Bharat Jodo Yatra: ಪತ್ರಕರ್ತರು ಭೋಜನ ಕೂಟ ನಿರಾಕರಿಸಿದ್ದಕ್ಕೆ ಕಾಂಗ್ರೆಸ್ ವಕ್ತಾರರು ಕಣ್ಣೀರಿಟ್ಟಿದ್ದೇಕೆ?

ಪ್ರಸ್ತುತ ದೈನಿಕ್ ಭಾಸ್ಕರ್ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅಂಕಣಕಾರರಾಗಿದ್ದಾರೆ. ದೈನಿಕ್ ಭಾಸ್ಕರ್ ದಿನಪತ್ರಿಕೆಯ ವಿಶೇಷ ಪ್ರಸ್ತುತಿಯ ಮೂಲಕ ಹಾಗೂ ಮೂಲ ಹಿಂದಿಯಲ್ಲಿರುವ ಅಂಕಣವನ್ನು ರಾಮ್‌ಲಾಲ್ ಖನ್ನಾ ಅನುವಾದಿಸಿದ್ದಾರೆ ಹಾಗೂ ಅಂಕಣವನ್ನು ಅನುರಾಗ್ ಚೌಬೆ ಸಂಪಾದಿಸಿದ್ದಾರೆ. 

ಭಾರತ್ ಜೋಡೋ ಕಾರ್ಯಕ್ರಮ

ಭಾರತ್ ಜೋಡೋ ಕಾರ್ಯಕ್ರಮ

  • Share this:
ಡಾ. ಭರತ್ ಅಗರವಾಲ್, MBBS MD MBA M.Phil – ವೈದ್ಯರಾದರೂ ವ್ಯಾಪಾರ ಕಾರ್ಯನಿರ್ವಾಹಕರಾಗಿದ್ದಾರೆ. ಪ್ರಸ್ತುತ ದೈನಿಕ್ ಭಾಸ್ಕರ್ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅಂಕಣಕಾರರಾಗಿದ್ದಾರೆ. ದೈನಿಕ್ ಭಾಸ್ಕರ್ ದಿನಪತ್ರಿಕೆಯ ವಿಶೇಷ ಪ್ರಸ್ತುತಿಯ ಮೂಲಕ ಹಾಗೂ ಮೂಲ ಹಿಂದಿಯಲ್ಲಿರುವ ಅಂಕಣವನ್ನು ರಾಮ್‌ಲಾಲ್ ಖನ್ನಾ (Ramlal Khanna) ಅನುವಾದಿಸಿದ್ದಾರೆ ಹಾಗೂ ಅಂಕಣವನ್ನು ಅನುರಾಗ್ ಚೌಬೆ ಸಂಪಾದಿಸಿದ್ದಾರೆ. ಗ್ರಾಮೀಣ ಕ್ರೀಡೆಯ (rural sports) ವಿಷಯದಲ್ಲಿ ಕಬಡ್ಡಿಗೆ (Kabaddi) ಈಗಲೂ ಮಾನ್ಯತೆ ಇದ್ದು ಈ ಕ್ರೀಡೆಯು (Sports) ಅವಿಭಾಜ್ಯ ಅಂಗವಾಗಿ ಉಳಿದಿದೆ. ರಾಜಸ್ಥಾನದಲ್ಲಿ 30 ಲಕ್ಷಕ್ಕೂ ಹೆಚ್ಚು ಗ್ರಾಮಸ್ಥರು ಗ್ರಾಮೀಣ ಆಟಗಳಲ್ಲಿ (Games) ಭಾಗವಹಿಸುತ್ತಿದ್ದಾರೆ. 

ಕ್ರೀಡಾ ಜವಬ್ದಾರಿ ವಹಿಸಿಕೊಂಡ ಶಿಕ್ಷಣ ಇಲಾಖೆ
ಕಬಡ್ಡಿ ಪಂದ್ಯಾಟ (ನಿಧಿ ಸಂಗ್ರಹಣೆ) ಕೂಡ ನಡೆಯುತ್ತದೆ. ಈ ಆಟಗಳಿಗಾಗಿ ಆರಂಭದ ಬಜೆಟ್ ರೂ 50 ಕೋಟಿ ನಿಗದಿಪಡಿಸಿದಾಗ ರಾಜ್ಯದ ಕ್ರೀಡಾ ಮಂಡಳಿಯ ಸಂಭ್ರಮಾಚರಣೆ ಹೇಳತೀರದಾಯಿತು. ಕ್ರೀಡಾ ಸಚಿವ ಅಶೋಕ್ ಚಂದನ ಅವರು 19 ಕೋಟಿ ರೂಪಾಯಿ ಮೊತ್ತದ ಟೆಂಡರ್ ಕೂಡ ನೀಡಿದ್ದರು. ಕೃಷ್ಣ ಪೂನಿಯಾ ಅವರನ್ನು ಸ್ಪೋರ್ಟ್ಸ್ ಕೌನ್ಸಿಲ್ ಅಧ್ಯಕ್ಷರನ್ನಾಗಿ ನೇಮಿಸುವ ಮೊದಲೇ ಇದೆಲ್ಲವೂ ನಡೆದಿತ್ತು. ಪೂನಿಯಾ ಅಧಿಕಾರ ವಹಿಸಿಕೊಂಡಾಗ ಚಂದನಾ ಅವರ ಅಧಿಕಾರದ ಮೇಲೆ ಪ್ರಾಬಲ್ಯ ಸ್ಥಾಪಿಸತೊಡಗಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಚಂದನಾ ಅವರು ಟ್ವೀಟ್‌ಗಳಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: US Supports Pak: ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಅಮೆರಿಕಾ; ಭಾರತಕ್ಕೆ ದ್ರೋಹ?

ಒಟ್ಟು 17 ಕೋಟಿ ರೂಪಾಯಿ ಬಜೆಟ್‌ನೊಂದಿಗೆ ಪಂಚಾಯತ್ ಮತ್ತು ಬ್ಲಾಕ್ ಮಟ್ಟದ ಕ್ರೀಡೆಗಳ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆಗೆ ವರ್ಗಾಯಿಸಲಾಯಿತು. ಪ್ರಚಾರ ಕಾರ್ಯಕ್ರಮಗಳಿಗೆ ಒಂದಷ್ಟು ಹಣ ಮೀಸಲಿಡಲಾಗಿತ್ತು. ಇನ್ನುಳಿದ ಹಣವು ತಮ್ಮ ಭಂಡಾರಕ್ಕೆ ಸೇರುತ್ತದೆ ಎಂದು ಎಣಿಸಿದ್ದ ಕೌನ್ಸಿಲ್ ಲೆಕ್ಕಾಚಾರ ತಲೆಕೆಳಗಾಗಿದೆ. ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಮೀಸಲಿಟ್ಟ ಹಣವನ್ನು ಈಗ ಮುಖ್ಯ ಕಾರ್ಯದರ್ಶಿಗೆ ಹಂಚಿಕೆ ಮಾಡಲಾಗಿದೆ. ಒಟ್ಟಿನಲ್ಲಿ ಕ್ರೀಡಾ ಮಂಡಳಿಯ ಪದಾಧಿಕಾರಿಗಳು ಹತಾಶ ಸ್ಥಿತಿಯಲ್ಲಿದ್ದಾರೆ.

ಗುಲಾಂ ಅಲಿ, ಗುಲಾಂ ನಬಿ ಮತ್ತು ಗೊಂದಲ
ಇತ್ತೀಚೆಗೆ, ಭಾರತದ ರಾಷ್ಟ್ರಪತಿಗಳು ಜಮ್ಮು ಮತ್ತು ಕಾಶ್ಮೀರದ ಗುಜ್ಜರ್-ಮುಸ್ಲಿಂ ನಾಯಕ ಗುಲಾಂ ಅಲಿ ಅವರನ್ನು ನಾಮನಿರ್ದೇಶನ ಮಾಡಿದರು. ಕೆಲವರು ಗುಲಾಂ ಅಲಿ ಅವರ ಹೆಸರನ್ನು ಗುಲಾಂ ನಬಿ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದರು. ಗುಲಾಂ ನಬಿಯವರು ಸಾಮಾಜಿಕ ಮಾಧ್ಯಮದ ಚಾಂಪಿಯನ್ ಎಂದೆನಿಸಿದರು. ಸಾಮಾಜಿಕ ಮಾಧ್ಯಮ ಕೂಡ ನಾಮನಿರ್ದೇಶಿತಗೊಂಡವರು ಗುಲಾಂ ನಬಿ ಎಂದು ಹೆಸರಿಸಿದರು ಒಟ್ಟಿನಲ್ಲಿ ಪಕ್ಷದ ವಿರೋಧಿಗಳು ಹಾಗೂ ಬೆಂಬಲಿಗರ ನಡುವೆ ಹೆಸರಿನ ಕಾಳಗವೇ ಏರ್ಪಟ್ಟಿತು.

ಒಂದು ಹೆಸರಿಗಾಗಿ ಪಕ್ಷಗಳು ಹಾಗೂ ಮಾಧ್ಯಮದ ನಡುವೆ ಯುದ್ಧವೇ ನಡೆಯಿತು. ನಾಮನಿರ್ದೇಶನಗೊಂಡ ವ್ಯಕ್ತಿ ಗುಲಾಂ ಅಲಿಯೇ ಹೊರತು ಗುಲಾಂ ನಬಿ ಅಲ್ಲ ಎಂದು ಸ್ಪಷ್ಟಪಡಿಸಿದ ನಂತರವೇ ಸಾಮಾಜಿಕ ಮಾಧ್ಯಮಗಳು ಶಾಂತವಾದವು. ಒಟ್ಟಿನಲ್ಲಿ 82.57% ದಷ್ಟು ಜನರು ಗುಲಾಂ ಅಲಿ ಹಾಗೂ ಗುಲಾಂ ನಬಿ ಹೆಸರಿನಿಂದ ಗೊಂದಲಕ್ಕೆ ಒಳಗಾಗಿದ್ದರು.

ದೇಬ್ ಅವರ ಹೆಚ್ಚಿನ ಭರವಸೆಗಳು
ತ್ರಿಪುರಾ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಹೊಸ ಭರವಸೆಗಳನ್ನು ನೀಡುತ್ತಿದ್ದಾರೆ - ಅವರ ರಾಜಕೀಯ ಮಾರ್ಗವು ಸರ್ಬಾನಂದ ಸೋನೋವಾಲ್ ಅವರ ಹಾದಿಯನ್ನು ಪುನರಾವರ್ತಿಸುತ್ತದೆ. ಸೋನೋವಾಲ್ ಬದಲಿಗೆ ಹಿಮಂತ ಬಿಸ್ವಾ ಶರ್ಮಾ ಅವರನ್ನು ಅಸ್ಸಾಂನ ಸಿಎಂ ಆಗಿ ನೇಮಿಸಿದಂತೆಯೇ, ದೇಬ್ ಬದಲಿಗೆ ಮಾಣಿಕ್ ಸಹಾ ಅವರನ್ನು ತ್ರಿಪುರಾ ಸಿಎಂ ಆಗಿ ನೇಮಿಸಲಾಯಿತು. ಮತ್ತೆ, ಸೋನೋವಾಲ್‌ನಂತೆ, ದೇಬ್‌ಗೆ ಸಹ ಸಂಸ್ಥೆಯಲ್ಲಿ ಪ್ರಮುಖ ಜವಾಬ್ದಾರಿಯನ್ನು ವಹಿಸಲಾಯಿತು. ಇದರ ನಂತರ, ಸೋನೋವಾಲ್ ರಾಜ್ಯಸಭಾ ಸಂಸದರಾದರು ಮತ್ತು ಈಗ ತ್ರಿಪುರದಿಂದ ರಾಜ್ಯಸಭಾ ಸ್ಥಾನಕ್ಕೆ ಬಿಜೆಪಿಯ ಅಭ್ಯರ್ಥಿಯಾಗಿರುವ ದೇಬ್ ಅವರನ್ನು ಅನುಸರಿಸುತ್ತಿದ್ದಾರೆ.

ಒಂದೇ ಕಥೆಗೆ ಎರಡು ಆಹ್ವಾನ ಪತ್ರಿಕೆಗಳು
ನವರಾತ್ರಿ ಹಬ್ಬ ಇನ್ನೇನು ಸಮೀಪದಲ್ಲಿಯೇ ಇದೆ. ಹಾಗಾಗಿ ಎಲ್ಲೆಡೆ ರಾಮಕಥಾ ಮತ್ತು ರಾಮಲೀಲಾ ವಾಚನಕ್ಕಾಗಿ ವೇದಿಕೆಯ ಸಿದ್ಧತೆಗಳು ಭರದಿಂದ ಸಾಗಿವೆ. ಆಮಂತ್ರಣ ಪತ್ರಿಕೆಗಳು ಸಿದ್ಧಗೊಳ್ಳುತ್ತಿವೆ. ವೃಂದಾವನದ ಕಥಾ ವಾಚಕರನ್ನು ಅವರ ಶಿಷ್ಯರು ಮಾನಸ್ ರಸಿಕ್ ಎಂದು ಸಂಬೋಧಿಸುತ್ತಾರೆ. ಪಕ್ಷದ ಅಧ್ಯಕ್ಷರನ್ನು ಆಹ್ವಾನಿಸಲು ಮಾನಸ್ ರಸಿಕ್‌ಜಿ ಯವರು ಇತ್ತೀಚೆಗೆ ಬಿಜೆಪಿ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು. ಅಧ್ಯಕ್ಷರು ಇಲ್ಲದ ಕಾರಣ ಪ್ರಧಾನ ಕಾರ್ಯದರ್ಶಿಯೊಬ್ಬರಿಗೆ ಆಹ್ವಾನ ಪತ್ರಿಕೆ ನೀಡಿದರು. ಆಸಕ್ತಿಕರವಾಗಿ ಕಥಾ ವಾಚಕರು ಬದಲಿಗೆ ಕಥಾ ಪ್ರವಕ್ತ ಎಂದು ರಸಿಕ್‌ಜಿಯವರ ಹೆಸರನ್ನು ಉಲ್ಲೇಖಿಸಲಾಗಿದೆ. ಇದು ಏಕೆ ಹೀಗೆ? ಇದರ ಉತ್ತರ ಕೂಡ ಆಸಕ್ತಿದಾಯಕವಾಗಿದ್ದು, ಕಥಾ ವಾಚಕ್ ಎಂದು ಉಲ್ಲೇಖಿಸಿರುವ ಕಾಗದ ಸಾಮಾನ್ಯ ಜನರಿಗಾಗಿತ್ತು.

ಇದನ್ನೂ ಓದಿ: Tamil Nadu: ದೇವಸ್ಥಾನ, ಹಿಂದೂ ಕುಟುಂಬಗಳ ಆಸ್ತಿ ಸೇರಿ ಇಡೀ ಗ್ರಾಮವನ್ನೇ ಸದ್ದಿಲ್ಲದೇ ನುಂಗಿದ ವಕ್ಫ್ ಬೋರ್ಡ್!

ಇನ್ನು ರಾಜಕೀಯ ನಾಯಕರುಗಳಿಗಾಗಿ ವಿಶೇಷವಾಗಿ ಮುದ್ರಿಸಿದ ಕಾರ್ಡುಗಳಲ್ಲಿ ರಸಿಕ್‌ಜಿಯವರನ್ನು ಕಥಾ ಪ್ರವಕ್ತ ಎಂದು ಉಲ್ಲೇಖಿಸಲಾಗಿದೆ. ರಾಜಕೀಯ ವಲಯದಲ್ಲಿ ಪ್ರಭಾವಿ ವ್ಯಕ್ತಿಯನ್ನಾಗಿ ತನ್ನನ್ನು ತಾನು ಗುರುತಿಸಿಕೊಳ್ಳಲು ರಸಿಕ್‌ಜಿಯವರು ವಾಚಕ್ ಅನ್ನು ಪ್ರವಕ್ತ ಎಂದು ಬದಲಾಯಿಸಿದ್ದರು. ಅಂತೂ ಇಂತೂ ಕಥಾ ಪ್ರಸಂಗದ ವಿಷಯದಲ್ಲೂ ರಾಜಕೀಯ ಮೆರುಗು ಮುಖ್ಯವಾಗಿ ಪಾತ್ರವಹಿಸಿರುವುದನ್ನು ಇಲ್ಲಿ ಗಮನಿಸಬಹುದು.

ಪಕ್ಷಗಳ ಒಗ್ಗೂಡುವಿಕೆ ಮೈತ್ರಿಗಾಗಿ ಅಲ್ಲ
ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ನಿತೀಶ್ ಕುಮಾರ್ ತಮ್ಮ ಚಾಕಚಕ್ಯತೆಗಳೆಲ್ಲವನ್ನೂ ಬಳಸುತ್ತಿದ್ದಾರೆ. ವಿರೋಧ ಪಕ್ಷದ ಎಲ್ಲಾ ಉನ್ನತ ನಾಯಕರುಗಳನ್ನು ಅವರು ಭೇಟಿಮಾಡಿದ್ದಾರೆ. ಆದರೆ ಇಲ್ಲಿ ಪ್ರಶ್ನೆಯಾಗುವುದು ಒಂದೇ ಅದೆಂದರೆ ವಿರೋಧ ಪಕ್ಷದ ಎಲ್ಲಾ ನಾಯಕರುಗಳನ್ನು ಒಗ್ಗೂಡಿಸುವುದು ಸಾಧ್ಯವೇ? ಇದೊಂದು ಉತ್ತರವಿಲ್ಲದ ಪ್ರಶ್ನೆ ಎಂಬುದು ಪಕ್ಷದ ಕಾರ್ಯಕರ್ತರ ಅಂಬೋಣವಾಗಿದೆ. ಇನ್ನು ಅವರೆಲ್ಲರೂ ಒಂದೇ ವೇದಿಕೆಗೆ ಬರಲು ಒಪ್ಪಿದರೂ ಇದರ ನಾಯಕತ್ವವವನ್ನು ಯಾರು ವಹಿಸಿಕೊಳ್ಳುತ್ತಾರೆ? ಇದರ ನಾಯಕರು ಯಾರು? ಎಂಬ ಪ್ರಶ್ನೆ ಕಾಡುತ್ತದೆ.

ಎಲ್ಲರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗುವ ವ್ಯಕ್ತಿಯೇ ಅವರನ್ನು ಮುನ್ನಡೆಸುತ್ತಾರೆ ಎಂದು ನಿತೀಶ್ ಅವರ ವಿಶೇಷ ಸಹಾಯಕರ ಅಭಿಪ್ರಾಯವಾಗಿದೆ. ಇನ್ನು ಪಕ್ಷದ ಕೆಲವರು ಇದೇ ಸೂತ್ರದ ಮೇಲೆ ಇದೇ ಹಂಬಲವನ್ನಿಟ್ಟುಕೊಂಡು ಕೆಲಸ ಕೂಡ ಮಾಡುತ್ತಿದ್ದಾರೆ ಎಂಬುದು ಇಲ್ಲಿ ಮುಖ್ಯವಾಗಿದೆ.

ಪತ್ರಕರ್ತರಿಗೆ ಉಚಿತ ಭೋಜನವಿಲ್ಲ ಕಣ್ಣೀರು ಹಾಕಿದ ವಕ್ತಾರರು
ಕನ್ಯಾಕುಮಾರಿಯಲ್ಲಿ ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಲಿರುವ ದಿನ, ಕಾಂಗ್ರೆಸ್ ವಕ್ತಾರರು ಮಾಧ್ಯಮದವರಿಗೆ ಭೋಜನ ಕೂಟಕ್ಕೆ ಆಹ್ವಾನ ನೀಡಿದ್ದರು. ಇದರಲ್ಲಿ ಕೆಲವು ಪತ್ರಕರ್ತರು ದೆಹಲಿಯಿಂದ ಆಗಮಿಸಿದ್ದರು. ಊಟದ ವ್ಯವಸ್ಥೆ ಮಾಡಿದ್ದ ಕೊಠಡಿಯು ನೆಲ ಮಹಡಿಯಲ್ಲಿತ್ತು. ಮೂರನೇ ಮಹಡಿಯಲ್ಲಿದ್ದ ಪತ್ರಕರ್ತರು ಊಟ ಮಾಡಲು ನೆಲ ಮಹಡಿಗೆ ತೆರಳಿದರು. ಆದರೆ ರೆಸಾರ್ಟ್ ನಿರ್ವಾಹಕರು ಮಾಧ್ಯಮ ಪ್ರತಿನಿಧಿಗಳಿಗೆ ಆಯೋಜಿಸಿದ್ದ ಭೋಜನ ಕೂಟದ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಅಂತೆಯೇ ಕಾರ್ಯಕರ್ತರು ಕೂಡ ಯಾವುದೇ ಸೂಚನೆ ನೀಡಿಲ್ಲ ಎಂದು ತಿಳಿಸುತ್ತಾರೆ.

ಇದರಿಂದ ದಿಗ್ಭ್ರಮೆಗೊಂಡ ಪತ್ರಕರ್ತರು ತಮ್ಮನ್ನು ನೆಲಮಹಡಿಗೆ ಆಹ್ವಾನಿಸಿದ ವಕ್ತಾರರನ್ನು ತಕ್ಷಣವೇ ಕರೆದರು. ಈ ಸಮಯದಲ್ಲಿ ವಕ್ತಾರರು ಹಾಗೂ ರೆಸಾರ್ಟ್ ಆಡಳಿತ ಮಂಡಳಿಯ ನಡುವೆ ಮಾತಿನ ಚಕಮಕಿ ನಡೆಯಿತು. ಎರಡೂ ತಂಡಗಳು ಕೈಕೈ ಮಿಲಾಯಿಸತೊಡಗಿದವು. ಕೆಲವು ಪತ್ರಕರ್ತರು ಊಟದ ತಟ್ಟೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು ಆದರೆ ಅಲ್ಲಿನ ಸಿಬ್ಬಂದಿ ಅವರಿಂದ ತಟ್ಟೆಯನ್ನು ಕಸಿದುಕೊಂಡರು. ಇದನ್ನೆಲ್ಲಾ ನೋಡಿದ ಮಹಿಳಾ ವಕ್ತಾರರು ಅಳಲು ಪ್ರಾರಂಭಿಸಿದರು. ಭಾರತ್ ಜೋಡೋ ಕಾರ್ಯಕ್ರಮದಲ್ಲಿದ್ದ ಅವ್ಯವಸ್ಥೆಯಿಂದ ಗಾಸಿಪ್ ಕೂಡ ಹರಡಿತು. ಇದು ಭಾರತ್ ಜೋಡೋ ಅಥವಾ ಥಾಲಿ ತೋಡೋ (ಭಾರತವನ್ನು ಒಗ್ಗೂಡಿಸುವುದೇ ಅಥವಾ ತಟ್ಟೆಯನ್ನು ಮುರಿಯುವುದೇ?) ಎಂಬ ಗಾಸಿಪ್ ಕೂಡ ಅಷ್ಟೇ ವೇಗವಾಗಿ ಹರಡಿತು.

ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಯಾತ್ರೆ
ರಾಜಸ್ಥಾನ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಅವರು ಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದರು. ಆದರೆ ಹೈಕಮಾಂಡ್ ಯಾತ್ರೆಗೆ ತಡೆಯೊಡ್ಡಿತು. ಯಾತ್ರೆ ನಡೆದಾಗ, ಅದು ಏಕಾಂಗಿ ಯಾತ್ರೆಯಾಗಿತ್ತು - ಮನೆ-ಮನೆಗೆ, ಪಟ್ಟಣದಿಂದ ಪಟ್ಟಣಕ್ಕೆ ಮಾತ್ರ ತೆರಳಿದ ಯಾತ್ರೆ ಎಂದೆನಿಸಿತು. ರಾಜಸ್ಥಾನದಲ್ಲಿ ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗಲೆಲ್ಲ ಪಕ್ಷವು ಈ ಯಾತ್ರೆಗಳ ಮೂಲಕ ತನ್ನ ಹೋರಾಟವನ್ನು ಮುಂದುವರಿಸುತ್ತದೆ. ‘ಮೇಡಂ’ ಪ್ರೆಸಿಡೆಂಟ್ ಈಗಾಗಲೇ ಈ ಸಣ್ಣ ಪ್ರವಾಸಗಳನ್ನು ಕೈಗೊಳ್ಳುವ ಮೂಲಕ ರಾಜ್ಯದ ಏಳು ವಿಭಾಗಗಳ ಪೈಕಿ ಆರು ವಿಭಾಗಗಳಲ್ಲಿ ತಮ್ಮ ಪ್ರಚಾರವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಅವರು ಬಿಕಾನೇರ್ ವಿಭಾಗದಲ್ಲಿ ಏಳನೆಯದನ್ನು ಕೈಗೊಳ್ಳಲಿದ್ದಾರೆ.

ಇದನ್ನೂ ಓದಿ: Ex-Spy: ಮಾಜಿ ಗೂಢಚಾರಿಯ 30 ವರ್ಷಗಳ ಕಾನೂನು ಹೋರಾಟಕ್ಕೆ ಸಿಗ್ತು ಜಯ: ಏನಿದು ಪ್ರಕರಣ?

ರಾಜ್ಯದಲ್ಲಿ ಪಕ್ಷದಿಂದ ಪೂನಿಯಾಗೆ ಸವಾಲು ಎದುರಾಗುವ ಕೆಲವು ಕ್ಷೇತ್ರಗಳಿವೆ. ಅಂತೆಯೇ ಕೆಲವು ಕಾಣದ ಕೈಗಳಿಂದಲೂ ತೊಡಕುಗಳು ಪೂನಿಯಾಗೆ ಎದುರಾಗಲಿವೆ ಅದಾಗ್ಯೂ ಜಾದೂಗಾರನ ಪುಸ್ತಕದಿಂದ ನೇರವಾಗಿ ಕೆಲವೊಂದು ತಂತ್ರಗಳು ನಡೆಯುವಂತೆ ಕೆಲವೊಂದು ಕೈಚಳಕ ನಡೆಯುವ ಸಾಧ್ಯತೆ ಇದೆ. ಇದು ಏನೆಂಬುದು ನಿಮಗೆ ಗೊತ್ತು ತಾನೇ.
Published by:Ashwini Prabhu
First published: