಿದ್ದಾನೆ. ಈ ಎಲ್ಲಾ ಘಟನೆ ಆಗಸ್ಟ್​ 29ರಂದು ನಡೆದಿದೆ.
  Published by:Sharath Sharma Kalagaru
  First published: