Wife caught husband with another woman: ಆತ ಮನೆಯಲ್ಲಿ ಯಾರಿಗೂ ಗೊತ್ತಾಗದಂತೆ ಎಚ್ಚರವಹಿಸಿ ಬೇರೆ ಊರಿನಲ್ಲಿ ತುಂಬಾ ತುರ್ತಾದ ಮೀಟಿಂಗ್ ಇದೆ ಎಂದು ಸುಳ್ಳು ಹೇಳಿ ಹೊರಟಿದ್ದ. ಆದರೆ ಗೂಗಲ್ ಬಿಡಬೇಕಲ್ಲ, ಎಲ್ಲಿ ಹೋದರೂ ಜೊತೆ ಜೊತೆಗೇ ಬರುತ್ತಿರುತ್ತದೆ. ತಂದೆಯ ಗೂಗಲ್ ಲೊಕೇಷನ್ ನೋಡಿ ಮಗಳು, ಅಮ್ಮನ ಸಮೇತ ಹೋಟೆಲ್ಗೆ ಭೇಟಿ ನೀಡಿ ಬೇರೆ ಹುಡುಗಿಯೊಂದಿಗಿದ್ದ (Extra Marital Affair) ಅಪ್ಪನನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾಳೆ. ಈ ಘಟನೆ ಗುಜರಾತಿನ ವಾಲ್ಸಾಡ್ ಹೋಟೆಲ್ನಲ್ಲಿ ಬುಧವಾರ ನಡೆದಿದೆ.
ವಾಲ್ಸಾಡ್ ಹೋಟೆಲ್ ಧರಂಪುರದಲ್ಲಿದೆ. ಉದ್ಯಮಿ ತನ್ನ ಪ್ರೇಯಸಿಯ ಜೊತೆ ಹೋಟೆಲ್ ಬುಕ್ ಮಾಡಿ ಮನೆಯಲ್ಲಿ ಮೀಟಿಂಗ್ ಎಂದು ಕತೆ ಹೇಳಿ ಬಂದಿದ್ದಾನೆ. ಆದರೆ ಅದೃಷ್ಟ ಸರಿಯಿಲ್ಲದ ಕಾರಣ, ಅನ್ಯ ಯುವತಿಯ ಜೊತೆ ಲೈಂಗಿಕ ಪ್ರಕ್ರಿಯೆಯಲ್ಲಿ ತೊಡಗಿರುವಾಗಲೇ, ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾನೆ. ಇದಕ್ಕೆಲ್ಲಾ ನೇರ ಕಾರಣ ಆತನ ಮೊಬೈಲ್ ಫೋನ್. ಸಾಮಾನ್ಯ ಮಕ್ಕಳು ತಂದೆಯ ಫೊನ್ ಬಳಕೆ ಮಾಡುವುದು, ತಂದೆ ಮಕ್ಕಳ ಫೋನ್ ಬಳಕೆ ಮಾಡುವುದು ಸಹಜ. ಅದರಂತೆ ತನ್ನ ಮಗಳ ಫೋನ್ ಒಮ್ಮೆ ಬಳಕೆ ಮಾಡಿದ್ದೇ ಈ ದುರಂತಕ್ಕೆ ಕಾರಣ.
ತನ್ನ ಮಗಳ ಫೋನ್ ಬಳಸಿದ್ದಾಗ ಗೂಗಲ್ ಲಾಗಿನ್ (Google Location) ಮಾಡಿದ್ದಾರೆ, ನಂತರ ಎರಡೂ ಫೋನ್ಗಳ ಗೂಗಲ್ ಅಕೌಂಟ್ ಸಿಂಕ್ ಆಗಿದೆ. ಅಪ್ಪ ಮೀಟಿಂಗ್ ಎಂದು ಊರು ಬಿಟ್ಟು ಹೊರಟ ನಂತರ ವಾಲ್ಸಾಡ್ ಹೋಟೆಲ್ನಲ್ಲಿ ಚೆಕ್ಡ್ ಇನ್ ಆಗಿದೆ ಎಂದು ನೋಟಿಫಿಕೇಷನ್ ಬರುತ್ತಿತ್ತು. ಒಂದೆರಡು ಬಾರಿ ಸುಮ್ಮನಿದ್ದ ಮಗಳು, ನಂತರ ಅಮ್ಮನಿಗೆ ಹೇಳಿದ್ದಾಳೆ. ಅಮ್ಮನಿಗೂ ಇತ್ತೀಚೆಗೆ ಗಂಡನ ವರ್ತನೆ ಮೇಲೆ ಸಂಶಯವಿತ್ತು. ಈ ಬಾರಿ ಯಾವಾಗ ವಾಲ್ಸಾಡ್ ಹೋಟೆಲ್ನಲ್ಲಿ ಚೆಕ್ ಇನ್ ಎಂಬ ಸಂದೇಶ ಬಂತೋ, ಅಮ್ಮ ಮಗಳು ಹೋಟೆಲ್ಗೆ ಹೊರಟರು.
ಇದನ್ನೂ ಓದಿ: ಲಿವಿಂಗ್ ರಿಲೇಷನ್ಶಿಪ್ನಲ್ಲಿ ಅಕ್ರಮ ಸಂಬಂಧದ ಘಾಟು: ಪ್ರೇಯಸಿಯ ಖಾಸಗಿ ಭಾಗಕ್ಕೆ ಖಾರದ ಪುಡಿ ಹಚ್ಚಿ ಕೊಲೆ
ನಂತರ ಸೀದಾ ರೂಮಿಗೆ ಹೋಗಿ ಜಗಳ ಮಾಡಿ ಬಾಗಿಲು ತೆರೆಸಿದಾಗ ಗಂಡ ಇನ್ನೊಂದು ಹುಡುಗಿಯ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದು ಕಂಡಿದೆ. ಇದರಿಂದ ಸಿಟ್ಟಾದ ಅಮ್ಮ ಮಗಳು ಇಬ್ಬರೂ ತಂದೆಗೆ ಚೆನ್ನಾಗಿ ಬಾರಿಸಿದ್ದಾರೆ. ಯುವತಿಯ ಮೇಲೂ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಯುವತಿಗೆ, ಬಟ್ಟೆಯನ್ನೂ ಕೊಡದೇ ರೂಮಿನಿಂದ ಆಚೆ ತಳ್ಳಿದ್ದಾರೆ.
ಇದನ್ನೂ ಓದಿ: Crime News: ಅಂಗಡಿ ಮಾಲೀಕನ ಹೆಂಡತಿ ಜೊತೆ ಮಲಗಲು 10 ಸಾವಿರ ಆಫರ್ ಕೊಟ್ಟ 80 ವರ್ಷದ ಮುದುಕ: ಆಮೇಲೇನಾಯ್ತು?
ಇದೆಲ್ಲಾ ಆದ ನಂತರ, ಸ್ಥಳೀಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಹೋಟೆಲ್ ಸಿಬ್ಬಂದಿ ನೀಡಿರುವ ದೂರಿನ ಪ್ರಕಾರ ವಿಚಾರಣೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಮೀಟಿಂಗ್ ಎಂದು ಸುಳ್ಳು ಹೇಳಿ ಹೊರ ಹೋಗಿದ್ದ ಗಂಡನ ಪಚೀತಿ ಮಾತ್ರ ಹೇಳ ತೀರದ್ದು.
ತಂತ್ರಜ್ಞಾನ ಮುಂದುವರೆದಂತೆ, ಹೇಗೆಲ್ಲಾ ಹೇಳುವ ಸುಳ್ಳುಗಳು ನಮಗೇ ಗೊತ್ತಿಲ್ಲದೇ ಶತ್ರುವಾಗುತ್ತದೆ ಎಂಬುದಕ್ಕೆ ಈ ಘಟನೆ ಜ್ವಲಂತ ಸಾಕ್ಷಿ. ಜತೆಗೆ ಇವತ್ತಿನ ಡಿಜಿಟಲ್ ಯುಗದಲ್ಲಿ ಯಾವುದನ್ನೂ ಕದ್ದು ಮುಚ್ಚಿ ಮಾಡಲು ಸಾಧ್ಯವಿಲ್ಲ ಎಂಬುದೂ ಈ ಪ್ರಕರಣದಿಂದ ಸಾಭೀತಾಗುತ್ತದೆ. ಇದೇ ರೀತಿಯ ಹಲವು ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಈ ಹಿಂದೆ ಅಮೆರಿಕಾದಲ್ಲಿ ಗೂಗಲ್ ಮ್ಯಾಪ್ನಲ್ಲಿ ಅಡ್ರೆಸ್ ನೋಡಿಕೊಂಡು ಬರುತ್ತಿದ್ದಾಗ, ಅದರಲ್ಲಿ ಹೆಂಡತಿಯ ಹೋಲುವ ವ್ಯಕ್ತಿ ಕಾಣಿಸಿಕೊಂಡಿದ್ದಕ್ಕೆ ಹುಡುಕಿ ಹೋದಾಗ ಗಂಡ ಶಾಕ್ ಆಗಿದ್ದ. ಗೂಗಲ್ ಮ್ಯಾಪ್ನಲ್ಲಿ ಹೆಂಡತಿಯಂತೆ ಕಾಣಿಸುತ್ತಿದ್ದ ಮಹಿಳೆ ಹೆಂಡತಿಯೇ ಆಗಿದ್ದಳು. ಆಕೆ ಇನ್ನೊಬ್ಬನೊಡನೆ ಸಂಬಂಧ ಹೊಂದಿದ್ದಳು. ಈತ ಹೋಗಿ ನೋಡಿದಾಗ ಪಾರ್ಕ್ ಒಂದರಲ್ಲಿ ಹೆಂಡತಿ ಪರ ಪುರುಷನಿಗೆ ಮುತ್ತು ನೀಡುತ್ತಿದ್ದಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ