'ಪೌರತ್ವ ಕಾಯ್ದೆಯಿಂದ ಮುಸ್ಲಿಂ ಧರ್ಮ ಮಾತ್ರ ಏಕೆ ಕೈಬಿಟ್ಟಿರಿ?': ಕೇಂದ್ರ ಸರ್ಕಾರಕ್ಕೆ ಬಿಜೆಪಿ ನಾಯಕ ಬೋಸ್​​ ಪ್ರಶ್ನೆ

ಭಾರತವೊಂದು ಸರ್ವಧರ್ಮಗಳ ರಾಷ್ಟ್ರ. ಎಲ್ಲಾ ಧರ್ಮ ಮತ್ತು ಸಮುದಾಯಗಳು ಇಲ್ಲಿ ಬದುಕಲು ಅವಕಾಶ ಇದೆ ಎಂದು ಬೋಸ್​ ಅಭಿಪ್ರಾಯಪಟ್ಟಿದ್ದಾರೆ.

ಚಂದ್ರ ಕುಮಾರ್​ ಬೋಸ್​

ಚಂದ್ರ ಕುಮಾರ್​ ಬೋಸ್​

  • Share this:
ಕೋಲ್ಕತ್ತಾ(ಡಿ.24): ಒಂದೆಡೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಷ್ಟ್ರೀಯ ಪೌರತ್ವ ಮಸೂದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇನ್ನೊಂದೆಡೆ ತಮ್ಮ ಸರ್ಕಾರ ಜಾರಿಗೆ ಮಾಡಲೊರಟ ಪೌರತ್ವ ಮಸೂದೆ ಬೆಂಬಲಿಸಿ ಬಿಜೆಪಿ ನಾಯಕರು ಮೆರವಣಿಗೆಗಳನ್ನು ಆಯೋಜಿಸುತ್ತಿದ್ದಾರೆ. ಈ ಮಧ್ಯೆ ಅದೇ ಬಿಜೆಪಿಯ ಪ್ರಮುಖ ನಾಯಕರಾದ ಚಂದ್ರ ಕುಮಾರ್​ ಬೋಸ್​​ ಪೌರತ್ವ ಮಸೂದೆ ಕಾಯ್ದೆ ವಿರುದ್ಧ ಧ್ವನಿಯೆತ್ತಿದ್ದಾರೆ.

ಹೌದು, ನೇತಾಜಿ ಸುಭಾಷ್​ ಚಂದ್ರ ಬೋಸ್​ ಅವರ ಸೋದರ ಮೊಮ್ಮಗನಾದ ಚಂದ್ರ ಕುಮಾರ್​​ ಬೋಸ್​ ಕೇಂದ್ರ ಸರ್ಕಾರದ ನಿರ್ಧಾರವನ್ನು ಟ್ವೀಟ್​​ ಮೂಲಕ ಪ್ರಶ್ನಿಸಿದ್ಧಾರೆ. ಭಾರತವೊಂದು ಸರ್ವಧರ್ಮಗಳ ರಾಷ್ಟ್ರ. ಎಲ್ಲಾ ಧರ್ಮ ಮತ್ತು ಸಮುದಾಯಗಳು ಇಲ್ಲಿ ಬದುಕಲು ಅವಕಾಶ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರು ಗೋಲಿಬಾರ್​ ಪ್ರಕರಣ: ಸಿಐಡಿ ತನಿಖೆ ಎಂದು, ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ ಬಿಎಸ್​ವೈ

 ಇದೇ ವೇಳೆ, ಒಂದು ವೇಳೆ ಪೌರತ್ವ ಮಸೂದೆ ಕಾಯ್ದೆ ಧರ್ಮಾಧಾರಿತ ಇಲ್ಲವೆಂದಾದರೆ, ನಾವ್ಯಾಕೇ ಹಿಂದೂ, ಸಿಖ್​, ಬುದ್ಧ, ಕ್ರಿಶ್ಚಿಯನ್​​, ಪಾರ್ಸಿ ಮತ್ತು ಜೈನರ ಬಗ್ಗೆ ಮಾತ್ರ ಮಾತನಾಡುತ್ತಿದ್ದೇವೆ. ಈ ಕಾಯ್ದೆಯಿಂದ ಮುಸ್ಲಿಮ್​ ಸಮುದಾಯವನ್ನು ಏಕೆ ಕೈಬಿಟ್ಟಿದ್ದೇವೆ? ಎಂದು ಬೋಸ್​ ಪ್ರಶ್ನಿಸಿದ್ದಾರೆ. ಅಲ್ಲದೇ ಈ ವಿಚಾರದಲ್ಲಿ ನಾವು ಪಾರದರ್ಶಕವಾಗಿರಬೇಕು ಎಂದು ಹೇಳಿದ್ದಾರೆ.ಆರ್ಥಿಕತೆ ಸುಧಾರಿಸಲು ತಕ್ಷಣವೇ ಕ್ರಮ ಕೈಗೊಳ್ಳಿ; ಭಾರತಕ್ಕೆ ಐಎಂಎಫ್ ಕಿವಿಮಾತು

ಭಾರತವನ್ನು ಬೇರೆ ದೇಶದೊಂದಿಗೆ ಹೋಲಿಕೆ ಮಾಡಬಾರದು. ಇನ್ನೊಂದು ದೇಶಕ್ಕೆ ತುಲನೆ ಮಾಡಿ ಸಮಾನವಾದದ್ದು ಎಂದು ನಿರೂಪಿಸುವ ಕೆಲಸ ಮಾಡಬಾರದು. ಭಾರತವೊಂದು ಸರ್ವಧರ್ಮಗಳ ರಾಷ್ಟ್ರ. ಇಲ್ಲಿ ಎಲ್ಲಾ ಧರ್ಮ ಹಾಗೂ ಸಮುದಾಯಗಳಿಗೂ ಬದುಕುವ ಹಕ್ಕಿದೆ ಎಂದು ಬೋಸ್​ ಟ್ವೀಟ್ ಮಾಡಿದ್ದಾರೆ.
Published by:Latha CG
First published: