HR RameshHR Ramesh
|
news18 Updated:April 25, 2019, 3:58 PM IST
ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ ಸಂಗಾಕ್ಕಾರ
- News18
- Last Updated:
April 25, 2019, 3:58 PM IST
ಆ ಪುಟ್ಟ ದ್ವೀಪ ರಾಷ್ಟ್ರದಲ್ಲಿ ಈಗಲೂ ಬಾಂಬ್ ಸ್ಫೋಟದ ಸದ್ದು ಕೇಳಿಬರುತ್ತಿದೆ. ಸ್ಫೋಟದಿಂದ ಛಿದ್ರವಾದ ದೇಹದ ರಾಶಿಗಳು ಶವಾಗಾರದಲ್ಲಿವೆ. ಗಾಯಗೊಂಡವರ ನರಳಾಟ ಆಸ್ಪತ್ರೆಯಲ್ಲಿ ಮಾರ್ದನಿಸುತ್ತಿದೆ. ತನ್ನವರನ್ನು ಕಳೆದುಕೊಂಡ ಸಂಬಂಧಿಗಳ ಚೀರಾಟ, ತನ್ನ ದೇಶಕ್ಕೆ ಎಂತಹ ದುರ್ಗತಿ ಬಂದಿತ್ತಲ್ಲಾ ಎಂಬ ಜನಗಳ ಅಸಹಾಯಕ ಮರುಕ ಇಡೀ ನಾಡಿನಲ್ಲಿ ರಿಂಗಣಿಸುತ್ತಿದೆ. ರಸ್ತೆಯಲ್ಲಿ ಹರಿದ ನೆತ್ತರ ಘಮಲು ಗಾಳಿಯೊಂದಿಗೆ ಸೇರಿ ಅಲ್ಲಿನ ಜನರ ಬದುಕನ್ನೇ ಭಯಭೀತಗೊಳಿಸಿದೆ.
ಕಳೆದ ಭಾನುವಾರ ಶ್ರೀಲಂಕನ್ನರಿಗೆ ಈಸ್ಟರ್ ಸಂಭ್ರಮಾಚರಣೆ ಕರಾಳ ಆಚರಣೆಯಾಗಿ, ಘೋರ ದಿನವಾಗಿ ಮಾರ್ಪಟ್ಟಿದೆ. ನಿರ್ದಯಿ ಭಯೋತ್ಪಾದಕರು ಎಲ್ಲಿದ್ದರಲ್ಲಿ ಪುಟ್ಟ ರಾಷ್ಟ್ರದಲ್ಲಿ ಬಾಂಬ್ ಸ್ಫೋಟಿಸಿ ನೂರಾರು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿದ್ದಾರೆ. ಈ ಹೃದಯ ವಿದ್ರಾವಕ ಘಟನೆ ಇಡೀ ಜಗತ್ತಿನ ಮನುಕುಲವೇ ಮರುಗಿ, ಈ ಘಟನೆಯಿಂದ ಅಲ್ಲಿನ ಜನರು ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಶ್ರೀಲಂಕಾದ ಮಾಜಿ ಕ್ರಿಕೆಟ್ ಆಟಗಾರ ಕುಮಾರ ಸಂಗಾಕ್ಕಾರ ಅವರು ಈ ಹಿಂದೆ ಶಾಲಾ ಕ್ರೀಡಾಕೂಟದ ಕಾರ್ಯಕ್ರಮವೊಂದರಲ್ಲಿ ಮಾಡಿದ ಭಾಷಣದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕರಾಳ ಘಟನೆಯಿಂದ ಬೆಚ್ಚಿಬಿದ್ದ ಶ್ರೀಲಂಕನ್ನರಿಗೆ ಈ ವಿಡಿಯೋ ಹೊಸ ಆತ್ಮವಿಶ್ವಾಸ, ಚೈತನ್ಯ, ಹೊಸ ಹುರುಪನ್ನು ನೀಡಿದೆ.
ಇದನ್ನು ಓದಿ: ಕೊಡಗಿನಲ್ಲಿ ಮತ್ತೆ ನಕ್ಸಲರ ನೆರಳು; ಗ್ರಾಮದೊಳಗೆ ನುಗ್ಗಿ ಅಕ್ಕಿ ಮೂಟೆ, ಮೊಬೈಲ್ ತೆಗೆದುಕೊಂಡು ಪರಾರಿ
ಮೂರು ನಿಮಿಷದ ಭಾಷಣದಲ್ಲಿ ಕುಮಾರ ಸಂಗಾಕ್ಕಾರ ಆಡಿದ ಪ್ರತಿಯೊಂದು ಮಾತುಗಳು ಒಗ್ಗಟ್ಟಿನ ಶಕ್ತಿ, ಸಹಬಾಳ್ವೆ, ಕೋಮು ಸೌಹಾರ್ದದ ಮಹತ್ವವನ್ನು ತಿಳಿಸಿಕೊಟ್ಟಿವೆ.
"ನಾವು ಬರಿ ತರಗತಿ, ಮೊಬೈಲ್, ಲ್ಯಾಪ್ಟಾಪ್ನಲ್ಲಿ ಸಮಯ ಕಳೆಯಬಾರದು. ಎಲ್ಲರೊಂದಿಗೂ ಬೆರೆಯಬೇಕು. ಪ್ರತಿಯೊಬ್ಬರಿಂದ ಕಲಿಯಬೇಕು. ಶ್ರೀಲಂಕಾ ಹಲವು ಧರ್ಮಗಳ ಸಮ್ಮಿಲನವಾಗಿದೆ. ಹಿಂದೂ, ಮುಸ್ಲಿಂ, ಬುರೆಸ್ಟ್, ಪ್ರೆಸ್ಟಿಯನ್, ಸ್ಟಾಮಿಯಲ್, ಎಲ್ಲವೂ ಇವೆ. ಇವುಗಳಿಂದ ನಾವು ಪ್ರತ್ಯೇಕಗೊಳ್ಳಲು ಸಾಧ್ಯವಿಲ್ಲ. ಪ್ರತಿಯೊಂದು ನಮಗೆ ಬೆಸೆದುಕೊಂಡಿವೆ. ಪ್ರತಿಯೊಬ್ಬರು, ಉತ್ಸಾಹ, ಕನಸು, ಮತ್ತು ಮಹತ್ವದ ಗುರಿಯೊಂದಿಗೆ ಮುನ್ನಡೆಯಬೇಕು, ಸಾಧಿಸಬೇಕು. ನಮ್ಮ ಹಸ್ತದಲ್ಲಿ ಐದು ಬೆರಳುಗಳಿವೆ. ಒಂದು ಬೆರಳಿನಲ್ಲಿ ಚಪ್ಪಾಳೆ ಹೊಡೆದಾಗ ಬರುವ ಸದ್ದಿಗೂ ಐದು ಬೆರಳು ಸೇರಿಸಿ ಹೊಡೆದಾಗ ಬರುವ ಸದ್ದಿಗೂ ಸಾಕಷ್ಟು ವ್ಯತ್ಯಾಸವಿದೆ. ಹಾಗೆ ನಾವೆಲ್ಲವೂ ಜೊತೆಗೂಡಿ, ಒಟ್ಟಾಗಿ ಮುನ್ನಡೆಯಬೇಕು," ಎಂಬ ಸ್ಫೋರ್ತಿದಾಯಕ ಮಾತುಗಳನ್ನು ಅವರು ಹೇಳಿದ್ದರು.
First published:
April 25, 2019, 3:58 PM IST