ಎನ್​ಸಿಪಿಗೆ ನೀಡಿದ್ದ ಗಡುವು ಮುಗಿಯುವ ಮುನ್ನವೇ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ದೇಕೆ? ಗೃಹ ಸಚಿವಾಲಯ ಹೇಳುವುದೇನು?

ಸರ್ಕಾರ ರಚನೆಗೆ ರಾಜ್ಯಪಾಲರು ಇಂದು ರಾತ್ರಿ 8.30ರವರೆಗೆ ಸಮಯ ನಿಗದಿಗೊಳಿಸಿ ಎನ್​ಸಿಪಿಗೆ ಆಹ್ವಾನ ನೀಡಿದ್ದರಾ ನಡುವೆಯೂ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಿದ  ರಾಜ್ಯಪಾಲರ ನಡೆಯನ್ನು ಶಿವಸೇನೆ,  ಎನ್​ಸಿಪಿ ಮತ್ತು ಕಾಂಗ್ರೆಸ್​ ಟೀಕಿಸಿವೆ. ರಾಜ್ಯಪಾಲರು ಬಿಜೆಪಿಯ ಕೈಗೊಂಬೆಯಂತೆ ವರ್ತಿಸಿದ್ದಾರೆ ಎಂದು ಕಟುವಾಗಿ ಆರೋಪಿಸಿವೆ.

HR Ramesh | news18-kannada
Updated:November 12, 2019, 7:51 PM IST
ಎನ್​ಸಿಪಿಗೆ ನೀಡಿದ್ದ ಗಡುವು ಮುಗಿಯುವ ಮುನ್ನವೇ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ದೇಕೆ? ಗೃಹ ಸಚಿವಾಲಯ ಹೇಳುವುದೇನು?
ಕೇಂದ್ರ ಗೃಹ ಸಚಿವಾಲಯ
  • Share this:
ನವದೆಹಲಿ: 20 ದಿನಗಳ ರಾಜಕೀಯ ಮೇಲಾಟಗಳ ನಡುವೆ ಮಹಾರಾಷ್ಟ್ರ ಕೊನೆಗೂ ರಾಷ್ಟ್ರಪತಿ ಆಳ್ವಿಕೆಗೆ ಒಳಪಟ್ಟಿದೆ. ರಾಜ್ಯಪಾಲ ಬಿಎಸ್ ಕೌಶ್ಯಾರಿ ಮಾಡಿದ ಮನವಿಗೆ ಮಂಗಳವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಒಪ್ಪಿಗೆ ಸೂಚಿಸಿದ್ದಾರೆ.

ಸರ್ಕಾರ ರಚನೆಗೆ ಬೇಕಾದ ಸಂಖ್ಯಾಬಲ ಸಾಬೀತು ಮಾಡುವಲ್ಲಿ ಬಿಜೆಪಿ ಮತ್ತು ಶಿವಸೇನೆ ವಿಫಲವಾದ ಬೆನ್ನಲ್ಲೇ ಇಂದು ರಾತ್ರಿ 8.30ಕ್ಕೆ ಗಡುವು ನಿಗದಿಗೊಳಿಸಿ, ಸರ್ಕಾರ ರಚನೆ ಮಾಡುವಂತೆ ಎನ್​ಸಿಪಿಗೆ ರಾಜ್ಯಪಾಲರು ಆಹ್ವಾನ ನೀಡಿದ್ದರು. ಏತನ್ಮಧ್ಯೆ ಎನ್​ಸಿಪಿ ಹಕ್ಕು ಮಂಡನೆಗೂ ಮುನ್ನವೇ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಶಿಫಾರಸ್ಸಿಗೆ ರಾಷ್ಟ್ರಪತಿಗಳು ಅಂಕಿತವನ್ನು ಹಾಕಿದ್ದಾರೆ.

ರಾಜ್ಯಪಾಲ ಕೌಶ್ಯಾರಿ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಕಳುಹಿಸಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಂಡಿದೆ. ರಾಜ್ಯದಲ್ಲಿ ಯಾವುದೇ ಪಕ್ಷ ಅಥವಾ ಮೈತ್ರಿಕೂಟ ಸ್ಥಿರ ಸರ್ಕಾರ ರಚಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಸಂವಿಧಾನದ 356 (1)ನೇ ಅಡಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಘೋಷಿಸಲಾಗಿದೆ ಎಂದು ಗೃಹ ಸಚಿವಾಲಯ  ಸ್ಪಷ್ಟನೆ ನೀಡಿದೆ.

ಹೊಸ ಸರ್ಕಾರ ರಚನೆಗೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಯಿತು ಎಂದು ರಾಜ್ಯಪಾಲರು ಹೇಳಿದ್ದಾರೆ. ಆದರೆ, ಅದು ಯಶಸ್ವಿಯಾಗಲಿಲ್ಲ. ರಾಜ್ಯದಲ್ಲಿ ಯಾವುದೇ ಸ್ಥಿರ ಸರ್ಕಾರ ರಚಿಸಲಾಗದ ಪರಿಸ್ಥಿತಿ ಉದ್ಭವಿಸಿದೆ ಎಂದು ರಾಜ್ಯಪಾಲರು ಹೇಳಿದ್ದಾಗಿ ಕೇಂದ್ರ ಗೃಹ ಇಲಾಖೆಯ ವಕ್ತಾರರು ಸಿಎನ್​ಎನ್​-ನ್ಯೂಸ್ 18ಗೆ ತಿಳಿಸಿದ್ದಾರೆ.

ಸರ್ಕಾರ ರಚನೆಗೆ ರಾಜ್ಯಪಾಲರು ಇಂದು ರಾತ್ರಿ 8.30ರವರೆಗೆ ಸಮಯ ನಿಗದಿಗೊಳಿಸಿ ಎನ್​ಸಿಪಿಗೆ ಆಹ್ವಾನ ನೀಡಿದ್ದರಾ ನಡುವೆಯೂ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಿದ  ರಾಜ್ಯಪಾಲರ ನಡೆಯನ್ನು ಶಿವಸೇನೆ,  ಎನ್​ಸಿಪಿ ಮತ್ತು ಕಾಂಗ್ರೆಸ್​ ಟೀಕಿಸಿವೆ. ರಾಜ್ಯಪಾಲರು ಬಿಜೆಪಿಯ ಕೈಗೊಂಬೆಯಂತೆ ವರ್ತಿಸಿದ್ದಾರೆ ಎಂದು ಕಟುವಾಗಿ ಆರೋಪಿಸಿವೆ.

ರಾಷ್ಟ್ರಪತಿ ಆಳ್ವಿಕೆ ಕೊನೆಯ ಉಪಾಯವಾಗಿದೆ. ಪಕ್ಷಗಳ ಹೇಳಿಕೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಒಂದು ಪಕ್ಷದವರು, ಇಲ್ಲ, ನಾವು ಸರ್ಕಾರ ರಚಿಸುವುದಿಲ್ಲ ಎಂದು ಹೇಳುತ್ತಾರೆ. ಮತ್ತೊಂದು ಪಕ್ಷದವರು, ಹೌದು, ನಾವು ಸರ್ಕಾರ ರಚಿಸುತ್ತೇವೆ, ಆದರೆ, ನಮಗೆ ಸ್ವಲ್ಪ ಸಮಯಾವಕಾಶ ಕೇಳುತ್ತಾರೆ. ಇವುಗಳ ನಡುವೆ ಇರುವ ವ್ಯತ್ಯಾಸವನ್ನು ನಾವು ಗಮನಿಸಬೇಕು ಎಂದು ಕಾಂಗ್ರೆಸ್ ಸಂಸದ ಹಾಗೂ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಹೇಳುತ್ತಾರೆ.

ಇದನ್ನು ಓದಿ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ; ಪಕ್ಷಗಳ ಮುಂದಿರುವ ಆಯ್ಕೆ ಮತ್ತು ಪರಿಣಾಮವೇನು?ಎನ್​ಸಿಪಿಯ ನಾಯಕರು ಇಂದು ಬೆಳಗ್ಗೆ 11.30ಕ್ಕೆ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಬೇಕಾದ ಸಂಖ್ಯಾಬಲ ಸಾಬೀತಿಗೆ ಮೂರು ದಿನಗಳ ಕಾಲಾವಕಾಶ ಕೇಳಿದ ಬಳಿಕ ರಾಜ್ಯಪಾಲರು ರಾಷ್ಟ್ರಪತಿಗಳ ಆಳ್ವಿಕೆಗೆ ನಿರ್ಧರಿಸಿದರು. ಮಧ್ಯಾಹ್ನ ರಾಜ್ಯಪಾಲರ ವರದಿ ನಮಗೆ ಸಿಕ್ಕಿತು. ಅದಕ್ಕೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿ, ರಾಷ್ಟ್ರಪತಿಗಳ ಆಳ್ವಿಕೆಗೆ ಶಿಫಾರಸ್ಸು ಮಾಡಲಾಯಿತು ಎಂದು ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

 

First published:November 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading