Murder: ಗಂಡನನ್ನೇ ತುಂಡು ತುಂಡಾಗಿ ಕತ್ತರಿಸಿದ ಪತ್ನಿ! ಪೀಸ್ ಎಸೆದು ಬಂದಿದ್ದು ಆಕೆಯ ಪ್ರಿಯಕರ!

ಕೊಲ್ಲುವುದು ಅಂದರೆ ಅಷ್ಟೊಂದು ಸುಲಭನಾ? ಈ ಮಹಿಳೆ ಗಂಡನನ್ನು ಬರೀ ಕೊಲ್ಲಲಿಲ್ಲ. ಬದಲಾಗಿ ಆತನನ್ನು ತುಂಡು ತುಂಡಾಗಿ ಕತ್ತರಿಸಿದಳು! ತಾನೇ ಆತನ ರುಂಡ-ಮುಂಡವನ್ನು ಬಚ್ಚಿಟ್ಟಳು. ಆಕೆಯ ಈ ಪಾಪ ಕೃತ್ಯಕ್ಕೆ ಸಹಾಯ ಮಾಡಿದ್ದು ಆಕೆಯ ಪ್ರಿಯಕರ!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಮಧ್ಯಪ್ರದೇಶ: ಗಂಡ (Husband), ಹೆಂಡತಿ (Wife) ಸರಿಯಾಗಿದ್ದರೆ ಮಾತ್ರ ಸಂಸಾರ ಚೆನ್ನ. ಇದರಲ್ಲಿ ಒಬ್ಬರು ದಾರಿ ತಪ್ಪಿದರೂ ಸಂಸಾರದ ಬಂಡಿ ಎತ್ತಲೋ ಹೋಗುತ್ತದೆ. ಇಲ್ಲಿ ಆಗಿದ್ದೂ ಅದೇ. ಕಷ್ಟ ಸುಖದಲ್ಲಿ ಜೊತೆ ಇರುತ್ತೇನೆ ಎಂದಿದ್ದ ಹೆಂಡತಿ, ಸುಖದಲ್ಲಿ ಮಾತ್ರ ಇದ್ದಳು. ಆತನಿಂದ ಸುಖವೆಲ್ಲ ಪಡೆದಾದ ಮೇಲೆ ಆತನಿಗೆ ಸಂಕಷ್ಟ ತಂದಿಟ್ಟಳು. ಆದ್ಯಾವ ದ್ವೇಷವೋ ಏನೋ, ಚಾಕುವಿನಿಂದ (Knife) ಇರಿದು ಕೊಲೆ ಮಾಡಿದ್ದಾಳೆ. ಬರೀ ಕೊಲೆ ಮಾಡಿದ್ದೊಂದೇ ಅಲ್ಲ. ಆತನ ಮೃತ ದೇಹವನ್ನು (Dead Body) ಪೀಸ್ ಪೀಸ್ ಮಾಡಿದ್ದಾಳೆ. ಸಾಲದ್ದಕ್ಕೆ ಧೈರ್ಯದಿಂದ ಆತನ ದೇಹವನ್ನು ಮನೆಯಲ್ಲೇ ಬಚ್ಟಿಟ್ಟಿದ್ದಾಳೆ. ಇವೆಲ್ಲ ಕೆಲಸಕ್ಕೆ ಆಕೆಗೆ ಸಾಥ್ ನೀಡಿದ್ದು ಆಕೆಯ ಪ್ರಿಯಕರ (Lover). ಹಾಗಿದ್ರೆ ಈ ಭಯಾನಕ ಘಟನೆ ನಡೆದಿದ್ದು ಎಲ್ಲಿ, ಇಲ್ಲಿ ಹೆಂಡತಿ ಗಂಡನನ್ನು ಆ ಪರಿಯಾಗಿ ಕೊಂದಿದ್ದು ಏಕೆ? ಈ ಕೊಲೆಯಲ್ಲಿ ಆಕೆಯ ಪ್ರಿಯಕರನ ಪಾತ್ರವೇನು ಅಂತ ತಿಳಿಯಲು ಮುಂದೆ ಓದಿ…

ಮಧ್ಯ ಪ್ರದೇಶದಲ್ಲಿ ನಡೆಯಿತು ಭಯಾನಕ ಘಟನೆ

ಇಂಥದ್ದೊಂದು ಭಯಾನಕ ಘಟನೆ ನಡೆದಿದ್ದು ಮಧ್ಯಪ್ರದೇಶದ ಇಂದೋರ್‌ನಲ್ಲಿ. ಇಲ್ಲಿನ ಕಂಕಾಡ್ ಸಮೀಪದ ಉಮ್ರಿಖೇಡ ಎಂಬ ಗ್ರಾಮದಲ್ಲಿ 40 ವರ್ಷದ ಸುನೀತಾ ಎಂಬಾಕೆ ತನ್ನ ಗಂಡನನ್ನು ಬರ್ಬರವಾಗಿ ಕೊಂದಿದ್ದಾಳೆ ಎನ್ನಲಾಗಿದೆ.  ಈಕೆಗೆ ಬಬ್ಲೂ ಜಾನೋಡ್ ಎಂಬಾತನ ಜೊತೆ ಮದುವೆಯಾಗಿದ್ದು, ಮಕ್ಕಳೂ ಇದ್ದರು ಎನ್ನಲಾಗಿದೆ.

ತನಗಿಂತ ಚಿಕ್ಕವನೊಂದಿಗೆ ಈಕೆಗೆ ಅಕ್ರಮ ಸಂಬಂಧ

ಗಂಡ, ಮನೆ, ಮಕ್ಕಳು ಅಂತ ಇದ್ದ ಸುನೀತಾಗೆ ತನಗಿಂತ ಚಿಕ್ಕವನೊಂದಿಗೆ ಅನೈತಿಕ ಸಂಬಂಧ ಬೆಳೆದಿದೆ. ರಿಜ್ವಾನ್ ಎಂಬಾತ ಮಾಂಸದ ಅಂಗಡಿ ನಡೆಸುತ್ತಾ ಇದ್ದು, ಈತನೊಂದಿಗೆ ಸುನೀತಾ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದಳು ಎನ್ನಲಾಗಿದೆ.

ಇದನ್ನೂ ಓದಿ: Mother Murder: ತಾಯಿಯ ಕಪಾಳಕ್ಕೆ ಹೊಡೆದು ಕೊಂದ ಪಾಪಿ ಪುತ್ರ! ಕಾರಣ ಕೇಳಿದ್ರೆ ನೀವು ಶಾಕ್ ಆಗ್ತೀರಿ 

ಸುನೀತಾ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ

ಸುನೀತಾ ಹಾಗೂ ರಿಜ್ವಾನ್ ಅಕ್ರಮ ಸಂಬಂಧದ ಬಗ್ಗೆ ಆಕೆಯ ಪತಿ ಬಬ್ಲೂಗೆ ಗೊತ್ತಾಗಿದೆ. ಈ ಸಂಬಂಧವನ್ನು ಬಿಡು ಅಂತ ಬಬ್ಲೂ ಸುನೀತಾಗೆ ವಾರ್ನಿಂಗ್ ಕೂಡ ಮಾಡಿದ್ದ. ಆದರೂ ಸುನೀತಾ ತನ್ನ ಚಾಳಿ ಬಿಟ್ಟಿರಲಿಲ್ಲ.

ಪ್ರಿಯಕರನ ಜೊತೆ ಸೇರಿ ಗಂಡನ ಹತ್ಯೆಗೆ ಸ್ಕೆಚ್

ತನ್ನ ಹಾಗೂ ರಿಜ್ವಾನ್ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಹತ್ಯೆ ಮಾಡಲು ಈಕೆ ತನ್ನ ಗೆಳೆಯನ ಜೊತೆ ಸೇರಿ ಪ್ಲಾನ್ ಮಾಡಿದ್ದಾಳೆ. ರಾತ್ರಿ ಊಟದಲ್ಲಿ ವಿಷ ಬೆರೆಸಿ ಬಬ್ಲೂಗೆ ನೀಡಿದ್ದಾಳೆ. ವಿಷದ ಊಟ ತಿಂದ ಪತಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಈಗ ಈ ಪಾಪಿ ಪ್ರಿಯಕರ ರಿಜ್ವಾನ್ ಹಾಗೂ ಆತನ ಗೆಳೆಯ ಭಯ್ಯು ಎಂಬಾತನ್ನು ಮನೆಗೆ ಕರೆಸಿದ್ದಾಳೆ.

ಗಂಡನ ದೇಹವನ್ನೇ ಕತ್ತರಿಸಿದ ಪಾಪಿ

ಮೂವರೂ ಸೇರಿ ಬಬ್ಲೂನನ್ನು ಕತ್ತು ಹಿಸುಕಿ ಸಾಯಿಸಿದ್ದಾರೆ. ಬಳಿಕ ರಿಜ್ವಾನ್ ತಂದಿದ್ದ ಮಾಂಸದಂಗಡಿಯ ಚಾಕುವಿನಿಂದ ಸುನೀತಾ ಗಂಡನ ದೇಹವನ್ನು ಕತ್ತರಿಸಿದ್ದಾಳೆ. ಮೂವರೂ ಸೇರಿ ಆತನ ರುಂಡ, ಮುಂಡ, ಕೈಕಾಲುಗಳನ್ನು ಬೇರೆ ಬೇರೆ ಮಾಡಿದ್ದಾರೆ.

ರುಂಡ ಮುಂಡವನ್ನು ಮನೆಯಲ್ಲಿ ಬಚ್ಚಿಟ್ಟ ರಾಕ್ಷಸಿ

ಬಬ್ಲೂ ದೇಹ ಕತ್ತರಿಸಿದ ಬಳಿಕ ಆತನ ಕಾಲು ಮತ್ತು ಕೈಗಳನ್ನು ರಿಜ್ವಾನ್ ಹಾಗೂ ಆತನ ಸ್ನೇಹಿತ ಇಬ್ಬರೂ ಸೇರಿ ಹತ್ತಿರದ ಅರಣ್ಯ ಪ್ರದೇಶದಲ್ಲಿ ಎಸೆದಿದ್ದಾರೆ. ಇನ್ನು ಆತನ ರುಂಡ ಹಾಗೂ ಮುಂಡವನ್ನು ಖುದ್ದು ಸುನೀತಾಳೆ ಮನೆಯ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಹೂತಿ್ದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ: Murder: ಮಲಗಿದ್ದಲ್ಲೇ ಕೊಲೆಯಾದ ಕಾಂಗ್ರೆಸ್ ಮುಖಂಡ, ತೋಟದ ಮನೆಗೆ ಬಂದಿದ್ದ ಹಂತಕರು ಯಾರು?

ಮಗನಿಂದ ಬೆಳಕಿಗೆ ಬಂದ ಪ್ರಕರಣ

ಈ ಎಲ್ಲಾ ಘಟನೆ ಬಗ್ಗೆ ಆಕೆಯ ಪುತ್ರ ಪ್ರಶಾಂತ್‌ಗೆ ಗೊತ್ತಾಗಿದೆ. ಮಾದಕ ವ್ಯಸನಿಯಾಗಿದ್ದ ಆತ, ಮರುದಿನ ಅಮಲಿನಲ್ಲಿ ನೆರೆ ಹೊರೆಯವರಿಗೆ ಈ ವಿಷಯ ಹೇಳಿದ್ದಾನೆ. ಬಳಿಕ ಪೊಲೀಸರು ಬಂದು ಪರೀಶಿಲನೆ ನಡೆಸಿದಾಗ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಪಾಪಿಗಳನ್ನು ಬಂಧಿಸಿದ್ದಾರೆ.
Published by:Annappa Achari
First published: