ಜಗತ್ತಿನ ಶ್ರೀಮಂತ ವ್ಯಕ್ತಿಗಳಾದ Jeff Bezos - Bill Gates ಪ್ರತಿ ರಾತ್ರಿ ಮಲಗುವ ಮುನ್ನ ಪಾತ್ರೆ ತೊಳೆಯುತ್ತಾರಂತೆ..! ಕಾರಣ ಗೊತ್ತೆ?

ಮಾಜಿ ಅಮೆಜಾನ್ (Amazon) ಸಿಇಒ ಜೆಫ್ ಬೆಜೋಸ್ (Jeff Bezos) ಮತ್ತು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ಮನೆ ಕೆಲಸ ಮಾಡುತ್ತಾರೆ, ಪಾತ್ರೆ ತೊಳೆಯುತ್ತಾರೆ ಎಂದರೆ ನಂಬಲು ಕಷ್ಟವಾದರೂ ಇದು ಸತ್ಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಶತಕೋಟಿ ಡಾಲರ್‌ಗಳ ನಿವ್ವಳ ಮೌಲ್ಯವನ್ನು ಹೊಂದಿರುವ ಮತ್ತು ದೈತ್ಯಾಕಾರದ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಯನ್ನು ಮುನ್ನಡೆಸುತ್ತಿರುವ, ವಿಶ್ವದ ಶ್ರೀಮಂತ ವ್ಯಕ್ತಿಗಳು ತಮ್ಮ ಮನೆ ಕೆಲಸ ಮಾಡುತ್ತಾರೆ, ಪಾತ್ರೆ ತೊಳೆಯುತ್ತಾರೆ, ಅಡುಗೆ ಮಾಡುತ್ತಾರೆ ಎಂದು ಕೇಳಿದರೆ ನಮ್ಮಂತ ಸಾಮಾನ್ಯ ಜನರಿಗೆ ಆಶ್ಚರ್ಯ ಆಗಬಹುದಲ್ಲವೇ?. ವಿಶ್ವದ (World) ಶ್ರೀಮಂತ ವ್ಯಕ್ತಿಗಳಿಗೆ ಆಳು-ಕಾಳು ಎಲ್ಲಾ ಇರುತ್ತಾರೆ, ಅವರಿಗೆ ಮನೆ ಕೆಲಸಗಳು, ಮನೆ ಜವಾಬ್ದಾರಿಗಳು ಗೊತ್ತೇ ಇರುವುದಿಲ್ಲ ಎಂದು ನಾವು ನೀವು ಅಂದುಕೊಂಡಿರುತ್ತೇವೆ. ಆದರೆ ನಮ್ಮ ಊಹೆಗಳು ತಪ್ಪು. ಅವರು ಸಹ ಮನೆಯ ಕೆಲಸಗಳಲ್ಲಿ ಕೈ ಜೋಡಿಸುತ್ತಾರಂತೆ. ಸ್ವತಹಃ ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ. ಉದ್ಯಮ ಲೋಕದ ಇಬ್ಬರು ದಿಗ್ಗಜರಾದ ಮಾಜಿ ಅಮೆಜಾನ್ (Amazon) ಸಿಇಒ ಜೆಫ್ ಬೆಜೋಸ್ (Jeff Bezos) ಮತ್ತು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ಮನೆ ಕೆಲಸ ಮಾಡುತ್ತಾರೆ, ಪಾತ್ರೆ ತೊಳೆಯುತ್ತಾರೆ ಎಂದರೆ ನಂಬಲು ಕಷ್ಟವಾದರೂ ಇದು ಸತ್ಯ.

ಹೌದು, ಬೆಜೋಸ್ ಮತ್ತು ಗೇಟ್ಸ್ ಇಬ್ಬರೂ ಮನೆಯಲ್ಲಿ ತಾವೇ ಅಡುಗೆ ಮಾಡಲು ಇಷ್ಟ ಪಡುತ್ತಾರೆ, ಮತ್ತು ತಾವು ತಿಂದ ಪ್ಲೇಟುಗಳನ್ನು ಸಹ ಅವರೇ ತೊಳೆದುಕೊಳ್ಳುವುದಾಗಿ ಮತ್ತು ಈ ಕೆಲಸ ಮಾಡಲು ಅವರು ಇಷ್ಟಪಡುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ.

ಈ ಬಿಲಿಯನೇರ್‌ಗಳು ತಮ್ಮ ಪ್ಲೇಟ್‌ಗಳನ್ನು ಏಕೆ ಸ್ಕ್ರಬ್ ಮಾಡುತ್ತಾರೆ ಎಂಬ ಕೂತೂಹಲಕ್ಕೆ ಇಲ್ಲಿದೆ ಉತ್ತರ. ಅವರಿಬ್ಬರೂ ಹಾಗೆ ಮಾಡಲು ಒಂದು ವಿಶೇಷ ಕಾರಣವಿದೆ ಎನ್ನುತ್ತಾರೆ ಈ ಸರಳ ವ್ಯಕ್ತಿಗಳು.

ಇದನ್ನೂ ಓದಿ: World's top billionaires: ವಿಶ್ವದ ಆಗರ್ಭ ಶ್ರೀಮಂತರ ಎಜುಕೇಷನ್​ ಬಗ್ಗೆ ನಿಮಗೆಷ್ಟು ಗೊತ್ತು?

ನಾನೇ ರಾತ್ರಿ ಅಡುಗೆ ಮಾಡುತ್ತೇನೆ:

2014 ರಲ್ಲಿ, 50ನೇ ವರ್ಷಕ್ಕೆ ಕಾಲಿಟ್ಟ ನಂತರ ಅವರ ಜೀವನದಲ್ಲಿ ಯಾವುದೇ ಬದಲಾವಣೆಯ ಬಗ್ಗೆ ಬೆಜೋಸ್ ಅವರನ್ನು ಕೇಳಿದಾಗ, ಇದಕ್ಕೆ ಉತ್ತರಿಸಿದ ಬಿಲಿಯನೇರ್, "ನಾನು ಅದೇ ಮೂಲ ದಿನಚರಿಯನ್ನು ಅನುಸರಿಸುವುದನ್ನು ಮುಂದುವರಿಸುತ್ತೇನೆ" ಎಂದಿದ್ದಾರೆ.

ಕುತೂಹಲದ ವಿಷಯವೆಂದರೆ, ಬೆಜೋಸ್ ಅವರು ರಾತ್ರಿಯಲ್ಲಿ ಸ್ವತಃ ಭಕ್ಷ್ಯಗಳನ್ನು ಮಾಡುವುದನ್ನು ಇಷ್ಟಪಡುವುದಾಗಿ ಬಹಿರಂಗಪಡಿಸಿದ್ದಾರೆ. "ನಾನು ಪ್ರತಿ ರಾತ್ರಿ ಅಡುಗೆ ಮಾಡುತ್ತೇನೆ," ಎಂದು ಅವರು ಹೇಳಿದ್ದಾರೆ. ಇದಲ್ಲದೆ, ಬೆಜೋಸ್ ತಮಾಷೆಯಾಗಿ "ನನಗೆ ಸಾಕಷ್ಟು ಮನವರಿಕೆಯಾಗಿದೆ, ಇದು ನಾನು ಮಾಡುವ ಅತ್ಯಂತ ಉತ್ತಮ ಕೆಲಸ” ಎಂದು ನಗುತ್ತ ಹೇಳುತ್ತಾರೆ.

ನನ್ನ ಕೆಲಸ ಮಾಡಿಕೊಳ್ಳಲು ಇಷ್ಟಪಡುತ್ತೇನೆ:

ಮತ್ತೊಂದೆಡೆ, ರೆಡ್ಡಿಟ್‌ನಲ್ಲಿ AMA (ಆಸ್ಕ್ ಮಿ ಎನಿಥಿಂಗ್) ಚರ್ಚೆಯಲ್ಲಿ ಬಿಲ್ ಗೇಟ್ಸ್ ಇದೇ ರೀತಿಯ ಅಭ್ಯಾಸವನ್ನು ಹಂಚಿಕೊಂಡಿದ್ದಾರೆ, ಬಿಲಿಯನೇರ್ ಯಾರೂ ನಿರೀಕ್ಷಿಸದ ಹಾಗೆ ಮಾಡುವುದನ್ನು ಆನಂದಿಸುವ ವಿಷಯ ಯಾವುದು ಎಂದು ಕೇಳಿದಾಗ, ಗೇಟ್ಸ್ ಅವರು ಪ್ರತಿ ರಾತ್ರಿ ಪಾತ್ರೆಗಳನ್ನು ತೊಳೆಯುತ್ತೇನೆ ಎಂದು ಉತ್ತರಿಸಿದರು. "ನಾನು ಪ್ರತಿ ರಾತ್ರಿ ಅಡುಗೆ ಮಾಡುತ್ತೇನೆ ಮತ್ತು ನನ್ನ ಪ್ಲೇಟ್ ನಾನೇ ತೊಳೆದುಕೊಳ್ಳುತ್ತೇನೆ" ಎಂದು ಗೇಟ್ಸ್ ಹೇಳಿದರು. ಇತರ ಜನರು ಅವರ ಕೆಲಸವನ್ನು ಅವರೇ ಮಾಡಲು ಸ್ವಯಂಸೇವಕರಾಗಿರುವಾಗ, ನಾನು ಕೂಡ ಅದನ್ನು ಸ್ವತಃ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: Divorce Case: ಮೈಕ್ರೋಸಾಫ್ಟ್‌ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ವಿಚ್ಛೇದನ ಕಾರಣ ಬಹಿರಂಗ

ಮಾನಸಿಕ ಆರೋಗ್ಯಕ್ಕೆ ಉತ್ತಮ:

ಈ ಪ್ರಾಪಂಚಿಕ ಮನೆಕೆಲಸಗಳು ಶ್ರಮಕ್ಕೆ ಯೋಗ್ಯವಾಗಿಲ್ಲವೆಂದು ತೋರುತ್ತದೆಯಾದರೂ, ನಿಮ್ಮ ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುತ್ತದೆ ಎಂದು ವಿಜ್ಞಾನವು ಸಾಬೀತುಪಡಿಸಿದೆ, ಹೀಗಾಗಿ ಮನೆ ಕೆಲಸ ಮಾಡುವುದರಿಂದ ನಮ್ಮ ಮನಸ್ಥಿತಿ, ಮಾನಸಿಕ ಒತ್ತಡ, ಆತಂಕಗಳು ಕಡಿಮೆ ಆಗುತ್ತವೆ. ಮನೆಯಲ್ಲಿ ಕೆಲವು ಸರಳ ಕೆಲಸಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ತಜ್ಞರು ಕೂಡ ನಂಬುತ್ತಾರೆ ಎಂದು ಹೇಳಿದ್ದಾರೆ.

ಯೋಗ, ಧ್ಯಾನ, ವ್ಯಾಯಾಮ, ಹ್ಯಾಂಗ್ ಔಟ್ ನಂತೆಯೇ ಅಡುಗೆ ಮಾಡುವುದು ಸಹ ಮೆಂಟಲ್ ಹೆಲ್ತಿಗೆ ಒಂದು ರೀತಿ ಥೆರಪಿಯಾಗಿದೆ, ಈ ಸರಳವಾದ ಕೆಲಸಗಳನ್ನು ಮಾಡುವುದರಿಂದ ಫಲಿತಾಂಶ ಪ್ರಯೋಜನಕಾರಿಯಾಗಿರುತ್ತದೆ ಎಂದು ಅಧ್ಯಯನಗಳು ಕಂಡುಕೊಂಡಿವೆ.

ಬಟ್ಟೆ/ಲಾಂಡ್ರಿ, ವ್ಯಕ್ತಿಯ ಮನಸ್ಥಿತಿಯನ್ನು ಹೆಚ್ಚಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುವ ಬಸ್ಟರ್ ಆಗಿ ಕೆಲಸ ಮಾಡುತ್ತದೆ. ಬಿಲಿಯನೇರ್‌ಗಳ ಈ ಸರಳ ಮತ್ತು ಬುದ್ಧಿವಂತ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ಪಾತ್ರೆಗಳು ಸ್ವಚ್ಛ ಮಾತ್ರವಲ್ಲದೇ, ನಿಮ್ಮನ್ನು ಆರಾಮವಾಗಿರಿಸುತ್ತದೆ.
Published by:shrikrishna bhat
First published: