HOME » NEWS » National-international » WHY NIRMALA SITHARAMAN WEARS LAAL PAAD SAREE ON BUDGET DAY SNVS

Union Budget 2021 - ಬಜೆಟ್ ಭಾಷಣದ ದಿನ ನಿರ್ಮಲಾ ಸೀತಾರಾಮನ್ ಲಾಲ್ ಪಾಡ್ ಸೀರೆ ತೊಟ್ಟ ಮರ್ಮವೇನು?

ತಮ್ಮ ಬಜೆಟ್ ಭಾಷಣಗಳಲ್ಲಿ ಸಾಂಕೇತಿಕ ನಡೆಗಳನ್ನ ಅನುಸರಿಸುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿ ಬಂಗಾಳಿ ಸಂಸ್ಕೃತಿಯೊಂದಿಗೆ ಜೋಡಿತಗೊಂಡಿರುವ ಅಂಶಗಳನ್ನ ಅನುಸರಿಸಿ ಗಮನ ಸೆಳೆದಿದ್ದಾರೆ.

news18
Updated:February 1, 2021, 12:49 PM IST
Union Budget 2021 - ಬಜೆಟ್ ಭಾಷಣದ ದಿನ ನಿರ್ಮಲಾ ಸೀತಾರಾಮನ್ ಲಾಲ್ ಪಾಡ್ ಸೀರೆ ತೊಟ್ಟ ಮರ್ಮವೇನು?
ನಿರ್ಮಲಾ ಸೀತಾರಾಮನ್
  • News18
  • Last Updated: February 1, 2021, 12:49 PM IST
  • Share this:
ನವದೆಹಲಿ(ಫೆ. 01): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ತಮ್ಮ ಮೂರನೇ ಬಜೆಟ್ ಮಂಡನೆ ಮಾಡಿದ್ದಾರೆ. ಇದರ ಮಧ್ಯೆ ಅವರ ಕೆಲವೊಂದು ನಡೆಗಳು ಸಾಂಕೇತವೆಂಬಂತೆ ಗಮನ ಕೂಡ ಸೆಳೆದಿವೆ. ಇವತ್ತು ಬಜೆಟ್ ಮಂಡನೆ ದಿನ ಅವರು ದೊಡ್ಡ ಲಾಲ್ ಪಾಡ್ ಸೀರೆ (ಕೆಂಪು ಅಂಚಿನ ಸೀರೆ) ನಿರ್ದಿಷ್ಟ ಕಾರಣಗಳಿಗೆ ಗಮನ ಸೆಳೆಯಿತು. ಈ ಕೆಂಪು ಅಂಚಿನ ಸೀರೆ ಬಂಗಾಳಿಗಳ ಪಾಲಿಗೆ ಧಾರ್ಮಿಕವಾಗಿ ವಿಶೇಷವಾದುದು. ದುರ್ಗಾ ಪೂಜೆ ಉತ್ಸವದಲ್ಲಿ ಹೆಂಗಳೆಯರು ಇಂತಹ ಲಾಲ್ ಪಾರ್ ಸ್ಯಾರಿಗಳನ್ನ ತೊಟ್ಟು ಸಂಭ್ರಮಿಸುತ್ತಾರೆ.

ಬಂಗಾಳಿಗಳು ತಮ್ಮ ರಾಜಕೀಯ ವಿಚಾರ ಏನೇ ಇರಲಿ ಬಂಗಾಳಿ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಬಹಳ ಮಹತ್ವ ಕೊಡುತ್ತಾರೆ. ಲಾಲ್ ಪಾರ್ ಸೀರೆ ಬಂಗಾಳಿ ಸಂಸ್ಕೃತಿಯ ಅವಿಭಾಜ್ಯ ಅಂಗವೆನಿಸಿದೆ. ಈ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ತೊಟ್ಟ ಲಾಲ್ ಪಾಡ್ ಸೀರೆ ಬಂಗಾಳಿಗಳ ಗಮನ ಸೆಳೆದಿರಲಿಕ್ಕೂ ಸಾಕು.

ಇಷ್ಟೇ ಅಲ್ಲ, ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ ಬಂಗಾಳಿಗಳ ಅಚ್ಚುಮೆಚ್ಚಿನ ಕವಿ ರಬೀಂದ್ರನಾಥ್ ಠಾಗೋರ್ ಅವರ ಕವನವೊಂದರ ಸಾಲನ್ನ ಉಲ್ಲೇಖಿಸಿದರು. ಕತ್ತಲೆಯೇ ಇನ್ನೂ ತುಂಬಿರುವಾಗ ನಂಬಿಕೆ ಎಂಬ ಹಕ್ಕಿಯ ಕಣ್ಣಿಗೆ ಬೆಳಕು ಗೋಚರಿಸುತ್ತದೆ ಎಂಬರ್ಥ ಬರುವ ಠಾಗೋರ್ ಕವನದ ಸಾಲನ್ನ ಅವರು ಒತ್ತಿ ಹೇಳುತ್ತಾ, ಕೊರೋನಾ ನಂತರ ಬಿಕ್ಕಟ್ಟಿನಲ್ಲಿ ಮುಂದಡಿ ಇಡಲು ನಂಬಿಕೆ ಇರಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Union Budget 2021 – ಈ ವರ್ಷದ ಬಜೆಟ್​ನ ಆರು ಸ್ತಂಭಗಳನ್ನ ಹೆಸರಿಸಿದ ಹಣಕಾಸು ಸಚಿವೆ

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಣಕಾಸು ಸಚಿವರು ಕೆಲ ಸಾಂಕೇತಿಕವಾಗಿ ಬಂಗಾಳಿಗಳ ಗಮನ ಸೆಳೆದರು. ಜೊತೆಗೆ ತಮ್ಮ ಬಜೆಟ್​ನಲ್ಲಿ ಪಶ್ಚಿಮ ಬಂಗಾಳಕ್ಕೆ ಹಲವು ಕೊಡುಗೆಗಳನ್ನೂ ಒದಗಿಸಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರಿಗೆ ಇದು ಮೂರನೇ ಬಜೆಟ್. ತಮ್ಮ ಹಿಂದಿನ ಎರಡು ಬಜೆಟ್​ಗಳಲ್ಲೂ ಅವರು ಇದೇ ರೀತಿ ಸಾಂದರ್ಭಿಕ ಸಂಕೇತಗಳಿಂದ ಗಮನ ಸೆಳೆದಿದ್ದರು. 2019ರಲ್ಲಿ ತಮ್ಮ ಮೊದಲ ಬಜೆಟ್​ನಲ್ಲಿ ಅವರು ಗೋಲ್ಡನ್ ಬಾರ್ಡರ್ ಇರುವ ಪಿಂಕ್ ಸೀರೆ ತೊಟ್ಟಿದ್ದರು. ಆ ವರ್ಷ ಬಜೆಟ್ ಮಂಡನೆಯೊಂದಿಗೆ ಜೋಡಿತವಾಗಿರುವ ಬ್ರೀಫ್​ಕೇಸ್ ಸಂಪ್ರದಾಯಕ್ಕೆ ಅವರು ಇತಿಶ್ರೀ ಹಾಡಿದ್ದರು. ಕಳೆದ ವರ್ಷ ತಮ್ಮ ಎರಡನೇ ಬಜೆಟ್​ನಲ್ಲಿ ಅವರು ಸಂಪತ್ತಿನ ಸಂಕೇತವಾದ ಹಳದಿ ಬಣ್ಣದ ಸೀರೆ ತೊಟ್ಟಿದ್ದರು. ಆ ಬಜೆಟ್​ನಲ್ಲಿ ಆಶೋತ್ತರ ಭಾರತದ ಪರಿಕಲ್ಪನೆ ಇತ್ತು. ಆ ಬಜೆಟ್ ಭಾಷಣ 160 ನಿಮಿಷ ಕಾಲ ಇತ್ತು. ಅದು ದೇಶದ ಇತಿಹಾಸದಲ್ಲೇ ಅತಿ ಸುದೀರ್ಘ ಬಜೆಟ್ ಭಾಷಣ ಎನಿಸಿತ್ತು.
Published by: Vijayasarthy SN
First published: February 1, 2021, 12:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories