ನಿಮ್ಮ ಮಗುವನ್ನು BYJU’S Young Genius 2ಗೆ ನೀವು ಏಕೆ ನೋಂದಾಯಿಸಬೇಕು?

BYJU's Young Genius 2: ಮೊದಲ ಸೀಸನ್‌ನ ಯಶಸ್ಸು, ಇನ್ನೊಂದು ಸೀಸನ್ ಇನ್ನೇನು ಆರಂಭವಾಗಲಿದೆ ಎಂಬುದನ್ನು ತಿಳಿಸಿಕೊಟ್ಟಿದೆ. ಈಗ, ಹಾರೈಕೆಗಳು ನಿಜವಾಗಿವೆ ಮತ್ತು ಮುಂಬರುವ BYJU’S Young Geniusಗೆ ನೋಂದಣಿ ಪ್ರಕ್ರಿಯೆಯು ಉತ್ತಮವಾಗಿ ಸಾಗಿದೆ ಮತ್ತು ಪೋಷಕರು ಹಾಗೂ ಮಕ್ಕಳಿಂದ ಅಭೂತಪೂರ್ವ ಸ್ಪಂದನೆಯನ್ನು ಪಡೆದುಕೊಳ್ಳುತ್ತಿದೆ

BYJU's Young Genius 2

BYJU's Young Genius 2

  • Share this:
    News18ನ ಉಪಕ್ರಮವಾದ BYJU’S Young Geniusನ ಮೊದಲ ಸೀಸನ್ ಅನ್ನು ಘೋಷಿಸಿದಾಗ ಅದು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಬಹುಶಃ ಅದೇ ಮೊದಲ ಬಾರಿಗೆ ಒಂದು ವೇದಿಕೆಯಲ್ಲಿ ಮಕ್ಕಳು ವಿವಿಧ ಕೌಶಲಗಳನ್ನು ಮತ್ತು ಪ್ರತಿಭೆಯನ್ನು ಪ್ರದರ್ಶಿಸಿದ್ದರು, ವೀಕ್ಷಕರನ್ನು ಆಶ್ಚರ್ಯಚಕಿತರನ್ನಾಗಿಸಿದ್ದರು ಮತ್ತು ಲಕ್ಷಾಂತರ ಮಕ್ಕಳನ್ನು ಪ್ರೇರೇಪಿಸಿದ್ದರು. ವಾಸ್ತವವಾಗಿ, ಸಿಂಗಿಂಗ್ ಮತ್ತು ಡ್ಯಾನ್ಸಿಂಗ್‌ನಂತಹ ಕೆಲವು ಪ್ರಕಾರಗಳನ್ನು ಹೊರತುಪಡಿಸಿದರೆ, ಅಸಾಧಾರಣ ಮನೋಸಾಮರ್ಥ್ಯ, ಶೈಕ್ಷಣಿಕ ಪ್ರತಿಭೆ, ಕ್ರೀಡಾ ಸಾಮರ್ಥ್ಯ ಹೊಂದಿದ್ದ ಪ್ರತಿಭೆಗಳು ಮತ್ತು ಇನ್ನೂ ಹೆಚ್ಚಿನ ಪ್ರತಿಭಾವಂತರು BYJU’S Young Geniusನ ಶೋ ಟಾಪರ್‌ಗಳಾಗಿದ್ದರು.

    ಮೊದಲ ಸೀಸನ್‌ನ ಯಶಸ್ಸು, ಇನ್ನೊಂದು ಸೀಸನ್ ಇನ್ನೇನು ಆರಂಭವಾಗಲಿದೆ ಎಂಬುದನ್ನು ತಿಳಿಸಿಕೊಟ್ಟಿದೆ. ಈಗ, ಹಾರೈಕೆಗಳು ನಿಜವಾಗಿವೆ ಮತ್ತು ಮುಂಬರುವ BYJU’S Young Geniusಗೆ ನೋಂದಣಿ ಪ್ರಕ್ರಿಯೆಯು ಉತ್ತಮವಾಗಿ ಸಾಗಿದೆ ಮತ್ತು ಪೋಷಕರು ಹಾಗೂ ಮಕ್ಕಳಿಂದ ಅಭೂತಪೂರ್ವ ಸ್ಪಂದನೆಯನ್ನು ಪಡೆದುಕೊಳ್ಳುತ್ತಿದೆ. ಇದರಲ್ಲಿ ಭಾಗವಹಿಸಲು ಮತ್ತು ನಿಮ್ಮ ಅನುಭವವನ್ನು ಹಂಚಿಕೊಳ್ಳುವ ಮೂಲಕ BYJU’S Young Genius Season 2ರ ಭಾಗವಾಗಲು ಇದು ನಿಮ್ಮ ಅವಕಾಶವಾಗಿದೆ.

    BYJU’S YOUNG GENIUSಗೆ ಯಾಕೆ ಸೇರಬೇಕು:

    ಮಕ್ಕಳು ತಾವು ತಾವಾಗಿಯೇ ಇರಲು ಮತ್ತು ತಮ್ಮ ಅಸಾಮಾನ್ಯ ಕೌಶಲಗಳನ್ನು ಪ್ರದರ್ಶಿಸಲು ಪ್ರೋತ್ಸಾಹಿಸುವ ಈ ಕಾರ್ಯಕ್ರಮದ ಭಾಗವಾಗಲು ಒಂದಕ್ಕಿಂತ ಹೆಚ್ಚು ಸಕಾರಣಗಳಿವೆ. ತಮ್ಮ ಪ್ರತಿಭೆಯಲ್ಲಿ ಹೆಮ್ಮೆಪಡುವಂತೆ ಮಾಡುವ ಮತ್ತು ಅದನ್ನು ಜಗತ್ತಿಗೆ ತೋರಿಸಿಕೊಡುವ ಆತ್ಮವಿಶ್ವಾಸ ಮತ್ತು ಮಕ್ಕಳ ಸಾಮರ್ಥ್ಯಗಳು ಅತ್ಯಂತ ದೊಡ್ಡ ಬಹುಮಾನವಾಗಿದೆ. ಅವರ ಯಶಸ್ಸಿನ ಪಯಣವನ್ನು ವೀಕ್ಷಕರೊಂದಿಗೆ ಹಂಚಿಕೊಳ್ಳುವುದರಿಂದ ಅದು ಪ್ರೇರಣೆ ನೀಡಬಹುದು ಮತ್ತು ಇನ್ನಷ್ಟು ಪ್ರತಿಭೆಗಳನ್ನು ಸೃಷ್ಟಿಸಬಲ್ಲದು. ಅದೂ ಅಲ್ಲದೆ, ಒಬ್ಬ ಪ್ರತಿಭಾವಂತ ತನ್ನ ಪ್ರತಿಭೆಯನ್ನು ಯಾರಿಗೂ ತಿಳಿಯದಂತೆ ಬಚ್ಚಿಟ್ಟುಕೊಳ್ಳುವುದರಲ್ಲಿ ಇರುವ ಒಳಿತಾದರೂ ಏನು?

    ಎರಡನೆಯದಾಗಿ, ಮಕ್ಕಳು ಚಿರಪರಿಚಿತ ವ್ಯಕ್ತಿತ್ವಗಳು ಮತ್ತು ತೀರ್ಪುಗಾರರೊಂದಿಗೆ ಸಂಭಾಷಣೆ ನಡೆಸುವ ಅವಕಾಶ ಪಡೆಯುತ್ತಾರೆ, ಅವರು ಮಕ್ಕಳ ಪ್ರದರ್ಶನವನ್ನು ವಿಮರ್ಶೆ ಮಾಡುವುದಷ್ಟೇ ಅಲ್ಲದೆ, ತಮ್ಮ ಸ್ವಂತ ಅನುಭವಗಳ ಮೂಲಕ ಮಕ್ಕಳಲ್ಲಿ ವಿಶ್ವಾಸವನ್ನು ಚಿಗುರಿಸುತ್ತಾರೆ. ಜನಪ್ರಿಯ ವ್ಯಕ್ತಿಗಳು ತಮ್ಮ ಪ್ರತಿಭೆಯಿಂದಾಗಿ ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ನಡೆಸಿದ ಹೋರಾಟಗಳನ್ನು ಕೇಳುವುದು ನಿಮ್ಮ ಮಕ್ಕಳ ಪ್ರತಿಭೆಯನ್ನು ಮುನ್ನೆಲೆಗೆ ತರುವಲ್ಲಿ ಮಾನಸಿಕವಾಗಿ ಪರಿಣಾಮಕಾರಿ ಎನಿಸಬಹುದು.

    ಅಂತಿಮವಾಗಿ, Season 1ರ ಸ್ಮರಣೀಯ ಪರಂಪರೆಯು ಸ್ಪರ್ಧಿಗಳ ಜೀವನವು ಅತ್ಯುತ್ತಮ ಸ್ಥಿತಿಗೆ ಬದಲಾಯಿಸಿದೆ. ಭಾರತದಾದ್ಯಂತ ಇರುವ ಸಾಕಷ್ಟು ರಾಷ್ಟ್ರೀಯ ಮತ್ತು ಪ್ರಾದೇಶಿಕ ಚಾನಲ್‌ಗಳ ಮೂಲಕ ಅವರ ಪ್ರತಿಭೆಯ ಕಥನವು ಪ್ರತಿಯೊಂದು ಮನೆಗಳನ್ನೂ ತಲುಪಿದೆ. ಈಗ ಅದ್ಭುತ ಡ್ರಮ್ಮರ್ ಎಂದೇ ಸಾಕಷ್ಟು ಪ್ರಸಿದ್ಧಿಯಾಗಿರುವ ಅಂಶುಮಾನ್ ನಂದಿ ಅವರಿಂದ ಹಿಡಿದು, ಕಿರಿಯ ಶಾಸ್ತ್ರೀಯ ಗಾಯಕ ಎನಿಸಿದ ಸ್ವಸ್ತಿಕ್ ಭಾರಧ್ವಾಜ್, 11 ವರ್ಷ ವಯಸ್ಸಿಗೆ ಹವಾಮಾನ ಸಂಬಂಧಿತ ಚಟುವಟಿಕೆಯಿಂದ ಗಮನ ಸೆಳೆದಿರುವ ರಿಧಿಮಾ ಪಾಂಡೆವರೆಗೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಪ್ರತಿಭಾವಂತರು ಸಹ ಹಲವಾರು ಮಕ್ಕಳು ಮತ್ತು ಪೋಷಕರಿಗೆ ನಿಜವಾದ ರೋಲ್ ಮಾಡೆಲ್‌ಗಳಾಗಿದ್ದಾರೆ.
    ನೋಂದಾಯಿಸುವುದು ಹೇಗೆ

    ಹೊಸ ಸೀಸನ್‌ನ ಆರಂಭದೊಂದಿಗೆ, ಸುಪ್ರಸಿದ್ಧ ಪಟ್ಟಿಯಲ್ಲಿ ಸಾಕಷ್ಟು ಹೆಸರುಗಳು ಇರಲಿವೆ ಎಂಬುದರಲ್ಲಿ ಸಂದೇಹವೇ ಇಲ್ಲ. BYJU’S Young Genius ಸೀಸನ್ 2ಗೆ ನಿಮ್ಮ ಮಗುವನ್ನು ನೋಂದಣಿ ಮಾಡಲು ತುಂಬಾ ತಡ ಮಾಡಬೇಡಿ. ಶೀಘ್ರದಲ್ಲೇ ನೋಂದಣಿ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಮತ್ತು ನಿಮ್ಮ ಮಗುವಿನ ಪ್ರತಿಭೆಯು ಯಾರ ಗಮನಕ್ಕೂ ಬರದೇ ಇರಲಿ ಎಂದು ನೀವು ಬಯಸುವುದಿಲ್ಲ. ನೋಂದಣಿ ಲಿಂಕ್‌ಗೆ ಹೋಗಿ ಮತ್ತು ಇಲ್ಲಿ ಅರ್ಜಿ ಫಾರ್ಮ್ ಭರ್ತಿ ಮಾಡಿ.
    Published by:Sharath Sharma Kalagaru
    First published: