Shocking News: ತಾಯಿ, ಮಗ ಸೇರಿ ಗಂಡನನ್ನೇ ಕೆಳಕ್ಕೆ ತಳ್ಳಿದ್ರು! ಕಾರಣ ಕೇಳಿದ್ರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ

"ಅಪ್ಪ ಅಂದರೆ ಆಕಾಶ" ಅಂತಾರೆ. ಆದ್ರೆ ಇಲ್ಲಿ ಈ ಪಾಪಿಗಳು ಅಪ್ಪನನ್ನು ಭೂಮಿಗೆ ತಳ್ಳಿಬಿಟ್ಟಿದ್ದಾರೆ! ಈ ಪಾಪಿ ಮಗನಿಗೆ ತಾಯಿಯೂ ಸಾಥ್ ನೀಡಿದ್ದಾಳೆ. ಅಷ್ಟಕ್ಕೂ ಕೆಳಕ್ಕೆ ತಳ್ಳುವಂತಾ ಕೆಲಸ ಅಪ್ಪ ಏನು ಮಾಡಿದ್ದ? ಕೆಳಕ್ಕೆ ಬಿದ್ದ ಅಪ್ಪ ಏನಾದ? ಇದು ನಡೆದಿರೋದು ಎಲ್ಲಿ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮುಂಬೈ: ಅಪ್ಪ (Father) ಅಂದ್ರೆ ಸಂಸಾರದ (Family) ಬೆನ್ನೆಲುಬು (Back Bone) ಇದ್ದಂತೆ. ಆದರೆ ಈ ಮನೆಯಲ್ಲಿ ಆ ಬೆನ್ನೆಲುಬನ್ನೇ ಮುರಿದು ಬಿಟ್ಟಿದ್ದಾರೆ. ಈ ಮನೆಯಲ್ಲಿ ಇದ್ದಿದ್ದು ಮೂರೇ ಜನ. ಪಾಪದ ಪತಿ (Husband), “ಮಳ್ಳಿ ಮಳ್ಳಿ ಮಂಚಕ್ಕೆಷ್ಟು ಕಾಲು ಅಂದ್ರೆ, ಮೂರು ಮತ್ತೊಂದು” ಎನ್ನುವ ಪತ್ನಿ (Wife) ಹಾಗೂ ಪಾಪಿ ಮಗ (Son). ಈ ಅಮ್ಮ ಹಾಗೂ ಮಗ ಸೇರಿಕೊಂಡು ಅಪ್ಪನನ್ನೇ ಮುಗಿಸಿ ಬಿಟ್ಟಿದ್ದಾರೆ. ಅದೂ ತಾವು ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ನ (Apartment) 7ನೇ ಮಹಡಿಯಿಂದ (7th Floor) ತಳ್ಳಿ! ಅಷ್ಟು ಮೇಲಿಂದ ದೊಪ್ಪನೆ ಬಿದ್ದ ವ್ಯಕ್ತಿ ಪ್ರಾಣ ಬಿಟ್ಟಿದ್ದಾನೆ. ಆತ ಕೆಳಕ್ಕೆ ಬಿದ್ದು ಸಾಯುತ್ತಿದ್ದಂತೆ ಅಮ್ಮ, ಮಗ ಇಬ್ಬರೂ ನವರಂಗಿ ನಾಟಕ (Drama) ಆಡಿದ್ದಾರೆ. ಕೊನೆಗೆ ಪೊಲೀಸರು (Police) ತಮ್ಮ ಭಾಷೆಯಲ್ಲೇ ಕೇಳಿದಾಗ ಎಲ್ಲವನ್ನೂ ಬಾಯಿ ಬಿಟ್ಟಿದ್ದಾರೆ. ಅಷ್ಟಕ್ಕೂ ಈ ಆಘಾತಕಾರಿ ಘಟನೆ ನಡೆದಿರೋದು ಎಲ್ಲಿ, 7ನೇ ಅಂತಸ್ತಿನಿಂದ ತಳ್ಳಿ ಸಾಯಿಸುವಂತಾ ತಪ್ಪು ಈ ಪಾಪದ ಅಪ್ಪ ಏನು ಮಾಡಿದ್ದ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ…

ಮುಂಬೈನ ಅಂಧೇರಿಯಲ್ಲಿ ಆಘಾತಕಾರಿ ಘಟನೆ

ಇದು ನಡೆದಿರುವುದು ಮಹಾರಾಷ್ಟ್ರ ರಾಜ್ಯದ ಮುಂಬೈನಲ್ಲಿರುವ ಅಂಧೇರಿ ಪ್ರದೇಶದಲ್ಲಿ. ಅಲ್ಲಿ 53 ವರ್ಷದ ಕೇಂದ್ರ ಸರ್ಕಾರಿ ನೌಕರ ಸಂತಾನ ಕೃಷ್ಣನ್ ಶೇಷಾದ್ರಿ ಎಂಬುವರನ್ನು ಏಳನೇ ಮಹಡಿಯ ಫ್ಲಾಟ್‌ನಿಂದ ಎಸೆದಿದ್ದಾರೆ. ಅವರ ಪತ್ನಿ 52 ವರ್ಷದ ಜೈಶೀಲಾ ಹಾಗೂ ಪುತ್ರ 26 ವರ್ಷದ ಅರವಿಂದ್ ಸೇರಿ ತಂದೆಯನ್ನೇ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಮೃತ ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್‌ಐಡಿಬಿಐ) ಸಹಾಯಕ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.  ಪತ್ನಿ ಜೈಶೀಲಾ ಮನೆಯಲ್ಲೇ ಇದ್ದರೆ, ಅವರ ಪುತ್ರ ಅರವಿಂದ್ ಎರಡು ವರ್ಷಗಳ ಹಿಂದೆ ಎಂಜಿನಿಯರಿಂಗ್ ಮುಗಿಸಿದ್ದ.

ವಿದೇಶಕ್ಕೆ ಹೋಗಲು ಹಣ ಹೊಂದಿಸುವುದಕ್ಕಾಗಲ್ಲ ಎಂದಿದ್ದ ತಂದೆ.

ಇಂಜಿನಿಯರಿಂಗ್ ಮುಗಿಸಿದ್ದ ಅರವಿಂದ್‌ಗೆ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುವ ಕನಸಿತ್ತು. ಇದನ್ನು ತಂದೆ-ತಾಯಿ ಬಳಿ ಹೇಳಿಕೊಂಡಿದ್ದ. ಆದರೆ ಆರ್ಥಿಕವಾಗಿ ನಾನು ಅಷ್ಟೊಂದು ಅನುಕೂಲವಾಗಿಲ್ಲ, ಹೀಗಾಗಿ ಇಲ್ಲೇ ಉನ್ನತ ಶಿಕ್ಷಣ ಪೂರೈಸು ಅಂತ ತಂದೆ ಮಗನಿಗೆ ಹೇಳಿದ್ದರು. ಆದರೆ ತಾಯಿ ಮಗನನ್ನು ವಿದೇಶಕ್ಕೆ ಕಳಿಸುವಂತೆ ಗಂಡನ ಮೇಲೆ ಒತ್ತಡ ಹಾಕುತ್ತಲೇ ಇದ್ದರು. ಆದರೂ ಸಂತಾನಕೃಷ್ಣನ್ ಇದಕ್ಕೆ ಒಪ್ಪಿರಲಿಲ್ಲ.

ಇದನ್ನೂ ಓದಿ: Madhya Pradesh Crime: 23 ವರ್ಷದ ನರ್ಸ್ ಅನ್ನು ಗುಂಡಿಕ್ಕಿ ಹತ್ಯೆಗೈದ ಭಗ್ನ ಪ್ರೇಮಿ..!

ಕೊಲೆ ಆಗುವ ದಿನ ಮನೆಯಲ್ಲಿ ಗಲಾಟೆ

ಕಳೆದ ಗುರುವಾರ ಕೊಲೆ ಆಗುವ ರಾತ್ರಿ ಅರವಿಂದ್ ಕೆನಡಾಕ್ಕೆ ತೆರಳಿ ಉನ್ನತ ವಿದ್ಯಾಭ್ಯಾಸ ಮಾಡುವ ವಿಚಾರವಾಗಿ ಗಲಾಟೆ ಆಗಿದೆ. ನನ್ನ ಬಳಿ ಅಷ್ಟೊಂದು ಹಣವಿಲ್ಲ, ಹೀಗಾಗಿ ಹಣ ಕೊಡುವುದಕ್ಕೆ ಆಗುವುದಿಲ್ಲ ಅಂತ ಸಂತಾನ ಕೃಷ್ಣನ್ ಖಡಾಖಂಡಿತವಾಗಿ ಹೇಳಿದ್ದಾರೆ. ಇದರಿಂದ ತಾಯಿ, ಮಗ ಕೆರಳಿದ್ದಾರೆ.

ಕೈಕಾಲು ಹಿಡಿದು ತಂದು ಮಹಡಿಯಿಂದ ತಳ್ಳಿದರು

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ತಾಯಿ, ಮಗ ಇಬ್ಬರೂ ಸೇರಿ ಸಂತಾನ ಕೃಷ್ಣನ್ ಮೇಲೆ ಹಲ್ಲೆ ಮಾಡಿದ್ದಾರೆ. ಕೊನೆಗೆ ಇಬ್ಬರೂ ಸೇರಿ ಅವರನ್ನು 7ನೇ ಮಹಡಿಯ ತುದಿಗೆ ತಂದಿದ್ದಾರೆ. ಎಷ್ಟು ಬೇಡಿಕೊಂಡರೂ ಕೇಳದೆ ಮೇಲಿನಿಂದ ಕೆಳಕ್ಕೆ ತಳ್ಳಿಬಿಟ್ಟಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಕೆಳಕ್ಕೆ ಬಿದ್ದ ಸಂತಾನ ಕೃಷ್ಣನ್ ಕ್ಷಣ ಮಾತ್ರದಲ್ಲಿ ಪ್ರಾಣ ಬಿಟ್ಟಿದ್ದಾರೆ.

ಇದನ್ನೂ ಓದಿ: Viral Video: ಬೆಡ್ ಶೀಟ್ ಆಸೆಗಾಗಿ ಮಗನನ್ನೇ 10ನೇ ಮಹಡಿಯಲ್ಲಿ ನೇತು ಹಾಕಿದ ತಾಯಿ

ತಾಯಿ-ಮಗನಿಂದ ನಾಟಕ

ತಂದೆಯನ್ನು ತಳ್ಳಿದ ಬಳಿಕ ತಾಯಿ-ಮಗ ನಾಟಕ ಶುರು ಮಾಡಿದ್ದಾರೆ. ಸಂತಾನ ಕೃಷ್ಣನ್ ಆತ್ಮಹತ್ಯೆ ಮಾಡಿಕೊಂಡರು ಅಂತ ಕಣ್ಣೀರಿಟ್ಟಿದ್ದಾರೆ. ಆದರೆ ಈ ಬಗ್ಗೆ ಸಂತಾನ ಕೃಷ್ಣನ್ ಕುಟುಂಬಸ್ಥರಿಗೆ ಅನುಮಾನ ಬಂದು ಅಂಬೋಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಆಗ ಪೊಲೀಸರು ತನಿಖೆ ಕೈಗೊಳ್ಳುತ್ತಿದ್ದಂತೆ ತಾಯಿ, ಮಗನ ಕಳ್ಳಾಟ ಬಯಲಾಗಿದೆ.
Published by:Annappa Achari
First published: