ಸಿನಿಮಾ ಎನ್​ಕೌಂಟರ್ ನೋಡಿ ಚಪ್ಪಾಳೆ ತಟ್ಟುತ್ತೇವೆ, ನಿಜಜೀವನದಲ್ಲಿ ಮಾಡಿದರೆ ಪ್ರಶ್ನೆ ಮಾಡುತ್ತೇವೆ; ಆಂಧ್ರ ಸಿಎಂ ಜಗನ್

ಸಿನಿಮಾದಲ್ಲಿ ನಾಯಕ ಎನ್​ಕೌಂಟರ್​ನಲ್ಲಿ ಸಾಯಿಸಿದರೆ ನಾವೆಲ್ಲಾ ಚಪ್ಪಾಳೆ ತಟ್ಟುತ್ತೇವೆ. ಹಾಗೂ ಸಿನಿಮಾ ಚೆನ್ನಾಗಿದೆ ಎಂದು ಹೇಳುತ್ತೇವೆ. ಅದೇ ಕೆಲಸವನ್ನು ಒಬ್ಬ ಧೈರ್ಯವಂತ ವ್ಯಕ್ತಿ ನಿಜ ಜೀವನದಲ್ಲಿ ಮಾಡಿದರೆ, ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಹೆಸರಿನಲ್ಲಿ ಕೆಲವರು ದೆಹಲಿಯಿಂದ ಬರುತ್ತಾರೆ. ಹಾಗೆ ಬಂದು ಇದು ತಪ್ಪು ಎಂದು ಹೇಳುತ್ತಾರೆ. ಮತ್ತು ಇದನ್ನು ಏಕೆ ಮಾಡಿದೆ ಎಂದು ಪ್ರಶ್ನೆ ಮಾಡುತ್ತಾರೆಂದು ಹೇಳಿದರು.

HR Ramesh | news18-kannada
Updated:December 9, 2019, 8:41 PM IST
ಸಿನಿಮಾ ಎನ್​ಕೌಂಟರ್ ನೋಡಿ ಚಪ್ಪಾಳೆ ತಟ್ಟುತ್ತೇವೆ, ನಿಜಜೀವನದಲ್ಲಿ ಮಾಡಿದರೆ ಪ್ರಶ್ನೆ ಮಾಡುತ್ತೇವೆ; ಆಂಧ್ರ ಸಿಎಂ ಜಗನ್
ಜಗನ್​ಮೋಹನ್​ ರೆಡ್ಡಿ
  • Share this:
ಅಮರಾವತಿ: ಪಶುವೈದ್ಯೆ ಮೇಲೆ ಅತ್ಯಾಚಾರ ಎಸಗಿ, ಹತ್ಯೆಗೈದ ನಾಲ್ವರು ಆಪಾದಿತರನ್ನು ಪೊಲೀಸರು ಎನ್​ಕೌಂಟರ್​ ಮಾಡಿದ ಕ್ರಮವನ್ನು ವಿರೋಧಿಸಿದ ರಾಷ್ಟ್ರೀಯ ಮಾನವ ಹಕ್ಕು ಆಯೋಗವನ್ನುಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಖಂಡಿಸಿದ್ದಾರೆ. ಜೊತೆಗೆ ಆಪಾದಿತರನ್ನು ಹತ್ಯೆಗೈದ ತೆಲಂಗಾಣ ಪೊಲೀಸರನ್ನು ರೆಡ್ಡಿ ಶ್ಲಾಘಿಸಿದ್ದಾರೆ.

ರಾಜ್ಯ ವಿಧಾನಸಭೆಯಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ ಜಗನ್ ಮೋಹನ್ ರೆಡ್ಡಿ, ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿ ಈ ಘಟನೆ ನನ್ನನ್ನು ಆಳವಾಗಿ ಸಂಕಟಕ್ಕೆ ದೂಡಿದೆ. ಒಬ್ಬ ತಂದೆಯಾಗಿ ಇಂತಹ ಘಟನೆಗಳಿಗೆ ನಾನು ಹೇಗೆ ಪ್ರತಿಕ್ರಿಯಿಸಲಿ. ಯಾವ ರೀತಿಯ ಶಿಕ್ಷೆ ಪೋಷಕರಿಗೆ ಪರಿಹಾರ ನೀಡುತ್ತದೆ? ನಾವು ಈ ಬಗ್ಗೆ ಚಿಂತಿಸಬೇಕಾಗಿದೆ ಎಂದು ಹೇಳಿದರು.


ಈ ಪ್ರಕರಣದಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ನಡೆಯನ್ನು ಟೀಕಿಸಿದ ಜಗನ್, ಒಂದು ವೇಳೆ ಸಿನಿಮಾದಲ್ಲಿ ನಾಯಕ ಎನ್​ಕೌಂಟರ್​ನಲ್ಲಿ ಸಾಯಿಸಿದರೆ ನಾವೆಲ್ಲಾ ಚಪ್ಪಾಳೆ ತಟ್ಟುತ್ತೇವೆ. ಹಾಗೂ ಸಿನಿಮಾ ಸಖತ್ತಾಗಿದೆ ಎಂದು ಹೇಳುತ್ತೇವೆ. ಅದೇ ಕೆಲಸವನ್ನು ಒಬ್ಬ ಧೈರ್ಯವಂತ ವ್ಯಕ್ತಿ ನಿಜ ಜೀವನದಲ್ಲಿ ಮಾಡಿದರೆ, ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಹೆಸರಿನಲ್ಲಿ ಕೆಲವರು ದೆಹಲಿಯಿಂದ ಬರುತ್ತಾರೆ. ಹಾಗೆ ಬಂದು ಇದು ತಪ್ಪು ಎಂದು ಹೇಳುತ್ತಾರೆ. ಮತ್ತು ಇದನ್ನು ಏಕೆ ಮಾಡಿದೆ ಎಂದು ಪ್ರಶ್ನೆ ಮಾಡುತ್ತಾರೆಂದು ಹೇಳಿದರು.

ಇದನ್ನು ಓದಿ: ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆ; ಇದು ದೇಶ ವಿಭಜನೆಯ ಪ್ರತಿಫಲ ಎಂದು ‘ಕೈ’ ಕುಟುಕಿದ ಅಮಿತ್ ಶಾ

ಸೂಕ್ತ ಶಿಕ್ಷೆಯೊಂದಿಗೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗೆ ಬಲವಾದ ಕಾನೂನು ಜಾರಿಗೆ ತರಲು ತಮ್ಮ ಸರ್ಕಾರವು ಇದೇ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಿದೆ ಎಂದು ಜಗನ್ ಮೋಹನ್ ರೆಡ್ಡಿ ಘೋಷಿಸಿದರು. ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ತಪ್ಪಿತಸ್ಥರಿಗೆ 21 ದಿನಗಳಲ್ಲಿ ಮರಣದಂಡನೆ ವಿಧಿಸಲು ಮಸೂದೆಯಲ್ಲಿ ಪ್ರಸ್ತಾಪವಿದೆ ಎಂದು ಹೇಳಿದರು.
First published: December 9, 2019, 8:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading