Freebies: ಸಂಸದರ ಪಿಂಚಣಿ, ಇತರ ಸೌಲಭ್ಯ ರದ್ದುಗೊಳಿಸಿ: ಮತ್ತೆ ಜನಸಾಮಾನ್ಯರ ಪರ ಧ್ವನಿ ಎತ್ತಿದ ವರುಣ್ ಗಾಂಧಿ

ಬಿಹಾರದ ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಅವರು ರಾಜ್ಯಸಭೆಯಲ್ಲಿ ಉಚಿತ ಕೊಡುಗೆಗಳ ಸಂಸ್ಕೃತಿಯನ್ನು ಕೊನೆಗಾಣಿಸುವ ಕುರಿತು ಚರ್ಚೆ ನಡೆಸುವಂತೆ ನೋಟಿಸ್ ನೀಡಿರುವುದನ್ನು ಉಲ್ಲೇಖಿಸಿದ ವರುಣ್ ಗಾಂಧಿ, ಸಾರ್ವಜನಿಕರಿಗೆ ಸಿಗುತ್ತಿರುವ ಪರಿಹಾರದ ಬಗ್ಗೆ ಮಾತೆತ್ತುವ ಮುನ್ನ, ನಾವು ನಮ್ಮ ಬಗ್ಗೆ ಮೊದಲು ನೋಡಿಕೊಳ್ಳಬೇಕು ಎಂದು ಟ್ವೀಟ್ ಮಾಡಿದ್ದಾರೆ.

ವರುಣ್ ಗಾಂಧಿ

ವರುಣ್ ಗಾಂಧಿ

  • Share this:
ನವದೆಹಲಿ(ಆ.04): ಭಾರತೀಯ ಜನತಾ ಪಕ್ಷದ (BJP) ಸಂಸದ ವರುಣ್ ಗಾಂಧಿ (MP Varun Gandhi) ಅವರು ಸಾರ್ವಜನಿಕರಿಗೆ ಲಭ್ಯವಿರುವ ಉಚಿತ ಸೌಲಭ್ಯಗಳನ್ನು ಪ್ರಶ್ನಿಸುವ ಮೊದಲು, ಸಂಸದರಿಗೆ ನೀಡುವ ಪಿಂಚಣಿ ಮತ್ತು ಇತರ ಎಲ್ಲ ಸೌಲಭ್ಯಗಳನ್ನು ರದ್ದುಗೊಳಿಸುವ ಮೂಲಕ ಚರ್ಚೆಯನ್ನು ಏಕೆ ಪ್ರಾರಂಭಿಸಬಾರದು ಎಂದು ಬುಧವಾರ ಹೇಳಿದರು. ಬಿಹಾರದ ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ (Sushil Kumar Modi) ಅವರು ರಾಜ್ಯಸಭೆಯಲ್ಲಿ ಉಚಿತ ಕೊಡುಗೆಗಳ ಸಂಸ್ಕೃತಿಯನ್ನು ಕೊನೆಗಾಣಿಸುವ ಕುರಿತು ಚರ್ಚೆ ನಡೆಸುವಂತೆ ನೋಟಿಸ್ ನೀಡಿರುವುದನ್ನು ಉಲ್ಲೇಖಿಸಿದ ವರುಣ್ ಗಾಂಧಿ, ಸಾರ್ವಜನಿಕರಿಗೆ ಪರಿಹಾರ ನೀಡುವ ಕುರಿತು ಟ್ವೀಟ್ ಮಾಡಿದ್ದಾರೆ. ನಮ್ಮ ಬಗ್ಗೆಯೇ ನಾವು ನೋಡಿಕೊಳ್ಳಬೇಕು. ಸಂಸದರಿಗೆ ಪಿಂಚಣಿ (Pension)ಸೇರಿದಂತೆ ಇತರೆ ಎಲ್ಲ ಸೌಲಭ್ಯಗಳನ್ನು ರದ್ದುಪಡಿಸಿ ಚರ್ಚೆ ಆರಂಭಿಸಬಾರದೇಕೆ? ಎಂದು ಪ್ರಶ್ನಿಸಿದ್ದಾರೆ.

ಇನ್ನೂ ಓದಿ:  Varun Gandhi: ತಮ್ಮದೇ ಬಿಜೆಪಿ ಸರ್ಕಾರದ ವಿರುದ್ಧ ತಿರುಗಿಬಿದ್ದ ಸಂಸದ ವರುಣ್ ಗಾಂಧಿ; ಮುಂದಿನ ಹಾದಿ?

PMUY ಫಲಾನುಭವಿಗಳ ವಿಚಾರ ಉಲ್ಲೇಖ

ಕಳೆದ ಐದು ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಫಲಾನುಭವಿಗಳು ಸಿಲಿಂಡರ್‌ಗಳಿಗೆ ಮರುಪೂರಣ ಮಾಡದಿರುವ ವಿಷಯವನ್ನು ವರುಣ್ ಗಾಂಧಿ ಅವರು ಟ್ವೀಟ್‌ನಲ್ಲಿ ಪ್ರಸ್ತಾಪಿಸಿದರು ಮತ್ತು ಕಳೆದ ಐದು ವರ್ಷಗಳಲ್ಲಿ 4.13 ಕೋಟಿ ಜನರು ವೆಚ್ಚವನ್ನು ಭರಿಸಿಲ್ಲ ಎಂದು ಹೇಳಿದ್ದಾರೆ.

ಒಮ್ಮೆಯಾದರೂ ಸಿಲಿಂಡರ್ ಅನ್ನು ಮರುಪೂರಣ ಮಾಡಬಹುದು. ಆದರೆ ಒಮ್ಮೆ ಮಾತ್ರ 7.67 ಕೋಟಿ ಭರ್ತಿಯಾಗಿದೆ. "ಹೆಚ್ಚುತ್ತಿರುವ ದೇಶೀಯ ಅನಿಲ ಬೆಲೆಗಳು ಮತ್ತು ಅತ್ಯಲ್ಪ ಸಬ್ಸಿಡಿಗಳೊಂದಿಗೆ, ಬಡವರ ಮನೆ ಒಲೆ ಆರಿ ಹೋಗುತ್ತಿದೆ. ಶುದ್ಧ ಇಂಧನ, ಉತ್ತಮ ಜೀವನದ ಭರವಸೆಗಳು ಈ ರೀತಿ ಈಡೇರುತ್ತವೆಯೇ?" ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ರಾಮೇಶ್ವರ್ ತೇಲಿ ಆಗಸ್ಟ್ 1 ರಂದು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರವಾಗಿ ಕಳೆದ ಐದು ವರ್ಷಗಳಲ್ಲಿ ಪಿಎಂಯುವೈನ 4.13 ಕೋಟಿ ಫಲಾನುಭವಿಗಳು ಒಮ್ಮೆಯೂ ಸಿಲಿಂಡರ್ ತುಂಬಲಿಲ್ಲ, ಆದರೆ 7.67 ಕೋಟಿ ಫಲಾನುಭವಿಗಳು ಒಮ್ಮೆ ಮಾತ್ರ ಸಿಲಿಂಡರ್ ತುಂಬಿದ್ದಾರೆ ಎಂದಿದಿದ್ದಾರೆ.

ಇನ್ನೂ ಓದಿ:  Varun Gandhi vs BJP| ರೈತರನ್ನು ಬೆಂಬಲಿಸಿದ್ದ ವಾಜಪೇಯಿ ಭಾಷಣ ಹಂಚಿಕೊಂಡ ವರುಣ್ ಗಾಂಧಿ; ಬಿಜೆಪಿ ಮತ್ತೆ ಟಾಂಗ್!

ಇತ್ತೀಚೆಗೆ ಸರ್ಕಾರ ಅಗ್ನಿಪಥ ಯೋಜನೆಯನ್ನು ಘೋಷಿಸಿದಾಗಲೂ ವರುಣ್ ಗಾಂಧಿಯವರು ಅಗ್ನಿವೀರರನ್ನು ಬೆಂಬಲಿಸಿ ತಮ್ಮ ಪಿಂಚಣಿಯನ್ನು ತ್ಯಜಿಸುವುದಾಗಿ ಘೋಷಿಸಿದ್ದರು ಎಂಬುವುದು ಉಲ್ಲೇಖನೀಯ. ಅಲ್ಪಾವಧಿ ಸೇವೆ ಸಲ್ಲಿಸಿದ ರಾಷ್ಟ್ರ ರಕ್ಷಕರಿಗೆ ಪಿಂಚಣಿ ಪಡೆಯುವ ಹಕ್ಕಿಲ್ಲದಿದ್ದರೆ, ನಾನು ಕೂಡ ಪಿಂಚಣಿ ತ್ಯಜಿಸಲು ಸಿದ್ಧ ಎಂದು ಟ್ವೀಟ್ ಮಾಡಿದ್ದರು. ಬಿಜೆಪಿ ಸಂಸದ ವರುಣ್ ಗಾಂಧಿ ಟ್ವೀಟ್ ಮಾಡಿ, ಅಲ್ಪಾವಧಿ ಸೇವೆ ಸಲ್ಲಿಸಿರುವ ಅಗ್ನಿವೀರ್ ಪಿಂಚಣಿಗೆ ಅರ್ಹರಲ್ಲ, ಹಾಗಾದರೆ ಸಾರ್ವಜನಿಕ ಪ್ರತಿನಿಧಿಗಳಿಗೆ ಏಕೆ ಈ ಸೌಲಭ್ಯ? ದೇಶ ಕಾಯುವವರಿಗೆ ಪಿಂಚಣಿ ಹಕ್ಕು ಇಲ್ಲ, ಆದ್ದರಿಂದ ನಾನು ನನ್ನ ಸ್ವಂತ ಪಿಂಚಣಿಯನ್ನು ತ್ಯಜಿಸಲು ಸಿದ್ಧನಿದ್ದೇನೆ. ಶಾಸಕ-ಸಂಸದರು ಪಿಂಚಣಿ ಬಿಟ್ಟು ಅಗ್ನಿವೀರರಿಗೆ ಪಿಂಚಣಿ ಸಿಗುವಂತೆ ಮಾಡಬಹುದಲ್ಲವೇ? ಎಂದಿದ್ದರು.
Published by:Precilla Olivia Dias
First published: