ರಾಣಿ ಎಲಿಜಬೆತ್ II (Queen Elizabeth II), ಬ್ರಿಟನ್‌ನ ಸರ್ವಾಧಿಕಾರಿ ದೊರೆ ತಮ್ಮ96 ನೇ ವಯಸ್ಸಿನಲ್ಲಿ ನಿಧನರಾದರು. ಇಂಗ್ಲೆಂಡ್ ಸೇರಿದಂತೆ ವಿಶ್ವವೇ ರಾಣಿಯ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿವೆ. ರಾಣಿ ಎಲಿಜಬೆತ್ II ಅವರ ಅಂತ್ಯಕ್ರಿಯೆಯ (funeral) ಹಿಂದಿನ ದಿನ ಭಾನುವಾರ ಬ್ರಿಟನ್‌ನ ದೀರ್ಘಾವಧಿಯ ಆಡಳಿತಗಾರರನ್ನು ಸ್ಮರಿಸಲು ಬಕಿಂಗ್‌ಹ್ಯಾಮ್ ಅರಮನೆಯಲ್ಲಿ (Buckingham Palace) ವಿಶ್ವನಾಯಕರು ಜಮಾಯಿಸಿದರು. ಕಿಂಗ್ ಚಾರ್ಲ್ಸ್ III ಆತಿಥ್ಯ ವಹಿಸಿದ್ದ ಈ ಸ್ಮರಣೀಯ ಕೂಟದಲ್ಲಿ ವಿಶ್ವದಾದ್ಯಂತವಿರುವ ಅಧ್ಯಕ್ಷರು, ಪ್ರಧಾನ ಮಂತ್ರಿಗಳು ಮತ್ತು ರಾಜಮನೆತನದ (Royal family) ಸದಸ್ಯರು ಸೇರಿದಂತೆ ಸುಮಾರು 500 ಜನರು ಸೇರಿದ್ದರು.
ಅತಿಥಿಗಳನ್ನು ಸ್ವಾಗತಿಸಲು ನೆರೆದಿದ್ದ ರಾಜಕುಟುಂಬ
ಪ್ರಿನ್ಸ್ ವಿಲಿಯಂ ಮತ್ತು ಕೇಟ್ ಮಿಡಲ್ಟನ್ - ಪ್ರಿನ್ಸ್ ಮತ್ತು ಪ್ರಿನ್ಸೆಸ್ ಆಫ್ ವೇಲ್ಸ್, ಪ್ರಿನ್ಸ್ ಎಡ್ವರ್ಡ್ ಮತ್ತು ಸೋಫಿ - ಅರ್ಲ್ ಮತ್ತು ಕೌಂಟೆಸ್ ಆಫ್ ವೆಸೆಕ್ಸ್, ಅನ್ನಿ - ಪ್ರಿನ್ಸೆಸ್ ರಾಯಲ್ ಮತ್ತು ರಾಜಮನೆತನದ ಇತರ ಕೆಲಸ ಮಾಡುವ ಸದಸ್ಯರು ಕಿಂಗ್ ಚಾರ್ಲ್ಸ್ ಮತ್ತು ರಾಣಿ ಕಾನ್ಸೋರ್ಟ್ ಕ್ಯಾಮಿಲ್ಲಾ ಅತಿಥಿಗಳನ್ನು ಸ್ವಾಗತಿಸಿದರು. ಪ್ರಿನ್ಸ್ ಹ್ಯಾರಿ, ಮೇಘನ್ ಮಾರ್ಕೆಲ್ ಅವರ ಅನುಪಸ್ಥಿತಿ ಉಪಸ್ಥಿತರಿದ್ದವರ ಗಮನ ಸೆಳೆಯಿತು.
ಈ ಕಾರ್ಯಕ್ರಮಕ್ಕೆ ಹ್ಯಾರಿ ದಂಪತಿಗಳಿಗೆ ಆಹ್ವಾನವಿದ್ದರೂ ರಾಜಮನೆತನದಲ್ಲಿ ಕೆಲಸ ಮಾಡುವ ಸದಸ್ಯರಿಗೆ ಮಾತ್ರ ಎಂದು ಅರಮನೆಯ ಅಧಿಕಾರಿಗಳು ತಿಳಿಸಿದ್ದರಿಂದ ದಂಪತಿಗಳು ಹಾಜರಾಗುವ ಸಾಧ್ಯತೆ ಇರಲಿಲ್ಲ. ಒಂದು ರೀತಿಯ ಗೊಂದಲ ಆಹ್ವಾನದ ವಿಷಯದಲ್ಲಿ ಉಂಟಾಗಿತ್ತು. ರಾಜಮನೆತನದ ಸಹಾಯಕರು ಹ್ಯಾರಿ ದಂಪತಿಗಳು ಏಕೆ ಆಹ್ವಾನವನ್ನು ಸ್ವೀಕರಿಸಿದ್ದಾರೆ ಎಂಬುದು ಇನ್ನೂ ಅಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಪ್ರಿನ್ಸ್ ಹ್ಯಾರಿಗೆ ಮಿಲಿಟರಿ ಸಮವಸ್ತ್ರ ಧರಿಸಲು ನಿರಾಕರಿಸಲಾಯಿತು
ಇದಕ್ಕೂ ಮೊದಲು ಪ್ರಿನ್ಸ್ ಹ್ಯಾರಿಗೆ ಮಿಲಿಟರಿ ಸಮವಸ್ತ್ರ ಧರಿಸುವ ಹಕ್ಕನ್ನು ನಿರಾಕರಿಸಲಾಯಿತು. ಆದರೆ ಸಂಜೆ ರಾಣಿಯ ಶವಪೆಟ್ಟಿಗೆಯ ಬಳಿ ಮೊಮ್ಮಕ್ಕಳ ಜಾಗರಣೆ ಸಮಯದಲ್ಲಿ ಸಮವಸ್ತ್ರ ಧರಿಸಲು ಅನುಮತಿಸಲಾಯಿತು.
ಇದನ್ನೂ ಓದಿ: Queen Elizabeth and Prince Philip: ರಾಣಿ ಎಲಿಜಬೆತ್ ಮತ್ತು ಪ್ರಿನ್ಸ್ ಫಿಲಿಪ್ ಅವರ ಬದುಕಿನ ಅಪರೂಪದ ಚಿತ್ರಗಳು
ಫೆಬ್ರವರಿ 2021 ರಲ್ಲಿ ಹ್ಯಾರಿ ಹಾಗೂ ಮೇಘನ್ ರಾಜಮನೆತನದ ಕರ್ತವ್ಯಗಳಿಂದ ದೂರಸರಿದಿರುವುದರಿಂದ ಅವರು ರಾಜಮನೆತನದ ಕಾರ್ಯನಿರ್ವಹಿಸುವ ಸದಸ್ಯರಲ್ಲ. ಪ್ರಿನ್ಸ್ ಹ್ಯಾರಿ ದಂಪತಿಗಳ ನಿರ್ಧಾರದಿಂದ ರಾಜಮನೆತನದ ಸದಸ್ಯರು ದುಃಖಿತರಾಗಿದ್ದರೂ ಡ್ಯೂಕ್ ಹಾಗೂ ಡಚಸ್ ಕುಟುಂಬದ ಹೆಚ್ಚು ಪ್ರೀತಿ ಪಾತ್ರ ಸದಸ್ಯರಾಗಿದ್ದಾರೆ ಎಂದು ಬಕಿಂಗ್ಹ್ಯಾಮ್ ಅರಮನೆಯು ಉಲ್ಲೇಖಿಸಿತ್ತು. ರಾಣಿಗೆ ಪುಷ್ಪ ನಮವನ್ನು ಸಲ್ಲಿಸಲು ದಂಪತಿಗಳಿಬ್ಬರನ್ನು ಪ್ರಿನ್ಸ್ ವಿಲಿಯಂ ಹಾಗೂ ಕೇಟ್ ಮಿಡ್ಲಟನ್ ಸೇರಿಕೊಂಡಿದ್ದರು.
ವೆಸ್ಟ್‌ಮಿನಿಸ್ಟರ್ ಹಾಲ್‌ನಲ್ಲಿ ಅಂತಿಮ ಜಾಗರಣೆ ಸೇರಿದಂತೆ ವಿಧ್ಯುಕ್ತ ಕಾರ್ಯಕ್ರಮಗಳಲ್ಲಿ ಹ್ಯಾರಿ ಅವರು ಸಾಮಾನ್ಯ ಉಡುಗೆ ಧರಿಸಿ ಭಾಗವಹಿಸಿದ್ದರು. ಈ ಸಮಯದಲ್ಲಿ ಜನರಿಗೆ ಗೌರವ ಸಲ್ಲಿಸಲು ರಾಣಿಯ ಶವಪೆಟ್ಟಿಗೆಯನ್ನು ರಾಜ್ಯ ಕಟ್ಟಡದಲ್ಲಿ ಇರಿಸಲಾಗುತ್ತದೆ. ಹ್ಯಾರಿಗೆ ಮಿಲಿಟರಿ ಸಮವಸ್ತ್ರ ಧರಿಸಲು ಅನುಮತಿ ಇಲ್ಲದ ಕಾರಣ ಅವರು ರಾಜಮನೆತನದ ಕೆಲಸ ಮಾಡುವ ಸದಸ್ಯರಲ್ಲ ಎಂಬುದಾಗಿ ರಾಜಮನೆತನ ಉಲ್ಲೇಖಿಸಿತ್ತು. ಇದಕ್ಕೆ ಹೊರತಾಗಿ ಹ್ಯಾರಿಯ ಚಿಕ್ಕಪ್ಪ ಪ್ರಿನ್ಸ್ ಆಂಡ್ರ್ಯೂ, ಡ್ಯೂಕ್ ಆಫ್ ಯಾರ್ಕ್‌ಗೆ ತಮ್ಮ ದಿವಂತ ತಾಯಿಗೆ ವಿಶೇಷ ಗೌರವಾರ್ಥ ಸಲ್ಲಿಸುವ ಸಲುವಾಗಿ ಮಿಲಿಟರಿ ಸಮವಸ್ತ್ರ ಧರಿಸಲು ಅನುಮತಿ ನೀಡಲಾಗಿತ್ತು.
ಬ್ರಿಟನ್‌ನಾದ್ಯಂತ ಶೋಕಾಚರಣೆ
ಸ್ಕಾಟ್ಲೆಂಡ್‌ನ ಬಾಲ್ಮೊರಲ್ ಕ್ಯಾಸಲ್ ಅರಮನೆಯಲ್ಲಿ ಸಪ್ಟೆಂಬರ್ 8 ರಂದು ರಾಣಿ ನಿಧನರಾಗಿದ್ದರು. ರಾಣಿಯ ಸಾವಿನ ಹಿನ್ನಲೆಯಲ್ಲಿ ಬರೋಬ್ಬರಿ 10 ದಿನಗಳ ಕಾಲ ಶೋಕಾಚರಣೆ ನಡೆದಿತ್ತು.
ಇದನ್ನೂ ಓದಿ: Corgi Dogs: ರಾಣಿ ಎಲಿಜಬೆತ್ ನಿಧನದ ನಂತರ ಅವರ ನಾಯಿಗಳನ್ನು ನೋಡಿಕೊಳ್ಳುವವರು ಯಾರು?
ಬ್ರಿಟನ್‌ನಾದ್ಯಂತ ಹತ್ತು ದಿನಗಳ ಕಾಲ ಶೋಕಾಚರಣೆ ನಡೆದಿತ್ತು. ಹಾಗೆಯೇ ಸಂತೋಷ ಕೂಟ, ಸಮಾರಂಭ, ಉತ್ಸವ ಇತ್ಯಾದಿಗಳನ್ನು ರದ್ದುಗೊಳಿಸಲಾಗಿತ್ತು. ಹೀಗೆ ರಾಣಿಗೆ ಗೌರವಪೂರ್ವಕ ವಿದಾಯ ಸಲ್ಲಿಸಲಾಗಿತ್ತು. ರಾಣಿಯ ಮರಣವು ಅನೇಕರನ್ನು ಶೋಕತಪ್ತಗೊಳಿಸಿದ್ದರೂ, ರಾಜಪ್ರಭುತ್ವಕ್ಕೆ ಬೆಂಬಲವು ಸಾರ್ವತ್ರಿಕವಾಗಿಲ್ಲ ಎಂದಷ್ಟೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ