• Home
  • »
  • News
  • »
  • national-international
  • »
  • Mohan Bhagwat: ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕೋ ಅಗತ್ಯ ಇಲ್ಲ ಎಂದ ಮೋಹನ್ ಭಾಗವತ್!

Mohan Bhagwat: ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕೋ ಅಗತ್ಯ ಇಲ್ಲ ಎಂದ ಮೋಹನ್ ಭಾಗವತ್!

ಆರ್​ ಎಸ್​ಎಸ್ ಮುಖಂಡ ಮೋಹನ್ ಭಾಗವತ್

ಆರ್​ ಎಸ್​ಎಸ್ ಮುಖಂಡ ಮೋಹನ್ ಭಾಗವತ್

ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಹುಡುಕುವ ಮತ್ತು ಪ್ರತಿದಿನ ಹೊಸ ವಿವಾದವನ್ನು ಪ್ರಾರಂಭಿಸುವ ಅಗತ್ಯವಿಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ ಹೇಳಿದ್ದಾರೆ.

  • Share this:

ದೇಶದಲ್ಲಿ ಈಗಾಗಲೇ ಹಲವು ಕಡೆಗಳಲ್ಲಿ ಮಸೀದಿ (Masjid) ಒಳಗಡೆ ಶಿವಲಿಂಗ (Shivling) ಪತ್ತೆಯಾಗಿರುವಂತಹ ಘಟನೆ ಬೆಳಕಿಗೆ ಬಂದಿದ್ದು ಈ ವಿಚಾರ ದೇಶಾದ್ಯಂತ ಭಾರೀ ಹಾಟ್ ಟಾಪಿಕ್ ಆಗಿದೆ. ಮಂಗಳೂರು (Mangaluru) ಸೇರಿದಂತೆ ಬಹಳಷ್ಟು ಕಡೆಗಳಲ್ಲಿ ಮಸೀದಿ ಒಳಗಡೆ ಈ ರೀತಿ ಹಿಂದೂ ದೇವರ (Hindu God) ಕುರುಹುಗಳು ಸಿಗುಗುತ್ತಿರುವುದು ಬಹಳಷ್ಟು ವಿವಾದಕ್ಕೆ ಕಾರಣವಾಗಿದೆ. ಆರಂಭದಲ್ಲಿ ಒಂದೆರಡು ಘಟನೆಗಳು ಎಲ್ಲರಿಗೂ ಅಚ್ಚರಿ ಮೂಡಿಸಿದ್ದು ಹೌದಾಗಿದ್ದರೂ ಈಗ ನಿತ್ಯ ಇಂಥದ್ದೇ ಘಟನೆ ನಡೆಯುತ್ತಿದೆ. ಈ ವಿಚಾರವಾಗಿ ಆರ್​ಎಸ್​ಎಸ್ (RSS) ಮುಖಂಡ ಮಹತ್ವದ ಹೇಳಿಕೆಯೊಂದನ್ನು ಕೊಟ್ಟಿದ್ದು ದಿನನಿತ್ಯ ವಿವಾದ ಪ್ರಾರಂಭಿಸುವ ಅಗತ್ಯವಿಲ್ಲ ಎಂದು ನೇರವಾಗಿಯೇ ಹೇಳಿಬಿಟ್ಟಿದ್ದಾರೆ.


ಜ್ಞಾನವಾಪಿ (Gyanvapi mosque) ವಿವಾದವು ನಂಬಿಕೆಯ ಕೆಲವು ಸಮಸ್ಯೆಗಳನ್ನು ಒಳಗೊಂಡಿದ್ದು, ನ್ಯಾಯಾಲಯದ ತೀರ್ಪನ್ನು (Verdict) ಎಲ್ಲರೂ ಒಪ್ಪಿಕೊಳ್ಳಬೇಕು, ಆದರೆ ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಹುಡುಕುವ ಮತ್ತು ಪ್ರತಿದಿನ ಹೊಸ ವಿವಾದವನ್ನು (Controversy) ಪ್ರಾರಂಭಿಸುವ ಅಗತ್ಯವಿಲ್ಲ ಎಂದು ಆರ್‌ಎಸ್‌ಎಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagawat) ಗುರುವಾರ ಹೇಳಿದ್ದಾರೆ.


ಜಗಳ ಹೆಚ್ಚಿಸುವುದೇಕೆ?


“ಜಗಳವನ್ನು ಏಕೆ ಹೆಚ್ಚಿಸಬೇಕು? ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಏಕೆ ಹುಡುಕಬೇಕು? ಎಂದು ಮೋಹನ್ ಭಾಗವತ್ ಅವರು ನಾಗ್ಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂರನೇ ವರ್ಷದ ಅಧಿಕಾರಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಕೇಳಿದರು.


ಈಗ ಯಾವುದೇ ಚಳುವಳಿ ಮುನ್ನಡೆಸಲು ಬಯಸಲ್ಲ


ಅಯೋಧ್ಯೆ ಆಂದೋಲನದಲ್ಲಿ ಭಾಗವಹಿಸುವುದು ಒಂದು ಅಪವಾದ ಎಂದು ಆರ್‌ಎಸ್‌ಎಸ್ ಈಗಾಗಲೇ ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದರು. “ನವೆಂಬರ್ 9 ರಂದು, ನಾವು ಐತಿಹಾಸಿಕ ಕಾರಣಗಳಿಗಾಗಿ, ನಾವು ರಾಮ ಜನ್ಮಭೂಮಿ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದೇವೆ ಮತ್ತು ನಾವು ಅದನ್ನು ಪೂರ್ಣಗೊಳಿಸಿದ್ದೇವೆ ಎಂದು ಹೇಳಿದ್ದೇವೆ. ಈಗ, ನಾವು ಯಾವುದೇ ಚಳುವಳಿಯನ್ನು ಮುನ್ನಡೆಸಲು ಬಯಸುವುದಿಲ್ಲ.


ಬದಲಾಯಿಸಲಾಗದ ಇತಿಹಾಸವಿದೆ


ಜ್ಞಾನವಾಪಿ ಮಸೀದಿ ಪ್ರಕರಣದ ಕುರಿತು ಮಾತನಾಡಿದ ಮೋಹನ್ ಭಾಗವತ್, ಈಗ ಜ್ಞಾನವಾಪಿ ಮಸೀದಿಯ ವಿಷಯ ನಡೆಯುತ್ತಿದೆ. ನಾವು ಬದಲಾಯಿಸಲಾಗದ ಇತಿಹಾಸವಿದೆ. ನಾವು ಆ ಇತಿಹಾಸವನ್ನು ಬರೆದಿಲ್ಲ, ಈಗಿನ ಹಿಂದೂಗಳೂ ಅಲ್ಲ, ಮುಸ್ಲಿಮರೂ ಅಲ್ಲ. ಇದು ಹಿಂದೆ ಸಂಭವಿಸಿತು ಎಂದಿದ್ದಾರೆ.


ನಮಾಜ್ ಕೂಡಾ ಪೂಜೆಯೇ


"ಇಸ್ಲಾಂ ಧರ್ಮ ಬಂದಾಗ, ಭಾರತೀಯರ ನೈತಿಕ ಸ್ಥೈರ್ಯವನ್ನು ಮುರಿಯಲು, ಸಾವಿರಾರು ದೇವಾಲಯಗಳು ನಾಶವಾದವು". ನಮಾಜದ ಕೂಡ ಒಂದು ಪೂಜೆ. ಅವರು ನಮ್ಮ ಪೂರ್ವಜರಿಂದ ಬಂದವರು. ನಾವು ಯಾವುದೇ ರೀತಿಯ 'ಪೂಜೆ'ಯ ವಿರುದ್ಧವಾಗಿಲ್ಲ, ”ಎಂದು ಭಾಗವತ್ ಹೇಳಿದರು.


ಇದನ್ನೂ ಓದಿ: Gyanvapi mosque: ಬಿಗಿ ಭದ್ರತೆಯಲ್ಲಿ ವಾರಣಾಸಿಯ ಜ್ಞಾನವಾಪಿ ಮಸೀದಿ ಸಮೀಕ್ಷೆ


ಅದೂ ಒಂದು ಪೂಜೆ (ನಮಾಜ್). ಅವರು ನಮ್ಮ ಪೂರ್ವಜರಿಂದ ಬಂದವರು. ನಾವು ಯಾವುದೇ ರೀತಿಯ 'ಪೂಜೆ'ಯ ವಿರುದ್ಧವಾಗಿಲ್ಲ, ”ಎಂದು ಭಾಗವತ್ ಹೇಳಿದರು.


ಒಟ್ಟಿಗೆ ಕುಳಿತು ಚರ್ಚಿಸಿ ನಿಧಾರ


ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರೂ ಒಟ್ಟಿಗೆ ಕುಳಿತು ಪರಸ್ಪರ ಒಪ್ಪಿಗೆಯೊಂದಿಗೆ ದಾರಿ ಕಂಡುಕೊಳ್ಳಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದರು.


ಇದನ್ನೂ ಓದಿ: Varanasi Gyanvapi Mosque: ವಾರಣಾಸಿಯ ಜ್ಞಾನವಾಪಿ ಮಸೀದಿ ಸರ್ವೆ ನಿಲ್ಲಿಸ್ಬೇಡಿ; ಕೋರ್ಟ್ ಖಡಕ್ ಸೂಚನೆ


"ಆದರೆ ಪ್ರತಿ ಬಾರಿಯೂ ಇದು ಸಂಭವಿಸುವುದಿಲ್ಲ ಮತ್ತು ಜನರು ನ್ಯಾಯಾಲಯಗಳನ್ನು ಸಂಪರ್ಕಿಸುತ್ತಾರೆ, ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳಬೇಕು ಮತ್ತು ಪ್ರಶ್ನಿಸಬಾರದು" ಎಂದು ಭಾಗವತ್ ಹೇಳಿದರು.

Published by:Divya D
First published: