Special Marriage Act: ಅಂತರ್ಜಾತಿ ವಿವಾಹ ಆಗುವವರಿಗೆ ಸಂಕಷ್ಟ ತಂದೊಡ್ಡಿದೆ ಈ ಹೊಸ ನಿಯಮ

ಮದುವೆ

ಮದುವೆ

ಇತ್ತೀಚೆಗೆ ನಟಿ ಸ್ವರಾ ಭಾಸ್ಕರ್‌ ಕೂಡ ಇದೇ ನಿಯಮದಡಿ ಮದುವೆ ಆಗಿದ್ದಾಗಿ ಪೋಸ್ಟ್‌ ಮಾಡಿದ್ದರು. ವಿಶೇಷ ವಿವಾಹ ಕಾಯ್ದೆ ಕೆಲ ಮಾನದಂಡಗಳನ್ನು ಹೊಂದಿದೆ.

  • Share this:

ಹೊಸದಿಲ್ಲಿ:  1954ರ ವಿಶೇಷ ವಿವಾಹ ಕಾಯಿದೆ, ಭಾರತದ ಸಂಸತ್ತು ಮತ್ತು ವಿದೇಶ-ದೇಶಗಳಲ್ಲಿರುವ ಎಲ್ಲಾ ಭಾರತೀಯ ಜನರಿಗೆ ವಿಶೇಷವಾದ ಮದುವೆ ರೂಪವನ್ನು ಒದಗಿಸಲು ಜಾರಿಗೊಳಿಸಿದ ಸಂಸತ್ತಿನ ಒಂದು ಕಾಯಿದೆ. ಅಂತರ್‌ ಜಾತಿ (Inter Caste), ಧರ್ಮ ವಿವಾಹಗಳು ಈ ಕಾನೂನಿನ ಅಡಿಯಲ್ಲಿ ನೆರವೇರುತ್ತವೆ. ಇತ್ತೀಚೆಗೆ ನಟಿ ಸ್ವರಾ ಭಾಸ್ಕರ್‌ ಕೂಡ ಇದೇ ನಿಯಮದಡಿ ಮದುವೆ ಆಗಿದ್ದಾಗಿ ಪೋಸ್ಟ್‌ ಮಾಡಿದ್ದರು. ವಿಶೇಷ ವಿವಾಹ ಕಾಯ್ದೆ ಕೆಲ ಮಾನದಂಡಗಳನ್ನು ಹೊಂದಿದೆ. ಅವುಗಳಲ್ಲಿ ಒಂದು ಈ 30 ದಿನಗಳ ನೋಟಿಸ್ (Notice) ಅವಧಿ. ಈ ಕ್ರಮಕ್ಕೆ ತೀರ ವಿರೋಧವಿದ್ದು, ಇದನ್ನು ತೆಗೆದು ಹಾಕುವಂತೆ ಈಗಾಗ್ಲೇ ಕೂಗು ಕೇಳಿಬಂದಿದೆ. ಅಂದರೆ ನೋಂದಣಿ ಕಚೇರಿಯಲ್ಲಿ ಈ ವಿಶೇಷ ವಿವಾಹವನ್ನು (Marriage) ನೋಂದಣಿ ಮಾಡಿದ ನಂತರ ಮೂವತ್ತು ದಿನಗಳ ಕಾಲವಕಾಶ ನೀಡಲಾಗುತ್ತದೆ.


ಉದ್ದೇಶಿತ ಮದುವೆಯ ಸೂಚನೆ ಪ್ರಕಟವಾದ ದಿನಾಂಕದಿಂದ ಮೂವತ್ತು ದಿನಗಳ ಮುಕ್ತಾಯದ ನಂತರ, ಯಾವುದೇ ವ್ಯಕ್ತಿಯು ಜೋಡಿಗಳ ವಿವಾಹವನ್ನು ವಿರೋಧಿಸದಿದ್ದಲ್ಲಿ, ಮದುವೆ ಸಮಾರಂಭವನ್ನು ಮಾಡಬಹುದು ಎಂಬ ಕಾನೂನು ಇದೆ. ಈ ನೋಟಿಸ್‌ ಪ್ರಕಟಣೆಯಲ್ಲಿ ವಿಶೇಷವಾಗಿ ದಂಪತಿಗಳ ಬಗ್ಗೆ ವಿವರವಾದ ವೈಯಕ್ತಿಕ ಮಾಹಿತಿ, ಅವರ ಹೆಸರುಗಳು, ಫೋನ್ ಸಂಖ್ಯೆಗಳು, ಜನ್ಮ ದಿನಾಂಕ, ಉದ್ಯೋಗ ಮತ್ತು ವಿಳಾಸಗಳನ್ನು ಪ್ರಕಟ ಮಾಡಲಾಗುತ್ತದೆ.


ಈ ನಿಯಮಕ್ಕೆ ಭಾರಿ ವಿರೋಧ
ಈ ನಿಬಂಧನೆಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಟೀಕೆ, ವಿರೋಧಗಳು ಇವೆ. ಏಕೆಂದರೆ ಅವುಗಳು ಸಾಮಾನ್ಯವಾಗಿ ಮದುವೆಗೆ ಒಪ್ಪಿಗೆ ನೀಡುವ ದಂಪತಿಗಳಿಗೆ ಇದು ಒಂದು ರೀತಿಯ ಕಿರುಕುಳ ನೀಡುತ್ತವೆ ಎನ್ನಲಾಗಿದೆ. 2009 ರಲ್ಲಿ, ದೆಹಲಿ ಹೈಕೋರ್ಟ್, ಗೌಪ್ಯತೆಯ ಹಕ್ಕನ್ನು ಒತ್ತಿಹೇಳಿದ್ದು, SMA ಅಡಿಯಲ್ಲಿ ಉದ್ದೇಶಿತ ಮದುವೆಯ ಸೂಚನೆಯನ್ನು ಅವರ ವಿಳಾಸಗಳನ್ನು ಪರಿಶೀಲಿಸಲು ಸಂಬಂಧಪಟ್ಟ ನ್ಯಾಯವ್ಯಾಪ್ತಿಯ ಪೊಲೀಸ್ ಠಾಣೆಯ ಮೂಲಕ ಎರಡೂ ಪಕ್ಷಗಳ ನಿವಾಸದ ವಿಳಾಸಗಳಿಗೆ ಪೋಸ್ಟ್ ಮಾಡುವ ವಿಧಾನವನ್ನು ರದ್ದುಗೊಳಿಸಿತು.


ಅಪಾಯ ತಂದೊಡ್ಡುವ ನಿಯಮ
“ಇಬ್ಬರು ವಯಸ್ಕರು ವೈವಾಹಿಕ ಯೋಜನೆಗಳನ್ನು ಅನಧಿಕೃತವಾಗಿ ಬಹಿರಂಗಪಡಿಸುವುದು, ಕೆಲವು ಸಂದರ್ಭಗಳಲ್ಲಿ, ಮದುವೆಗೆ ಅಪಾಯವನ್ನುಂಟುಮಾಡಬಹುದು. ಕೆಲವು ಸಂದರ್ಭಗಳಲ್ಲಿ, ಪೋಷಕರ ಹಸ್ತಕ್ಷೇಪದಿಂದಾಗಿ ತೊಂದರೆಯಾಗಬಹುದು” ಎಂದು ನ್ಯಾಯಾಲಯ ಹೇಳಿದೆ.


ಇದನ್ನೂ ಓದಿ: ಸೌದಿ ಬಳಿಕ ಯುದ್ಧಪೀಡಿತ ಸುಡಾನ್‌ನಿಂದ ಭಾರತೀಯ ಪ್ರಜೆಗಳನ್ನು ರಕ್ಷಣೆ ಮಾಡಿದ ಫ್ರಾನ್ಸ್


ಫೆಬ್ರವರಿ 2020 ರಲ್ಲಿ ಇಂತದ್ದೇ ಒಂದು ಘಟನೆ ನಡೆದಿದೆ. ದೆಹಲಿ ನಿವಾಸಿಗಳಾದ ಪರ್ವೀನ್ ಅನ್ಸಾರಿ ಮತ್ತು ರಾಮ್ ಸಿಂಗ್ ಯಾದವ್ ಅವರು 1954 ರ ವಿಶೇಷ ವಿವಾಹ ಕಾಯಿದೆ (ಎಸ್‌ಎಂಎ) ಅಡಿಯಲ್ಲಿ ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸಿದಾಗ, ಕೌಟುಂಬಿಕ ಹಿಂಸಾಚಾರದ ಭಯದಿಂದ ತಮ್ಮ ಅಂತರ್ಧರ್ಮೀಯ ವಿವಾಹವನ್ನು ಗುಟ್ಟಾಗಿ ಇಡಲು ಬಯಸಿದರು. ಆದರೆ ಅಧಿಕಾರಿಗಳು, ಸಂಬಂಧಪಟ್ಟ ಇಲಾಖೆ ನೋಟಿಸ್‌ ಬಿಡುಗಡೆ ಮಾಡಿದಾಗ ಎರಡೂ ಕುಟುಂಬಗಳಿಗೂ ಈ ವಿಚಾರ ತಿಳಿಯಿತು.


ಕುಟುಂಬಕ್ಕೆ ವಿಚಾರ ತಿಳಿದ ನಂತರ ಎರಡೂ ಕುಟುಂಬಗಳು ಜೋಡಿಗಳನ್ನು ಬೇರೆ ಬೇರೆ ಮಾಡಿತು. ಮತ್ತು ರಾಮ್ ಸಿಂಗ್ ಯಾದವ್‌ಗೆ ಬೆದರಿಕೆ ಬಂದ ಹಿನ್ನೆಲೆ ರಕ್ಷಣೆ ಪಡೆಯುವ ಸಲುವಾಗಿ ದೆಹಲಿ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದರು. ಕಾನೂನು ಹೋರಾಟಗಳ ನಂತರ ಇಬ್ಬರೂ ಮದುವೆಯಾದರೂ ಸಹ ಈ ನಿಯಮ ಅಂತರ್‌ಧರ್ಮೀಯ, ಅಂತರ್ಜಾತಿ ದಂಪತಿಗಳಿಗೆ ಅನಾನುಕೂಲವಾಗಿದೆ ಎಂದು ದಂಪತಿಗಳು ಹೇಳಿದ್ದಾರೆ.


ಅರ್ಜಿದಾರರ ಪರವಾಗಿ ಮಾತನಾಡಿದ ಹಿರಿಯ ವಕೀಲ ಡಾ ಅಭಿಷೇಕ್ ಮನು ಸಿಂಘ್ವಿ, ಇದು ಆಪಾಯ ಮತ್ತು ಹಿಂಸಾಚಾರಕ್ಕೆ ಆಹ್ವಾನ ನೀಡಿದಂತೆ ಎಂದು ಹೇಳಿದ್ದಾರೆ.


ಬೆದರಿಕೆಯಾಗಿ ನಿಯಮ ಬದಲಾಗಿದೆ
ಸೆಕ್ಷನ್ 7 ರ ಅಡಿಯಲ್ಲಿನ ನಿಬಂಧನೆಯು "ಯಾವುದೇ ವ್ಯಕ್ತಿ" ಮಾಹಿತಿಯನ್ನು ಪಡೆಯಲು ಮತ್ತು ಉದ್ದೇಶಿತ ವಿವಾಹಗಳಿಗೆ ಆಕ್ಷೇಪಣೆಗಳನ್ನು ವ್ಯಕ್ತಪಡಿಸಲು ಅನುಮತಿಸುತ್ತದೆ. ಆದರೆ ಇಂದು, ನೋಟಿಸ್ ನಿಬಂಧನೆಯು ಬೆದರಿಕೆ, ನೈತಿಕ ಪೋಲೀಸಿಂಗ್ ಮತ್ತು ಕುಟುಂಬ, ಕಾನೂನು ಜಾರಿ ಮತ್ತು ಜಾಗೃತ ಅಧಿಕಾರಿಗಳ ಹಸ್ತಕ್ಷೇಪದ ಸಾಧನವಾಗಿ ಮಾರ್ಪಟ್ಟಿದೆ ಎನ್ನಬಹುದು.


ಇದನ್ನೂ ಓದಿ: ತ್ರಿವರ್ಣ ಧ್ವಜ ಇದ್ದಿದಕ್ಕೆ ಗೋಲ್ಡನ್‌ ಟೆಂಪಲ್‌ಗಿಲ್ಲ ಎಂಟ್ರಿ! ಇದು ಪಂಜಾಬ್, ಭಾರತವಲ್ಲ ಅಂತ ಸಮರ್ಥನೆ!


ಮುಂಬೈನಲ್ಲಿ ವೈವಾಹಿಕ ಕಾನೂನನ್ನು ಅಭ್ಯಾಸ ಮಾಡುವ ವಕೀಲರಾದ ಅನಘಾ ನಿಂಬ್ಕರ್, SMA, 1954 ರ ಈ ನಿರ್ದಿಷ್ಟ ನಿಬಂಧನೆಯು ದಂಪತಿಗಳಿಗೆ ಸವಾಲುಗಳನ್ನು ಒಡ್ಡುವಂತಹ ನಿಯಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ನ್ಯಾಯಯುತ ನಿಯಮ ಎಂದ ಕಾನೂನು ಮತ್ತು ನ್ಯಾಯ ಸಚಿವಾಲಯವು
ಹೀಗಾಗಿ 30 ದಿನಗಳ ಸಾರ್ವಜನಿಕ ನೋಟಿಸ್ ನೀಡುವಿಕೆಯನ್ನು ತೆಗೆದುಹಾಕಲು ಮನವಿ ಮಾಡಲು ಈ ಹಿಂದೆ ಹಲವಾರು ಪ್ರಯತ್ನಗಳು ನಡೆದಿವೆಯಾದರೂ ಇನ್ನೂ ಸಹ ಪ್ರಯೋಜನವಾಗಿಲ್ಲ.


ಆದಾಗ್ಯೂ, ಅಂತರ್‌ಧರ್ಮೀಯ ದಂಪತಿಗಳ ಸವಾಲಿಗೆ ಪ್ರತಿಕ್ರಿಯೆಯಾಗಿ, ಕಾನೂನು ಮತ್ತು ನ್ಯಾಯ ಸಚಿವಾಲಯವು 2021 ರಲ್ಲಿ ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, 30 ದಿನಗಳ ಸಾರ್ವಜನಿಕ ಸೂಚನೆಯು "ನ್ಯಾಯಯುತ ಮತ್ತು ಸಮಂಜಸವಾಗಿದೆ" ಎಂದು ಹೇಳಿದೆ. ಮೂಲಭೂತ ಹಕ್ಕುಗಳು ಸಂಪೂರ್ಣವಲ್ಲ ಮತ್ತು ಅವುಗಳ ಮೇಲೆ ಸಮಂಜಸವಾದ ನಿರ್ಬಂಧಗಳನ್ನು ವಿಧಿಸಬಹುದು ಎಂದು ಸಚಿವಾಲಯ ವಾದಿಸಿದೆ.




ಅಂತರ್ಧರ್ಮೀಯ ಮತ್ತು ಅಂತರ್ಜಾತಿ ದಂಪತಿಗಳಿಗೆ ಸಹಾಯ ಮಾಡುವ ಲಾಭರಹಿತ ಧನಕ್ ಫಾರ್ ಹ್ಯುಮಾನಿಟಿಯ ಸಹ-ಸಂಸ್ಥಾಪಕ ಆಸಿಫ್ ಇಕ್ಬಾಲ್ ಅವರು ನೋಟಿಸ್ ನಿಬಂಧನೆಯು ದೊಡ್ಡ ಅಡಚಣೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

top videos


    ಒಟ್ಟಾರೆ ಈ ನಿಯಮ ಕಾಯ್ದೆ ಅಡಿ ವಿವಾಹ ಆಗುವ ಜೋಡಿಗಳಿಗೆ ಅನುಕೂಲಕ್ಕಿಂತ ಅನಾನುಕೂಲ ಹೆಚ್ಚಿಸಿದೆ ಏನ್ನುತಿದ್ದಾರೆ ಹಲವರು.

    First published: