ಈ ಮತಕೇಂದ್ರದಲ್ಲಿ ಒಬ್ಬನೇ ಮತದಾರ: ಶೇ.100ರಷ್ಟು ಮತದಾನ

ಹೌದು, ಗುಜರಾತ್​ನ ಬನೇಜ್​ ಗಿರ್​ ಅರಣ್ಯ ಪ್ರದೇಶವೊಂದರ ಮತಗಟ್ಟೆಯಲ್ಲಿ ಒಬ್ಬನೇ ಮತದಾರನಿರುವುದರಿಂದ ಪ್ರತಿ ಬಾರಿ ಇಲ್ಲಿ ಶೇ. 100 ಮತದಾನವಾಗುತ್ತದೆ.

Harshith AS | news18
Updated:April 24, 2019, 1:41 PM IST
ಈ ಮತಕೇಂದ್ರದಲ್ಲಿ ಒಬ್ಬನೇ ಮತದಾರ: ಶೇ.100ರಷ್ಟು ಮತದಾನ
ಮತದಾನ
  • News18
  • Last Updated: April 24, 2019, 1:41 PM IST
  • Share this:
ಅಹಮದಾಬಾದ್ (ಏ.23)​: ದೇಶದ 117 ಕ್ಷೇತ್ರಗಳಲ್ಲಿ ಇಂದು ನಡೆದ ಮೂರನೇ ಹಂತದ ಮತದಾನ ನಡೆದಿದೆ. ಮೊದಲೆರಡಕ್ಕಿಂತ ಮೂರನೇ ಹಂತದ ಮತದಾನ ತುಸು ಕಡಿಮೆ ಇರುವುದರಿಂದ ಶೇ. 67.21ರಷ್ಟು ಮತದಾನ ಆಗಿರುವ ಅಂದಾಜು ಇದೆ. ಆದರೆ ಗುಜರಾತ್​ನ ಮತಗಟ್ಟೆಯೊಂದರಲ್ಲಿ ಪ್ರತಿ ಸಾರಿ ಶೇ.100ರಷ್ಟು ಮತದಾನವಾಗುತ್ತದೆ ಎಂದರೆ ನಂಬುತ್ತೀರಾ.?

ಹೌದು, ಗುಜರಾತ್​ನ ಬನೇಜ್​ ಗಿರ್​ ಅರಣ್ಯ ಪ್ರದೇಶವೊಂದರ ಮತಗಟ್ಟೆಯಲ್ಲಿ ಒಬ್ಬನೇ ಮತದಾರನಿರುವುದರಿಂದ ಪ್ರತಿ ಬಾರಿ ಇಲ್ಲಿ ಶೇ. 100 ಮತದಾನವಾಗುತ್ತದೆ. ಇಲ್ಲಿನ ಮತಪಟ್ಟಿಯಲ್ಲಿ ಮಾಹಂತ್ ಭರತದಾಸ್ ದರ್ಶನ್​ದಾಸ್​​ ಹೆಸರಿನ ಒಬ್ಬನೇ ಮತದಾರನಿದ್ದು, ಗಿರ್​ ಪ್ರದೇಶದಲ್ಲಿ ಮತಗಟ್ಟೆಯಲ್ಲಿ ದರ್ಶನ್​ದಾಸ್​ರೊಬ್ಬರೇ ಮತ ಚಲಾಯಿಸುತ್ತಾರೆ.

60 ವರ್ಷದ ದರ್ಶನ್​ದಾಸ್​ ಬನೇಜ್​ ಗಿರ್​ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ದೇಶದ ಪಾರ್ಲಿಮೆಂಟರಿ ಮತ್ತು ರಾಜ್ಯ ಚುನಾವಣೆಗೆ ದರ್ಶನ್​ದಾಸ್ ಇಲ್ಲಿ​ ಮತಚಲಾಯಿಸುತ್ತಾರೆ. ಭಾರತದ ಚುನಾವಣ ಆಯೋಗ ದರ್ಶನ್​ದಾಸ್​ ಗಾಗಿ ಮತಗಟ್ಟೆಯನ್ನು ನಿರ್ಮಾಣ ಮಾಡುತ್ತಾರೆ. ಮಾತ್ರವಲ್ಲದೆ, ದರ್ಶನ್​ದಾಸ್​ ಕೂಡ ತಪ್ಪದೇ ಮತದಾನವನ್ನು ಮಾಡುತ್ತಾರೆ.

ಇದನ್ನೂ ಓದಿ: ಬಿಜೆಪಿಯವರು ಏನೇ ಮಾಡಿದರೂ ನಮ್ಮ ಶಾಸಕರನ್ನು ನಾವು ಹಿಡಿದಿಟ್ಟುಕೊಳ್ಳುತ್ತೇವೆ: ಹೆಚ್​.ಡಿ.ಕುಮಾರಸ್ವಾಮಿ

ದೇವಸ್ಥಾನದ ಅರ್ಚಕರಾಗಿರುವ ದರ್ಶನ್​ದಾಸ್​, ಬನೇಜ್​ ತೀರ್ಥಧಾಮದಲ್ಲಿರುವ ಶಿವ ದೇವಸ್ಥಾನದಲ್ಲಿ ಅರ್ಚಕರಾಗಿದ್ದಾರೆ. ಹಾಗಾಗಿ ಬನೇಜ್​ ಪ್ರದೇಶದಲ್ಲಿ ದರ್ಶನ್​​ ದಾಸರೊಬ್ಬರೇ ಮತದಾನಿಯಾಗಿದ್ದಾರೆ.

ಗಿರ್​​​ ಪ್ರದೇಶದವು ಕಾಡುಗಳಿಂದ ತುಂಬಿದ್ದು, ಮತದಾರ ಬನೇಜ್​ ಪ್ರದೇಶದ ಮತಕೇಂದ್ರದ ಬಳಿ ಹೋಗಲು 2 ಕಿ.ಮೀ ಕ್ರಮಿಸಬೇಕು. ಇನ್ನೂ ಚುನಾವಣಾ ಆಯೋಜಕರು 35 ಕಿ.ಮೀ. ಪ್ರಯಾಣಿಸಿ ಮತಕೇಂದ್ರವನ್ನು ನಿರ್ಮಾಣ ಮಾಡುತ್ತಾರೆ.

First published:April 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ