Wife Beats Husband: ಗಂಡನಿಗೆ ಹಿಗ್ಗಾಮುಗ್ಗಾ ಥಳಿಸುವ ಹೆಂಡತಿ! ನ್ಯಾಯಾಲಯದ ಮೊರೆಹೋದ ಪತಿ, ವಿಡಿಯೋ ನೋಡಿ
ಸಂತ್ರಸ್ತ ಪತಿ ಪತ್ನಿ ತನಗೆ ಹೊಡೆಯುವುದನ್ನು ಬಹಿರಂಗಪಡಿಸಲು ಮನೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಇದೀಗ ಈ ಸಿಸಿಟಿವಿ ದೃಶ್ಯಾವಳಿಗಳೊಂದಿಗೆ ಪತಿಯೇ ಮುಂದೆ ಬಂದು ಪತ್ನಿಯ ದುಷ್ಕೃತ್ಯವನ್ನೆಲ್ಲ ಪೊಲೀಸರಿಗೆ ತಿಳಿಸಿದ್ದಾನೆ.
ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು (Domestic Violence Against Women ) ಆಗಾಗ ವರದಿಯಾಗುತ್ತಲೇ ಇರುತ್ತವೆ. ಆದರೆ ರಾಜಸ್ಥಾನದ (Rajasthan) ಅಲ್ವಾರ್ ಜಿಲ್ಲೆಯಲ್ಲಿ ನಡೆದ ಪ್ರಕರಣವೊಂದು ಇದಕ್ಕೆ ತದ್ವಿರುದ್ಧವಾಗಿದೆ. ಪತ್ನಿಯೇ ಪತಿಗೆ ಥಳಿಸಿದ ಪ್ರಕರಣವೊಂದು (Wife Beats Husband) ಬೆಳಕಿಗೆ ಬಂದಿದೆ. ವೈರಲ್ ಆಗಿರುವ ವಿಡಿಯೋ (Viral Video) ಮೂಲಕ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಇಲ್ಲಿ ಶಾಲೆಯ ಪ್ರಾಂಶುಪಾಲರೊಬ್ಬರು ತಮ್ಮ ಸುರಕ್ಷತೆಗಾಗಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಇದೇ ವೇಳೆ ನ್ಯಾಯಾಲಯದ ಆದೇಶದ ಮೇರೆಗೆ ಅವರಿಗೆ ಭದ್ರತೆಯನ್ನೂ ಒದಗಿಸಲಾಗಿದೆ. ಅಂದಹಾಗೆ ಈ ಪ್ರಾಂಶುಪಾಲರನ್ನು ರಕ್ಷಿಸಲು ಭದ್ರತೆಯನ್ನು ನೀಡಲಾಗಿದ್ದು ಯಾವುದೇ ಗೂಂಡಾ ಮತ್ತು ವಂಚಕರಿಂದ ಅಲ್ಲ, ಸ್ವತಃ ಅವರ ಹೆಂಡತಿಯಿಂದ!
ಸಿಸಿಟಿವಿಲಿ ರೆಕಾರ್ಡ್! ಸಂತ್ರಸ್ತ ಪತಿ ಪತ್ನಿ ತನಗೆ ಹೊಡೆಯುವುದನ್ನು ಬಹಿರಂಗಪಡಿಸಲು ಮನೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಇದೀಗ ಈ ಸಿಸಿಟಿವಿ ದೃಶ್ಯಾವಳಿಗಳೊಂದಿಗೆ ಪತಿಯೇ ಮುಂದೆ ಬಂದು ಪತ್ನಿಯ ದುಷ್ಕೃತ್ಯವನ್ನೆಲ್ಲ ಪೊಲೀಸರಿಗೆ ತಿಳಿಸಿದ್ದಾನೆ. ಹೆಂಡತಿ ಗಂಡನಿಗೆ ದಿನವೂ ಕ್ರಿಕೆಟ್ ಬ್ಯಾಟ್ನಿಂದಲೂ ಹೊಡೆಯುತ್ತಿದ್ದಳು ಎಂದು ವರದಿಯಾಗಿದೆ. ಪ್ರಕರಣ ದಾಖಲಿಸಿಕೊಂಡ ನ್ಯಾಯಾಲಯ ಪತಿಗೆ ಭದ್ರತೆ ನೀಡುವಂತೆ ಆದೇಶಿಸಿದೆ.
In Bhiwadi, Alwar, a school principal, fed up with the beating of his wife, filed a complaint, handed over CCTV footage as evidence. Presently the matter is being investigated by police.
ಏನಿದು ಪ್ರಕರಣ?
ಅಂದಹಾಗೆ ಸಂತ್ರಸ್ತೆಯ ಪತಿ ಅಜಿತ್ ಶಾಲೆಯಲ್ಲಿ ಪ್ರಾಂಶುಪಾಲರಾಗಿದ್ದಾರೆ. ಪತ್ನಿ ಸುಮನ್ ತನ್ನ ಪತಿಯನ್ನು ತೀವ್ರವಾಗಿ ಥಳಿಸುತ್ತಿರುವುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುವಂತಿದೆ. ಮತ್ತೂ ಪ್ರಮುಖ ವಿಷಯವೇನೆಂದರೆ, ಮಗನ ಎದುರೇ ಪತ್ನಿ ಪತಿಗೆ ಥಳಿಸುತ್ತಾಳೆ. ಗಂಡ ಮತ್ತು ಹೆಂಡತಿಯ ಹೊರತಾಗಿ ಅವರ ಮಗನೂ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾನೆ. ತನ್ನ ತಂದೆಯನ್ನು ಹೊಡೆಯುವ ಸಮಯದಲ್ಲಿ ಮಗ ಭಯಭೀತನಾಗಿ ಇರುವಂತೆ ಕಾಣುತ್ತಾನೆ.
ಸಂತ್ರಸ್ತ ಪ್ರಾಂಶುಪಾಲರು ಭಿವಾಡಿ ಪೊಲೀಸರಿಗೆ ಕೌಟುಂಬಿಕ ದೌರ್ಜನ್ಯದ ದೂರು ನೀಡಿದ್ದಾರೆ. ಪ್ರಾಂಶುಪಾಲರು ಕೌಟುಂಬಿಕ ದೌರ್ಜನ್ಯದ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವೊಮ್ಮೆ ಬ್ಯಾಟ್ನೊಂದಿಗೆ ಕೆಲವೊಮ್ಮೆ ರಾಕೆಟ್ನೊಂದಿಗೆ ಭಿವಾಡಿಯ ಆಶಿಯಾನ ಸೊಸೈಟಿಯಲ್ಲಿ ವಾಸವಾಗಿರುವ ಪತಿ-ಪತ್ನಿಯರ ನಡುವೆ ಬಹಳ ದಿನಗಳಿಂದ ಜಗಳ ನಡೆಯುತ್ತಿತ್ತು. ಪತಿ ಈಗಾಗಲೇ ಭಿವಾಡಿ ಪೊಲೀಸರಿಗೆ ದೂರು ನೀಡಿದ್ದರು. ಸಿಸಿಟಿವಿಯಲ್ಲಿ, ಪತ್ನಿ ಸುಮನ್ ಕೆಲವೊಮ್ಮೆ ತನ್ನ ಪತಿಗೆ ಬ್ಯಾಟ್ನಿಂದ ಮತ್ತು ಕೆಲವೊಮ್ಮೆ ರಾಕೆಟ್ನಿಂದ ಥಳಿಸುತ್ತಿದ್ದಾಳೆ.
ಪತ್ನಿ ಪ್ರತಿದಿನ ಜಗಳವಾಡುತ್ತಾಳೆ ಎಂದು ಪತಿ ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದರು. ಪ್ರಾಂಶುಪಾಲರು ಪೊಲೀಸರಿಗೆ ಥಳಿಸುವ ಹಲವು ದೃಶ್ಯಗಳನ್ನೂ ತೋರಿಸಿದ್ದಾರೆ
9 ವರ್ಷಗಳ ಹಿಂದೆ ವಿವಾಹವಾಗಿತ್ತು! ಒಂಬತ್ತು ವರ್ಷಗಳ ಹಿಂದೆ ಸುಮನ್ ಅವರನ್ನು ಅಜಿತ್ ಯಾದವ್ ಮದುವೆಯಾಗಿದ್ದರು. ಸದ್ಯ ಅಜಿತ್ ಯಾದವ್ ಅವರ ಪತ್ನಿ ಸತತವಾಗಿ ಥಳಿಸಿದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಪತ್ನಿಯ ಹೇಳಿಕೆ ಇನ್ನೂ ಬಂದಿಲ್ಲ. ಹೇಳಿಕೆ ನೀಡಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ವೇಳೆ ನೊಂದ ಪತಿಗೆ ರಕ್ಷಣೆ ನೀಡುವಂತೆ ಕೋರ್ಟ್ ನಲ್ಲೂ ಆದೇಶ ನೀಡಲಾಗಿದೆ ಎನ್ನಲಾಗಿದೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ