ಕೇರಳ: “ಕಾರ್ಯೇಷು ದಾಸಿ, ಕರಣೇಷು ಮಂತ್ರಿ, ಭೋಜ್ಯೇಷು ಮಾತಾ..” ಅಂತ ಹೆಂಡತಿಯನ್ನು (Wife) ಹೊಗಳುತ್ತಾರೆ ನಮ್ಮ ಹಿರಿಯರು. ‘ಭೋಜ್ಯೇಷು ಮಾತಾ’ ಅಂದರೆ ಭೋಜನ (Melas) ಬಡಿಸುವಾಗ ತಾಯಿಯಂತೇ (Mother) ಪ್ರೀತಿ (Love) ತೋರುವವಳು ಅಂತ ಅರ್ಥ. ಆದ್ರೆ ಕೇರಳದಲ್ಲಿ (Kerala) ನಡೆದಿದ್ದೇ ಬೇರೆ. ತಾಯಿಯಷ್ಟು ಮಮತೆ ತೋರಬೇಕಾದ ಪತ್ನಿ ರಾಕ್ಷಸಿಯಂತೆ ಆಗಿದ್ದಾಳೆ. ಈಕೆ ಒಂದೇ ಬಾರಿ ಗಂಡನನ್ನು (Husband) ಕೊಂದು ಹಾಕಲಿಲ್ಲ. ಬದಲಾಗಿ ನಿತ್ಯ ನಿತ್ಯವೂ ಇಂಚಿಂಚೇ ಆತನನ್ನು ಸಾಯಿಸುತ್ತಾ ಇದ್ದಳು. ಪ್ರೀತಿಯ ಮುಖವಾಡ ಧರಿಸಿದ ರಾಕ್ಷಸಿ, ನಗುನಗುತ್ತಲೇ ವಿಷವಿಕ್ಕುತ್ತಿದ್ದಳು. ಆಕೆ ಪ್ರೀತಿಯ ಹೆಂಡತಿಯಲ್ಲ, ತನ್ನನ್ನು ಕೊಲ್ಲುತ್ತಿರುವ ರಾಕ್ಷಸಿ ಅಂತ ಗಂಡನಿಗೆ ಗೊತ್ತಾಗುವ ವೇಳೆ ಕಾಲವೇ ಮಿಂಚಿಹೋಗಿತ್ತು. ಮುತ್ತು ಕೊಟ್ಟವಳ ಕೈತುತ್ತು ತಿಂದ ಗಂಡ ಆಸ್ಪತ್ರೆ ಸೇರಿದ್ದ.
ಈ ಘಟನೆ ನಡೆದಿದ್ದು ಎಲ್ಲಿ?
ಕೇರಳ ರಾಜ್ಯದ ತಿರುವನಂತಪುರಂನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. 38 ವರ್ಷದ ಸತೀಶ್ ಎಂಬುವರಿಗೆ ಆತನ ಪತ್ನಿ 36 ವರ್ಷದ ಆಶಾ ಎಂಬಾಕೆಯೇ ಡ್ರಗ್ಸ್ ನೀಡುತ್ತಿದ್ದಳು ಎನ್ನಲಾಗಿದೆ. ಆಶಾ ಹಾಗೂ ಸತೀಶ್ 2006ರಲ್ಲಿ ಮದುವೆ ಆಗಿದ್ದಾರೆ. ಇಬ್ಬರು ಪಲಾ ಎಂಬ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಸತೀಶ್ ಐಸ್ಕ್ರೀಮ್ ತಯಾರಿಸೋ ವ್ಯವಹಾರ ಮಾಡುತ್ತಿದ್ದು, ತಕ್ಕಮಟ್ಟಿಗೆ ಅನುಕೂಲಸ್ಥರಾಗಿದ್ದರು.
![wife attempt to murdered her husband by feeding him poison food]()
ಬಂಧಿತ ಮಹಿಳೆ
6 ವರ್ಷದಿಂದ ಗಂಡನಿಗೆ ಊಟದಲ್ಲಿ ಡ್ರಗ್ಸ್
ಈ ಆಶಾ ಒಳ್ಳೆಯವಳಂತೆ ಪೋಸ್ ಕೊಟ್ಟುಕೊಂಡು ಗಂಡನ ಎದುರು ಓಡಾಡುತ್ತಾ ಇದ್ದಳು. ಆದರೆ ಗಂಡ ಅತ್ತ ತನ್ನ ಅಂಗಡಿಗೆ ಹೋಗುತ್ತಿದ್ದಂತೆ ಈಕೆಯಲ್ಲಿದ್ದ ರಾಕ್ಷಸಿ ಜಾಗೃತಳಾಗುತ್ತಿದ್ದಳು. ರುಚಿ ರುಚಿಯಾಗಿ ಅಡುಗೆ ತಯಾರಿಸೋ ಆಶಾ, ಅದರಲ್ಲಿ ವಿಷಕಾರಿ ಡ್ರಗ್ಸ್ ಬೆರೆಸುತ್ತಾ ಇದ್ದಳು. ನಗುನಗುತ್ತಲೆ ಗಂಡನಿಗೆ ಬಡಿಸುತ್ತಾ ಇದ್ದಳು. ಸುಮಾರು 6 ವರ್ಷದಿಂದ ಆಶಾ ಈ ಕೆಲಸ ಮಾಡುತ್ತಿದ್ದರೂ ಪಾಪದ ಗಂಡನಿಗೆ ಇದರ ಸುಳಿವೂ ಸಿಕ್ಕಿಲ್ಲ.
ಇದನ್ನೂ ಓದಿ: Murder: ಉಂಡು, ಮಲಗಿದವರ ಮೇಲೆ ಅದೆಂಥಾ ದ್ವೇಷ? ಮಂಡ್ಯದಲ್ಲಿ ನಾಲ್ವರು ಮಕ್ಕಳ ಜೊತೆ ಮಹಿಳೆ ಕೊಂದಿದ್ಯಾರು?
ಗಂಡನ ಆರೋಗ್ಯದಲ್ಲಿ ಆಗಾಗ ವ್ಯತ್ಯಾಸ
ಮೊದಲೆಲ್ಲ ಗಟ್ಟಿ ಮುಟ್ಟಾಗೇ ಇದ್ದ ಸತೀಶ್, ಆಮೇಲೆ ಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತಾ ಇದ್ದರು. ಆಸ್ಪತ್ರೆಯಲ್ಲಿ ತೋರಿಸಿದಾಗ ಡ್ರಗ್ಸ್ ನಂತಹ ವಿಷಕಾರಿ ಅಂಶ ದೇಹ ಸೇರಿರುವುದು ಗೊತ್ತಾಯಿತು. ಆದರೆ ನಿತ್ಯ ಪ್ರೀತಿಯಿಂದ ಊಟ ಹಾಕುತ್ತಿದ್ದ ಹೆಂಡತಿ ಮೇಲೆ ಆತನಿಗೆ ಅನುಮಾನವೇ ಬರಲಿಲ್ಲ.
ಮನೆ ಊಟ ತಪ್ಪಿಸಿದ ಮೇಲೆ ಆರೋಗ್ಯದಲ್ಲಿ ಸುಧಾರಣೆ
ಮತ್ತೆ ಮತ್ತ ಅನಾರೋಗ್ಯವಾದಾಗ ಮನೆ ಊಟ ಸ್ವಲ್ಪ ದಿನ ಬಿಡುವಂತೆ ಆಪ್ತರು ಸಲಹೆ ನೀಡಿದ್ರು. ಅದರಂತೆ ಸತೀಶ್ ಕೆಲದಿನ ಮನೆ ಊಟ ಮಾಡಲಿಲ್ಲ. ಆಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂತು. ಇದಕ್ಕೆ ಕಾರಣ ಹುಡುಕಿದಾಗ ಮೊದಲ ಬಾರಿಗೆ ಹೆಂಡತಿ ಮೇಲೆ ಅನುಮಾನ ಶುರುವಾಯಿತು.
ಈಕೆ ಹಿಂದಿದ್ದನಾ ಆ ವ್ಯಕ್ತಿ?
ಅನುಮಾನ ಗೊಂಡ ಸತೀಶ್, ಆಕೆಯ ಮೊಬೈಲ್ ಪರಿಶೀಲನೆ ಮಾಡಿದ್ದಾನೆ. ಆಗ ಆಕೆಯ ಗೆಳೆಯ ಶಂಕರ್ ಎಂಬಾತನಿಗೆ ಕಳಿಸಿದ ಆಡಿಯೋ ಕ್ಲಿಪ್ ಬಹಿರಂಗವಾಯ್ತು. ಅದರಲ್ಲಿ ಆಕೆ ತನ್ನ ಕೃತ್ಯದ ಬಗ್ಗೆ ಹೇಳಿಕೊಂಡಿದ್ದಳು. ಆತ ಈಗ ಹಲ್ಲಿಲ್ಲದ ಸಿಂಹದಂತೆ ಅಂತ ವ್ಯಂಗ್ಯವಾಡಿದ್ದಳು. ಈ ಆಡಿಯೋ ಕೇಳಿದ ಬಳಿಕ ಸತೀಶ್ ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: Honeytrap: 'ಪದ್ಮ'ನ ಹಿಂದೆ ಹೋಗಿದ್ದವ 'ಹನಿ' ಬಲೆಗೆ ಬಿದ್ದ! ಯಾರದ್ದೋ ಮನೆಗೆ ಹೋಗುವ ಮುನ್ನ ಎಚ್ಚರ
ಮಗಳ ಮೂಲಕ ಅಪ್ಪನಿಗೆ ವಿಷ ಹಾಕಿಸುತ್ತಿದ್ದ ಖತರ್ನಾಕ್ ಲೇಡಿ
ಈ ಆಶಾ ಗಂಡನಿಗೆ ವಿಷ ಹಾಕಲು ತನ್ನ 7 ವರ್ಷದ ಮಗಳನ್ನು ಬಳಸಿಕೊಳ್ಳುತ್ತಿದ್ದಳು ಎನ್ನಲಾಗಿದೆ. ಆಕೆಯ ಕೈಯಲ್ಲಿ ಡ್ರಗ್ಸ್ ಹಾಕಿಸಿ, ಗಂಡನಿಗೆ ಕೊಡುತ್ತಿದ್ದಳು. ಈಕೆ 2005ರಿಂದಲೂ ಕೆಲವು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಳು ಅಂತ ಗಂಡ ತಿಳಿಸಿದ್ದಾನೆ.
ಇದೀಗ ಸತೀಶ್ ಕೊಟ್ಟ ದೂರಿನ ಮೇಲೆ ಪೊಲೀಸರು ಆಕೆಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ತೀವ್ರ ವಿಚಾರಣೆ ಬಳಿಕವಷ್ಟೇ ವಿಷ ಯಾಕೆ ಬೆರೆಸುತ್ತಿದ್ದಳು ಎನ್ನುವುದು ತಿಳಿಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ