ಆರ್ಯನ್‌ ಖಾನ್‌ ಡ್ರಗ್‌ ಕೇಸ್‌ ನಂತೆ Amazon‌ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡಿಲ್ಲ: CAIT

ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾದ ಮಾದಕವಸ್ತು ಕಳ್ಳಸಾಗಣೆ ಪ್ರಕರಣಗಳಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಸಿಎಐಟಿ ಆರ್ಯನ್‌ ಖಾನ್‌ ಪ್ರಕರಣದಲ್ಲಿ ಇದ್ದ ಪೋಲಿಸರ ದಕ್ಷತೆ ಅಮೆಜಾನ್‌ ಪ್ರಕರಣ ಯಾಕಿಲ್ಲ ಅಂತ ಹೋಲಿಕೆ ಮಾಡಿ ಅಸಮಾಧಾನ ಹೊರಹಾಕಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇ- ಕಾಮರ್ಸ್‌ (e-commerce) ನಲ್ಲಿ ದೈತ್ಯ ಕಂಪನಿಯಾಗಿರುವ ಅಮೆಜಾನ್ ನ(Amazon marijuana)  ಗಾಂಜಾ ಮಾರಾಟ ದಂಧೆ  ಪ್ರಕರಣ ಇಡೀ ದೇಶದಲ್ಲಿ ತಲ್ಲಣ ಮೂಡಿಸಿತ್ತು. ಅಲ್ಲದೇ ಈ ದಂಧೆ ಭೇದಿಸಿದ ಮಧ್ಯಪ್ರದೇಶ ( Madhya Pradesh Police)ಭಿಂಡ್‌ ಪೊಲೀಸರ ದಕ್ಷತೆಯನ್ನು ಶ್ಲಾಘಿಸಲಾಗಿತ್ತು, ಆದರೆ ಇದೀಗ ಪ್ರಕರಣ ಸಂಬಂಧಪಟ್ಟಂತೆ ಅಮೆಜಾನ್‌ ಅಧಿಕಾರಿಗಳನ್ನು ಯಾಕಿನ್ನು  ಬಂಧಿಸಿಲ್ಲ ಎಂಬ ಕೂಗು ಕೇಳಿ ಬಂದಿದೆ. ಇತ್ತೀಚೆಗೆ ಡ್ರಗ್‌ ಕೇಸ್‌ನಲ್ಲಿ ಬಾಲಿವುಡ್‌ ಕಿಂಗ್ ಖಾನ್‌ ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ (Aryan Khan drug case) ಅವರನ್ನು ಬಂಧಿಸಿ ವಿಚಾರಣೆ ನಡೆಸಿದಂತೆ ಯಾಕೆ ಅಮೆಜಾನ್‌ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡಿಲ್ಲ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ( All India Traders) (ಸಿಎಐಟಿ) ತಾಕೀತು ಮಾಡಿದೆ.

  ಇದನ್ನು ಓದಿ:Amazon online: ಆನ್​ಲೈನ್​ನಲ್ಲಿ ಗಾಂಜಾ; ಅಮೇಜಾನ್ ಅಧಿಕಾರಿಗಳ ವಿರುದ್ಧ ಮ.ಪ್ರ. ಪೊಲೀಸರಿಂದ ಪ್ರಕರಣ

  ಅಸಮಾಧಾನ
  ಇದಲ್ಲದೇ ಮಧ್ಯಪ್ರದೇಶ ಪೊಲೀಸರು 720 ಕೆಜಿ ಗಾಂಜಾವನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆಜಾನ್ ಅಧಿಕಾರಿಗಳನ್ನು ಬಂಧಿಸುವಂತೆ ಒಕ್ಕೂಟವು (ಸಿಎಐಟಿ) ಒತ್ತಾಯಿಸಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ದಾಖಲಾದ ಮಾದಕವಸ್ತು ಕಳ್ಳಸಾಗಣೆ ಪ್ರಕರಣಗಳಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಸಿಎಐಟಿ ಆರ್ಯನ್‌ ಖಾನ್‌ ಪ್ರಕರಣದಲ್ಲಿ ಇದ್ದ ಪೋಲಿಸರ ದಕ್ಷತೆ ಅಮೆಜಾನ್‌ ಪ್ರಕರಣ ಯಾಕಿಲ್ಲ ಅಂತ ಹೋಲಿಕೆ ಮಾಡಿ ಅಸಮಾಧಾನ ಹೊರಹಾಕಿದೆ. ಅಲ್ಲದೇ ಮಧ್ಯಪ್ರದೇಶ ಪ್ರಕರಣದಲ್ಲೂ ಅಧಿಕಾರಿಗಳು ಇದೇ ರೀತಿಯ ತ್ವರಿತತೆಯನ್ನು ತೋರಿಸಬೇಕು ಎಂದು ಒತ್ತಾಯಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಕರಣವನ್ನು ಪರಿಶೀಲಿಸುವಂತೆ ಒಕ್ಕೂಟ ಮನವಿ ಮಾಡಿದೆ.

  ನವೆಂಬರ್ 14 ರಂದು, ಮಧ್ಯಪ್ರದೇಶ ಪೊಲೀಸರು ಭಿಂಡ್ ಜಿಲ್ಲೆಯಲ್ಲಿ ಗಾಂಜಾವನ್ನು ವಶಪಡಿಸಿಕೊಂಡ ನಂತರ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ನಿಷೇಧಿತ ವಸ್ತುವನ್ನು ಇ-ಕಾಮರ್ಸ್ ಪೋರ್ಟಲ್ ಮೂಲಕ ಸರಬರಾಜು ಮಾಡಲಾಗಿದೆ. ಅಮೆಜಾನ್ ಇನ್ನೂ ಈ ವಿಷಯದ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ, ಈ ಪ್ರಕರಣದ ಸುಳಿವು ಸಿಕ್ಕ ನಂತರ ಆಂಧ್ರಪ್ರದೇಶ ಪೊಲೀಸರು ವಿಶಾಖಪಟ್ಟಣಂನಲ್ಲಿ 48 ಕೆಜಿ ಗಾಂಜಾವನ್ನು ವಶಪಡಿಸಿಕೊಂಡು, ಅಮೆಜಾನ್ ಮೂಲಕ ದೇಶಾದ್ಯಂತ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.

  ಸಮಯ ವ್ಯರ್ಥ ಮಾಡಲಿಲ್ಲ
  ವಾಟ್ಸಾಪ್ ಚಾಟ್‌ನ ಆಧಾರದ ಮೇಲೆ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸುವಲ್ಲಿ ಎನ್‌ಸಿಬಿ "ಸಮಯ ವ್ಯರ್ಥ ಮಾಡಲಿಲ್ಲ" ಎಂದು ಆರೋಪಿಸಿದ ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ. ಭಾರ್ತಿಯಾ ಅಮೆಜಾನ್ ವಿರುದ್ಧದ ಪ್ರಕರಣದಲ್ಲಿ, ಕಂಪನಿಯ ಅಧಿಕಾರಿಗಳನ್ನು ಹೆಸರಿಸಿದರೂ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.

  ತಾರತಮ್ಯದ ವರ್ತನೆ
  ಯಾವುದೇ ವ್ಯಕ್ತಿಯು ಒಂದು ರಾಜ್ಯಕ್ಕೆ ಮತ್ತು ಇನ್ನೊಂದು ರಾಜ್ಯಕ್ಕೆ ನಿಷೇಧಿತ ವಸ್ತುವನ್ನು ಉತ್ಪಾದಿಸಿದರೆ, ಹೊಂದಿದ್ದಲ್ಲಿ, ಮಾರಾಟ ಮಾಡಿದರೆ, ಖರೀದಿ, ಗೋದಾಮುಗಳು, ಸಾಗಣೆ, ಆಮದು ಅಥವಾ ರಫ್ತು ಮಾಡಿದರೆ ವಾರಂಟ್ ಇಲ್ಲದೆ ವ್ಯಕ್ತಿಯನ್ನು ಬಂಧಿಸಲು ಎನ್‌ಡಿಪಿಎಸ್ ಕಾನೂನು ತನಿಖಾ ಸಂಸ್ಥೆಗೆ ಅಧಿಕಾರ ನೀಡುತ್ತದೆ ಎಂದು CAITಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್, ಹೇಳಿದ್ದಾರೆ. ರಾಜ್ಯ ಪೊಲೀಸರ ಕಡೆಯಿಂದ ಕ್ರಮ ಕೈಗೊಳ್ಳದಿರುವುದು ತಾರತಮ್ಯದ ವರ್ತನೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಹೇಳಿದ ಅವರು. "ಅಮೆಜಾನ್ ಅಧಿಕಾರಿಗಳನ್ನು ಬಂಧಿಸುವ ಬದಲು, ಎಂಪಿ ಪೊಲೀಸರು ಅವರಿಗೆ ನೋಟಿಸ್ ನೀಡಲು ಆದ್ಯತೆ ನೀಡಿ ಅಮೆಜಾನ್ ಉತ್ತರಕ್ಕಾಗಿ ಕಾಯುತ್ತಿರುವುದು ಎಷ್ಟು ಸರಿ ಎಂದು ಅವರು ಹೇಳಿದ್ದಾರೆ.

  ಕೋಟ್ಯಾಂತರ ಮೌಲ್ಯದ ಗಾಂಜಾ ವಹಿವಾಟು

  ಇತ್ತೀಚೆಗೆ ಅಮೆಜಾನ್ ಅನ್ನು ಗಾಂಜಾ ಮಾರಾಟಕ್ಕೆ ಮಾಧ್ಯಮವಾಗಿ ಬಳಸಲಾಗುತ್ತಿದೆ ಎಂಬ ವರದಿಗಳನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ತನಿಖೆ ಮಾಡಬೇಕು ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಒತ್ತಾಯಿಸಿತ್ತು. ಕಳೆದ ನಾಲ್ಕು ತಿಂಗಳುಗಳಲ್ಲಿ ಒಂದೇ ವೇದಿಕೆಯನ್ನು ಬಳಸಿಕೊಂಡು ಕೋಟ್ಯಾಂತರ ಮೌಲ್ಯದ ಗಾಂಜಾ ವಹಿವಾಟು ನಡೆದಿದೆ ಎಂದು ಆರೋಪಿಸಿತ್ತು. ಇದಲ್ಲದೇ ವಿದೇಶಿ ಹೂಡಿಕೆ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) Amazon.com Inc ಮತ್ತು ಫ್ಯೂಚರ್ ಗ್ರೂಪ್‌ನ ಅಧಿಕಾರಿಗಳಿಗೆ ಸಮನ್ಸ್ ನೀಡಿದೆ. ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವಂತೆ ಸೂಚಿಸಿದೆ.

  ಇದನ್ನು ಓದಿ:CAIT Protest: ನಿಷೇಧಿತ ರಾಸಾಯನಿಕ, ಡ್ರಗ್ಸ್​ ಮಾರಾಟ; ಅಮೆಜಾನ್​ ವಿರುದ್ಧ ದೇಶಾದ್ಯಂತ ಸಿಎಐಟಿ ಪ್ರತಿಭಟನೆ

  ಕಳೆದ ನವೆಂಬರ್‌ 14 ರಂದು ಮಧ್ಯಪ್ರದೇಶದ ಭೀಂಡ್ ಪೊಲೀಸರು ಇ-ಕಾಮರ್ಸ್ ಪೋರ್ಟಲ್ ಅಮೆಜಾನ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ಕೈಗೊಂಡಿತ್ತು. ಈ ಪ್ರಕರಣವನ್ನು ಎನ್‌ಡಿಪಿಎಸ್( NDPS Act) ಕಾಯ್ದೆಯ ಸೆಕ್ಷನ್ 38 ರ ಅಡಿಯಲ್ಲಿ ದಾಖಲಿಸಲಾಗಿದೆ. ಭಿಂಡ್ ಎಸ್ಪಿ ಮನೋಜ್ ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿತ್ತು. ಮತ್ತು ಪ್ರಕರಣದಲ್ಲಿ ಬೇರೆ ವಿಳಾಸಗಳಿಂದ ಬುಕ್‌ ಮಾಡಿದ ಮತ್ತು ತಲುಪಿಸಲಾದ 20 ನಿಷಿದ್ಧ ಸರಕುಗಳ ವಿವರ ಇನ್ನೂ ಲಭ್ಯವಾಗಿಲ್ಲ ಎಂದು ಹೇಳಲಾಗಿತ್ತು.
  Published by:vanithasanjevani vanithasanjevani
  First published: