ಕರುಣಾನಿಧಿ ತಮ್ಮ ಮಗನಿಗೆ ಸ್ಟಾಲಿನ್​ ಎಂದು ನಾಮಕರಣ ಮಾಡಿದರ ರಹಸ್ಯ ಗೊತ್ತೇ?

news18
Updated:August 8, 2018, 6:27 PM IST
ಕರುಣಾನಿಧಿ ತಮ್ಮ ಮಗನಿಗೆ ಸ್ಟಾಲಿನ್​ ಎಂದು ನಾಮಕರಣ ಮಾಡಿದರ ರಹಸ್ಯ ಗೊತ್ತೇ?
news18
Updated: August 8, 2018, 6:27 PM IST
ಅನಿತಾ ಈ, ನ್ಯೂಸ್​ 18 ಕನ್ನಡ 

ಕರುಣಾನಿಧಿ ಅವರದ್ದು ಬಹಳ ಆಸಕ್ತಿಕರ ವ್ಯಕ್ತಿತ್ವ. ರಾಜಕೀಯವಲ್ಲದೆ, ಕಲೆ-ಸಾಹಿತ್ಯ ಹಾಗೂ ಅಭಿನಯದಲ್ಲೂ ಅಭಿರುಚಿವುಳ್ಳವರಾಗಿದ್ದರು. ಇಂತಹ ವ್ಯಕ್ತಿಗೆ ತನ್ನ ಎರಡನೇ ಪತ್ನಿ ದಯಾಳು ಅಮ್ಮಾಳ್​ ಅವರ ಎರಡನೇ ಮಗ ಸ್ಟಾಲಿನ್ ಮುದ್ದಿನ ಮಗನಾಗಿದ್ದರು.

2017ರ ಹೊತ್ತಿಗೆ ಕರುಣಾನಿಧಿ ಆರೋಗ್ಯ ಕೈ ಕೊಟ್ಟಿತ್ತು. ಆಗ ಅವರು ಸುಧಾರಿಸಿಕೊಂಡು, ರಾಜಕೀಯ ಮಾಡೋದು ಕಷ್ಟ ಅಂತ ಕರುಣಾನಿಧಿ ಅವರ ಅರಿವಿಗೆ ಗೊತ್ತಾಗಿತ್ತೇನೋ  ಇದರಿಂದಾಗಿಯೇ 2017ರಲ್ಲೇ ಸ್ಟಾಲಿನ್​ ಅವರನ್ನು ಡಿಎಂಕೆಯ ಕಾರ್ಯಾಧ್ಯಕ್ಷರಾಗಿ (ವರ್ಕಿಂಗ್ ಪ್ರೆಸಿಡೆಂಟ್) ನೇಮಿಸಿದ್ದರು.

ಕರುಣಾನಿಧಿ ಅವರಿಗೆ, ಸ್ಟಾಲಿನ್​ ಅತ್ಯಂತ ನಂಬಿಕಸ್ಥ ಹಾಗೂ ಪ್ರೀತಿಯ ಕೂಸು. ಮಗನ ಮೇಲೆ ಎಷ್ಟು ಪ್ರೀತಿ ಇತ್ತು ಎಂದರೆ, ತಮ್ಮ ಮುದ್ದು ಕಂದ ಹುಟ್ಟಿದಾಗಲೇ ಅವನಿಗೆ 'ಅಯ್ಯಾದೊರೈ' ಅನ್ನೋ ಹೆಸರಿಡಬೇಕು ಅಂತ ಆಸೆ ಪಟ್ಟಿದ್ದರಂತೆ.

ಮಗನಿಗೆ 'ಅಯ್ಯಾದೊರೈ' ಎಂದು ಹೆಸರಿಡಬೇಕು ಅಂತ ಮನಸ್ಸು ಮಾಡಿದ್ದರ ಹಿಂದೆ ಸಹ ಒಂದು ದೊಡ್ಡ ಕಾರಣವಿತ್ತು.  ಆ ಕಾಲದಲ್ಲಿದ್ದ ಇಬ್ಬರು ಮಹಾ ನಾಯಕರ ಹೆಸರನ್ನು ಸೇರಿಸಿ ಮಗನಿಗೆ ಹೆಸರಿಡಬೇಕೆಂದಿತ್ತು. ಆ ನಾಯಕರಲ್ಲಿ ಒಬ್ಬರು ಪೆರಿಯಾರ್ ರಾಮಸಾಮಿ. ತಮಿಳುನಾಡಿನ ದ್ರಾವಿಡ ಚಳವಳಿಯ ನಾಯಕ. ಮಾನವತಾವಾದಿ. ಅವರನ್ನ ತಮಿಳರು ಅಯ್ಯಾ ಎಂದೇ ಕರೆಯುತ್ತಿದ್ದರು. ಕರುಣಾನಿಧಿ ಅವರಿಗೂ ಸಹ ಪೆರಿಯಾರ್​ ಅಯ್ಯಾ ಆಗಿದ್ರು.
ಮತ್ತೊಬ್ಬ ಮಹಾನ್ ನಾಯಕ ಸಿ. ಎನ್. ಅಣ್ಣಾದೊರೈ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ. ಅಣ್ಣಾದೊರೈ ಸಹ ಕರುಣಾನಿಧಿ ಅವರ ನಾಯಕ. ಹಾಗಾಗಿ ಪೆರಿಯಾರ್​ ಅವರನ್ನು ಕರೆಯುತ್ತಿದ್ದ 'ಅಯ್ಯಾ' ಮತ್ತು ಅಣ್ಣಾದೊರೈ ಹೆಸರಿನ 'ದೊರೈ' ಎರಡೂ ಪದಗಳನ್ನು ಸೇರಿಸಿ 'ಅಯ್ಯಾದೊರೈ' ಅನ್ನೋ ಹೆಸರಿಡಬೇಕೆಂದು ಆಸೆಪಟ್ಟಿದ್ದರು. ಆದರೆ ಕರುಣಾನಿಧಿ ಅವರ ಆ ಆಸೆ ನೆರವೇರಲೇ ಇಲ್ಲ.

ಹೌದು ಅದಕ್ಕೂ ಒಂದು ಕಾರಣವಿದೆ. 1953ರ ಮಾರ್ಚ್ ತಿಂಗಳಲ್ಲಿ ಮಗ ಸ್ಟಾಲಿನ್ ಹುಟ್ಟೋದಕ್ಕೂ, ರಷ್ಯಾದ ಕ್ರಾಂತಿಕಾರಿ ನಾಯಕ ಸ್ಟಾಲಿನ್ ಅಸುನೀಗೋದಕ್ಕೂ ಸರಿಹೋಗಿತ್ತು. ಅಂದಿನ ಶ್ರದ್ಧಾಂಜಲಿ ಸಭೆಯೊಂದರಲ್ಲಿ ಭಾಗವಹಿಸಿದ್ದ ಕರುಣಾನಿಧಿ ಅವರು ಕ್ರಾಂತಿಯ ಕಿಡಿ ಸ್ಟಾಲಿನ್ ಬಗ್ಗೆ ಮಾತನಾಡುತ್ತಾ ಭಾವೋದ್ವೇಗದಲ್ಲಿ ತನ್ನ ಮಗನಿಗೆ ಸ್ಟಾಲಿನ್ ಅನ್ನೋ ಹೆಸರನ್ನೇ ನಾಮಕರಣ ಮಾಡುವುದಾಗಿ ಸಾರ್ವಜನಿಕವಾಗಿ ಘೋಷಿಸಿದ್ದರು. ಇದರಿಂದಾಗಿ ಮಗನಿಗೆ ಅಯ್ಯಾದೊರೈ ಬದಲಾಗಿ ಸ್ಟಾಲಿನ್ ಅನ್ನೋ ಹೆಸರು ಬಂತು.
Loading...

.
First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...