• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Shocking News: ನಾಪತ್ತೆಯಾಗಿದ್ದ ವ್ಯಕ್ತಿ 8 ತಿಂಗಳ ನಂತರ ಮನೆಯಲ್ಲೇ ಶವವಾಗಿ ಪತ್ತೆ, ಅಷ್ಟೂ ದಿನಗಳೂ ಕಬೋರ್ಡ್​​ನಲ್ಲೇ ಇತ್ತು ಮೃತದೇಹ!

Shocking News: ನಾಪತ್ತೆಯಾಗಿದ್ದ ವ್ಯಕ್ತಿ 8 ತಿಂಗಳ ನಂತರ ಮನೆಯಲ್ಲೇ ಶವವಾಗಿ ಪತ್ತೆ, ಅಷ್ಟೂ ದಿನಗಳೂ ಕಬೋರ್ಡ್​​ನಲ್ಲೇ ಇತ್ತು ಮೃತದೇಹ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

53 ವರ್ಷದ ರಿಚರ್ಡ್ ಮೆಡ್ಜ್​ ಎಂಬಾತನ ಶವ ಮನೆಯ ಸ್ಟೋರ್​ ರೂಮ್​ ಕಬೋರ್ಡ್​ನಲ್ಲಿ ಪತ್ತೆಯಾಗಿದೆ. ರಿಚರ್ಡ್​ ಮೇಡ್ಜ್ ಕಳೆದ ವರ್ಷ ಏಪ್ರಿಲ್ 27 ರಂದು ಕಾಣೆಯಾಗಿದ್ದಾರೆ ಎಂದು ಆಕೆಯ ಪತ್ನಿ ಜೆನ್ನಿಫರ್ ಮೇಡ್ಜ್ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿದ್ದರಾದರೂ ಆತನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇದೀಗ 8 ತಿಂಗಳ ನಂತರ ಮನೆಯಲ್ಲಿಯೇ ಶವ ಪತ್ತೆಯಾಗಿದೆ.

ಮುಂದೆ ಓದಿ ...
 • News18 Kannada
 • 2-MIN READ
 • Last Updated :
 • New Delhi, India
 • Share this:

ವಾಷಿಂಗ್ಟನ್​: ಮನೆಯಲ್ಲಿ ಇಲಿ, ಹೆಗ್ಗಣದಂತಹ ಸಣ್ಣ ಜೀವಿಗಳು ಸತ್ತರೆ ಒಂದೆರಡು ದಿನದಲ್ಲಿ ಕೆಟ್ಟ ವಾಸನೆ ಬರುತ್ತದೆ. ಅವುಗಳನ್ನು ತೆಗೆದು ಹೊರ ಹಾಕುವವರೆಗೂ ಸಮಾಧಾನವಿರುವುದಿಲ್ಲ, ಆದರೆ ಮಹಿಳೆಯೊಬ್ಬರು ನಾಪತ್ತೆಯಾಗಿದ್ದ ಪತಿಯ ಶವವನ್ನು (Dead Body) ಎಂಟು ತಿಂಗಳ ನಂತರ ಮನೆಯಲ್ಲೇ ಕಂಡು ಶಾಕ್ ಆಗಿದ್ದಾರೆ. ಶಾಕ್​ ಆಗಲು ಕಾರಣವೆಂದರೆ ಶವ ಪತ್ತೆಯಾಗಿರುವುದು ಮನೆಯ ಸ್ಟೇರ್​ಕೇಸ್ (Staircase)​ ಕೆಳಗಿನ ಕಬೋರ್ಡ್​ನಲ್ಲಿ. ಈ ಘಟನೆ ಅಮೆರಿಕಾದ ಇಲಿನಾಯ್ಸ್ ಪ್ರದೇಶದಲ್ಲಿ ನಡೆದಿದೆ.  53 ವರ್ಷದ ರಿಚರ್ಡ್ ಮೆಡ್ಜ್​ ಎಂಬಾತನ ಶವ ಮನೆಯ ಸ್ಟೋರ್​ ರೂಮ್​ ಕಬೋರ್ಡ್​ನಲ್ಲಿ ಪತ್ತೆಯಾಗಿದೆ. ರಿಚರ್ಡ್​ ಮೇಡ್ಜ್ ಕಳೆದ ವರ್ಷ ಏಪ್ರಿಲ್ 27 ರಂದು ಕಾಣೆಯಾಗಿದ್ದಾರೆ ಎಂದು ಆಕೆಯ ಪತ್ನಿ ಜೆನ್ನಿಫರ್ ಮೇಡ್ಜ್ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿದ್ದರಾದರೂ ಆತನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇದೀಗ 8 ತಿಂಗಳ ನಂತರ ಮನೆಯಲ್ಲಿಯೇ ಶವ ಪತ್ತೆಯಾಗಿದೆ.


ಕೆಲಸಕ್ಕೆ ಹೋಗಿ ಬಂದ ನಂತರ ನಾಪತ್ತೆ


ಕಳೆದ ವರ್ಷ ಏಪ್ರಿಲ್‌ನಲ್ಲಿ ರಿಚರ್ಡ್​ ಕಾಣೆಯಾದ್ದ. ಕೆಲಸದ ಸ್ಥಳದಿಂದ ಮುಂಚಿತವಾಗಿ ಮನೆಗೆ ಹೋಗುವುದಾಗಿ ಪತ್ನಿಗೆ ತಿಳಿಸಿದ್ದ, ನಂತರ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಪತ್ನಿ ಜೆನ್ನಿಫರ್ ಮನೆಗೆ ಬಂದಾಗ ಗಂಡನ ಕಾರು ಮನೆ ಮುಂದೆ ನಿಂತಿತ್ತು. ಆದರೆ ಪತಿ ಮಾತ್ರ ಕಂಡುಬಂದಿರಲಿಲ್ಲ. ಅಂತಿಮವಾಗಿ ಆಕೆ ಪೊಲೀಸರಿಗೆ ದೂರು ನೀಡಿದ್ದಳು. ಮನೆಗೆ ಬಂದ ಪೊಲೀಸರು ಮನೆಯ ಒಳಗೆಲ್ಲಾ ಹುಡುಕಿದರೂ ರಿಚರ್ಡ್​ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.


ಡಿಸೆಂಬರ್​ನಲ್ಲಿ ಶವ ಪತ್ತೆ


ಏಪ್ರಿಲ್​ನಲ್ಲಿ ನಾಪತ್ತೆಯಾಗಿದ್ದ ರಿಚರ್ಡ್​ ಶವ ಮನೆಯ ಕಬೋರ್ಡ್​ವೊಂದರಲ್ಲಿ ಕಳೆದ ಡಿಸೆಂಬರ್​ನಲ್ಲಿ ಪತ್ತೆಯಾಗಿತ್ತು. ಕ್ರಿಸ್​ಮಸ್​ ಅಲಂಕಾರವನ್ನು ಮಾಡಲು ಕೆಲವು ವಸ್ತುಗಳನ್ನು ತೆಗೆದುಕೊಳ್ಳಲು ಮನೆಯ ಸ್ಟೇರ್​ಕೇಸ್​ ಕೆಳಗಿನ ಕಬೋರ್ಡ್​ ಬಾಗಿಲು ​ತೆರೆದಾಗ ರಿಚರ್ಡ್ ಮೃತದೇಹವನ್ನು ಪತ್ತೆಯಾಗಿದೆ.


ಗಂಡನ ಶವ ಕಬೋರ್ಡಿನಲ್ಲಿ ಪತ್ತೆಯಾದ ಬೆನ್ನಲ್ಲೇ ಜನ್ನಿಫರ್ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಪರಿಶೀಲನೆ ನಡೆಸಿದ್ದು, ತನಿಖೆಯಲ್ಲಿ ರಿಚರ್ಡ್​ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.


ಇದನ್ನೂ ಓದಿ: Shocking News: 31 ದಿನಗಳ ಕಾಲ ಕೀಟ ತಿಂದು ಬದುಕಿದ ಪುಣ್ಯಾತ್ಮ, ಕಥೆ ಕೇಳಿದ್ರೆ ಮೈ ಜುಮ್ಮೆನ್ನುತ್ತೆ


ವಾಸನೆ ಬಂದರೂ ಶವ ಪತ್ತೆಯಾಗಿರಲಿಲ್ಲ


ಜನ್ನಿಫರ್​ ಪತಿ ನಾಪತ್ತೆಯಾದ ದೂರು ದಾಖಲಿಸಿದ ನಂತರ ತನಿಖಾಧಿಕಾರಗಳು ಮನೆಯಲ್ಲೆಲ್ಲಾ ಹುಡುಕಾಟ ನಡೆಸುತ್ತಿದ್ದರು. ಆ ವೇಳೆ ಮನೆಯಲ್ಲಿ ಒಳಚರಂಡಿ ತರಹದ ವಾಸನೆಯನ್ನು ಅವರು ಗಮನಿಸಿದ್ದರು. ನಂತರ ಮತ್ತೆ ಜನ್ನಿಫರ್​ ಪೋಲಿಸ್ ಕರೆ ಮಾಡಿ ಮನೆಯಲ್ಲಿ ಬರುತ್ತಿದ್ದ ಕೆಟ್ಟ ವಾಸನೆಯ ಬಗ್ಗೆ ವರದಿ ಮಾಡಿದರು. ಪೊಲೀಸರು ಮತ್ತೆ ಮನೆಯಲ್ಲಿ ಹುಡುಕಾಡಿದರಾದರೂ ರಿಚರ್ಡ್​ ಸಂಬಂಧಿಸಿದ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ.
ಪ್ಲಂಬರ್​ ಕರೆಸಿ ದುರಸ್ಥಿ


ಮನೆಯಲ್ಲಿ ಬರುತ್ತಿದ್ದ ಕೆಟ್ಟ ವಾಸನೆ ಒಳಚರಂಡಿ ವಾಸನೆಯಂತಿದ್ದರಿಂದ ರಿಚರ್ಡ್​ ಕುಟುಂಬದವರು ಪ್ಲಂಬರ್​ ಕರೆಸಿ ಪರೀಕ್ಷಿಸಿದ್ದರು. ಆತನ ನೆಲಮಾಳಿಗೆಯಲ್ಲಿ ಒಳಚರಂಡಿ ಪೈಪ್‌ ಪರೀಕ್ಷಿಸಿ ಕ್ಯಾಪ್ ಹಾಕಿದ್ದರು. ಇದೀಗ ಡಿಸೆಂಬರ್​ನಲ್ಲಿ ಪತ್ತೆಯಾಗಿರುವ ದೇಹವು ಕೊಳೆಯುವಿಕೆಯನ್ನು ಮೀರಿ ಹೋಗಿದ್ದು, ಅದು ರಕ್ಷಿತ ಶವದ ಸ್ಥಿತಿ ತಲುಪಿತ್ತು ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.


8 ತಿಂಗಳವರೆಗೆ ಶವ ಇರುವುದು ಅರಿವಿಗೆ ಬಾರದಿರಲು ಕಾರಣ?


ಮೃತದೇಶ ಕೊಳೆತ ಸ್ಥಿತಿಯನ್ನು ಮೀರಿದ್ದರಿಂದ ವಾಸನೆ ಕೆಲವು ದಿನಗಳ ನಂತರ ವಾಸನೆ ನಿಂತಿದೆ. ಈ ಸ್ಥಿತಿಯಲ್ಲಿ ತಲುಪಿದ ದೇಹವು ಹೆಚ್ಚು ವಾಸನೆಯನ್ನು ಹೊಂದಿರುವುದಿಲ್ಲ. ಹಾಗಾಗಿ ಶವ ಮನೆಯಲ್ಲಿ ಇರುವ ಬಗ್ಗೆ ಜನ್ನಿಫರ್​ ಅರಿವಿಗೆ ಬಂದಿಲ್ಲ ಎಂದು ತನಿಖಾಧಿಕಾರಿ ರೋಜರ್ಸ್ ಮಾಹಿತಿ ನೀಡಿದ್ದಾರೆ. ಅಲ್ಲದೆ ಶವಪರೀಕ್ಷೆಯಲ್ಲಿ ರಿಚರ್ಡ್​ ಸಾವು ಆತ್ಮಹತ್ಯೆ ಎಂದು ತಿಳಿದುಬಂದಿದೆ, ಇದರಲ್ಲಿ ಯಾವುದೇ ದುಷ್ಕೃತ್ಯದ ಶಂಕೆ ಇಲ್ಲ ಎಂದು ತಿಳಿಸಿದ್ದಾರೆ.

Published by:Rajesha M B
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು