ಕರುಣಾನಿಧಿ ಪಾರ್ಥೀವ ಶರೀರಕ್ಕೆ ಅಗ್ನಿಸ್ಪರ್ಶ ಯಾಕಿಲ್ಲ? ಸಮಾಧಿ ಮಾಡುವ ಹಿಂದಿನ ರಹಸ್ಯವೇನು?


Updated:August 8, 2018, 5:50 PM IST
ಕರುಣಾನಿಧಿ ಪಾರ್ಥೀವ ಶರೀರಕ್ಕೆ ಅಗ್ನಿಸ್ಪರ್ಶ ಯಾಕಿಲ್ಲ? ಸಮಾಧಿ ಮಾಡುವ ಹಿಂದಿನ ರಹಸ್ಯವೇನು?

Updated: August 8, 2018, 5:50 PM IST
ನ್ಯೂಸ್​ 18 ಕನ್ನಡ

ಚೆನ್ನೈ(ಆ.08): ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ನಾಯಕ ಎಂ. ಕರುಣಾನಿಧಿಯವರನ್ನು ಚೆನ್ನೈನ ಮರೀನಾ ಬೀಚ್​ನಲ್ಲಿ ಮಣ್ಣು ಮಾಡಲಾಗುತ್ತದೆ. ಕರುಣಾನಿಧಿ ವಿಧಿವಶರಾದ ಬಳಿಕ ವಿಪಕ್ಷದಲ್ಲಿರುವ ಡಿಎಂಕೆಯು ಅವರ ಮರೀನಾ ಬೀಚ್​ನಲ್ಲಿ ಪಾರ್ಥಿವ ಶರೀರವನ್ನು ಸಮಾಧಿ ಮಾಡಲು ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡಿತ್ತು. ಡಿಎಂಕೆಯ ಕಾರ್ಯಾಧ್ಯಕ್ಷ ಎಂ. ಕೆ ಸ್ಟಾಲಿನ್​ ರಾಜ್ಯದ ಮುಖ್ಯಮಂತ್ರಿಗೆ ಈ ಕುರಿತಾಗಿ ಒಂದು ಪತ್ರವನ್ನೂ ಬರೆದಿದ್ದರು. ಸ್ಟಾಲಿನ್​ರವರು ಮರೀನಾ ಬೀಚ್​ನಲ್ಲಿರುವ ಕರುಣಾನಿಧಿಯವರ ರಾಜಕೀಯ ಗುರು ಸಿ. ಎನ್​ ಅಣ್ಣಾದೊರೈಯವರ ಸ್ಮಾರಕದ ಬದಿಯಲ್ಲೇ ಅವರನ್ನು ಸಮಾಧಿ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು.

ಹೀಗಿದ್ದರೂ ತಮಿಳುನಾಡು ಸರ್ಕಾರ ತನ್ನ ಆರಂಭಿಕ ಹೇಳಿಕೆಯಲ್ಲಿ ಮದ್ರಾಸ್​ ಹೈಕೋರ್ಟ್​ನಲ್ಲಿ ಹಲವಾರು ಪ್ರಕರಣಗಳ ವಿಚಾರಣೆ ನಡೆಯುತ್ತಿರುವುದರಿಂದಹಾಗೂ ಕಾನೂನು ತೊಡಕುಗಳಿರುವುದರಿಂದ ಮರೀನಾ ಬೀಚ್​ನಲ್ಲಿ ಕರುಣಾನಿಧಿಯವರ ಸಮಾಧಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದಿತ್ತು. ಅಲ್ಲದೇ ಸರ್ದಾರ್​ ಪಟೇಲ್​ ರೋಡ್​ನಲ್ಲಿ ರಾಜಾಜಿ ಹಾಗೂ ಕಾಮರಾಜ್​ರವರ ಸ್ಮಾರಕದ ಬಳಿ ಎರಡು ಎಕರೆ ಜಮೀನು ನೀಡಲು ತಯಾರಿದ್ದೇವೆ ಎಂದಿತ್ತು. ಅನ್ಯ ಕೆಲ ವರದಿಗಳು ಕರುಣಾನಿಧಿಯವರು ತಮಿಳುನಾಡಿನ ಹಾಲಿ ಸಿಎಂ ಆಗಿಲ್ಲ, ಹೀಗಾಗಿ ಸರ್ಕಾರ ಮರೀನಾ ಬೀಚ್​ನಲ್ಲಿ ಅವರ ಸಮಾಧಿ ಮಾಡಲು ಅವಕಾಶ ನೀಡುತ್ತಿಲ್ಲ ಎಂದಿದ್ದವು. ಆದರೆ, ಬುಧವಾರದಂದು ಮದ್ರಾಸ್​ ಹೈಕೋರ್ಟ್​ ಕರುಣಾನಿಧಿಯವರ ಅಂತಿಮ ಸಂಸ್ಕಾರ ಮರೀನಾ ಬೀಚ್​ನಲ್ಲೇ ಮಾಡಲು ಅನುಮತಿ ನೀಡಿದೆ.ಇವೆಲ್ಲಾ ಬೆಳವಣಿಗೆಗಳ ನಡುವೆ ತಮಿಳುನಾಡಿನ ರಾಜಕೀಯದ ಧೀಮಂತ ನಾಯಕರನ್ನು ಮರೀನಾ ಬೀಚ್​ನಲ್ಲೇ ಯಾಕೆ ಸಮಾಧಿ ಮಾಡಲಾಗುತ್ತದೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ.

ಮರೀನಾ ಬೀಚ್​ ಚೆನ್ನೈ ಮಹಾನಗರದ ಪ್ರಖ್ಯಾತ ಬೀಚ್​ ಆಗಿದೆ. ಈ ಬೀಚ್​ ವಿಶ್ವದ ಅತಿದೊಡ್ಡ ಬೀಚ್​ಗಳಲ್ಲಿ ಒಂದಾಗಿದೆ. ದ್ರಾವಿಡ ರಾಜಕೀಯದಲ್ಲಿ ಮರೀನಾ ಬೀಚ್​ ಕೇವಲ ಒಂದು ಬೀಚ್​ ಅಲ್ಲ ಬದಲಾಗಿ ಇದೊಂದು ಇತಿಹಾಸವಾಗಿದೆ. ಇದೊಂದು ಭವಿಷ್ಯಕ್ಕಾಗಿ ಕೂಡಿಡುವ ಇತಿಹಾಸವಾಗಿದೆ. ತಮಿಳುನಾಡು ರಾಜಕೀಯದಲ್ಲಿ ನಿಧನರಾದದ ಬಹುತೇಕ ದಿಗ್ಗಜ ನಾಯಕರನ್ನು ಇದೇ ಮರೀನಾ ಬೀಚ್​ ತಟದಲ್ಲೇ ಸಮಾಧಿ ಮಾಡಲಾಗಿದೆ. ಅಲ್ಲದೇ ಭವಿಷ್ಯದ ಪೀಳಿಗೆಯು ನಾಡಿನ ದಿಗ್ಗಜ ನಾಯಕರನ್ನು ಸದಾ ನೆನಪಿಟ್ಟುಕೊಳ್ಳಬೇಕೆಂಬ ನಿಟ್ಟಿನಲ್ಲಿ ಈ ಸಮಾಧಿಗಳ ಮೇಲೆ ಸ್ಮಾರಕವನ್ನೂ ನಿರ್ಮಿಸಲಾಗಿದೆ. ಮರೀನಾ ಬೀಚ್​ನಲ್ಲಿ ಎಂಜಿ ಆರ್​, ಸಿ. ಎನ್​ ಅಣ್ಣಾದೊರೈ, ಜಯಲಲಿತಾ ಸೇರಿದಂತೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಸಿ. ರಾಜಗೋಪಾಲಾಚಾರಿ ಹಾಗೂ ಕಾಮರಾಜರ ಸಮಾಧಿಯೂ ಇಲ್ಲಿದೆ.

ವಾಸ್ತವವಾಗಿ, ದ್ರಾವಿಡ ಹಿಂದೂ ಧರ್ಮ ಪಾಲಿಸುವವರು ಬ್ರಾಹ್ಮಣ ಪರಂಪರೆ ಹಾಗೂ ವಿಧಿ ವಿಧಾನಗಳನ್ನು ನಂಬುವುದಿಲ್ಲ. ಇದೇ ಕಾರಣದಿಂದ ಇಲ್ಲಿನ ಗಣ್ಯರು ಹಾಗೂ ದಿಗ್ಗಜ ನಾಯಕರು ನಿಧನರಾದಾಗ ಅಗ್ನಿ ಸ್ಪರ್ಶ ಮಾಡಿ ಅಂತಿಮ ಕ್ರಿಯೆ ಮಾಡುವುದಿಲ್ಲ. ಬದಲಾಗಿ ಅವರನ್ನು ಮಣ್ಣು ಮಾಡಲಾಗುತ್ತದೆ.
Loading...

ಕರುಣಾನಿಧಿ


ಜಯಲಲಿತಾ ಕೂಡಾ ಬ್ರಾಹ್ಮಣ ಪರಂಪರೆಯನ್ನು ವಿರೋಧಿಸಿ ಸ್ಥಾಪನೆಯಾದ ದ್ರಾವಿಡ ಪಕ್ಷದ ನಾಯಕಿಯಾಗಿದ್ದರು. ಕರುಣಾನಿಧಿಯವರೂ ಈ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದರು. ಹೀಗಾಗಿ ಅವರನ್ನೂ ಸಮಾಧಿ(ಮಣ್ಣಿನಲ್ಲಿ ಹೂಳುವುದು) ಮಾಡಲಾಗುತ್ತದೆ. ಸಾಮಾನ್ಯ ಹಿಂದೂ ಪರಂಪರೆಯನ್ನು ವಿರೋಧಿಸಿ ದ್ರಾವಿಡ ಚಳುವಳಿಯಲ್ಲಿ ತೊಡಗಿಸಿಕೊಂಡ ನಾಯಕರು ತಮ್ಮ ಹೆಸರಿನೊಂದಿಗೆ ಜಾತಿಯನ್ನು ಸೂಚಿಸುವ ಉಪನಾಮವನ್ನೂ ಬಳಸುವುದಿಲ್ಲ.ಮರೀನಾ ಬೀಚ್​ನಲ್ಲಿ ದ್ರಾವಿಡ ಚಳುವಳಿಯ ಬಹುದೊಡ್ಡ ನಾಯಕ ಹಾಗೂ ಡಿಎಂಕೆಯ ಸಂಸ್ಥಾಪಕ ಸಿ. ಎನ್​ ಅಣ್ಣಾದೊರೈಯವರ ಸಮಾಧಿ ಇದೆ. ಎಂಜೆಆರ್​ ಸಮಾಧಿ ಪಕ್ಕದಲ್ಲೇ ಅವರ ರಾಜಕೀಯ ಉತ್ತರಾಧಿಕಾರಿ ಜೆ. ಜಯಲಲಿತಾರ ಸಮಾಧಿಯೂ ಇದೆ. ಮರೀನಾ ಬೀಚ್​ನಲ್ಲಿ ಜಯಲಲಿತಾಗಿಂತ ಮೊದಲು ಎಂ. ಜಿ ರಾಮಚಂದ್ರನ್​ರವರನ್ನೂ ಸಮಾಧಿ ಮಾಡಲಾಗಿತ್ತು. ಇಂದು ಕರುಣಾನಿಧಿಯವರನ್ನು ಅಣ್ಣಾದೊರೈ ಸ್ಮಾರಕದ ಪಕ್ಕದಲ್ಲೇ ಸಮಾಧಿ ಮಾಡಲಾಗುತ್ತದೆ.
First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ