Security Breach: ಫಿರೋಜ್​ಪುರ್​ ಫ್ಲೈಓವರ್‌ ಮೇಲೆ ನಡೆದಿದ್ದೇನು? ಇಲ್ಲಿದೆ ಇನ್​ಸೈಡ್ ಸ್ಟೋರಿ

ಈ ಸಂಬಂಧ ತನಿಖೆಗೆ ಪಂಜಾಬ್​ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದೆ. ಮೂರು ದಿನಗಳಲ್ಲಿ ಈ ಸಮಿತಿ ಈ ಘಟನೆ ಸಂಬಂಧ ವರದಿ ಸಲ್ಲಿಸುವಂತೆ ಕೂಡ ಆದೇಶಿಸಿದೆ.

ಫ್ಲೈಓವರ್ ಮೇಲೆ ಸಿಲುಕಿದ ಪ್ರಧಾನಿ ಕಾರು

ಫ್ಲೈಓವರ್ ಮೇಲೆ ಸಿಲುಕಿದ ಪ್ರಧಾನಿ ಕಾರು

 • Share this:
  ನವದೆಹಲಿ (ಜ. 6): ಪಂಜಾಬ್​ನಲ್ಲಿ ಕಾರ್ಯಕ್ರಮಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ (PM Modi) ಅವರ ಭದ್ರತೆಯಲ್ಲಿ ಭಾರೀ ಲೋಪ (Security Breach) ಕಂಡು ಬಂದಿದ್ದು, ಈ ಸಂಬಂಧ ನಾಳೆ ಸುಪ್ರೀಂ ಕೋರ್ಟ್ ಅರ್ಜಿ ಆಲಿಸಲಿದೆ. ಈ ನಡುವೆ ಪ್ರಧಾನಿ ಅವರ ಸುರಕ್ಷತೆಯ ವಿಷಯದಲ್ಲಿ ಕಂಡು ಬಂದ ಈ ಪ್ರಮಾದ ಕುರಿತು ದೇಶಾದ್ಯಂತ ಖಂಡನೆ ವ್ಯಕ್ತವಾಗಿದ್ದು, ಈ ಸಂಬಂಧ ತನಿಖೆಗೆ ಪಂಜಾಬ್​ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದೆ. ಮೂರು ದಿನಗಳಲ್ಲಿ ಈ ಸಮಿತಿ ಈ ಘಟನೆ ಸಂಬಂಧ ವರದಿ ಸಲ್ಲಿಸುವಂತೆ ಕೂಡ ಆದೇಶ ನೀಡಲಾಗಿದೆ. ಇನ್ನು ಫಿರೋಜ್​ಪುರದ ಚುನಾವಣಾ ಸಮಾವೇಶಕಕೆ ಆಗಮಿಸುವ ಸಂದರ್ಭದಲ್ಲಿ ಉಂಟಾದ ಭದ್ರತಾ ಲೋಪಕ್ಕೆ ಕಾರಣ ಏನು? ಆಸಲಿಗೆ ಅಲ್ಲಿ ಏನಾಯಿತು ಎಂಬ ಮಾಹಿತಿ ಇಲ್ಲಿದೆ.

  ಬುಧವಾರ ನಡೆದಿದ್ದೇನು?
  ಹವಾಮಾನ ವೈಪರೀತ್ಯದಿಂದಾಗಿ ರಸ್ತೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ ಅವರ ಬೆಂಗಾವಲು ಪಡೆ ಆಗಮನಕ್ಕೂ ಮುನ್ನ ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಪಿಯಾರೆನಾನಾ ಗ್ರಾಮದ ಬಳಿ ಮೊಗಾ-ಫಿರೋಜ್‌ಪುರ ಹೆದ್ದಾರಿ ಸಂಚಾರಕ್ಕೆ ಸುಗುಮವಾಗಿತತು. ಯೂನಿಯನ್ ಮುಖಂಡ ಸುರ್ಜೀತ್ ಸಿಂಗ್ ಫೂಲ್ ನೇತೃತ್ವದಲ್ಲಿ 50 ಮಂದಿ ರೈತರು ಸ್ಥಳೀಯ ಗ್ರಾಮಸ್ಥರ ಸಹಾಯದಿಂದ ರಸ್ತೆ ತಡೆ ನಡೆಸಿದರು. ಈ ವೇಳೆ ಪೊಲೀಸರು ಪ್ರತಿಭಟನೆ ತೆರವಿಗೆ ಮುಂದಾದರು.

  ಸೂಕ್ಷ್ಮ ಪ್ರದೇಶದಲ್ಲಿ ನಿಂತ ವಾಹನ
  ಭಾರತ-ಪಾಕಿಸ್ತಾನ ಗಡಿಯಿಂದ ಕೇವಲ 30 ಕಿಮೀ ದೂರವಿರುವ ಮಾರಗದಲ್ಲಿ ಪ್ರಧಾನಿ ಮೋದಿ ಅವರ ಕಾರು ಸುಮಾರು 20 ನಿಮಿಷಗಳ ಕಾಲ ಸಿಲುಕಿದ್ದು ಕೇಂದ್ರದಲ್ಲಿ ಹೆಚ್ಚಿನ ಆತಂಕ ಹೆಚ್ಚಿಸಿತು ಎಂದು ನ್ಯೂಸ್​ 18ಗೆ ತಿಳಿದು ಬಂದಿದೆ. ಅಲ್ಲದೇ ಕೆಲವು ಪ್ರತಿಭಟನಾಕಾರರು ಪ್ರಧಾನಿಯವರ ವಾಹನದಿಂದ ಸುಮಾರು 150 ಮೀಟರ್ ಹತ್ತಿರದಲ್ಲಿದ್ದರು. ಈ ಹಿನ್ನಲೆ ಮುನ್ನೆಚ್ಚರಿಕಾ ಕ್ರಮವಾಗಿ ಎಸ್​​ಪಿಜಿ ಅವರೇ ತಮ್ಮ ವಾಹನವನ್ನು ಆಯಕಟ್ಟಿನ ಸ್ಥಳದಲ್ಲಿ ನಿಲ್ಲಿಸಿ ಭದ್ರತೆ ನೀಡಲು ಮುಂದಾದರು. ಕಾರಣ ಈ ಪ್ರದೇಶ ಹೈ ಅಲರ್ಟ್​ ಪ್ರದೇಶವಾಗಿದೆ.

  ಇದನ್ನು ಓದಿ: ಫ್ಲೈಓವರ್ ಮೇಲೆ ಸಿಲುಕಿದ PM Car; ಪಂಜಾಬ್ ಸರ್ಕಾರದಿಂದ ಭದ್ರತಾ ಲೋಪ ಎಂದ ಕೇಂದ್ರ

  ರಸ್ತೆ ತಡೆದು ಪ್ರತಿಭಟನೆ
  ಪ್ರಧಾನಿ ಪ್ರಯಾಣಕ್ಕೂ ಮುನ್ನ ಪಂಜಾಬ್ ಸರ್ಕಾರ ಲಿಖಿತ ಭರವಸೆ ನೀಡಿತ್ತು. ಆದರೆ, 11 ಗಂಟೆಗೆ ಸುರ್ಜೀತ್ ಸಿಂಗ್ ಫೂಲ್ ನೇತೃತ್ವದ ಭಾರತೀಯ ಕಿಸಾನ್ ಯೂನಿಯನ್ (ಕ್ರಾಂತಿಕಾರಿ) 50 ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು.

  ಈ ಸಂಬಂಧ ನ್ಯೂಸ್​ 18.ಕಾಮ್​ನೊಂದಿಗೆ ಮಾತನಾಡಿ ಸುರ್ಜೀತ್ ಸಿಂಗ್ ಫೂಲ್, ಪ್ರಧಾನಿಯನ್ನು ತಡೆಯುವ ಯಾವುದೇ ಉದ್ದೇಶ ನಮಗೆ ಇರಲಿಲ್ಲ. ವಾಸ್ತವವಾಗಿ, ಪಂಜಾಬ್ ಪೊಲೀಸರು ಮಾರ್ಗವನ್ನು ಖಾಲಿ ಮಾಡುವಂತೆ ಕೇಳುವವರೆಗೂ ಪ್ರಧಾನಿ ಅವರು ಈ ರಸ್ತೆಯ ಮೂಲಕ ಹಾದುಹೋಗುತ್ತಾರೆ ಎಂದು ತಿಳಿದಿರಲಿಲ್ಲ ಎಂದು ಹೇಳಿದರು.

  ಇದನ್ನು ಓದಿ: ಸೂರತ್​​ನಲ್ಲಿ ಅನಿಲ ಸೋರಿಕೆಯಿಂದ 6 ಮಂದಿ ಕಾರ್ಮಿಕರು ಸಾವು, 20 ಜನರ ಸ್ಥಿತಿ ಗಂಭೀರ

  ಇನ್ನು ಈ ಲೋಪ ಕುರಿತು ಟೀಕಿಸಿರುವ ಬಿಜೆಪಿ, ಪ್ರಧಾನಿಯವರ ಮಾರ್ಗದ ವಿವರಗಳನ್ನು ಸೋರಿಕೆ ಆಗಿದದು, ಪಂಜಾಬ್ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಕುತಂತ್ರ ನಡೆದಿದೆ ಎಂದಿದೆ.

  ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ ಅವರು ಪ್ರತಿಭಟನಾಕಾರರನ್ನು ತೆರವುಗೊಳಿಸಲು ಯಾವುದೇ ಬಲಪ್ರಯೋಗವನ್ನು ಅನುಮತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು ಇದು ಹಿಂಸಾಚಾರಕ್ಕೆ ಕಾರಣವಾಗಬಹುದು ಎಂದು. 2015 ರಲ್ಲಿ ಪಂಜಾಬ್ ಪೊಲೀಸರು ಫರೀದ್‌ಕೋಟ್‌ನ ಹತ್ತಿರದ ಕೊಟ್ಕಾಪುರ ಮತ್ತು ಬರ್ಗರಿ ಪ್ರದೇಶಗಳಲ್ಲಿ ಬಲಪ್ರಯೋಗ ಮಾಡಬೇಕಾಗಿ ಬಂದಾಗ ಪ್ರತಿಭಟನಾಕಾರರ ಸಾವು ರಾಜ್ಯದಲ್ಲಿ ರಾಜಕೀಯ ಕ್ರಾಂತಿಗೆ ಕಾರಣವಾಗಿತು.

  ಪಂಜಾಬ್ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಪ್ರಧಾನಿಯ ಸಂಪೂರ್ಣ ಮಾರ್ಗವು ರೈತರ ಪ್ರತಿಭಟನೆ ಹೆಚ್ಚಿರುವ ಮಾಲ್ವಾ ಪ್ರದೇಶದ ಸೂಕ್ಷ್ಮ ಪ್ರದೇಶದಲ್ಲಿತು. ಈ ಬಗ್ಗೆ ಎಸ್‌ಪಿಜಿಗೆ ಭರವಸೆ ನೀಡಿದರೂ ಪಂಜಾಬ್ ಪೊಲೀಸರು ಪ್ರಧಾನಿಗೆ ಸುರಕ್ಷಿತ ಮಾರ್ಗವನ್ನು ನೀಡಲು ವಿಫಲರಾಗಿದ್ದಾರೆ. ವಿಚಾರಣೆಯು ಈಗ ಹೊಣೆಗಾರಿಕೆಯನ್ನು ಸರಿಪಡಿಸುವ ನಿರೀಕ್ಷೆಯಿದೆ ಜೊತೆಗೆ ಮುಖ್ಯಸ್ಥರು ತಕೆ ಉರುಳುವ ಸಾಧ್ಯತೆಯಿದೆ.

  • ಅಮನ್ ಶರ್ಮಾ, ಅಮಿತ್ ಶುಕ್ಲಾ

  Published by:Seema R
  First published: