ವಿವೇಕಾನಂದರಿಂದ ಹಿಡಿದು ಸಿದ್ಧಗಂಗಾ ಶ್ರೀವರೆಗೆ ಯಾವ ಸನ್ಯಾಸಿಗೂ ಭಾರತರತ್ನ ಸಿಕ್ಕಿಲ್ಲ; ಬಾಬಾ ರಾಮದೇವ್​ ಅಸಮಾಧಾನ

70 ವರ್ಷಗಳಿಂದ ಯಾವ ಸನ್ಯಾಸಿಯನ್ನೂ ಭಾರತರತ್ನಕ್ಕೆ ಕೇಂದ್ರ ಸರ್ಕಾರಗಳು ಗುರುತಿಸಿಲ್ಲ. ಮುಂದಿನ ವರ್ಷವಾದರೂ ಸನ್ಯಾಸಿಯೊಬ್ಬರಿಗೆ ಕೇಂದ್ರ ಸರ್ಕಾರ ಭಾರತರತ್ನ ಪ್ರಶಸ್ತಿ ನೀಡಲೇಬೇಕು ಎಂದು ಬಾಬಾ ರಾಮದೇವ್ ಆಗ್ರಹಿಸಿದ್ದಾರೆ.

Sushma Chakre | news18
Updated:January 27, 2019, 1:06 PM IST
ವಿವೇಕಾನಂದರಿಂದ ಹಿಡಿದು ಸಿದ್ಧಗಂಗಾ ಶ್ರೀವರೆಗೆ ಯಾವ ಸನ್ಯಾಸಿಗೂ ಭಾರತರತ್ನ ಸಿಕ್ಕಿಲ್ಲ; ಬಾಬಾ ರಾಮದೇವ್​ ಅಸಮಾಧಾನ
ಬಾಬಾ ರಾಮದೇವ್
  • News18
  • Last Updated: January 27, 2019, 1:06 PM IST
  • Share this:
ನವದೆಹಲಿ (ಜ.27): ಕಳೆದ 70 ವರ್ಷಗಳಿಂದ ಯಾವ ಸನ್ಯಾಸಿಯೂ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನ ಗೌರವಕ್ಕೆ ಆಯ್ಕೆಯಾಗಿಲ್ಲ. ಸನ್ಯಾಸಿಗಳಿಗೂ ಭಾರತರತ್ನ ಸಿಗುವಂತಾಗಬೇಕು. ಆದರೆ, ಸರ್ಕಾರ ಸನ್ಯಾಸಿಗಳನ್ನು ಪ್ರಶಸ್ತಿಗೆ ಪರಿಗಣಿಸದಿರುವುದಕ್ಕೆ ಕಾರಣ ತಿಳಿಯುತ್ತಿಲ್ಲ ಎಂದು ಯೋಗಗುರು ಬಾಬಾ ರಾಮದೇವ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸನ್ಯಾಸಿಗಳೂ ಭಾರತರತ್ನ ಗೌರವಕ್ಕೆ ಅರ್ಹರು ಎಂದು ಹೇಳಿರುವ ಬಾಬಾ ರಾಮದೇವ್, ಸನ್ಯಾಸಿಗಳಾದ ಸ್ವಾಮಿ ವಿವೇಕಾನಂದ, ಮಹರ್ಷಿ ದಯಾನಂದ ಸರಸ್ವತಿ, ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹೀಗೆ ಮಹಾನ್​ ಸನ್ಯಾಸಿಗಳು ನಮ್ಮ ದೇಶದ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ್ದಾರೆ, ತಮ್ಮ ಸ್ವಾರ್ಥವನ್ನು ಬದಿಗಿಟ್ಟು ಸಮಾಜಸೇವೆ ಮಾಡಿದ್ದಾರೆ. ಆದರೆ, 70 ವರ್ಷಗಳಿಂದ ಯಾವ ಸನ್ಯಾಸಿಯನ್ನೂ ಭಾರತರತ್ನಕ್ಕೆ ಕೇಂದ್ರ ಸರ್ಕಾರಗಳು ಗುರುತಿಸಿಲ್ಲ. ಮುಂದಿನ ವರ್ಷವಾದರೂ ಸನ್ಯಾಸಿಯೊಬ್ಬರಿಗೆ ಕೇಂದ್ರ ಸರ್ಕಾರ ಭಾರತರತ್ನ ಪ್ರಶಸ್ತಿ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಭಾರತ ರತ್ನ ಪಟ್ಟಿ ಪ್ರಕಟ: ನಡೆದಾಡಿದ ದೇವರು ಸಿದ್ದಗಂಗಾ ಶ್ರೀಗಳಿಗೆ ಈಗಲೂ ಇಲ್ಲ ಅರ್ಹ ಗೌರವ

ಕಳೆದ ವರ್ಷದಿಂದಲೂ ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ಪ್ರದಾನ ಮಾಡಬೇಕೆಂಬ ಕೂಗು ಕೇಳಿಬರುತ್ತಲೇ ಇತ್ತು. ಈ ವರ್ಷ ಮರಣೋತ್ತರವಾಗಿಯಾದರೂ ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ಘೋಷಣೆ ಮಾಡಬೇಕೆಂದು ಅಭಿಯಾನಗಳೂ ನಡೆದಿದ್ದವು. ಆದರೆ, ಈ ಬಾರಿ ಪ್ರಣಬ್​ ಮುಖರ್ಜಿ ಸೇರಿ ಅಸ್ಸಾಮಿ ಗಾಯಕ ಭೂಪೇನ್ ಹಜಾರಿಕಾ ಮತ್ತು ಭಾರತೀಯ ಜನಸಂಘದ ನಾಯಕ ನಾನಾಜೀ ದೇಶಮುಖ್​ ಅವರಿಗೆ ಭಾರತರತ್ನ ಪ್ರಶಸ್ತಿ ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಅಸಮಾಧಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಾಬಾ ರಾಮದೇವ್ ಕೇಂದ್ರ ಸರ್ಕಾರ ಸನ್ಯಾಸಿಗಳನ್ನು ಪ್ರಶಸ್ತಿಗೆ ಪರಿಗಣಿಸದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

First published:January 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading