ಮೊಬೈಲ್​ ಪಾಸ್​ವರ್ಡ್​ ನೀಡಿಲ್ಲವೆಂದು ಗಂಡನನ್ನೇ ಬೆಂಕಿ ಹಚ್ಚಿಕೊಂದ ಹೆಂಡ್ತಿ!

ಇದರಿಂದ ಕೋಪಗೊಂಡ ಪತ್ನಿ ಇಲ್ಹಾಮ್ ಅಲ್ಲೇ ಇದ್ದ ಪೆಟ್ರೋಲ್​ ಅನ್ನು ಪತಿಯ ಮೈ ಮೇಲೆ ಸುರಿದು, ಬೆಂಕಿ ಹಚ್ಚಿದ್ದಾಳೆ. ಒಮ್ಮೆಲೆ ಮೈ ಮೇಲೆ ಬೆಂಕಿ ಹೊತ್ತುಕೊಂಡಿದ್ದರಿಂದ ಪತಿಯು ಕಿರುಚಾಡಿದ್ದಾನೆ.

zahir | news18
Updated:January 20, 2019, 6:17 PM IST
ಮೊಬೈಲ್​ ಪಾಸ್​ವರ್ಡ್​ ನೀಡಿಲ್ಲವೆಂದು ಗಂಡನನ್ನೇ ಬೆಂಕಿ ಹಚ್ಚಿಕೊಂದ ಹೆಂಡ್ತಿ!
ಸಾಂದರ್ಭಿಕ ಚಿತ್ರ
  • News18
  • Last Updated: January 20, 2019, 6:17 PM IST
  • Share this:
ಮೊಬೈಲ್​ ಫೋನ್ ಪಾಸ್​ವರ್ಡ್​ ನೀಡಿಲ್ಲವೆಂದು ಪತಿಯನ್ನು ಬೆಂಕಿ ಹಚ್ಚಿ ಕೊಲೆಗೈದ ದಾರುಣ ಘಟನೆ ಇಂಡೋನೇಷ್ಯಾದ ಈಸ್ಟ್​ ಲೊಂಬೊಕ್​ ರಿಜೆನ್ಸಿಯಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ದೀದಿ ಪುರ್ನಾಮ(26) ಎಂದು ಗುರುತಿಸಲಾಗಿದೆ. ಇಂತಹ ಕ್ರೂರ ಕೃತ್ಯವನ್ನು ಎಸೆಗಿದ ಆರೋಪಿ ಇಲ್ಹಾಮ್ ಕಹ್ಯಾನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮನೆಯ ಹಂಚುಗಳನ್ನು ಸರಿ ಮಾಡುವ ವೇಳೆ ಪುನಾರ್ಮರೊಂದಿಗೆ ಪತ್ನಿ ಇಲ್ಹಾಮ್​ ಪಾಸ್​ವರ್ಡ್​ ಕೇಳಿದ್ದಾಳೆ. ಆದರೆ ತನ್ನ ಪಾಸ್​ವರ್ಡ್​ ಅನ್ನು ನೀಡಲು ಪತಿ ನಿರಾಕರಿಸಿದ್ದಾನೆ. ಇದರಿಂದ ಇಬ್ಬರ ನಡುವೆ ಜಗಳ ಉಂಟಾಗಿದ್ದು, ಈ ವೇಳೆ ಪತ್ನಿಯ ಮೇಲೆ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ: ಶಿಯೋಮಿ ಸ್ಮಾರ್ಟ್​ ಟಿವಿ ಪ್ರೊ ಮಾರಾಟ ಆರಂಭ: 80 ವರ್ಷಗಳ ಕಾಲ ಉಚಿತ ಮನರಂಜನೆ

ಇದರಿಂದ ಕೋಪಗೊಂಡ ಪತ್ನಿ ಇಲ್ಹಾಮ್ ಅಲ್ಲೇ ಇದ್ದ ಪೆಟ್ರೋಲ್​ ಅನ್ನು ಪತಿಯ ಮೈ ಮೇಲೆ ಸುರಿದು, ಬೆಂಕಿ ಹಚ್ಚಿದ್ದಾಳೆ. ಒಮ್ಮೆಲೆ ಮೈ ಮೇಲೆ ಬೆಂಕಿ ಹೊತ್ತುಕೊಂಡಿದ್ದರಿಂದ ಪತಿಯು ಕಿರುಚಾಡಿದ್ದು, ಇದರಿಂದ ನೆರೆಹೊರೆಯವರು ಸಹಾಯಕ್ಕೆ ಧಾವಿಸಿ, ಆಸ್ಪತ್ರೆಗೆ ದಾಖಲಿಸಿದರು.

ಇದನ್ನೂ ಓದಿ: VIDEO: ಇದು ಸುರೇಶ್​ ರೈನಾ ಅವರ ದೇಸಿ ಸ್ಟೈಲ್ ಫಿಟ್ನೆಸ್​ ಮಂತ್ರ

ಆದರೆ ಅಷ್ಟೊತ್ತಿಗಾಗಲೇ ದೀದಿ ಪುರ್ನಾಮ ಅವರ ಅರ್ಧ ದೇಹ ಸಂಪೂರ್ಣ ಸುಟ್ಟು ಹೋಗಿದೆ. ಎರಡು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ದೀದಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದು, ಆರೋಪಿ ಮಹಿಳೆ ಇಲ್ಹಾಮ್​ರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: PHOTOS: ನಿಂತ್ರು ಕುಂತ್ರು ಸ್ಟಾರ್​ ಕಿಡ್ ತೈಮೂರ್ ಅಲಿ ಖಾನ್​ ಸಖತ್ ಫೇಮಸ್
First published:January 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ