Pakistan: ಪಾಕಿಸ್ತಾನದ ಪ್ರಮುಖ ಸ್ಟಾರ್ಟ್​ಅಪ್​ಗೆ ಬೀಗ! ಬೀದಿಗೆ ಬಿದ್ದ ಸಾವಿರಾರು ಉದ್ಯೋಗಿಗಳು

ಏರ್‌ಲಿಫ್ಟ್ ನಲ್ಲಿ ಪಾಕಿಸ್ತಾನದ ಜನ ತಮ್ಮ ಆರ್ಡರ್ ಮಾಡುವ ಗೋಜಿಗೆ ಹೋಗುತ್ತಿಲ್ಲ. ಹೀಗಾಗಿ ಎಲ್ಲಾ ಆರ್ಥಿಕ ಹೊಡೆತಗಳಿಂದ ಕಂಗೆಟ್ಟ ಸ್ಟಾರ್ಟ್‌ಅಪ್‌ ಕೊನೆಯದಾಗಿ ಉದ್ಯಮ ಮುಚ್ಚುವ ನಿರ್ಧಾರ ಮಾಡಿದೆ.

 ಏರ್‌ಲಿಫ್ಟ್ ಎಕ್ಸ್ ಪ್ರೆಸ್

ಏರ್‌ಲಿಫ್ಟ್ ಎಕ್ಸ್ ಪ್ರೆಸ್

  • Share this:
ಪಾಕಿಸ್ತಾನದಲ್ಲಿ ಸತತ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ದಿನಸಿ, ಔಷಧಿ, ತಾಜಾ ಉತ್ಪನ್ನಗಳನ್ನು ವೇಗವಾಗಿ ಪೂರೈಸುತ್ತಿದ್ದ ಏರ್‌ಲಿಫ್ಟ್ ಎಕ್ಸ್ ಪ್ರೆಸ್ (Airlift Express) ಸ್ಥಗಿತಗೊಂಡಿದೆ. ಈ ಮೂಲಕ ಪಾಕಿಸ್ತಾನ ದೇಶಕ್ಕೆ ಆರ್ಥಿಕವಾಗಿ ಮತ್ತೊಂದು ಹೊಡೆತ ಬಿದ್ದಂತಾಗಿದೆ. ಏರ್‌ಲಿಫ್ಟ್, ಪಾಕಿಸ್ತಾನದ ಅಗ್ರಗಣ್ಯ ಸ್ಟಾರ್ಟ್‌ಅಪ್ ಗಳಲ್ಲಿ ಒಂದಾಗಿದ್ದು, ಹಣಕಾಸು ಹೊಂದಿಸುವಲ್ಲಿ ವಿಫಲವಾದ ನಂತರ ಸ್ಥಗಿತಗೊಂಡಿದೆ. ಪಾಕಿಸ್ತಾನದಲ್ಲಿ (Pakistan) ಏರ್‌ಲಿಫ್ಟ್ ಎಕ್ಸ್ ಪ್ರೆಸ್ ಅನ್ನು ಬುಧವಾರ (ಜುಲೈ 13) ದಂದು ಶಾಶ್ವತವಾಗಿ ನಿಲ್ಲಿಸಲಾಗುವುದು ಎಂದು ಲಾಹೋರ್ ನಲ್ಲಿರುವ (Lahore) ಪ್ರಧಾನ ಕಚೇರಿಯು ತನ್ನ ಉದ್ಯೋಗಿಗಳಿಗೆ ತಿಳಿಸಿದೆ. ಏರ್‌ಲಿಫ್ಟ್ ಸಂಸ್ಥಾಪಕ ಉಸ್ಮಾನ್ ಗುಲ್ ಅವರು ಸಹ ಸ್ಟಾರ್ಟ್ಅಪ್ (Startup) ಮುಚ್ಚುತ್ತಿದೆ ಎಂದು ಸುದ್ದಿಮಾಧ್ಯಮಗಳಿಗೆ ದೃಢಪಡಿಸಿದ್ದಾರೆ. ಮತ್ತು ಇತ್ತೀಚಿನ ಘಟನೆಗಳ ಬಗ್ಗೆ ವಿವರವಾದ ಟಿಪ್ಪಣಿಗಳನ್ನು ನೀಡಿದ್ದಾರೆ.

ಏರ್‌ಲಿಫ್ಟ್ ಸ್ಟಾರ್ಟ್‌ಅಪ್ ಅನ್ನು ಸಂಪೂರ್ಣವಾಗಿ ಮುಚ್ಚಲಾಗುವುದು ಎಂದು ಈಗಾಗ್ಲೇ ನಿರ್ಧರವಾಗಿದ್ದು, ಸಭೆ ಮೂಲಕ ಎಲ್ಲಾ ಸಿಬ್ಬಂದಿಗಳಿಗೆ ಘೋಷಣೆ ಮಾಡಲು ಸಹ ನಿಗದಿಪಡಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಸ್ಟಾರ್ಟ್‌ಅಪ್ ನ ಈ ಉಪಕ್ರಮ ನೌಕರರಲ್ಲಿ ತೀವ್ರ ಆತಂಕ ಮೂಡಿಸಿದ್ದು, ಹಲವಾರು ನೌಕರರು ಬೀದಿಗೆ ಬರುವಂತಾಗಿದೆ.

30 ನಿಮಿಷದಲ್ಲಿ ವಸ್ತುಗಳನ್ನು ಪೂರೈಸುತ್ತಿದ್ದ ಏರ್‌ಲಿಫ್ಟ್
ಲಾಹೋರ್, ಕರಾಚಿ ಮತ್ತು ಇಸ್ಲಾಮಾಬಾದ್ ಸೇರಿದಂತೆ ಎಂಟು ಪಾಕಿಸ್ತಾನಿ ನಗರಗಳಲ್ಲಿ ಏರ್‌ಲಿಫ್ಟ್ ತ್ವರಿತ ವಾಣಿಜ್ಯ ಸೇವೆಯನ್ನು ನಿರ್ವಹಿಸುತ್ತಿತ್ತು. ಬಳಕೆದಾರರು ಏರ್‌ಲಿಫ್ಟ್ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಿಂದ ದಿನಸಿ, ತಾಜಾ ಉತ್ಪನ್ನಗಳು ಮತ್ತು ಔಷಧಿಗಳನ್ನು ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ಆರ್ಡರ್ ಮಾಡಬಹುದಾಗಿತ್ತು ಮತ್ತು ಅದನ್ನು ಸಂಸ್ಥೆಯು 30 ನಿಮಿಷಗಳಲ್ಲಿ ಗ್ರಾಹಕರಿಗೆ ತಲುಪಿಸುತ್ತಿತ್ತು.

ಏರ್‌ಲಿಫ್ಟ್ ಸ್ಥಗಿತಗೊಳ್ಳಲು ಕಾರಣವೇನು?
ನಿಧಿ ಸಂಗ್ರಹ, ಜನರ ಕಡಿಮೆ ಆಸಕ್ತಿ, ದುಬಾರಿ ಸೇವೆ ಈ ಎಲ್ಲಾ ಅಂಶಗಳು ಮುಖ್ಯವಾಗಿ ಪಾಕಿಸ್ತಾನದ ಟಾಪ್ ಸ್ಟಾರ್ಟ್‌ಅಪ್ ಏರ್‌ಲಿಫ್ಟ್ ಎಕ್ಸ್ ಪ್ರೆಸ್ ಮೇಲೆ ಅಗಾಧ ಪರಿಣಾಮಗಳನ್ನು ಬೀರಿತು. ಜೊತೆಗೆ ಏರುತ್ತಿರುವ ಹಣದುಬ್ಬರ, ಜಾಗತಿಕ ಆರ್ಥಿಕ ಬಿಕ್ಕಟ್ಟು, ಗಗನಕ್ಕೇರುತ್ತಿರುವ ಗ್ಯಾಸೋಲಿನ್ ಬೆಲೆಗಳಂತಹ ಅಂಶಗಳು ಸಹ ದಿನಸಿ, ಔಷಧಿಗಳನ್ನು ಪೂರೈಸುವ ಏರ್‌ಲಿಫ್ಟ್ ಎಕ್ಸ್ ಪ್ರೆಸ್ ಮೇಲೆ ತೀವ್ರವಾಗಿ ಪರಿಣಾಮ ಬೀರಿತು. ಪ್ರಸ್ತುತ ಈ ಎಲ್ಲಾ ಕಾರಣಗಳು ಇತರೆ ಹಲವಾರು ಉದ್ಯಮಗಳ ಮೇಲೂ ನೇರವಾಗಿ ಪರಿಣಾಮ ಬೀರುತ್ತಿವೆ. ಪಾಕಿಸ್ತಾನದಲ್ಲಿ ಪ್ರಜೆಗಳು ಸಹ ಬೆಲೆ ಏರಿಕೆ, ಹಣದುಬ್ಬರ ಇವುಗಳಿಂದ ಕುಗ್ಗಿ ಹೋಗಿದ್ದು, ಇಂತಹ ಸೇವೆಗಳಲ್ಲಿ ಹಣ ಪಾವತಿಸಿ ತಮ್ಮ ಆರ್ಡರ್ ಮಾಡುವ ಒಲವನ್ನು ಸಹ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ:   Errol Musk: ಮಗಳ ಜೊತೆಯೇ ಮಕ್ಕಳನ್ನು ಪಡೆದ ಎಲೋನ್ ಮಸ್ಕ್ ತಂದೆ!

ಅಲ್ಲದೇ ವಿಶ್ವಾದ್ಯಂತ ಆರ್ಥಿಕ ಕುಸಿತದ ಪರಿಣಾಮವಾಗಿ ಏರ್‌ಲಿಫ್ಟ್ ಸಹ ಈ ಸೇವೆಗಳ ಬೆಲೆಯನ್ನು ಹೆಚ್ಚಿಸಿತ್ತು. ಇದು ಕೂಡ ಜನರಿಗೆ ದುಬಾರಿಯಾಗಿ ಪರಿಣಮಿಸಿದ್ದು, ಏರ್‌ಲಿಫ್ಟ್ ನಲ್ಲಿ ಪಾಕಿಸ್ತಾನದ ಜನ ತಮ್ಮ ಆರ್ಡರ್ ಮಾಡುವ ಗೋಜಿಗೆ ಹೋಗುತ್ತಿಲ್ಲ. ಹೀಗಾಗಿ ಎಲ್ಲಾ ಆರ್ಥಿಕ ಹೊಡೆತಗಳಿಂದ ಕಂಗೆಟ್ಟ ಸ್ಟಾರ್ಟ್‌ಅಪ್‌ ಕೊನೆಯದಾಗಿ ಉದ್ಯಮ ಮುಚ್ಚುವ ನಿರ್ಧಾರ ಮಾಡಿದೆ.

ಸ್ಟಾರ್ಟ್‌ಅಪ್‌ಗಳು ಸಾಂಪ್ರದಾಯಿಕವಾಗಿ ಸಬ್ಸಿಡಿ ನೀಡಲು ಕ್ಯಾಪಿಟಲ್ ಫಂಡಿಂಗ್ ಬಳಸುತ್ತವೆ. ಆರ್ಥಿಕ ಹಿಂಜರಿತದ ಈ ಸಮಯದಲ್ಲಿ ಹೂಡಿಕೆದಾರರು ಹೂಡಿಕೆಯನ್ನು ಕಡಿತಗೊಳಿಸಿದ್ದರಿಂದ ಈ ಅಂಶವೂ ಸಹ ಉದ್ಯಮವು ಕೊನೆಗೊಳ್ಳಲು ಕಾರಣವಾಯಿತು.

ಇದನ್ನೂ ಓದಿ:  Liquor In School: ಮನೆಯಲ್ಲೇ ತಯಾರಿಸಿದ ಮದ್ಯ ಬ್ಯಾಗ್​​ನಲ್ಲಿಟ್ಟು ಶಾಲೆಗೆ ತಂದ ವಿದ್ಯಾರ್ಥಿ! ಆಮೇಲೆ ಫಜೀತಿ

ಉದ್ಯೋಗಿಗಳಿಗೆ ಶೀಘ್ರವೇ ಬಾಕಿ ಪಾವತಿ
“ಹಣಕಾಸಿನ ಸಮಸ್ಯೆಯಿಂದಾಗಿ ಸಂಸ್ಥೆಯು ಸಂಪೂರ್ಣವಾಗಿ ಮುಚ್ಚುವ ಹಂತದಲ್ಲಿತ್ತು. ನಮ್ಮ ಒಬ್ಬ ಹೂಡಿಕೆದಾರರು $20 ಮಿಲಿಯನ್ ನಿಧಿಯಿಂದ ಹಿಂದೆ ಸರಿದಿದ್ದರು. ಕಂಪನಿಯು ತನ್ನ ಗೋದಾಮುಗಳಲ್ಲಿ ಸ್ಟಾಕ್ ಅನ್ನು ಹೊಂದಿದೆ ಮತ್ತು ಉದ್ಯೋಗಿಗಳ ಭವಿಷ್ಯದ ಬಗ್ಗೆ ಸಾಕಷ್ಟು ಚಿಂತೆಯಾಗಿದೆ" ಎಂದು ಸ್ಟಾರ್ಟ್ಅಪ್ ಮೂಲವೊಂದು ತಿಳಿಸಿದೆ. ಏರ್‌ಲಿಫ್ಟ್ ಮುಂದಿನ ನಾಲ್ಕರಿಂದ ಎಂಟು ವಾರಗಳಲ್ಲಿ ಉದ್ಯೋಗಿಗಳಿಗೆ ಬಾಕಿ ಪಾವತಿಗಳನ್ನು ಒದಗಿಸುತ್ತದೆ ಮತ್ತು ಪೂರೈಕೆದಾರರು ಮತ್ತು ಮಧ್ಯಸ್ಥಗಾರರಿಗೆ ಬಾಕಿಗಳನ್ನು ನೀಡುತ್ತದೆ ಎಂದು ಹೇಳಿದೆ.
Published by:Ashwini Prabhu
First published: