EXPLAINED: ದೋಹಾ ಒಪ್ಪಂದ ಉಲ್ಲಂಘನೆ; ಅಮೇರಿಕಾ ಮೇಲೆ ಕೋಪಿಸಿಕೊಂಡ ತಾಲಿಬಾನ್​​

ಯುಎನ್ ಸಹ ಈ ರೀತಿಯ ನಿರ್ಬಂಧಗಳ ಪಟ್ಟಿಯನ್ನು ನಿರ್ವಹಿಸುತ್ತದೆ, ಇದು ಗೊತ್ತುಪಡಿಸಿದ ಸಂಸ್ಥೆಗಳು ಮತ್ತು ವ್ಯಕ್ತಿಗಳ ಮೇಲೆ ಅದೇ ರೀತಿಯ ನಿಷೇಧಗಳನ್ನು ಸೂಚಿಸುತ್ತದೆ. ತಾಲಿಬಾನ್ ಅನ್ನು 1999 ರಲ್ಲಿ ಮೊದಲ ಬಾರಿಗೆ ಭಯೋತ್ಪಾದಕ ಸಂಘಟನೆಯೆಂದು ಘೋಷಿಸಲಾಯಿತು ಮತ್ತು "ಅದರ ಅನೇಕ ಸಂಬಂಧಿತ ಘಟಕಗಳು ಮತ್ತು ವ್ಯಕ್ತಿಗಳನ್ನು ಪಟ್ಟಿ ಮಾಡುವುದನ್ನು ಸಹ ಈ ಸಂಸ್ಥೆ ಮಾಡಿತು". ಆದಾಗ್ಯೂ, ಕುತೂಹಲಕಾರಿಯಾದ ಅಂಶ ಏನೆಂದರೆ, ತಾಲಿಬಾನ್ ಅನ್ನು ಯುಎಸ್ ಭಯೋತ್ಪಾದಕ ಸಂಘಟನೆ ಎಂದು ತನ್ನ ಪಟ್ಟಿಯಲ್ಲಿ ಸೇರಿಸಿಲ್ಲ. 

ತಾಲಿಬಾನ್ ನಾಯಕರು

ತಾಲಿಬಾನ್ ನಾಯಕರು

 • Share this:
  Taliban: ವಾಷಿಂಗ್ಟನ್ ದೋಹಾ ಒಪ್ಪಂದದ  ಪ್ರಕಾರ ನಡೆದುಕೊಂಡಿಲ್ಲ ಎಂದು ತಾಲಿಬಾನ್ ದೂರಿದೆ. ಈ ಒಪ್ಪಂದದ ಉಲ್ಲಂಘನೆ ಮಾಡಲಾಗಿದೆ ಏಕೆಂದರೆ, ಈ ಒಪ್ಪಂದಕ್ಕೆ ಬಂದ ಮೇಲೆಯೇ ಅಮೆರಿಕದ ಸೈನ್ಯವು ಅಫ್ಘಾನಿಸ್ತಾನವನ್ನು ತೊರೆಯಲು ತಾಲಿಬಾನ್​ ದಾರಿ ಮಾಡಿಕೊಟ್ಟಿತು ಎಂದು ಹೇಳಲಾಗಿದೆ. 

  ತಾಲಿಬಾನ್ ನಿಯೋಜಿತ ಪ್ರಧಾನ ಮಂತ್ರಿಯಿಂದ ಹಿಡಿದು ಆಂತರಿಕ ಮಂತ್ರಿಯವರೆಗೆ ಒಂದಷ್ಟು ನಾಯಕರನ್ನು ಭಯೋತ್ಪಾದಕರ ಹಾಗೂ ಹಿಟ್​ ಲೀಸ್ಟ್​ನಲ್ಲಿ ಯುಎಸ್​ ಸರ್ಕಾರ ಬೇಕಂತಲೇ ಸೇರಿಸಿದೆ. ತಾಲಿಬಾನ್ ಸರ್ಕಾರದ ಪ್ರಮುಖ ನಾಯಕರುಗಳ ಹೆಸರನ್ನು 9/11 ದಾಳಿಯ ನಂತರ ಯುಎಸ್ ಸರ್ಕಾರ ಸೇರಿಸಿತು . ಆದರೆ ಇತ್ತೀಚೆಗೆ ನಡೆದ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ತಾಲಿಬಾನಿಗಳು ಅಮೇರಿಕಾ ವಿರುದ್ದ, ಅದರ ರಾಜಕೀಯ ನಡೆಯ ವಿರುದ್ದ ಸಾಕಷ್ಟು  ಅತೃಪ್ತರಾಗಿದ್ದಾದರೂ ಏಕೆ ಎಂಬುದನ್ನು ಇಲ್ಲಿ ನೋಡೋಣ.

  ತಾಲಿಬಾನ್ ಸರ್ಕಾರದಲ್ಲಿ ಎಷ್ಟು ಜನ ಕುಖ್ಯಾತರಿದ್ದಾರೆ ವಿವರ ಇಲ್ಲಿದೆ...!


  ತಾಲಿಬಾನ್ ಬಿಡುಗಡೆ ಮಾಡಿದ ಹೊಸ ಅಫ್ಘಾನ್ ಸರ್ಕಾರವು 33 ಸದಸ್ಯರನ್ನು ಒಳಗೊಂಡಿದ್ದು ಮೂರನೇ ಎರಡರಷ್ಟು ಜನರು ವಿಶ್ವಸಂಸ್ಥೆ (ಯುಎನ್) ಅಥವಾ ಯುಎಸ್ ನಿರ್ಬಂಧಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ವರದಿಗಳು ಹೇಳುತ್ತವೆ. ಅವರಲ್ಲಿ ಕನಿಷ್ಠ 14 ಜನರನ್ನು ಯುಎನ್ ಸೆಕ್ಯುರಿಟಿ ಕೌನ್ಸಿಲ್ ಭಯೋತ್ಪಾದನೆ ಕಪ್ಪುಪಟ್ಟಿಯಲ್ಲಿ ಸೇರಿಸಲಾಗಿದೆ, ಹೊಸದಾಗಿ ನೇಮಕಗೊಂಡ ಅಫ್ಘಾನ್ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಮೂಲದ ಕುಖ್ಯಾತ ಹಕ್ಕಾನಿ ನೆಟ್ವರ್ಕಿನ ನಾಯಕ ಹಾಗೂ "ತಾಲಿಬಾನಿನ ಪ್ರಮುಖ ಆಯುಧ, ಶಕ್ತಿ" ಎಂದು ವಿವರಿಸಲಾಗಿದೆ. "ಆದರೂ ಈ ಸರ್ಕಾರ ತನ್ನದೇ ಆದ ಸ್ವತಂತ್ರ ಕ್ರಮಾನುಗತ ಮತ್ತು ರಚನೆಯನ್ನು ಈ ಸರ್ಕಾರ ನಿರ್ವಹಿಸುತ್ತದೆ ಎಂದು ವಿವರಿಸಲಾಗಿದೆ.

  ಸಿರಾಜುದ್ದೀನ್ ಎನ್ನುವ ಭಯೋತ್ಪಾದಕನ ತಲೆಯ ಮೇಲೆ 10 ಮಿಲಿಯನ್ ಡಾಲರ್ ಬಹುಮಾನವನ್ನು ಯುಎಸ್ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ) ನಿಂದ ಘೋಷಿಸಲಾಗಿತ್ತು.  ಸಿರಾಜುದ್ದೀನ್ (Sirajuddin) ಹೊರತಾಗಿ, ಹಕ್ಕಾನಿ ನೆಟ್‌ವರ್ಕ್‌ನ (Haqqani Network ) ಇತರ ನಾಲ್ಕು ಸದಸ್ಯರು ಹೊಸ ಅಫ್ಘಾನ್ ಸರ್ಕಾರದ ಭಾಗವಾಗಿದ್ದಾರೆ ಮತ್ತು ಅವರ ಅಲೊವನ್ನು ಕೂಡ ಯುಎನ್, ಯುಎಸ್ ಅಥವಾ ಐರೋಪ್ಯ ಒಕ್ಕೂಟದಿಂದ ಗೊತ್ತುಪಡಿಸಲಾಗಿದೆ ಎಂಬುದು ಸಹ ಇಲ್ಲಿ ನಾವು ಗಮನಿಸಬೇಕಾದ ಅಂಶ  ಹಾಲಿ ಪ್ರಧಾನಿ, ಮುಲ್ಲಾ ಮುಹಮ್ಮದ್ ಹಸನ್ ಅಖುಂಡ್ ( Mullah Muhammad Hassan Akhund)  ಮತ್ತು ಅವರ ಇಬ್ಬರು ಸಹೋದ್ಯೋಗಿಗಳು - ಮುಲ್ಲಾ ಅಬ್ದುಲ್ ಘನಿ ಬರದಾರ್ (Mullah Abdul Ghani Baradar) ಮತ್ತು ಮೌಲವಿ ಅಬ್ದುಲ್ ಸಲಾಂ ಹನಾಫಿ ಕೂಡ ವಿಶ್ವಸಂಸ್ಥೆಯ ಕಪ್ಪು ಪಟ್ಟಿಯಲ್ಲಿದ್ದಾರೆ. ಹಾಲಿ ರಕ್ಷಣಾ ಸಚಿವ ಮುಲ್ಲಾ ಯಾಕೂಬ್ (Maulavi Abdul Salam Hanafi) ಹಾಲಿ ವಿದೇಶಾಂಗ ಸಚಿವ ಮುಲ್ಲಾ ಅಮೀರ್ ಖಾನ್ ಮುಖ್ತಾಕಿ ಮತ್ತು ಅವರ ಉಪ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್‌ಜಾಯ್ ಅವರನ್ನು ಕೂಡ UNSC 1988 ನಿರ್ಬಂಧಗಳ ಸಮಿತಿಯ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ.


  ಯುಎಸ್ ಸ್ಟೇಟ್ ಸೆಕ್ರೆಟರಿಯಿಂದ ಗೊತ್ತುಪಡಿಸಿದ ವಿದೇಶಿ ಭಯೋತ್ಪಾದಕ ಸಂಘಟನೆಗಳ (ಎಫ್‌ಟಿಒ) ಪಟ್ಟಿಯನ್ನು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ನಿರ್ವಹಿಸುತ್ತದೆ, ಇದು ಸರ್ಕಾರವು "ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ" ಮತ್ತು "ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲವನ್ನು ಕಡಿತಗೊಳಿಸುವ ಮತ್ತು ಗುಂಪುಗಳ ಮೇಲೆ ಕ್ರಮೇಣ ಒತ್ತಡ ಹೇರುವ ಪರಿಣಾಮಕಾರಿ ವಿಧಾನವಾಗಿದೆ ಹಾಗೂ ಭಯೋತ್ಪಾದಕರು ತಮ್ಮ ಚಟುವಟಿಕೆಗಳನ್ನು ವಿಸ್ತರಿಸಲು ಮಾಡುತ್ತಿದ್ದ ಒಂದಷ್ಟು ವ್ಯವಹಾರಗಳಿಗೆ ಕಡಿವಾಣ ಹಾಕಲು ಇದರ ಮೂಲಕವೂ ಪ್ರಯತ್ನ ಮಾಡಲಾಗುತ್ತದೆ.

  ನಂತರ US ಟ್ರೆಜರಿ ಇಲಾಖೆಯ (Office of Foreign Assets Control ) ಭಾಗವಾಗಿರುವ ವಿದೇಶಿ ಆಸ್ತಿ ನಿಯಂತ್ರಣ ಕಚೇರಿ (OFAC)ಯು, "ಉದ್ದೇಶಿತ ದೇಶಗಳ ಪರವಾಗಿ ಕಾರ್ಯನಿರ್ವಹಿಸುವ ವ್ಯಕ್ತಿಗಳು ಮತ್ತು ಕಂಪನಿಗಳ ಪಟ್ಟಿಯನ್ನು ಪ್ರಕಟಿಸುತ್ತದೆ." "ವ್ಯಕ್ತಿಗಳು, ಗುಂಪುಗಳು, ಮತ್ತು ಭಯೋತ್ಪಾದಕರು ಮತ್ತು ಮಾದಕವಸ್ತು ಕಳ್ಳಸಾಗಣೆದಾರರಂತಹ ವ್ಯಕ್ತಿಗಳ" ಘಟಕಗಳ ಪಟ್ಟಿಯನ್ನು ಇಡುತ್ತದೆ. ಈ ಪಟ್ಟಿಯನ್ನು 'ವಿಶೇಷವಾಗಿ ಗೊತ್ತುಪಡಿಸಿದ ರಾಷ್ಟ್ರಗಳು' ಅಥವಾ SDN ಗಳ ಪಟ್ಟಿ ಎಂದು ಕರೆಯಲಾಗುತ್ತದೆ.

  SDN ಪಟ್ಟಿಯಲ್ಲಿ ಇರುವುದು ವ್ಯಕ್ತಿಯ ಅಥವಾ ಆತನ  ಸ್ವತ್ತುಗಳನ್ನು ನಿರ್ಬಂಧಿಸಲು ಕಾರಣವಾಗುತ್ತದೆ. ಹಾಗೂ ಅಮೆರಿಕದ ನಾಗರಿಕರು ಅವರೊಂದಿಗೆ ವ್ಯವಹರಿಸುವುದನ್ನು ನಿರ್ಬಂಧಿಸಲಾಗಿದೆ. ಗೊತ್ತುಪಡಿಸಿದ FTO ನ ಸದಸ್ಯರು, US ಪ್ರಜೆಗಳಲ್ಲದಿದ್ದರೆ, US ಗೆ ಪ್ರವೇಶಿಸಲು ಅನುಮತಿ ನೀಡಲಾಗುವುದಿಲ್ಲ, ಅಥವಾ ಅವರು ದೇಶದಲ್ಲಿದ್ದರೆ ಗಡೀಪಾರು ಮಾಡಬೇಕಾಗುತ್ತದೆ ಎಂದು US ತನ್ನ ನಿಯಮದಲ್ಲಿ ತಿಳಿಸಿದೆ.


  ದೇಶಗಳು ಅಥವಾ ವ್ಯಕ್ತಿಗಳನ್ನು ಈ ರೀತಿ ಪಟ್ಟಿ ಮಾಡಿ ಗೊತ್ತುಪಡಿಸುವುದರ ಹಿಂದಿನ ದೃಷ್ಟಿಕೋನವೆಂದರೆ "ಭಯೋತ್ಪಾದನೆಗೆ ಹಣಕಾಸು ನಿಗ್ರಹಿಸುವುದು ಮತ್ತು ಇತರ ರಾಷ್ಟ್ರಗಳನ್ನು ಅಂತಾರಾಷ್ಟ್ರೀಯವಾಗಿ ಕಳಂಕವಾಗಿಸಿ ಮತ್ತು ಪ್ರತ್ಯೇಕಿಸುವ ಮೂಲಕ ಎಲ್ಲರೂ ಕೂಡ ಅದೇ ರೀತಿ ಮಾಡಲು ಪ್ರೋತ್ಸಾಹಿಸುವುದು." ಭಯೋತ್ಪಾದಕ ಪದನಾಮದ ಮೂಲಕ "ಹೆಸರಿಸಲಾದ ಸಂಸ್ಥೆಗಳಿಗೆ ದೇಣಿಗೆ ಅಥವಾ ಕೊಡುಗೆಗಳನ್ನು ಮತ್ತು ಆರ್ಥಿಕ ವಹಿವಾಟುಗಳನ್ನು" ತಡೆಯುವ ಉದ್ದೇಶ ಹೊಂದಿದೆ. ಇದು ಅಂತಹ ಸಂಸ್ಥೆಗಳ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸುತ್ತದೆ ಮತ್ತು "ಹೆಸರಿಸಲಾದ ಸಂಸ್ಥೆಗಳ ಬಗ್ಗೆ ಎಚ್ಚರಿಕೆಯನ್ನು ಇತರ ಸರ್ಕಾರಗಳಿಗೆ ಪರೋಕ್ಷವಾಗಿ ಸೂಚಿಸುತ್ತದೆ" ಎಂದು ಯುಎಸ್ ರಾಜ್ಯ ಇಲಾಖೆ ಹೇಳಿದೆ.


  ಯುಎನ್ ಸಹ ಈ ರೀತಿಯ ನಿರ್ಬಂಧಗಳ ಪಟ್ಟಿಯನ್ನು ನಿರ್ವಹಿಸುತ್ತದೆ, ಇದು ಗೊತ್ತುಪಡಿಸಿದ ಸಂಸ್ಥೆಗಳು ಮತ್ತು ವ್ಯಕ್ತಿಗಳ ಮೇಲೆ ಅದೇ ರೀತಿಯ ನಿಷೇಧಗಳನ್ನು ಸೂಚಿಸುತ್ತದೆ. ತಾಲಿಬಾನ್ ಅನ್ನು 1999 ರಲ್ಲಿ ಮೊದಲ ಬಾರಿಗೆ ಭಯೋತ್ಪಾದಕ ಸಂಘಟನೆಯೆಂದು ಘೋಷಿಸಲಾಯಿತು ಮತ್ತು "ಅದರ ಅನೇಕ ಸಂಬಂಧಿತ ಘಟಕಗಳು ಮತ್ತು ವ್ಯಕ್ತಿಗಳನ್ನು ಪಟ್ಟಿ ಮಾಡುವುದನ್ನು ಸಹ ಈ ಸಂಸ್ಥೆ ಮಾಡಿತು". ಆದಾಗ್ಯೂ, ಕುತೂಹಲಕಾರಿಯಾದ ಅಂಶ ಏನೆಂದರೆ, ತಾಲಿಬಾನ್ ಅನ್ನು ಯುಎಸ್ ಭಯೋತ್ಪಾದಕ ಸಂಘಟನೆ ಎಂದು ತನ್ನ ಪಟ್ಟಿಯಲ್ಲಿ ಸೇರಿಸಿಲ್ಲ.  ದೋಹಾ ಒಪ್ಪಂದ ಏನು ಹೇಳುತ್ತದೆ?


   ಭಯೋತ್ಪಾದಕ ಚಟುವಟಿಕೆ ನಡೆಸಿದರೂ ಕೂಡ ತಾಲಿಬಾನ್‌ ಅನ್ನು ಒಂದು ಭಯೋತ್ಪಾದಕ ಗುಂಪಾಗಿ ಯುಎಸ್ ಪಟ್ಟಿ ಮಾಡದಿದ್ದರೂ, ಅದರ ಹಲವಾರು ಸದಸ್ಯರು ನಿರ್ಬಂಧಗಳನ್ನು ಎದುರಿಸುತ್ತಾ ಇದ್ದಾರೆ. ಆದಾಗ್ಯೂ, ತಾಲಿಬಾನ್ ಈಗ ತನ್ನ ಸದಸ್ಯರ ಹೆಸರುಗಳನ್ನು ಅಂತಹ ಪಟ್ಟಿಯಿಂದ ತೆಗೆಯಬೇಕು ಎಂದು ವಾದಿಸುತ್ತಿದೆ, ಏಕೆಂದರೆ ಅದು ಯುಎಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಅಮೆರಿಕದ ಸೈನಿಕರು ಅಫ್ಘಾನಿಸ್ತಾನವನ್ನು ತೊರೆಯಲು ಈ ಒಪ್ಪಂದವೇ ದಾರಿ ಮಾಡಿಕೊಟ್ಟಿದ್ದು ಹಾಗೂ ಇದರಿಂದ ಅಮೇರಿಕಾದ ಸೈನಿಕರು ದೇಶ ತೊರೆಯುತ್ತಿದ್ದ ವೇಳೆ ಯಾವುದೇ ಸಂಘರ್ಷ ನಡೆಸಲಿಲ್ಲ ಎಂದು ಹೇಳಲಾಗಿದೆ.


  ದೋಹಾ ಒಪ್ಪಂದವು (Doha agreement ) ಇತರ ವಿಷಯಗಳ ಜೊತೆಗೆ, ಯುಎಸ್ "ಪ್ರಸ್ತುತ ಯುಎಸ್ ನಿರ್ಬಂಧಗಳ ಆಡಳಿತಾತ್ಮಕ ಪರಿಶೀಲನೆ ಮತ್ತು" ತಾಲಿಬಾನ್ ಸದಸ್ಯರ ತಲೆಗೆ ಕಟ್ಟಿರುವ "ಬಹುಮಾನಗಳ ಪಟ್ಟಿಯನ್ನು" ಆಗಸ್ಟ್ 27, 2020 ರೊಳಗೆ ತೆಗೆದುಹಾಕಲಾಗುವುದು ಎಂದು ಹೇಳಲಾಗಿತ್ತು. ಮೇ 29, 2020 ರೊಳಗೆ ಈ ಉದ್ದೇಶವನ್ನು ಸಾಧಿಸುವ ಗುರಿಯೊಂದಿಗೆ ತಾಲಿಬಾನ್ ಸದಸ್ಯರನ್ನು ನಿರ್ಬಂಧ ಪಟ್ಟಿಯಿಂದ ತೆಗೆದುಹಾಕಲಾಗುವುದು ಎಂದೂ ಸಹ ಮಾತು ನೀಡಲಾಗಿತ್ತು. "ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಅಫ್ಘಾನಿಸ್ತಾನದ ಇತರ ಸದಸ್ಯರೊಂದಿಗೆ ಯುಎಸ್ ರಾಜತಾಂತ್ರಿಕ ಮಾತುಕತೆಯನ್ನೂ ಸಹ ಪ್ರಾರಂಭಿಸಲಾಗುವುದು" ಎಂದು ಈ ಒಪ್ಪಂದದಲ್ಲಿ ಹೇಳಲಾಗಿತ್ತು.

  ಆದರೆ ಸೆಪ್ಟೆಂಬರ್ 8 ರಂದು ನೀಡಿದ ಒಂದು ಹೇಳಿಕೆಯಲ್ಲಿ, ತಾಲಿಬಾನ್ "ಇಸ್ಲಾಮಿಕ್ ಎಮಿರೇಟ್ನ ಕೆಲವು ಕ್ಯಾಬಿನೆಟ್ ಸದಸ್ಯರು ಅಥವಾ ದಿವಂಗತ ಹಕ್ಕಾನಿ ಸಾಹಿಬ್ ಅವರ ಕುಟುಂಬ ಸದಸ್ಯರು ಯುಎಸ್ ಮಾಡಿರುವ ಕಪ್ಪುಪಟ್ಟಿಯಲ್ಲಿದ್ದಾರೆ ಎಂದು ಪೆಂಟಗನ್ ಅಧಿಕಾರಿಗಳು ಹೇಳಿದ್ದಾರೆ." ಪೆಂಟಗನ್ ಯುಎಸ್​ನ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿಯಾಗಿದೆ  'ದಿವಂಗತ ಹಕ್ಕಾನಿ ಸಾಹಿಬ್' ಹಕ್ಕಾನಿ ನೆಟ್ವರ್ಕ್ ಅನ್ನು  ಸೋವಿಯತ್ ವಿರೋಧಿ ಪ್ರತಿರೋಧದ ನಾಯಕ ಜಲಾಲುದ್ದೀನ್ ಹಕ್ಕಾನಿ ಸ್ಥಾಪಿಸಿದರು.

  "ಇಸ್ಲಾಮಿಕ್ ಎಮಿರೇಟ್ ಇದನ್ನು ದೋಹಾ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಎಂದು ಪರಿಗಣಿಸುತ್ತದೆ, ಇದು ಯುಎಸ್ ಅಥವಾ ಅಫ್ಘಾನಿಸ್ತಾನದ ಹಿತಾಸಕ್ತಿಗೆ ಸಂಬಂಧಿಸಿಲ್ಲ" ಎಂದು ಹೇಳಿಕೆಯಲ್ಲಿ ಕಟುವಾಗಿ ಹೇಳಿದೆ.


  ಈ ದೋಹಾ ಒಪ್ಪಂದದ ಲಾಭವನ್ನು ತಾಲಿಬಾನ್​ ತನ್ನ ಪರವಾಗಿ ತಿರುಗಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಏಕೆಂದರೆ ಈಗ ಹೊರ ಜಗತ್ತಿಗೆ ತಾನು ತೆರೆದುಕೊಳ್ಳಲು ಹಾಗೂ ಇತರೇ ದೇಶಗಳ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಇದನ್ನು ಕಾಯಿನ್​​ ಆಗಿ ಬಳಸಿಕೊಳ್ಳಲು ಹವಣಿಸುತ್ತಿದೆ.

  ಇದನ್ನೂ ಓದಿ: ಕೊರಗ ಸಮುದಾಯದ ಎಲ್ಲಾ ಸಮಸ್ಯೆಗಳಿಗೂ ತಾಲೂಕು ಮಟ್ಟದಲ್ಲೇ ಪರಿಹಾರ: ಸಚಿವ ಎಸ್ ಅಂಗಾರ

  ಈ ಒಪ್ಪಂದದ ಉಲ್ಲಂಘನೆ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಿ ಲಾಭ ಪಡೆದುಕೊಳ್ಳಲು ಇದು ಸರಿಯಾದ ವೇದಿಕೆ ಎಂದು ರಾಜಕೀಯ ಪಂಡಿತರು ತಮ್ಮ ಲೆಕ್ಕಾಚಾರವನ್ನು ಮುಂದಿಡುತ್ತಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.  Published by:HR Ramesh
  First published: