• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Amit Shah: ಜೈಶ್ರೀರಾಮ್ ಘೋಷಣೆ ಕೂಗಲು ಮಮತಾ ಬ್ಯಾನರ್ಜಿಗೆ ಅವಮಾನ ಏಕೆ?; ಗೃಹ ಸಚಿವ ಅಮಿತ್​ ಶಾ ಚಾಟಿ

Amit Shah: ಜೈಶ್ರೀರಾಮ್ ಘೋಷಣೆ ಕೂಗಲು ಮಮತಾ ಬ್ಯಾನರ್ಜಿಗೆ ಅವಮಾನ ಏಕೆ?; ಗೃಹ ಸಚಿವ ಅಮಿತ್​ ಶಾ ಚಾಟಿ

ಕೇಂದ್ರ ಸಚಿವ ಅಮಿತ್​ ಶಾ

ಕೇಂದ್ರ ಸಚಿವ ಅಮಿತ್​ ಶಾ

ಜೈ ಶ್ರೀರಾಮ್​ ಘೋಷಣೆ ಕೂಗುವುದು ಅವರಿಗೆ ಮಾಡುವ  ಅವಮಾನವೇ? ಎಷ್ಟೋ ಜನರು ಅದರಲ್ಲಿ ಹೆಮ್ಮೆಪಡುವಾಗ, ಬಂಗಾಳ ಸಿಎಂ ಅವಮಾನಕ್ಕೊಳಗಾಗುತ್ತಾರೆ. ಯಾಕೆಂದರೆ ಅವರು ತಮ್ಮ ಮತ ಬ್ಯಾಂಕ್ ರಾಜಕೀಯವನ್ನು ಕಾಪಾಡಿಕೊಳ್ಳಲು ನಿರ್ದಿಷ್ಟ ಸಮುದಾಯವನ್ನು ಸಮಾಧಾನಪಡಿಸಲು ಬಯಸುತ್ತಾರೆ ಎಂದು ಅಮಿತ್​ ಶಾ ಹೇಳಿದ್ದಾರೆ.

ಮುಂದೆ ಓದಿ ...
  • Share this:

ಕೋಲ್ಕತ್ತಾ (ಫೆಬ್ರವರಿ 11); "ಪಶ್ಚಿಮ ಬಂಗಾಳದಲ್ಲಿ ಜೈ ಶ್ರೀರಾಮ್​ ಘೋಷಣೆಯನ್ನು ರಾಜಕೀಯವಾಗಿ ಬಳಸಲು ತೃಣಮೂಲ ಕಾಂಗ್ರೆಸ್​ ತಡೆ ನೀಡಿದೆ. ಜೈಶ್ರೀರಾಮ್​ ಘೋಷಣೆ ಕೂಗಿದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಏಕೆ ಕೋಪ ಬರುತ್ತದೆ? ಈ ಘೋಷಣೆ ಕೂಗುವುದನ್ನು ಅವರು ಅವಮಾನದಂತೆ ಭಾವಿಸುತ್ತಿದ್ದಾರೆಯೇ? ಜೈ ಶ್ರೀರಾಮ್ ಘೋಷಣೆಯನ್ನು ಭಾರತದಲ್ಲಿ ಕೂಗದೆ, ಮತ್ತೆ ಪಾಕಿಸ್ತಾನದಲ್ಲಿ ಕೂಗಬೇಕಾ?" ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಕಿಡಿಕಾರಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ಭಾರಿ ಬಂಗಾಳದಲ್ಲಿ ಅಧಿಕಾರದ ಗದ್ದುಗೆ ಏರಲೇಬೇಕು ಎಂದು ನಿರ್ಧರಿಸಿರುವ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಅನೇಕ ರಾಜಕೀಯ ರ‍್ಯಾಲಿಗಳನ್ನು ಆಯೋಜಿಸುತ್ತಿದೆ. ಸಚಿವ ಅಮಿತ್​ ಶಾ ಸಾಲು ಸಾಲು ರ‍್ಯಾಲಿಗಳಲ್ಲಿ ಭಾಗವಹಿಸುತ್ತಿದ್ದಾರೆ.


ಇಂದೂ ಸಹ ಬಂಗಾಳದ ಕೋಚ್​ ನಗರದಲ್ಲಿ ಆಯೋಜಿಸಿದ್ದ ರಾಜಕೀಯ ರ‍್ಯಾಲಿಯಲ್ಲಿ ಭಾಗವಹಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿಕಾರಿರುವ ಅಮಿತ್​ ಶಾ, "ರಾಜಕೀಯ ಘೋಷಣೆಯಂತೆ ಬಂಗಾಳದಲ್ಲಿ ಯಾರಾದರೂ "ಜೈ ಶ್ರೀ ರಾಮ್" ಎಂದು ಜಪಿಸಿದರೆ "ಮಮತಾ ದೀದಿ" ಕೋಪಗೊಳ್ಳುತ್ತಾರೆ, ಯಾರಾದರು ಜೈ ಶ್ರೀರಾಮ್​ ಘೋಷಣೆಗಳನ್ನು ಬಳಸಿದರೆ ಮಮತಾ ಬ್ಯಾನರ್ಜಿ ಜನರನ್ನು ಅಪರಾಧಿಗಳಂತೆ ಪರಿಗಣಿಸುತ್ತಾರೆ.


ಜೈ ಶ್ರೀರಾಮ್​ ಘೋಷಣೆ ಕೂಗುವುದು ಅವರಿಗೆ ಮಾಡುವ  ಅವಮಾನವೇ? ಎಷ್ಟೋ ಜನರು ಅದರಲ್ಲಿ ಹೆಮ್ಮೆಪಡುವಾಗ, ಬಂಗಾಳ ಸಿಎಂ ಅವಮಾನಕ್ಕೊಳಗಾಗುತ್ತಾರೆ. ಯಾಕೆಂದರೆ ಅವರು ತಮ್ಮ ಮತ ಬ್ಯಾಂಕ್ ರಾಜಕೀಯವನ್ನು ಕಾಪಾಡಿಕೊಳ್ಳಲು ನಿರ್ದಿಷ್ಟ ಸಮುದಾಯವನ್ನು ಸಮಾಧಾನಪಡಿಸಲು ಬಯಸುತ್ತಾರೆ.


ಇದನ್ನೂ ಓದಿ: CoronaVirus: ಕೋವಿಡ್​ನಿಂದ ಬದುಕುಳಿದ 116 ವರ್ಷದ ಫ್ರೆಂಚ್ ಸನ್ಯಾಸಿನಿ: ಯುರೋಪಿನ ಅತಿ ಹಿರಿಯ ವ್ಯಕ್ತಿ


ಬಂಗಾಳದಲ್ಲಿ ಹಾಗಾದರೆ ಇತರೆ ಸಮುದಾಯದವರು ನಿಮಗೆ ಮತ ನೀಡುವುದಿಲ್ಲವೇ? ಎಂದು ನಾನು ಅವರನ್ನು ಕೇಳಲು ಬಯಸುತ್ತೇನೆ. ಜೈ ಶ್ರೀ ರಾಮ್ ಘೋಷಣೆಗಳನ್ನು ಭಾರತದಲ್ಲಿ ಎತ್ತದಿದ್ದರೆ, ಮತ್ತೆ ಪಾಕಿಸ್ತಾನದಲ್ಲಿ ಬಳಸಲಾಗುತ್ತದೆಯೇ?" ಎಂದು ಕಿಡಿಕಾರಿದ್ದಾರೆ.


ಇದೇ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿಯವರನ್ನು 'ವಿಫಲ ಆಡಳಿತಗಾರ್ತಿ' ಎಂದು ದೂಷಿಸಿರುವ ಅಮಿತ್​ ಶಾ, "ಮುಂಬರುವ ಚುನಾವಣೆಗಳು ನರೇಂದ್ರ ಮೋದಿಯವರ "ಅಭಿವೃದ್ಧಿ ಮಾದರಿ" ಮತ್ತು ಮಮತಾ ಅವರ "ವಿನಾಶ ಮಾದರಿ" ನಡುವಿನ ಸ್ಪರ್ಧೆಯಾಗಿದೆ. 'ಪರಿವರ್ತನ ಯಾತ್ರೆ' ಮುಖ್ಯಮಂತ್ರಿ, ಶಾಸಕ ಅಥವಾ ಮಂತ್ರಿಯನ್ನು ಬದಲಿಸುವುದಲ್ಲ, ಬದಲಾಗಿ ಪಶ್ಚಿಮ ಬಂಗಾಳದ ಸ್ಥಿತಿಯನ್ನು ಪರಿವರ್ತಿಸುವುದು. ಈ ಚುನಾವಣೆಯಲ್ಲಿ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಕನಿಷ್ಟ 200 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರದ ಗದ್ದುಗೆಗೆ ಏರಲಿದೆ" ಎಂದು ಅವರು ತಿಳಿಸಿದ್ದಾರೆ.

top videos
    First published: