ಕೊರೋನಾ ವ್ಯಾಪಕವಾಗಿ ಹರಡುವ ಸಂದರ್ಭದಲ್ಲಿ ರಾಮ ಮಂದಿರ ಶಂಕುಸ್ಥಾಪನೆ ಮುಂದೂಡಬಾರದೇಕೆ?; ದಿಗ್ವಿಜಯ್‌ ಸಿಂಗ್ ಪ್ರಶ್ನೆ

ಈ ಸಂದರ್ಭ ಅತ್ಯಂತ ಕೆಟ್ಟದಾಗಿದೆ. ರಾಮ ಮಂದಿರದ ಶಿಲಾನ್ಯಾಸದ ನಿರ್ವಹಣೆ ಹೊತ್ತಿದ್ದ ಸಿಬ್ಬಂದಿಗಳಿಗೆ ಕೊರೋನಾ ಬಂದಿರುವುದೇ ಇದಕ್ಕೆ ಸಾಕ್ಷಿ. ದಯವಿಟ್ಟು ಈ ಕಾರ್ಯಕ್ರಮವನ್ನು ಮುಂದೂಡಿ ಎಂದು ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್ ಒತ್ತಾಯಿಸಿದ್ದಾರೆ.

MAshok Kumar | news18-kannada
Updated:August 3, 2020, 5:56 PM IST
ಕೊರೋನಾ ವ್ಯಾಪಕವಾಗಿ ಹರಡುವ ಸಂದರ್ಭದಲ್ಲಿ ರಾಮ ಮಂದಿರ ಶಂಕುಸ್ಥಾಪನೆ ಮುಂದೂಡಬಾರದೇಕೆ?; ದಿಗ್ವಿಜಯ್‌ ಸಿಂಗ್ ಪ್ರಶ್ನೆ
ದಿಗ್ವಿಜಯ್‌ ಸಿಂಗ್.
  • Share this:
ನವ ದೆಹಲಿ (ಆಗಸ್ಟ್‌ 03); ಭಾರತ ಪ್ರಸ್ತುತ ಸವಾಲಿನ ಸಮಯವನ್ನು ಎದುರಿಸುತ್ತಿದೆ. ಕೊರೋನಾ ವೈರಸ್‌ ವ್ಯಾಪಕವಾಗಿ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನಾ ಕಾರ್ಯಕ್ರಮ ನಡೆಸುವುದು ಸರಿಯಲ್ಲ. ಹೀಗಾಗಿ ಈ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ, ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮುಂದೂಡಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಒತ್ತಾಯಿಸಿದ್ದಾರೆ.

ದಶಕಗಳ ವಿವಾದದ ನಂತರ ಸುಪ್ರೀಂ ಕೋರ್ಟ್‌‌ನಲ್ಲಿ ರಾಮ ಮಂದಿರದ ಪರವಾಗಿ ತೀರ್ಪು ಬಂದಿದ್ದು, ಆಗಸ್ಟ್ 05 ರಂದು ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉತ್ತರಪ್ರದೇಶ ಸರ್ಕಾರ ಆಯೋಜಿಸಿದೆ. ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಂಕುಸ್ಥಾಪನೆ ಮಾಡಲಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಉನ್ನತ ನಾಯಕರು ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಆದರೆ, ಈ ಕುರಿತು ಟ್ವೀಟ್ ಮಾಡುವ ಮೂಲಕ ತಮ್ಮ ಆತಂಕವನ್ನು ಹೊರಹಾಕಿರುವ ದಿಗ್ವಿಜಯ್ ಸಿಂಗ್, “ಈ ಸಂದರ್ಭ ಅತ್ಯಂತ ಕೆಟ್ಟದಾಗಿದೆ. ರಾಮ ಮಂದಿರದ ಶಿಲಾನ್ಯಾಸದ ನಿರ್ವಹಣೆ ಹೊತ್ತಿದ್ದ ಸಿಬ್ಬಂದಿಗಳಿಗೆ ಕೊರೋನಾ ಬಂದಿರುವುದೇ ಇದಕ್ಕೆ ಸಾಕ್ಷಿ. ದಯವಿಟ್ಟು ಈ ಕಾರ್ಯಕ್ರಮವನ್ನು ಮುಂದೂಡಿ” ಎಂದು ಒತ್ತಾಯಿಸಿದ್ದಾರೆ.

ಅಲ್ಲದೆ, ಮತ್ತೊಂದು ಟ್ವೀಟ್‌ನಲ್ಲಿ, “ಮೋದಿ-ಜಿ, ಅಯೋಧ್ಯೆಯಲ್ಲಿ ಶಂಕುಸ್ಥಾಪನೆ ಮಾಡುವ ಮೂಲಕ ನೀವು ಇನ್ನೂ ಎಷ್ಟು ಜನರನ್ನು ಆಸ್ಪತ್ರೆಗೆ ಕಳುಹಿಸಲು ಬಯಸಿದ್ದೀರಿ? ಯೋಗಿ-ಜಿ ನೀವು ದಯವಿಟ್ಟು ಪ್ರಧಾನ ಮಂತ್ರಿಯೊಂದಿಗೆ ಮಾತನಾಡಿ. ಸನಾತನ ಧರ್ಮದ ಉಲ್ಲಂಘನೆಯನ್ನು ನೀವು ಹೇಗೆ ಅನುಮತಿಸುತ್ತೀರಿ? ಈ ಕಾರ್ಯಕ್ರಮಕ್ಕೆ ಆತುರವೇನಿದೆ?” ಎಂದು ದಿಗ್ವಿಜಯ್ ಸಿಂಗ್ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : Petrol Diesel Price: ಇಂದಿನ ಪೆಟ್ರೋಲ್​​-ಡೀಸೆಲ್​​ ಬೆಲೆ ಇಲ್ಲಿದೆ ನೋಡಿ

“ಅಯೋಧ್ಯೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಎಲ್ಲಾ ಹೊಣೆಗಳನ್ನು ಹೊತ್ತಿದ್ದ ಪುರೋಹಿತರು, ಉತ್ತರಪ್ರದೇಶ ಸಚಿವರು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊರೋನಾ ವೈರಸ್ ತಗುಲಿದೆ. ಇಂತಹ ಸಂದರ್ಭದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮನ್ನು ನಾವೇ ನಿರ್ಬಂಧಿಸಿಕೊಳ್ಳಬೇಕಲ್ಲವೇ? 14 ದಿನಗಳ ಕ್ವಾರಂಟೈನ್ ಸಾಮಾನ್ಯರಿಗೆ ಮಾತ್ರವೇ? ಪ್ರಧಾನಮಂತ್ರಿಯವರಿಗೆ ಇಲ್ಲವೇ?” ಎಂದು ಸಿಂಗ್ ಕಟುವಾಗಿ ಪ್ರಶ್ನೆ ಮಾಡಿದ್ದಾರೆ.
ಆದರೆ, ದಿಗ್ವಿಜಯ್ ಸಿಂಗ್ ಟ್ವೀಟ್‌ಗೆ ಅಷ್ಟೇ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಮಧ್ಯಪ್ರದೇಶದ ಬಿಜೆಪಿ ಸಚಿವ ನರೋತ್ತಮ್ ಮಿಶ್ರಾ, “ನಾವು ಅನಾದಿ ಕಾಲದಿಂದಲೂ ನೋಡುತ್ತಿದ್ದೇವೆ, ಏನಾದರೂ ಒಳ್ಳೆಯದೊಂದು ಕೆಲಸ ಸಂಭವಿಸಿದಾಗ, ಅಸುರರು ಸಮಸ್ಯೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ” ಎಂದು ದಿಗ್ವಿಜಯ್ ಸಿಂಗ್ ವಿರುದ್ಧ ಕಿಡಿಕಾರಿದ್ದಾರೆ.
Published by: MAshok Kumar
First published: August 3, 2020, 5:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading