ಭಾರತಕ್ಕೆ ಬರುವ ವಿದೇಶಿ 'ಗಣ್ಯ'ರನ್ನು ಮೋದಿ ಅಹಮದಾಬಾದ್​ಗೆ ಯಾಕೆ ಕರೆದೊಯ್ಯುತ್ತಾರೆ ಗೊತ್ತಾ?


Updated:January 15, 2018, 10:39 AM IST
ಭಾರತಕ್ಕೆ ಬರುವ ವಿದೇಶಿ 'ಗಣ್ಯ'ರನ್ನು ಮೋದಿ ಅಹಮದಾಬಾದ್​ಗೆ ಯಾಕೆ ಕರೆದೊಯ್ಯುತ್ತಾರೆ ಗೊತ್ತಾ?
ಇಸ್ರೇಲ್ ಪ್ರಧಾನಿಯನ್ನು ಬರಮಾಡಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ

Updated: January 15, 2018, 10:39 AM IST
-ನ್ಯೂಸ್ 18 ಕನ್ನಡ

ಅಹಮದಾಬಾದ್(ಜ.14): ಇಸ್ರೇಲ್​ನ ಪ್ರಧಾನಿ ಬೆಂಜಮಿನ್ ನೆತನ್ಯಾಹೂ ಜನವರಿ 14 ರಿಂದ 18ರವರೆಗೆ ಭಾರತ ಪ್ರವಾಸದಲ್ಲಿದ್ದಾರೆ. ದೆಹಲಿ, ಮುಂಬೈ, ಆಗ್ರಾ ಸೇರಿದಂತೆ ಅಹಮದಾಬಾ​ನಲ್ಲಿ ಇವರಿಗಾಗಿ ಮುಖ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಗಳಿಗೆ ಖುದ್ದು ಪ್ರಧಾನಿ ಮೋದಿ ಇಸ್ರೇಲ್ ಪ್ರಧಾನಿಯನ್ನು ಸ್ವಾಗತಿಸಲಿದ್ದಾರೆ. ಇದಾದ ಬಳಿಕ ಜನವರಿ 17ರಂದು ಅಹಮದಾಬಾದ್​ನಲ್ಲಿ ಪ್ರಧಾನಿ ಮೋದಿ ಹಾಗೂ ಬೆಂಜಮಿನ್​ ನೆತನ್ಯಾಹೂ ಒಟ್ಟಾಗಿ ರೋಡ್​ ಶೋ ನಡೆಸಲಿದ್ದಾರೆ.

ಅಹಮದಾಬಾದ್​ನಲ್ಲಿ ಅತಿಥಿ ಸತ್ಕಾರ ಪಡೆಯುವವರಲ್ಲಿ ನೆತನ್ಯಾಹೂ ಮೊದಲಿಗರೇನೂ ಅಲ್ಲ, ಇದಕ್ಕೂ ಮೊದಲು ಭಾರತಕ್ಕೆ ಭೇಟಿ ನೀಡಿದ ನೆರೆ ರಾಷ್ಟ್ರ ಚೀನಾ ರಾಷ್ಟ್ರಪತಿ ಶೀ ಜಿನ್​ಪಿಂಗ್, ಜಪಾನ್ ಪಿಎಂ ಶಿಂಜೋ ಅಬೆಯನ್ನೂ ಅಹಮದಾಬಾದ್​ಗೆ ಕರೆದೊಯ್ಯಲಾಗಿತ್ತು. ಹಾಗಾದ್ರೆ ಭಾರತಕ್ಕೆ ಭೇಟಿ ನೀಡುವ ರಾಷ್ಟ್ರಾಧ್ಯಕ್ಷರನ್ನು ಪಿಎಂ ಮೋದಿ ಅಹಮದಾಬಾದ್​ಗೆ ಕರೆದೊಯ್ಯುವ ಹಿಂದಿನ ರಹಸ್ಯವೇನು? ಇಲ್ಲಿದೆ ಉತ್ತರ .

ಕಾರಣವೇನು?

2014ರಲ್ಲಿ ಪ್ರಧಾನಿಯಾದ ನರೇಂದ್ರ ಮೋದಿಯ ಜೀವನದಲ್ಲಿ ಅಹಮದಾಬಾದ್ ಬಹಳಷ್ಟು ಪ್ರಾಮುಖ್ಯತೆ ವಹಿಸಿದೆ. ದೆಹಲಿಯ ಬಳಿಕ ಅಹಮದಾಬಾದ್ ಎರಡನೇ ರಾಜಧಾನಿಯೆಂದೇ ಬಿಂಬಿಸಲಾಗುತ್ತಿದೆ. ಆದರೆ ವಾಸ್ತವವಾಗಿ ಇದು ಪ್ರಧಾನಿ ಮೋದಿಯ ರಣತಂತ್ರವೆಂಬುವುದು ರಾಜಶಾಸ್ತ್ರಜ್ಜ್ರರ ಅಭಿಪ್ರಾಯವಾಗಿದೆ. ವಿದೇಶೀ ನಾಯಕರನ್ನು ಅಹಮದಾಬಾದ್​ಗೆ ಕರೆದೊಯ್ಯುವ ಮೂಲಕ ತಾನು ಮುಖ್ಯಮಂತ್ರಿಯಾಗಿ ಅಭಿವೃದ್ಧಿಪಡಿಸಿದ ಕ್ಷೇತ್ರವನ್ನು ಪರಿಚಯಿಸುವುದು ಅವರ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ.

2014ರಲ್ಲಿ ಭಾರತಕ್ಕಾಗಮಿಸಿದ ಚೀನಾ ಅಧ್ಯಕ್ಷ ಶೀ ಜಿನ್​ಪಿಂಗ್:

2014 ರ ಸಪ್ಟೆಂಬರ್​ನಲ್ಲಿ ಚೀನಾದ ರಾಷ್ಟ್ರಪತಿ ಶೀ ಜಿನ್​ಪಿಂಗ್ ಭಾರತಕ್ಕಾಗಮಿಸಿದ್ದರು. ಆ ಸಂದರ್ಭದಲ್ಲಿ ಸಬರಮತಿ ರಿವರ್​ ಫ್ರಂಟ್​ನಲ್ಲಿ ಜೋಕಾಲಿಯಲ್ಲಿ ಕುಳಿತ ಪಿಎಂ ಮೋದಿ ಹಾಗೂ ಚೀನಾ ಅಧ್ಯಕ್ಷ ಶೀ ಜಿನ್​ಪಿಂಗ್​ರವರ ಫೋಟೋಗಳು ಜಗತ್ತಿನಾದ್ಯಂತ ಸದ್ದು ಮಾಡಿದ್ದವು. ಇದು ಪ್ರತಿಯೊಂದು ಮಾಧ್ಯಮಗಳಲ್ಲೂ ವರದಿಯಾಗಿತ್ತು. ಇದಾದ ಮರುದಿನ ದೆಹಲಿಯಲ್ಲಿ ಇಬ್ಬರೂ ನಾಯಕರು ದ್ವಿಪಕ್ಷೀಯ ವಿಚಾರಗಳ ಕುರಿತಾಗಿ ಚರ್ಚೆ ನಡೆಸಿದಾಗಲೂ ಸಬರಮತಿಯ ದೃಶ್ಯಗಳೇ ಪ್ರಸಾರವಾಗಿದ್ದವು.
Loading...

2017ರಲ್ಲಿ ಭಾರತಕ್ಕಾಗಮಿಸಿದ ಜಪಾನ್ ಪ್ರಧಾನಿ ಶಿಂಜೋ ಅಬೆ:

ಇದಾದ ಬಳಿಕ 2017ರ ಸಪ್ಟೆಂಬರ್​ನಲ್ಲಿ ಜಪಾನ್​ ಪ್ರಧಾನಿ ಶಿಂಜೋ ಅಬೆ ಭಾರತಕ್ಕಾಗಮಿಸಿದ್ದರು. ಆ ಸಂದರ್ಭದಲ್ಲೂ ಅಹಮದಾಬಾದ್​ನಲ್ಲಿ, ಮುಂಬಯಿ ಹಾಗೂ ಅಹಮದಾಬಾದ್​ ನಡುವಿನ ಬುಲೆಟ್​ ಟ್ರೈನ್​ ಪ್ರಾಜೆಕ್ಟ್​ನ ಶಿಲಾನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುಂಬೈಯನ್ನು ದೇಶದ ಆರ್ಥಿಕ ರಾಜಧಾನಿ ಎಂದು ಕರೆಯಲಾಗುತ್ತದೆಯಾದರೂ ಪಿಎಂ ಮೋದಿಯ ರಾಜ್ಯ ಅಹಮದಾಬಾದ್​ಗೆ ಮುಂಬೈಗಿಂತಲೂ ಹೆಚ್ಚು ಗೌರವ ದಕ್ಕಿದೆ. ಇಷ್ಟೇ ಅಲ್ಲದೆ ಸಿದ್ಧಿ ಸೈಯದ್ ಮಸೀದಿಗೆ ಹೋಗುವ ಅಬೆಯವರನ್ನು ಪ್ರಾಜೆಕ್ಟ್​ ಪರಿಚಯಿಸುವ ನಿಟ್ಟಿನಲ್ಲಿ ಸಬರಮತಿ ರಿವರ್​ ಫ್ರಂಟ್​ ಮೂಲಕವೇ ಕರೆದೊಯ್ಯಲಾಯಿತು.

‘ಇತ್ತೀಚೆಗಷ್ಟೇ ನಡೆದ ಗುಜರಾತ್​ ಚುನಾವಣಾ ಪ್ರಚಾರದ ಕೊನೆಯ ದಿನದ ಕಾರ್ಯಕ್ರಮಕ್ಕಾಗಿ ಸಬರಮತಿ ರಿವರ್​ ಫ್ರಂಟ್​ನ್ನೇ ಆಯ್ಕೆ ಮಾಡಿಕೊಳ್ಳಲಾಯಿತು. ಇಲ್ಲಿಂದಲೇ ಪಿಎಂ ಸೀ ಪ್ಲೇನ್ ಟೇಕ್​ ಆಫ್​ ಆಗಿ ಲ್ಯಾಂಡಿಂಗ್​ ಕೂಡಾ ಆಯಿತು. ಇದಾದ ಬಳಿಕ ಬಿಜೆಪಿ ನಾಯಕರು ಗುಜರಾತ್​ನಲ್ಲಿ ಬಹಳಷ್ಟು ಬದಲಾವಣೆಯಾಗಲಿದೆ ಎಂದು ತಮ್ದ್ದಮ ಭಾಷಣಗಳಲ್ಲಿ ಹೇಳಿಕೊಂಡಿದ್ದರು.

ಗುಜರಾತ್​ ಪ್ರಾಜೆಕ್ಟ್​ ಕುರಿತು ಪ್ರಚಾರ ಮಾಡುವ ಉದ್ದೇಶ

ಹಿರಿಯ ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ದರ್ಶನ್​ ದೇಸಾಯಿ ಈ ಕುರಿತಾಗಿ ಮಾತನಾಡುತ್ತಾ 'ರಾಜಧಾನಿ ದೆಹಲಿ ಬದಲಾಗಿ ಅಹಮದಾಬಾದ್ ಹಾಗೂ ಗಾಂಧೀನಗರದಲ್ಲಿ ರಾಷ್ಟ್ರಾಧ್ಯಕ್ಷರನ್ನು ಸತ್ಕರಿಸುವುದು ಪ್ರಧಾನಿ ಮೋದಿಯ ರಣತಂತ್ರವಾಗಿದೆ. ಇದು ಅಹಮದಾಬಾದ್​ನ ಅಭಿವೃದ್ಧಿಯನ್ನು ತೋರಿಸುವುದರೊಂದಿಗೆ ಗುಜರಾತ್​ ಮಾಡೆಲ್​ ಪ್ರಾಜೆಕ್ಟ್​ನ್ನು ಇನ್ನಷ್ಟು ಪ್ರಚಾರ ಮಾಡುವುದಕ್ಕಾಗಿ ನಡೆಯುತ್ತಿದೆ' ಎಂದಿದ್ದಾರೆ.

ಇನ್ನು ಮೋದಿ ಗುಜರಾತ್​ನ ಮುಖ್ಯಮಂತ್ರಿಯಾಗಿದ್ದಾಗ ಸ್ವಾತಂತ್ಯ್ರೋತ್ಸವ ಹಾಗೂ ಗಣರಾಜ್ಯೋತ್ಸವವನ್ನು ಗಾಂಧಿನಗರದ ಜಿಲ್ಲಾ ಪ್ರಧಾನ ಕಚೇರಿಯಲ್ಲಿ ಮಾಡಲಾಗುತ್ತಿತ್ತು. ಈಗ ಪಿಎಂ ಸ್ಥಾನಕ್ಕೇರಿರುವ ನರೇಂದ್ರ ಮೋದಿ ಇದೇ ರಣತಂತ್ರವನ್ನು ಮುಂದುವರೆಸಿದ್ದಾರೆ ಎಂದೂ ದೇಸಾಯಿ ತಿಳಿಸಿದ್ದಾರೆ.
First published:January 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ