KK Shailaja: ಕಮ್ಯುನಿಸ್ಟ್ ತತ್ವಕ್ಕಾಗಿ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ನಿರಾಕರಿಸಿದ ಕೆಕೆ ಶೈಲಜಾ

ಮ್ಯಾಗ್ಸೆಸೆ ಪ್ರಶಸ್ತಿಯನ್ನು ನೊಬೆಲ್ ಪ್ರಶಸ್ತಿಯ ಏಷ್ಯನ್ ಆವೃತ್ತಿ ಎಂದು ಪರಿಗಣಿಸಲಾಗುತ್ತದೆ.

ಕೆ ಕೆ ಶೈಲಜಾ

ಕೆ ಕೆ ಶೈಲಜಾ

 • Share this:
  ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ (KK Shailaja)  ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು (Ramon Magsaysay Award) ತಿರಸ್ಕರಿಸಿದ್ದಾರೆ. ಕೆ.ಕೆ. ಶೈಲಜಾ ಅವರು ಕೇರಳದ ಆರೋಗ್ಯ ಸಚಿವರಾಗಿ (Kerala Health Minister) ವಿಶೇಷವಾಗಿ ನಿಪಾ ವೈರಸ್ (Nipah Virus) ಮತ್ತು ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿದ ಅವಧಿಯಲ್ಲಿ ಅವರ ಕಾರ್ಯಕ್ಷಮತೆಯನ್ನು ಪರಿಗಣಿಸಿ 64 ನೇ ಮ್ಯಾಗ್ಸೆಸೆ ಪ್ರಶಸ್ತಿಗೆ ಪರಿಗಣಿಸಲಾಗಿತ್ತು. ಆದರೆ ತಾವು ಪ್ರತಿನಿಧಿಸುವ ಸಿಪಿಐ(ಎಂ) (ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್‌ವಾದಿ)  ಪಕ್ಷದ ವಕ್ತಾರರ ಜೊತೆ ಚರ್ಚೆಯ ನಂತರ ಕೆ.ಕೆ.ಶೈಲಜಾ ಈ ನಿರ್ಧಾರ ತಳೆದಿದ್ದಾರೆ.

  ಮ್ಯಾಗ್ಸೆಸೆ ಪ್ರಶಸ್ತಿಯನ್ನು ನೊಬೆಲ್ ಪ್ರಶಸ್ತಿಯ ಏಷ್ಯನ್ ಆವೃತ್ತಿ ಎಂದು ಪರಿಗಣಿಸಲಾಗುತ್ತದೆ. ಈ ಪ್ರಶಸ್ತಿಯನ್ನು ಸ್ವೀಕರಿಸಬಾರದು ಎಂದು ಪಕ್ಷದೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಂಡಿದ್ದಾಗಿ ಸ್ವತಃ   ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನಾಯಕಿ ಕೆಕೆ ಶೈಲಜಾ ಹೇಳಿದ್ದಾರೆ.

  ರಾಜಕೀಯ ನಾಯಕನಾದರೂ ಏಕೆ ಪರಿಗಣಿಸಿದಿರಿ?
  ಮ್ಯಾಗ್ಸೆಸೆ ಪ್ರಶಸ್ತಿಗೆ ನನ್ನನ್ನು ಪರಿಗಣಿಸಲಾಗುತ್ತಿದೆ ಎಂದು ಪ್ರಶಸ್ತಿ ಸಮಿತಿಯಿಂದ ನನಗೆ ತಿಳಿಸಲಾಯಿತು. ನಾನೊಬ್ಬ ರಾಜಕೀಯ ನಾಯಕ. ಈ ಪ್ರಶಸ್ತಿಯನ್ನು ಸಾಮಾನ್ಯವಾಗಿ ರಾಜಕೀಯ ನಾಯಕರಿಗೆ ನೀಡಲಾಗುವುದಿಲ್ಲ.ಆದರೂ ಸಹ ನನ್ನನ್ನು ಈ ಪ್ರಶಸ್ತಿಗೆ ಪರಿಗಣನೆ ಮಾಡಲಾಗಿತ್ತು ಎಂದು ಕೆ.ಕೆ ಶೈಲಜಾ ಹೇಳಿದ್ದಾರೆ.  ಜೊತೆಗೆ ಪ್ರಶಸ್ತಿ ನಿರಾಕರಣೆಯ ಹಿಂದಿನ ಕಾರಣವನ್ನು ಸಹ ಅವರು ಬಹಿರಂಗಪಡಿಸಿದ್ದಾರೆ.

  ಪ್ರಶಸ್ತಿ ಕೊಡುವವರಿಗೆ ಕಮ್ಯುನಿಸಮ್​ನಲ್ಲಿ ಬದ್ಧತೆಯಿಲ್ಲ
  ಅಲ್ಲದೇ ನಾನು ಸಿಪಿಐ (ಎಂ) ಕೇಂದ್ರ ಸಮಿತಿಯ ಸದಸ್ಯನಾಗಿದ್ದೇನೆ. ಹೀಗಾಗಿ ಪಕ್ಷದ ಸಮಿತಿ ಜೊತೆ ಚರ್ಚಿಸಿ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಸ್ವೀಕರಿಸಬಾರದು ಎಂದು ತೀರ್ಮಾನಿಸಿದ್ದೇನೆ. ಇದು ದೊಡ್ಡ ಪ್ರಶಸ್ತಿಯೇ, ಆದರೂ ಸಹ ಈ ಪ್ರಶಸ್ತಿಯನ್ನು ಕೊಡುವ ಎನ್​ಜಿಒ ಸಾಮಾನ್ಯವಾಗಿ ಕಮ್ಯುನಿಸ್ಟ್ ಪಕ್ಷಗಳ ತತ್ವಗಳನ್ನು ಬೆಂಬಲಿಸುವುದಿಲ್ಲ.  ಹೀಗಾಗಿ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿಯನ್ನು ನಿರಾಕರಿಸಿದ್ದಾಗಿ ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಸ್ಪಷ್ಟಪಡಿಸಿದ್ದಾರೆ.  

  ಇದನ್ನೂ ಓದಿ: Weight Gain Talaq: ಹೆಂಡತಿ ದಪ್ಪ ಆಗಿದ್ದಕ್ಕೆ ತಲಾಖ್! ಡಿವೋರ್ಸ್​ಗೆ ಕಾರಣ ಹೀಗೂ ಇರುತ್ತಾ?

  ಸೀತಾರಾಂ ಯೆಚೂರಿ ಪ್ರತಿಕ್ರಿಯೆ
  ನವದೆಹಲಿಯಲ್ಲಿ ಸುದ್ದಿಗಾರರನ್ನು ಭೇಟಿ ಮಾಡಿದ ಸಿಪಿಐ(ಎಂ) ಸೀತಾರಾಂ ಯೆಚೂರಿ, ಕೇರಳದಲ್ಲಿ ಸಾರ್ವಜನಿಕ ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸಿದ ರೀತಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇದು ಕೇರಳದ ಎಲ್‌ಡಿಎಫ್ ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಸಾಮೂಹಿಕ ಪ್ರಯತ್ನವಾಗಿದೆ. ಹಾಗಾಗಿ ಇದು ಯಾವುದೇ ವೈಯಕ್ತಿಕ ಪ್ರಯತ್ನವಲ್ಲ. ಈ ಕಾರಣಕ್ಕೆ ಕೆ. ಕೆ.ಶೈಲಜಾ ಅವರು ಪ್ರಶಸ್ತಿ ನಿರಾಕರಣೆ ಮಾಡಿರಬಹುದು ಎಂದು  ಹೇಳಿದರು.

  ಕೇಂದ್ರ ಸಮಿತಿಯ ನಿರ್ಧಾರವೇ ಅಂತಿಮ
  ಮ್ಯಾಗ್ಸೆಸೆ ಪ್ರಶಸ್ತಿಯನ್ನು ಇದುವರೆಗೆ ಯಾವುದೇ ಸಕ್ರಿಯ ರಾಜಕಾರಣಿಗೆ ನೀಡಲಾಗಿಲ್ಲ. ಕೇಂದ್ರ ಸಮಿತಿಯು ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದೆ ಎಂದು ಅವರು ಹೇಳಿದರು. ಇದೇ ಸಮಿತಿಯ ನಿರ್ಧಾರದಂತೆ ಕೆ.ಕೆ ಶೈಲಜಾ ಪ್ರಶಸ್ತಿ ನಿರಾಕರಿಸಿದ್ದಾಗಿ ಸಿಪಿಐ(ಎಂ) ತಿಳಿಸಿದೆ.

  ಇದನ್ನೂ ಓದಿ: Old Man: ಸರ್ಕಾರಿ ದಾಖಲೆಗಳಲ್ಲಿ ಮೃತಪಟ್ಟ ಈ ಅಜ್ಜನಿಗೆ ಬದುಕಿರುವುದನ್ನು ಸಾಬೀತುಪಡಿಸುವುದೇ ಸವಾಲು!

  ಇನ್ನೂ ಒಂದು ಕಾರಣವಿದೆ
  ಅಲ್ಲದೇ ಫೀಲಿಫೈನ್ಸ್ ಮಾಜಿ ಅಧ್ಯಕ್ಷ ರಾಮನ್ ಮ್ಯಾಗ್ಸೆಸೆ ಹೆಸರಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ರಾಮನ್ ಮ್ಯಾಗ್ಸೆಸೆ ಅವರು ಫೀಲಿಫೈನ್ಸ್​ನಲ್ಲಿ ಕಮ್ಯುನಿಸಮ್ ಗೆರಿಲ್ಲಾ ಹೋರಾಟಗಳನ್ನು ಮಟ್ಟಹಾಕಿದ್ದರು. ಈ ಹಿನ್ನೆಲೆಯನ್ನು ಗಮನದಲ್ಲಿ ಇಟ್ಟುಕೊಂಡು ಸಹ ಕೆ.ಕೆ.ಶೈಲಜಾ ಮ್ಯಾಗ್ಸೆಸೆ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ ಎಂದು ಸಹ ಸಿಪಿಐ(ಎಂ) ಪಕ್ಷ ತಿಳಿಸಿದೆ.
  Published by:guruganesh bhat
  First published: